ಉತ್ತರಾಯಿಣಿ ಗಿಡದ ಆರೋಗ್ಯಕರ ಗುಣಗಳನ್ನು ತಿಳಿದುಕೊಂಡರೆ ಅದನ್ನು ನೀವು ಸೇವಿಸದೇ ಬಿಡುವುದಿಲ್ಲ

ಆರೋಗ್ಯ

ನಮಸ್ತೇ ಪ್ರಿಯ ಆತ್ಮೀಯ ಗೆಳೆಯರೇ, ನಮ್ಮ ಪ್ರಕೃತಿಯಲ್ಲಿ ದೊರೆಯುವ ಒಂದೊಂದು ಗಿಡ ಮರಗಳು ಬಳ್ಳಿಗಳು ಮನುಷ್ಯನಿಗೆ ಬೇಕಾಗುವ ಅದ್ಭುತವಾದ ಉಡುಗೊರೆ ಹಾಗೂ ವರದಾನವಾಗಿದೆ. ಅಂತಹ ಸಸ್ಯಗಳಲ್ಲಿ ಉತ್ತರಾಯಿಣಿ ಗಿಡ ಕೂಡ ಒಂದು ಇದು ಸಾಮಾನ್ಯವಾಗಿ ಹೊಲ ಗದ್ದೆ ಪಾಲು ಬಿದ್ದ ಮನೆಗಳಲ್ಲಿ ಕಾಣಲು ಸಿಗುತ್ತದೆ. ಇದು ಎಲ್ಲ ಕಡೆಗೂ ಬೆಳೆಯುತ್ತದೆ. ಯಾವುದೇ ಬೇಧಭಾವ ಇಲ್ಲದೆ ಬಂಜರ ಭೂಮಿಯಲ್ಲಿ ಬೆಟ್ಟ ಕಣಿವೆಯಲ್ಲಿ ಬೆಳೆಯುತ್ತದೆ. ಉತ್ತರಾಯಿನಿ ಗಿಡದಲ್ಲಿ ಎರಡು ವಿಧಗಳಿವೆ ಒಂದು ಬಿಳಿ ಕಾಂಡ ಹಾಗೂ ಕೆಂಪು ಕಾಂಡ. ಸಾಮಾನ್ಯವಾಗಿ ಎಲ್ಲ ಪ್ರದೇಶದಲ್ಲಿ ಸಿಗುವ ಉತ್ತಾರಾಯಿನಿ ಗಿಡವೂ ಹಾಗೂ ಅದರ ಪ್ರತಿಯೊಂದು ಭಾಗವು ನಿಮ್ಮ ಎಲ್ಲ ಬಗೆಯ ರೋಗಗಳಿಗೆ ದಿವ್ಯ ಔಷಧ ಅಂತ ಹೇಳಬಹುದು. ಉತ್ತರಾಣಿಯನ್ನು ಸಂಸ್ಕೃತದಲ್ಲಿ ಅಪಮಾರ್ಗ ಉತ್ತರಾಣಿ ಎಲೆಯ ಕಷಾಯ ಅಥವಾ ರಸವು ಮೂತ್ರಪಿಂಡವನ್ನು ಶುದ್ಧಗೊಳಿಸುತ್ತದೆ ಮತ್ತು ಮೂತ್ರ ವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ಮತ್ತು ಖರಮಂಜರಿ ಎಂದು ಕರೆಯಲಾಗುತ್ತದೆ. ಉತ್ತರಾಣಿ ಗೀಡದ ಉಪಯೋಗಗಳು ಈ ಕೆಳಗಿನಂತಿದೆ. ಮೊದಲನೆಯದು ಈ ಗಿಡದ ಬೇರು ತುಂಬಾನೇ ಉಪಯುಕ್ತ. ಹೀಗಾಗಿ ಅದರ ಬೇರನ್ನು ತೆಗೆದುಕೊಂಡು ಅದನ್ನು ಜಜ್ಜಿ ಅದರ ರಸವನ್ನು ತೆಗೆದು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ನಿದ್ರಾ ಹೀನತೆ ಸಮಸ್ಯೆ ಮಾಯವಾಗುತ್ತದೆ.

