ಒಂದೇ ನಿಮಿಷದಲ್ಲಿ ಚಿಕ್ಕ ಮಕ್ಕಳು ಅಳುವುದನ್ನು ನಿಲ್ಲಿಸುವ ಸುಲಭವಾದ ಟ್ರಿಕ್ಸ್ ಗಳು ಇಲ್ಲಿವೆ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಸಾಮಾನ್ಯವಾಗಿ ಚಿಕ್ಕ ಮಕ್ಕಳು ತುಂಬಾ ಅಳುತ್ತಾ ಇರುತ್ತವೆ. ಅವುಗಳಿಗೆ ಯಾವುದೇ ಆಟದ ವಸ್ತುಗಳನ್ನು ಕೊಟ್ಟರು ಕೂಡ ಅಳುವುದನ್ನು ನಿಲ್ಲಿಸುವುದಿಲ್ಲ ಮಗು ಒಂದೇ ಸಮನೆ ಅಳಲು ಶುರು ಮಾಡಿದರೆ ತಂದೆ ತಾಯಿ ಗಾಬರಿ ಪಡುತ್ತಾರೆ. ಆದರೆ ಏನು ಆಗುತ್ತದೆ ಅಂತ ಚಿಕ್ಕ ಮಕ್ಕಳಿಗೆ ಬಾಯಿ ಬಿಟ್ಟು ಹೇಳಲು ಬರುವುದಿಲ್ಲ ಅದನ್ನು ತಂದೆ ತಾಯಿ ಅರ್ಥ ಮಾಡಿಕೊಳ್ಳಬೇಕು. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ತಾಯಂದಿರಿಗೆ ತುಂಬಾನೇ ಉಪಯುಕ್ತವಾಗುವ ಮಾಹಿತಿಯನ್ನು ಪರಿಚಯ ಮಾಡಿ ಕೊಡುತ್ತೇವೆ. ಈ ಸಲಹೆಯನ್ನು ಕೇಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಹಾಗಾದ್ರೆ ಬನ್ನಿ ಯಾವುದು ಅಂತ ತಿಳಿಯೋಣ. ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಯವಾದಾಗ ನೋವಾದಾಗ ಹಸಿವಾದಾಗ ಅಳುತ್ತವೆ. ಇದನ್ನು ಕಂಡ ತಂದೆ ತಾಯಿ ಏನು ಮಾಡಬೇಕು ಅಂತ ಗೋಚರಿಸುವುದಿಲ್ಲ. ಮಕ್ಕಳ ಅಳುವನ್ನು ತಡೆಯಲು ತಾಯಿ ಲಾಲಿ ಹಾಡು ಹಾಡುತ್ತಾಳೆ ಚಂದ ಮಾಮ ನೋಡು ಅಂತ ಏನೇನೋ ಹರ ಸಾಹಸ ಮಾಡುತ್ತಾಳೆ ಆದರೂ ಮಕ್ಕಳು ಅಳುವುದು ನಿಲ್ಲಿಸುವುದು ತುಂಬಾನೇ ವಿರಳ. ಮಕ್ಕಳಿಗೆ ಆಗುವ ಅನಾರೋಗ್ಯ ಮತ್ತು ತುಂಬಾನೇ ಅಳುವ ಮಕ್ಕಳ ಅಳುವನ್ನು ನಿಲ್ಲಿಸುವ ಕೆಲವು ಟಿಪ್ಸ್ ಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ.

