ಮನೆಯಲ್ಲಿ ಯಾವ ದಿಕ್ಕಿನಲ್ಲಿ ಯಾವ ದೀಪವನ್ನು ಹಚ್ಚಿದರೆ ಸಂಕಷ್ಟಗಳು ದೂರವಾಗುತ್ತದೆ ಗೊತ್ತೇ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಸ್ನೇಹಿತರೆ, ದೇವರ ಮನೆಯಲ್ಲಿ ನಾವು ಪ್ರತಿ ದಿನವೂ ದೀಪವನ್ನು ಬೆಳಗುತ್ತೇವೇ. ಹೌದು ದೀಪದ ಸಂಕೇತವೂ ನಮ್ಮ ಜೀವನದಲ್ಲಿರುವ ಎಲ್ಲ ಕತ್ತಲು ದೂರವಾಗಿ ಬೆಳಕಿನಿಂದ ಕೂಡಿರಬೇಕು ಎಂದು. ಹಾಗೂ ದೀಪವನ್ನು ಹಚ್ಚುವುದರಿಂದ ನಮಗೆ ಮತ್ತು ಮನೆಗೆ ಒಳ್ಳೆಯದಾಗುತ್ತದೆ ಎಂದು. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ದೀಪವನ್ನು ಹಚ್ಚಬೇಕು, ಯಾವ ದಿಕ್ಕಿನಲ್ಲಿ ದೀಪವನ್ನು ಉರಿಸಿದರೆ ಶುಭವಾಗುತ್ತದೆ ಹಾಗೂ ಯಾವ ರೀತಿಯಾಗಿ ಕಷ್ಟಗಳು ದೂರವಾಗುತ್ತವೆ ದೀಪವನ್ನು ಹಚ್ಚವುದರಿಂದ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ದೇವರ ಮನೆಯಲ್ಲಿ ದೀಪವನ್ನು ಸದಾ ಕಾಲ ಬೆಳಗಬೇಕು. ಹೌದು ನಿತ್ಯವೂ ದೇವರ ಕೋಣೆಯನ್ನು ಸ್ವಚ್ಛ ಮಾಡಿ ದೇವರಿಗೆ ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಮಾಡಬೇಕು. ಹಾಗೂ ದೀಪವನ್ನು ಹಚ್ಚಬೇಕು. ದೇವರ ಮುಂದೆ ದೀಪವನ್ನು ಹಚ್ಚುವುದನ್ನು ಎಂದಿಗೂ ಮರೆಯಬಾರದು. ಮನೆಯಲ್ಲಿ ದೀಪವು ಸದಾ ಕಾಲ ಉರಿಯುತ್ತಿದ್ದರೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.

ಇಲ್ಲವಾದರೆ ನೀವು ದೇವರ ಮುಂದೆ ದೀಪವನ್ನು ಹಚ್ಚದೆ ಖಾಲಿ ಹಾಗೆ ಬಿಟ್ಟರೆ, ನಿಮ್ಮ ಕಷ್ಟಗಳು ದುಪ್ಪಟ್ಟು ಆಗುತ್ತವೆ. ಸಾಲದ ಸಮಸ್ಯೆಗಳು ಮತ್ತಷ್ಟು ಹೆಚ್ಚುತ್ತವೆ. ಸಂಜೆ ಆಗುತ್ತಿದ್ದಂತೆಯೇ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ತುಂಬುತ್ತವೆ. ಇದರಿಂದ ಅನಾರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಧರ್ಮದಲ್ಲಿ ಸಂಜೆ ವೇಳೆಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಯಾರು ಸಂಜೆ ವೇಳೆಗೆ ಎಣ್ಣೆಯ ದೀಪ ತುಪ್ಪದ ದೀಪವನ್ನು ಹಚ್ಚಿವುದಿಲ್ಲವೋ ಅಂಥವರ ಮನೆಯ ಯಜಮಾನ ಬಹಳ ಸಂಕಷ್ಟದ ದಿನಗಳನ್ನು ಕಳೆಯಬೇಕಾಗುತ್ತದೆ. ಸಮಸ್ಯೆಗಳ ಮೇಲೆ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಹಣದಲ್ಲಿ ಕೊರತೆ ಉಂಟಾಗಿ ಮಕ್ಕಳು ವಿರುದ್ಧವಾಗಿ ಹೋಗುತ್ತಾರೆ. ದೊಡ್ಡವರು ಮಾತುಗಳನ್ನು ಮಕ್ಕಳು ಕೇಳುವುದಿಲ್ಲ. ಹೀಗಾಗಿ ಮನೆಯ ವಾತಾವರಣ ಗಂಭೀರವಾದ ಸ್ಥಿತಿಗೆ ತಲುಪುತ್ತದೆ. ಆದರೆ ಜನರಿಗೆ ಇದರ ಬಗ್ಗೆ ಅರಿವು ಇದ್ದರೂ ಕೂಡ ಅವರು ಇವುಗಳನ್ನು ಮಾಡುವುದಿಲ್ಲ. ಮನೆಯಲ್ಲಿ ದೀಪವನ್ನು ಉರಿಸುವುದು ತುಂಬಾನೇ ಮುಖ್ಯ ಗೆಳೆಯರೇ, ಮನೆಯನ್ನು ಯಾವಾಗಲೂ ಅಂಧಕಾರದಲ್ಲಿ ಇಡಬಾರದು. ಇದರಿಂದ ತಾಯಿ ಲಕ್ಷ್ಮೀದೇವಿ ಸಿಟ್ಟು ಬಂದು ಆಕೆ ಓಡಿ ಹೋಗುತ್ತಾಳೆ.

