ಪದೇ ಪದೇ ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ. ಮಲ ವಿಸರ್ಜನೆ ಮಾಡುವಾಗ ನೋವು ಆಗುತ್ತಿದೆಯೇ ಹಾಗಾದ್ರೆ ಇಲ್ಲಿದೆ ಸರಳವಾದ ಸುಲಭವಾದ ಟಿಪ್ಸ್

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದರೆ ಅದು ಮಲಬದ್ಧತೆ ಸಮಸ್ಯೆ. ಈ ಸಮಸ್ಯೆ ನಾವು ಸೇವನೆ ಮಾಡುವ ಆಹಾರದಿಂದಲೇ ಬರುತ್ತದೆ. ಒಮ್ಮೆ ಮಲಬದ್ಧತೆ ಸಮಸ್ಯೆ ಉಂಟಾದರೆ ಯಾವುದೇ ರೀತಿಯ ಕೆಲಸಗಳನ್ನು ಮಾಡಲು ಆಗುವುದಿಲ್ಲ. ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಲಬದ್ಧತೆಯ ಲಕ್ಷಣಗಳು ಅಂದರೆ ಮಲ ವಿಸರ್ಜನೆ ಮಾಡುವಾಗ ಗಟ್ಟಿಯಾಗುವುದು, ಮಲ ವಿಸರ್ಜನೆ ಮಾಡುವಾಗ ಇನ್ನಿತರ ನೋವುಗಳು ಆಗುವುದು ಇನ್ನಿತರ ಲಕ್ಷಣಗಳು. ಈ ಸಮಸ್ಯೆಯು ಕೆಲವರಿಗೆ ದೀರ್ಘಕಾಲದ ಸಮಸ್ಯೆ ಆದರೆ ಇನ್ನೂ ಕೆಲವರಿಗೆ ತಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಕೆಲವೊಮ್ಮೆ ನಮ್ಮ ಆಹಾರ ಪದ್ಧತಿಯಿಂದ ಸ್ವಲ್ಪ ಬೇರೆಯಾಗಿ ನಾವು ಬೇರೆ ಬೇರೆ ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಮಲಬದ್ಧತೆ ಸಮಸ್ಯೆ ಪ್ರಾರಂಭ ಆಗುತ್ತದೆ. ಹಾಗೂ ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಕೂಡ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ.

ಇದಕ್ಕೆ ಕೇವಲ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಾವು ದೂಷಿಸುವ ಹಾಗಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಕೆಲವೊಂದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆಯಿಂದಾಗಿ ನಿಮ್ಮ ದೀರ್ಘ ಕಾಲದ ಮಲಬದ್ಧತೆ ಸಮಸ್ಯೆ ಹೇಗೆ ದೂರವಾಗುತ್ತದೆ ಎಂದು ಹೇಳಬಹುದು. ಮೊದಲಿಗೆ ನೀರು ಚೆನ್ನಾಗಿ ಕುಡಿಯಿರಿ. ದಿನಕ್ಕೆ ಕನಿಷ್ಠ 7-8 ಲೋಟ ನೀರು ಕುಡಿಯಬೇಕು. ಯಾರು ಕಡಿಮೆ ನೀರು ಕುಡಿಯುತ್ತಾರೆ. ಅವರಿಗೆ ಮಲಬದ್ಧತೆ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ.ನೀರಿನ ಅಂಶ ಕಡಿಮೆ ಆದಾಗ ಎದುರಾಗುವ ಮಲಬದ್ಧತೆ ಸಮಸ್ಯೆ ಕೂಡ ಸಾಕಷ್ಟು ತೊಂದರೆ ಕೊಡುತ್ತದೆ.ನಿಮಗೆ ಸಾಧ್ಯ ಆದರೆ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಪ್ರತಿಬಾರಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಸರಿಯಾದ ಸಮಯಕ್ಕೆ ಮಲಗುವುದು ಮತ್ತು ಚೆನ್ನಾಗಿ ನಿದ್ದೆ ಮಾಡುವುದು ತುಂಬಾನೇ ಮುಖ್ಯ ಆಗಿರುತ್ತದೆ. ಅಷ್ಟೇ ಅಲ್ಲದೇ ಇದರ ಜೊತೆಗೆ ನೀವು ಆಹಾರ ಸೇವನೆ ಕೂಡ ನಿತ್ಯವೂ ಸರಿಯಾದ ಸಮಯಕ್ಕೆ ಮಾಡಿಕೊಳ್ಳಬೇಕು. ಪ್ರತಿದಿನವೂ ಒಂದೊಂದು ಸಮಯಕ್ಕೆ ಒಂದೊಂದು ಬಾರಿ ಊಟವನ್ನು ಮಾಡಬಾರದು. ಒಂದೇ ವೇಳೆಯನ್ನು ನಿಗದಿ ಪಡಿಸಿಕೊಳ್ಳಿ. ಹಾಗೂ ನಿಮ್ಮ ಆಹಾರದಲ್ಲಿ ನಾರಿನ ಅಂಶ ಹೆಚ್ಚು ಇರುವಂತೆ ನೋಡಿಕೊಳ್ಳಿ.

