15 ದಿನ ಇದನ್ನು ಮಾಡಿ ನೋಡಿ ನಿಮ್ಮ ಮುಖದಲ್ಲಿ ಆಗಿರುವ ಕಪ್ಪು ಕಲೆಗಳು ಬಂಗು ನೆರಿಗೆ ಸುಕ್ಕು ಎಲ್ಲವೂ ಮಾಯವಾಗುತ್ತವೆ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ನಾವು ತಿಳಿಸುವ ಈ ಮನೆಮದ್ದು ಮಾಡಿ ನೋಡಿ ನಿಮ್ಮ ಮುಖಕ್ಕೆ ನೀವೇ ಧನ್ಯವಾದ ಹೇಳುವಿರಿ. ಯಾಕೆಂದರೆ ಈ ಮನೆಮದ್ದು ಮುಖದಲ್ಲಿ ಆಗಿರುವ ಕಪ್ಪು ಕಲೆಗಳು, ಪಿಗ್ಮೆಂಟೆಶನ್, ಅಲ್ಲಲ್ಲಿ ಮುಖದ ಬಣ್ಣ ಕಪ್ಪು ಬಿಳಿ ಆಗುವುದು ನೆರಿಗೆ ಸುಕ್ಕು ಎಲ್ಲವನ್ನು ತೆಗೆದು ಹಾಕುತ್ತದೆ ಅಷ್ಟೊಂದು ಪರಿಣಾಮಕಾರಿ ಆಗಿದೆ ಈ ಮನೆಮದ್ದು. ಮುಖದಲ್ಲಿ ಆಗುವ ಟ್ಯಾನ್ ಅನ್ನು ಕೂಡ ಕಡಿಮೆ ಮಾಡುತ್ತದೆ. ಈ ಮನೆಮದ್ದು ತಯಾರಿಸಲು ತುಂಬಾ ಹಣದ ಖರ್ಚು ಮಾಡುವ ಅವಶ್ಯಕತೆ ಇಲ್ಲ ಗೆಳೆಯರೇ ಬದಲಾಗಿ ನಿಮ್ಮ ಮನೆಯಲ್ಲಿ ಇರುವ ಕೇವಲ ಎರಡು ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಈ ಮನೆಮದ್ದು ಮಾಡಿಕೊಳ್ಳಬಹುದು. ಈ ಮನೆಮದ್ದು ತಯಾರಿಸಲು ಆಲೂಗಡ್ಡೆ ಬೇಕಾಗುತ್ತದೆ. ಇದರಲ್ಲಿ ಮುಖದ ಎಲ್ಲ ಸಮಸ್ಯೆಗಳನ್ನೂ ಹೋಗಲಾಡಿಸುವ ಗುಣಗಳನ್ನು ಹೊಂದಿದೆ. ಅದರಲ್ಲೂ ಆಲೂಗಡ್ಡೆ ರಸವು ಮುಖದಲ್ಲಿ ಆಗಿರುವ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ಪಿಗ್ಮೆಂಟೆಶನ್ ಡಾರ್ಕ್ ಸರ್ಕಲ್ ಡಾರ್ಕ್ ಸ್ಪಾಟ್ ಎಲ್ಲವನ್ನು ಕಡಿಮೆ ಮಾಡುತ್ತದೆ ಜೊತೆಗೆ ಮುಖದ ಬಣ್ಣವನ್ನು ಹೆಚ್ಚಿಸುತ್ತದೆ. ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ತೊಳೆದು ಅದರ ಸಿಪ್ಪೆಯನ್ನು ತೆಗೆದು ಅದನ್ನು ತುರಿದು ಅದರ ರಸವನ್ನು ತೆಗೆದುಕೊಳ್ಳಿ. ಬಳಿಕ ಅದರಲ್ಲಿ ಅರ್ಧ ನಿಂಬೆ ಹೋಳು ರಸವನ್ನು ಹಿಂಡಿ ಮಿಕ್ಸ್ ಮಾಡಿ ಬಳಿಕ ಅದ್ರಲ್ಲಿ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಕ್ಕಿ ಹಿಟ್ಟು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ. ಲೈಟ್ ನೆಸ್ ಕೊಡುತ್ತದೆ. ಯಾವುದೇ ರೀತಿಯ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ಈಗ ಅಕ್ಕಿ ಹಿಟ್ಟು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಗಟ್ಟಿ ಅನ್ನಿಸಿದರೆ ನೀರು ಹಾಕಿ ಆಮೇಲೆ ನಾಲ್ಕು ಚಮಚ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದು ಸಿದ್ಧವಾದ ಮೇಲೆ ಇದನ್ನು ಐಸ್ ಕ್ಯೂಬ್ ಆಗಿ ಮಾಡಿಕೊಳ್ಳಿ.

