ನಮಸ್ತೇ ಪ್ರಿಯ ಓದುಗರೇ, ಕಾಮ ಕಸ್ತೂರಿ ಒಂದು ಸುಗಂಧ ದ್ರವ್ಯವಿರುವ ಬೀಜ. ಸಾಮಾನ್ಯವಾಗಿ ಈ ಬೀಜದ ಬಗ್ಗೆ ಹಲವರಿಗೆ ಅರಿವೇ ಇಲ್ಲ ಗೆಳೆಯರೇ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕಾಮ ಕಸ್ತೂರಿ ಬೀಜದ ನೀರು ಕುಡಿಯಬೇಕು ಏಕೆ ಎಂಬುದರ ಬಗ್ಗೆ ಕುರಿತು ಮಾಹಿತಿಯನ್ನು ನೀಡುತ್ತೇವೆ. ಕಾಮಕಸ್ತೂರಿ ಬೀಜ ಸಬ್ಜಾ ಬೀಜ, ಬಸಿಲ್ ಸೀಡ್ಸ್ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲದೇ ಇದಕ್ಕೆ ಕಠಿಣಮ್ ಜರಾಯತಿ ಅಂತ ಕರೆಯುತ್ತಾರೆ ಕಾರಣ ಇದು ಎಂಥಹ ಕಠಿಣ ಮನಸ್ಸನ್ನು ಕೂಡ ಬದಲಾಯಿಸುವ ವಿಶಿಷ್ಟವಾದ ಗುಣವನ್ನು ಹೊಂದಿದೆ. ಇದನ್ನು ತುಳಸಿ ಸಸ್ಯಗಳಿಂದ ಸಂಗ್ರಹಣೆ ಮಾಡುವುದರಿಂದ ಇದರ ಬೀಜಗಳು ಕಪ್ಪಗೆ ಇರುತ್ತವೆ. ಕಾಮ ಕಸ್ತೂರಿ ಗಿಡ ಬಹಳ ಪರಿಮಳವನ್ನು ಹೊಂದಿರುವಂಥ ಗಿಡ. ಕಾಮಕಸ್ತೂರಿ ಬೀಜ ಬಗ್ಗೆ ವೈದ್ಯ ಲೋಕದಲ್ಲೂ ಸಾಕಷ್ಟು ನಿದರ್ಶನಗಳಿವೆ. ಕಾಮ ಕಸ್ತೂರಿಯಲ್ಲಿ ಪ್ರೊಟೀನ್ ಕೊಬ್ಬು ನಾರು ಕಾರ್ಬೋಹೈಡ್ರೇಟ್ ಬೂದಿ ಅಂಶಗಳಿವೆ. ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ, ಜೇನುತುಪ್ಪದಲ್ಲಿ ಬೆರೆಸಿ ನೆಕ್ಕುವುದು. ಇದರಿಂದ ಗಂಟಲು ಬೇನೆ ಬರುವುದಿಲ್ಲ.ಒಂದು ಚಮಚ ಕಾಮ ಕಸ್ತೂರಿ ಬೀಜಗಳನ್ನು ರಾತ್ರಿ ವಿಡಿ ಒಂದು ಲೋಟದಲ್ಲಿ ನೆನೆಸಿಡಿ. ಬೆಳಗ್ಗೆ ಆ ಬೀಜಗಳು ಲೋಳೆಯಂತೆ ಒಂದಕ್ಕೊಂದು ಆಂಟಿಕೊಳ್ಳುತ್ತವೆ ಮರುದಿನ ಬೆಳಿಗ್ಗೆ ಅದರಲ್ಲಿ ಕಲ್ಲು ಸಕ್ಕರೆ ಸೇರಿಸಿ ಸೇವನೆ ಮಾಡುವುದರಿಂದ ಶರೀರಕ್ಕೆ ತಂಪು ನೀಡುತ್ತದೆ.