ಈ ದೀಪದಿಂದಲೇ ನಿಮ್ಮ ದಿನವೂ ಶುರು ಆಗುತ್ತದೆ ಜೊತೆಗೆ ನಿಮ್ಮ ಎಲ್ಲ ಕೆಲಸಗಳು ನೆರವೇರುತ್ತದೆ. ಸಂಜೆಯ ಸಮಯವೂ ಬಹಳ ನಕಾರಾತ್ಮಕ ಶಕ್ತಿಗಳಿಂದ ಕೂಡಿರುತ್ತವೆ ಇವುಗಳು ನಿಮ್ಮ ಮನೆಯೊಳಗೆ ಬರಲು ಕಾಯ್ದು ಕುಳಿತಿರುತ್ತವೆ. ಹೀಗಾಗಿ ನೀವು ಮನೆಯಲ್ಲಿ ದೀಪವನ್ನು ಉರಿಸದೆ ಇದ್ದರೆ ನಿಮ್ಮನ್ನು ಇವು ಕಾಡಲು ಶುರು ಮಾಡುತ್ತವೆ. ಸಾಯಂಕಾಲ ದ ವೇಳೆ ನಕಾರಾತ್ಮಕ ಶಕ್ತಿಗಳ ಅಭಾವ ಹೆಚ್ಚುತ್ತದೆ ಆದ್ದರಿಂದ ಸಂಜೆ ವೇಳೆಗೆ ಕೈ ಕಾಲುಗಳನ್ನು ತೊಳೆದುಕೊಂಡು ದೇವರ ಮುಂದೆ ದೀಪವನ್ನು ಹಚ್ಚಿ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು. ಇನ್ನೂ ಯಾರ ಮನೆಯಲ್ಲಿ ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿರುತ್ತಾರೆಯೋ ಇದು ಕೂಡ ಇದರ ಸಂಕೇತವಾಗಿದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಅನಾರೋಗ್ಯವನ್ನು ತಂದೊಡ್ಡುತ್ತವೆ. ಹೀಗಾಗಿ ನೀವು ಸೂರ್ಯೋದಯ ಆಗುತ್ತಿದ್ದಂತೆ ಎಣ್ಣೆಯಿಂದ ತುಪ್ಪದಿಂದ ದೀಪವನ್ನು ಉರಿಸಬೇಕು.

ನಿಮಗೆ ಹಣದ ಕೊರತೆ ಆಗುತ್ತಿದ್ದರೆ ನಿಮಗೆ ನೌಕರಿ ಬೇಗನೆ ಸಿಗುತ್ತಿಲ್ಲ ಅಂದರೆ ಶತ್ರುಗಳ ಕಾಟ ತಪ್ಪುತ್ತಾ ಇಲ್ಲವೆಂದರೆ ಮನೆಯ ಉತ್ತರ ದಿಕ್ಕಿನಲ್ಲಿ ತುಪ್ಪದ ದೀಪವನ್ನು ಉರಿಸಬೇಕು. ಇದರಿಂದ ಉತ್ತಮವಾದ ನೌಕರಿ ನಿಮಗೆ ಸಿಗುತ್ತದೆ. ನಿಮ್ಮ ಹಣದ ಎಲ್ಲ ಸಮಸ್ಯೆಗಳು ದೂರವಾಗಿ ಉತ್ತಮವಾದ ಲಾಭಗಳು ಕಾಣಲು ದೊರೆಯುತ್ತವೆ. ನೀವು ನಿತ್ಯವೂ ಹಚ್ಚುವ ದೀಪದಿಂದಲೇ ನಕಾರಾತ್ಮಕ ಶಕ್ತಿಗಳು ದೂರವಾಗಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ. ಅನಾರೋಗ್ಯವೂ ದೂರವಾಗಿ ಮನೆಯ ಸದಸ್ಯರು ಆರೋಗ್ಯವಾಗಿರುತ್ತಾರೆ. ಈ ಕೆಲಸಗಳು ಸಾಯಂಕಾಲ ಮಾಡುವುದು ತುಂಬಾನೇ ಮುಖ್ಯವಾಗಿರುತ್ತದೆ ಆದ್ದರಿಂದ ಇವುಗಳನ್ನು ಪ್ರತಿದಿನವೂ ಮಾಡುತ್ತಾ ಬನ್ನಿ. ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.

Leave a Reply

Your email address will not be published. Required fields are marked *