ಉತ್ತರಾಣಿ ಎಲೆಯ ಕಷಾಯ ಅಥವಾ ರಸವು ಮೂತ್ರಪಿಂಡವನ್ನು ಶುದ್ಧಗೊಳಿಸುತ್ತದೆ ಮತ್ತು ಮೂತ್ರವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ಆದ್ದರಿಂದ ಇದರ ರಸವನ್ನು ಯಾವುದೋ ಒಂದು ರೀತಿಯಲ್ಲಿ ಸೇವನೆ ಮಾಡಿ. ಇನ್ನೂ ಜೇನು ಹುಳುಗಳು ನಿಮಗೆ ಕಚ್ಚಿದರೆ ಹಾವು ಮತ್ತು ಚೇಳುಗಳಿಂದ ಕಚ್ಚಿಸಿಕೊಂಡವರಿಗೆ ಪ್ರಥಮ ಚಿಕಿತ್ಸೆಯಾಗಿ ಉತ್ತರಾಣಿ ಬಳಸಲಾಗುತ್ತದೆ. ಹೌದು ಉತ್ತಾರಾಯಿಣಿ ಗಿಡದ ಎಲೆಗಳನ್ನು ಜಜ್ಜಿ ಅದರ ಲೇಪನವನ್ನು ಗಾಯದ ಮೇಲೆ ಮಾಡಿ ಇದರಿಂದ ಗಾಯವು ಉಪಶಮನ ಆಗುತ್ತದೆ. ಇದರಿಂದ ನೋವು ಮತ್ತು ಉರಿಯೂತ ಕಡಿಮೆಯಾಗುತ್ತದೆ ಹಾಗೂ ವಿಷದ ಅಂಶ ಇಳಿಯುತ್ತದೆ. ಆಸ್ತಮಾದಿಂದ ಬಳಲುತ್ತಿರುವ ಜನರು ಉತ್ತರಾಣಿ ಬೇರಿನಿಂದ ಮಾಡಿದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರಿಸಿ ಕುಡಿಯುವುದರಿಂದ ಈ ಕಾಯಿಲೆ ಕಡಿಮೆಯಾಗುತ್ತದೆ. ಇನ್ನೂ ಪೆಟ್ಟು ಬಿದ್ದು ಗಾಯ ಮಾಡಿಕೊಂಡರೆ ಹಾಗೂ ಅತಿಯಾದ ರಕ್ತಸ್ರಾವ ಆಗುತ್ತಿದ್ದಾರೆ ಕೆಂಪು ಉತ್ತರಾಯಿನಿ ಗಿಡದ ರಸವನ್ನು ಗಾಯದ ಮೇಲೆ ಹಿಂಡಿದರೆ ಗಾಯವು ಕಡಿಮೆ ಆಗುತ್ತದೆ ಹಾಗೂ ರಕ್ತಸ್ರಾವ ನಿಲ್ಲುತ್ತದೆ.
ಕೆಂಪು ಉತ್ತರಾಯಿಣಿ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದರ ರಸವನ್ನು ಕುಡಿದರೆ ದೇಹದಿಂದ ರಕ್ತಸ್ರಾವ ಆಗುವುದು ತಡೆಯುತ್ತದೆ. ಹಾಗೂ ಕೆಂಪು ಕೂಡ ನಿವಾರಣೆ ಮಾಡುತ್ತದೆ.

ಇನ್ನೂ ಕೆಮ್ಮು ನಿವಾರಣೆ ಆಗಲು ಕೆಂಪು ಉತ್ತರಾಯಿನಿ ಒಣಗಿದ ಕಾಂಡವನ್ನು ಪುಡಿ ಮಾಡಿ ಅದರಲ್ಲಿ ಕರಿಮೆಣಸು ಪುಡಿ ಹಾಕಿ ಜೇನುತುಪ್ಪ ಹಾಕಿ ಸೇವನೆ ಮಾಡಿರಿ ಇದರಿಂದ ಎಂಥಹ ಹಳೆಯದಾದ ಕೆಂಪು ನಿವಾರಣೆ ಆಗುತ್ತದೆ. ಈ ಗಿಡದ ಪೇಸ್ಟ್ ನಲ್ಲಿ ಮೊಸರು ಹಾಕಿ ಸೇವನೆ ಮಾಡುವುದರಿಂದ ಭೇಧಿ ನಿಲ್ಲುತ್ತದೆ. ನೀವು ಸತತವಾಗಿ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದರೆ ಉತ್ತರಾಣಿ ಎಲೆಯನ್ನು ಕಷಾಯ ಮಾಡಿ ಸೇವಿಸಿ. ಇದು ಹುಣ್ಣಿನ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ. ಇನ್ನೂ ಈ ಗಿಡದ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಚರ್ಮದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಈ ಗಿಡದ ಎಲೆಗಳನ್ನು ಬೆಲ್ಲದ ಜೊತೆಗೆ ತಿನ್ನುವುದರಿಂದ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ. ಉತ್ತರಾಣಿ ರಸವು ಕಫ, ದೇಹ ಉಬ್ಬುವುದು, ನೋವು, ತುರಿಕೆ ಮತ್ತು ಕುಷ್ಠರೋಗವನ್ನು ತಡೆಯುತ್ತದೆ. ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡರೆ, ಪುಡಿಮಾಡಿದ ಉತ್ತರಾಣಿ ಬೀಜಗಳು ಉತ್ತಮ ಔಷಧ.

Leave a Reply

Your email address will not be published. Required fields are marked *