ಕಾಮ ಕಸ್ತೂರಿ ಬೀಜಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ಕಾಮ ಕಸ್ತೂರಿ ರಸವನ್ನು ದೇಹಕ್ಕೆ ಹಂಚಿಕೊಂಡರೆ ದೇಹದ ದುರ್ಗಂಧ ನಾಶವಾಗುವುದು ಉಂಟು. ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ 1/4 ಒಳಗೆ ಕಷಾಯಕ್ಕೆ ಸ್ವಲ್ಪಜೇನು ಸೇರಿಸಿ ಕುಡಿಸುವುದು.ಇದರಿಂದ ಮೂಗಿನಿಂದ ನೀರು ಸೋರುವುದು ಶೀತ ಜ್ವರಕ್ಕೆ ರಾಮಬಾಣ ಕಾಮ ಕಸ್ತೂರಿ ಅಂತ ಹೇಳಬಹುದು. ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಹಾಕಿ ಅದಕ್ಕೆ ಸಕ್ಕರೆ, ಸ್ವಲ್ಪ ಮಂಜುಗಡ್ಡೆ ಪುಡಿ ಬೆರೆಸಿ, ಅದಕ್ಕೆ ಸ್ವಲ್ಪ ಕೇಸರಿ ಬಣ್ಣ ಸೇರಿಸಿ ಶರಬತ್ತು ತಯಾರಿಸುತ್ತಾರೆ. ಇದರಿಂದ ಬಾಯರಿಕೆ ನಿವಾರಣೆಯಾಗುತ್ತದೆ. ಅಲ್ಲದೆ ಇದು ಶರೀರಕ್ಕೆ ತಂಪು ನೀಡುತ್ತವೆ. ಕಾಮ ಕಸ್ತೂರಿಯ ಹಸಿ ಎಲೆಗಳನ್ನು ಹಿಂಡಿ ಅದರ ರಸವನ್ನು ತೆಗೆದು ಬಟ್ಟೆಯಲ್ಲಿ ಶೋಧಿಸಿ ಜೇನುತುಪ್ಪದಲ್ಲಿ ಕಲಸಿ ಸೇವನೆ ಮಾಡಬೇಕು. ಇದರಿಂದ ಗಂಟಲು ಬೇನೆ ದೂರವಾಗುತ್ತದೆ. ಕಾಮ ಕಸ್ತೂರಿ ಬೀಜಗಳ ಸೇವನೆ ಇಂದ ಮಲಬದ್ಧತೆ ಮತ್ತು ಮೂಲವ್ಯಾಧಿಗೆ ಉಪಯೋಗಕಾರಿಯಾಗಿದೆ. ಕಾಮಕಸ್ತೂರಿ ಗಿಡದ ಹೂಗಳನ್ನು ನೀರಿನಲ್ಲಿ ಅರೆದು ಶೋಧಿಸಿ, ಸ್ವಲ್ಪಜೇನು ಕೂಡಿಸಿ ಸೇವಿಸುವುದು. ಒಂದು ವೇಳೆಗೆ ಅರ್ಧಟೀ ಚಮಚ ರಸ ಸಾಕಾಗುವುದು.
ಅರ್ಧ ಚಮಚ ಕಾಮ ಕಸ್ತೂರಿ ರಸ ಕುಡಿದರೆ ಅಜೀರ್ಣತೆ ಮತ್ತು ಹೊಟ್ಟೆಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಎಲೆಯ ರಸ ಮತ್ತು ಬೀಜಗಳಿಗೆ ಕಿವಿನೋವನ್ನು ತಡೆಯುವ, ಬಲಾದ ಉಸಿರಾಟಕ್ರಿಯೆಯನ್ನು ಸರಿಯಾಗಿಸುವ, ಗಂಟಲು ತುರಿಕೆಯನ್ನು ನಿಲ್ಲಿಸುವ, ಮಲಬದ್ಧತೆಯನ್ನು ನಿವಾರಿಸುವ ತಂಪುಗೊಸಿಸುವ ಶಕ್ತಿಯೂ ಇದೆ. ಮಿಕ್ಕಂತೆ ಇದರ ಎಲೆ ಕುಡಿಗಳನ್ನು ಹೂವಿನೊಂದಿಗೆ ಕಟ್ಟಿ ಮುಡಿಯುವ ಪದ್ಧತಿ ಭಾರತದಲ್ಲಿ ಬಳಕೆಯಲ್ಲಿದೆ. ಇನ್ನೂ ಕಾಮ ಕಸ್ತೂರಿ ಗಿಡವನ್ನು ಮನೆಗಳ ಮುಂದೆ ಅಲಂಕಾರಕ್ಕಾಗಿ ಮತ್ತು ಸುವಾಸನೆಗಾಗಿ ಬೆಳೆಸುತ್ತಾರೆ. ಇದರ ಎಲೆಗಳು ಹಸಿರಾಗಿದ್ದು ಸ್ವಲ್ಪ ಅಗಲವಾಗಿರುತ್ತದೆ. ಇದರ ಎಲೆಗಳು ತುಳಸಿ ಎಲೆಗಳನ್ನು ಹೋಲುತ್ತವೆ ಮತ್ತು ಸ್ವಲ್ಪ ದೊಡ್ಡವಿರುತ್ತದೆ. ಇದರ ಹೂವುಗಳು ಬಿಳಿ ಮತ್ತು ಗುಲಾಬಿ ಬಣ್ಣಗಳನ್ನು ಹೊಂದಿರುತ್ತದೆ.