ದೇಹದ ಕೆಲವು ನಿರ್ಧಿಷ್ಟ ಭಾಗದಲ್ಲಿ ಒತ್ತಡವನ್ನು ಹಾಕಿ ನಿಧಾನವಾಗಿ ಮಸಾಜ್ ಮಾಡುವುದರಿಂದ ಮಕ್ಕಳ ಅನಾರೋಗ್ಯವನ್ನು ತಡೆಯಬಹುದು. ಕಾಲು ಹೆಬ್ಬೆಟ್ಟಿನ ಕೊನೆ ಭಾಗಗಳನ್ನಿ ಮೆತ್ತಗೆ ಮಸಾಜ್ ಮಾಡಬೇಕು. ಇದರಿಂದ ತಲೆ ಹಲ್ಲು ನೋವು ಸಮಸ್ಯೆಗಳು ನಿವಾರಣೆ ಆಗುತ್ತವೆ. ಹೆಬ್ಬೆರಳಿನ ಮಧ್ಯ ಭಾಗದ ಬೆರಳಿನಿಂದ ಮಸಾಜ್ ಮಾಡುವುದರಿಂದ ಮಕ್ಕಳಲ್ಲಿ ಕಾಡುವ ಸೈನಸ್ ಸಮಸ್ಯೆಯು ದೂರವಾಗುತ್ತದೆ. ಇದರಿಂದ ಮಕ್ಕಳು ಆರಾಮವಾಗಿ ಇರುತ್ತಾರೆ. ಇನ್ನೂ ಮಕ್ಕಳಿಗೆ ಶ್ವಾಸಕೋಶದ ಸಮಸ್ಯೆಗಳು ಇದ್ದರೆ ಪಾದಗಳ ಮೇಲೆ ಒತ್ತಡವನ್ನು ಹಾಕಿ ಮಸಾಜ್ ಮಾಡುವುದರಿಂದ ಕೆಮ್ಮು ನೆಗಡಿ ಸಮಸ್ಯೆಗಳು ದೂರವಾಗುತ್ತವೆ. ಕೆಲವು ಮಕ್ಕಳಿಗೆ ಶ್ವಾಸಕೋಶ ಮತ್ತು ಹೊಟ್ಟೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಕಡಿಮೆ ಮಾಡಲು ಕಾಲು ಹೆಬ್ಬೆರಳಿನ ಮಧ್ಯ ಬೆರಳಿನ ಮಧ್ಯದಲ್ಲಿ ಮೆತ್ತಗೆ ಮಸಾಜ್ ಮಾಡಬೇಕು.

ಪಾದಗಳ ಮೇಲೆ ವಕ್ರವಾಗಿ ಮಸಾಜ್ ಮಾಡಿದರೆ ಜೀರ್ಣಾಂಗ ಸಮಸ್ಯೆಗಳು ದೂರವಾಗುತ್ತದೆ. ಆರ್ಕ್ ರೀತಿಯಲ್ಲಿ ಪಾದಗಳ ಮೇಲೆ ಮಸಾಜ್ ಮಾಡಬೇಕು. ಆರ್ಕ್ ಕೆಳಗಿನ ಭಾಗದಲ್ಲಿ ಮಸಾಜ್ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ. ಇತರೆ ಸಮಸ್ಯೆಗಳಿದ್ದರೆ ಕಾಲಿನ ಹಿಮ್ಮಡಿಯಲ್ಲಿ ಮೆತ್ತಗೆ ಮಸಾಜ್ ಮಾಡುವುದರಿಂದ ಮಾಂಸ ಖಂಡಗಳ ಸಮಸ್ಯೆಯು ದೂರವಾಗುತ್ತದೆ. ಉತ್ತಮವಾದ ದೇಹದ ಆಕೃತಿಯಾಗಿ ಬೆಳೆಯುತ್ತದೆ. ಮಗುವಿನ ದೇಹವು ಚೆನ್ನಾಗಿ ಸಧೃಢವಾಗಿ ಅಭಿವೃದ್ದಿ ಆಗುತ್ತದೆ. ಇನ್ನೂ ಕೊನೆಯದಾಗಿ ಅಳುವುದಕ್ಕೆ ಏನು ಮಾಡಬೇಕು ಅಂದರೆ ಮಕ್ಕಳ ಎರಡು ಕಾಲುಗಳನ್ನು ಜೋಡಿಸಿ ಕಾಲುಗಳ ಕೆಳಗೆ ಮಧ್ಯಭಾಗದಲ್ಲಿ ಮೆತ್ತಗೆ ಮಸಾಜ್ ಮಾಡಬೇಕು. ಇದರಿಂದ ಮಕ್ಕಳು ತಕ್ಷಣವೇ ಅಳುವುದನ್ನು ನಿಲ್ಲಿಸುತ್ತವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ

Leave a Reply

Your email address will not be published. Required fields are marked *