 

ಇನ್ನೂ ಎರಡನೇಯ ಹಂತ ನೋಡುವುದಾದರೆ, ಒಂದು ಟೊಮ್ಯಾಟೋ ಹಣ್ಣು ತೆಗೆದುಕೊಳ್ಳಿ, ಅದರ ರಸವನ್ನು ತೆಗೆದು ಕೊಳ್ಳಿ. ಬಳಿಕ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದು ಈ ಟೊಮ್ಯಾಟೋ ರಸವನ್ನು ಹಚ್ಚಿ. ಮೂರು ಲೇಯರ್ ಆಗಿ ಮೂರು ಬಾರಿ ಹಚ್ಚಿ ಒಣಗಲು ಬಿಡಿ. ಕೊನೆಯಲ್ಲಿ ಆಲೂಗಡ್ಡೆ ಐಸ್ ಕ್ಯೂಬ್ ನಿಂದ ನಿಮ್ಮ ಮುಖಕ್ಕೆ ಹಚ್ಚಿ ನಿಧಾನವಾಗಿ ಉಜ್ಜಿ. ಅದನ್ನು ಚೆನ್ನಾಗಿ ಒಣಗಲು ಬಿಡಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ಈ ಮನೆಮದ್ದು ನೀವು ಬೆಳಗಿನ ಸಮಯ ಮಾಡಿದರೆ ತುಂಬಾನೇ ಪರಿಣಾಮಕಾರಿ ಏಕೆಂದ್ರೆ ಬೆಳಗಿನ ಜಾವ ಮುಖ ಫ್ರೆಶ್ ಆಗಿರುತ್ತದೆ. ಆದ್ದರಿಂದ ಈ ಮನೆಮದ್ದು ಬೆಳಿಗ್ಗೆ ಮಾಡುವುದು ಒಳಿತು ಹಾಗೂ ಒಂದು ದಿನ ಬಿಟ್ಟು ಮತ್ತೊಂದು ದಿನ ಮಾಡುತ್ತಾ ಬರಬೇಕು. ಹೀಗೆ ಮಾಡುವುದರಿಂದ ನಿಮ್ಮ ಮುಖ ಗ್ಲೋ ಆಗುತ್ತದೆ. ರಂಧ್ರಗಳು ಮಾಯವಾಗುತ್ತವೆ. ಮುಖ ಫಳ ಫಳ ಹೊಳೆಯುತ್ತದೆ. ಸುಂದರವಾಗಿ ಕಾಣುವಿರಿ. ಹೌದು ಗೆಳೆಯರೇ, ಈ ಮನೆಮದ್ದು ತುಂಬಾನೇ ಸರಳವಾಗಿದೆ. ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ನಿಮ್ಮ ಮುಖದ ಕಾಂತಿ ಹಾಗೂ ಸೌಂದರ್ಯವನ್ನು ನೀವು ಹೆಚ್ಚಿಸಿ ಕೊಳ್ಳಬಹುದು. ಶುಭದಿನ.

Leave a Reply

Your email address will not be published. Required fields are marked *