ಹಸಿರು ಧಾನ್ಯಗಳು ಮೊಳಕೆ ಧಾನ್ಯಗಳು ಸೇವನೆ ಮಾಡಿ ಇದರಿಂದ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಇನ್ನೂ ಕೆಲವರು ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೂ ಮಧ್ಯಪಾನ ಧೂಮಪಾನದಿಂದ ಕೂಡ ಮಲಬದ್ಧತೆ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಅಷ್ಟೇ ಅಲ್ಲದೇ ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವೊಂದು ನೈಸರ್ಗಿಕ ಮನೆಮದ್ದುಗಳನ್ನೂ ಕೂಡ ನೀವು ಟ್ರೈ ಮಾಡಬಹುದು. ಮೊದಲನೆಯದು ರಾತ್ರಿ ಹೊತ್ತು ಮಲಗುವ ಮುನ್ನ ಒಣದ್ರಾಕ್ಷಿ ನೀರಿನಲ್ಲಿ ನೆನೆಸಿ ಮರುದಿನ ಒಣದ್ರಾಕ್ಷಿ ಮತ್ತು ಅದರ ನೀರನ್ನು ಕುಡಿಯಿರಿ. ಹಾಗೂ ಊಟವಾದ ಮೇಲೆ ಅಥವಾ ಮುನ್ನ ಪಪ್ಪಾಯಿ ಹಣ್ಣು ತಿನ್ನಿ. ಇನ್ನೂ ಒಣಶುಂಠಿ ಪುಡಿ ಮತ್ತು ಓಂ ಕಾಳು ಪುಡಿ ಮಜ್ಜಿಗೆಯಲ್ಲಿ ಹಾಕಿ ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ. ಮತ್ತು ಊಟವಾದ ಒಂದು ಗಂಟೆ ನಂತರ ಬಾಳೆಹಣ್ಣು ಸೇವನೆ ಮಾಡಿ. ಹಾಗೂ ನಿತ್ಯವೂ ಆಹಾರದಲ್ಲಿ ಕರಿಬೇವು ಕೊತ್ತಂಬರಿ ಶುಂಠಿ ನಿಂಬೆಹಣ್ಣು ಬಳಕೆ ಮಾಡುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಮತ್ತು ನಿತ್ಯವೂ ಸೌತೆಕಾಯಿ ಹಾಗೂ ಬೆಂಡೆಕಾಯಿ ಸೇವನೆ ಮಾಡಿ. ಮತ್ತು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನಿಯಂತ್ರಣವಿರಲಿ.

Leave a Reply

Your email address will not be published. Required fields are marked *