ಈ ಮರವನ್ನು ಬೆಳೆದು ಕೋಟಿ ಕೋಟಿ ಗಟ್ಟಲೆ ಆದಾಯವನ್ನು ಪಡೆಯಬಹುದು ಅದು ಯಾವ ಮರ ಅನ್ನುತ್ತೀರಾ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಸ್ನೇಹಿತರೆ, ಇಂದಿನ ಲೇಖನದಲ್ಲಿ ನಾವು ನಿಮಗೆ ಅತಿ ಕಡಿಮೆ ಭೂಮಿಯಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಅತಿ ಬೇಗನೆ ಬೆಳೆಯುವ ಒಂದು ಅದ್ಭುತವಾದ ಸಸ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಬನ್ನಿ. ಈ ಬೆಳೆಯು ನಿಮಗೆ ಮುಂದಿನ ದಿನಗಳಲ್ಲಿ ಅತಿಯಾದ ಲಾಭವನ್ನು ತಂದು ಕೊಡುತ್ತದೆ. ಹಾಗಾದರೆ ಆ ಬೆಳೆ ಯಾವುದು ಅಂತ ತಿಳಿಯೋಣ ಬನ್ನಿ. ಅದುವೇ ಶ್ರೀ ಗಂಧದ ಮರ. ಶ್ರೀ ಗಂಧದ ಮರವನ್ನು ನಮ್ಮ ಭಾರತ ಹಿಂದೂ ಸಂಪ್ರದಾಯದಲ್ಲಿ ಅತಿ ಶ್ರೇಷ್ಟವಾದ ಮರ ಅಂತ ನಂಬಲಾಗಿದೆ. ಹಾಗೆಯೇ ಇದು ತುಂಬಾನೇ ಬೇಗನೆ ಬೆಳೆಯುವ ಮರವಾಗಿದೆ. ಅಷ್ಟೇ ತುಂಬಾನೇ ಬೆಲೆಯುಳ್ಳದ್ದು ಕೂಡ ಆಗಿದೆ. ಈ ಗಿಡದ ಪ್ರತಿಯೊಂದು ಭಾಗವಾದ ಕಾಂಡ ಹೂವು ಬೇರು ಕೊಂಬೆಗಳು ಎಲ್ಲವೂ ಉಪಯೋಗಕ್ಕೆ ಬರುತ್ತದೆ. ನಮ್ಮ ಕರ್ನಾಟಕ ಸರ್ಕಾರವೂ ಮುಂಚಿತವಾಗಿ ಈ ಶ್ರೀಗಂಧದ ಮರವನ್ನು ಕತ್ತರಿಸುವುದು ನಿಷೇಧ ಮಾಡಲಾಗಿತ್ತು. ಆದರೆ ಈಗ ನಿಮ್ಮ ಖಾಸಗಿ ಭೂಮಿಯಲ್ಲಿ ನೀವು ಶ್ರೀ ಗಂಧದ ಮರವನ್ನು ಬೆಳೆಸಿ ಲಾಭವನ್ನು ಗಳಿಸಲು ಸರ್ಕಾರವು ಅನುಮತಿ ನೀಡುತ್ತದೆ. ಇದನ್ನು ನೀವು ಸರ್ಕಾರಕ್ಕೆ ಕೂಡ ಮಾರಾಟ ಮಾಡಿ ಲಾಭವನ್ನು ಪಡೆಯಬಹುದು. ಹೌದು ಶ್ರೀಗಂಧದ ಮರದಿಂದ ಕೋಟಿ ಕೋಟಿ ಗಟ್ಟಲೆ ನೀವು ಹಣವನ್ನು ಗಳಿಸಬಹುದು. ಒಂದು ಜಮೀನಿನಲ್ಲಿ 900 ಮರವನ್ನು ನೀವು ನೆಡಬಹುದು.

ಆದರೆ ಇಷ್ಟೊಂದು ಬೆಳೆಯಲು ಸಾಧ್ಯವಾಗುವುದಿಲ್ಲ. ಕಾರಣ ಇದು ಪರಾವಲಂಬಿ ಸಸ್ಯವಾಗಿದೆ. ಈ ಸಸ್ಯ ಬೆಳೆಯಲು ಇನ್ನೊಂದು ಸಸ್ಯದ ಅವಶ್ಯಕತೆ ಇರುತ್ತದೆ. ಏಕೆಂದರೆ ಮಣ್ಣಿನಲ್ಲಿ ಇರುವ ಪೋಷಕಾಂಶ ಮತ್ತು ಇನ್ನೊಂದು ಮರದ ಬುಡದಲ್ಲಿ ಸಿಗುವ ಪೋಷಕಾಂಶಗಳ ಬಳಕೆಯನ್ನು ಮಾಡಿಕೊಂಡು ಇದು ಬೆಳೆಯುತ್ತದೆ. ಉದಾಹರಣೆ ಗೆ ಒಂದು ಎಕರೆ ಜಮೀನಿನಲ್ಲಿ ನೀವು 900 ಸಸ್ಯಗಳು ಅಂದರೆ 450 ಶ್ರೀ ಗಂಧದ ಮರಗಳನ್ನು ನೆಡಬೇಕು. ಅಂದರೆ ಯಾವುದಾದ್ರೂ ಸಸ್ಯ ಹೆಬ್ಬೇವು ಮರ ಅಥವಾ ಸಿಲ್ವರ್ ಟೇಕ್ ಮರವನ್ನು ನೀವು ಶ್ರೀ ಗಂಧದ ಮರದ ಜೊತೆ ಜೊತೆಗೆ ಬೆಳೆಸಬೇಕು. ಇದರ ಅರ್ಥ, ಶ್ರೀ ಗಂಧದ ಮರಕ್ಕಿಂತಲೂ ಎತ್ತರವಾಗಿ ಬೆಳೆಯುವ ಮರವನ್ನು ನೀವು ಬೆಳೆಸಬೇಕಾಗುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಅರಣ್ಯ ಇಲಾಖೆಯಿಂದ ಪಡೆಯಬಹುದು. ಇನ್ನೂ ಒಂದು ಎಕರೆ ಜಮೀನಿನಲ್ಲಿ 450 ಶ್ರೀ ಗಂಧದ ಮರಗಳನ್ನು ನೀವು ಬೆಳೆಸಿದರೆ ಅದು 12-15 ವರ್ಷಗಳಲ್ಲಿ ಕತ್ತರಿಸಲು ಬರುವ ಹಾಗೆ ಬೆಳೆದಿರುತ್ತದೆ.

ಈಗಿನ ಬೆಳೆಗೆ ಹೋಲಿಕೆ ಮಾಡಿದರೆ ಒಂದು ಶ್ರೀ ಗಂಧದ ಮರವೂ 3-4 ಲಕ್ಷ ರೂಪಾಯಿ ಬೆಲೆಬಾಳುತ್ತದೆ. ಅಥವಾ ಒಂದು ಉದಾಹರಣೆಗೆ ಅಂತ ತೆಗೆದುಕೊಂಡರೆ ಒಂದು ಮರಕ್ಕೆ ಹತ್ತು ಲಕ್ಷ ರೂಪಾಯಿ ಅಂತ ತೆಗೆದುಕೊಂಡರೆ ಪ್ರತಿ ಏಕೆರೆಗೆ 450 ಮರಗಳಾದರೆ ಒಟ್ಟಾರೆ ನಿಮಗೆ 45 ಕೋಟಿ ಆದಾಯವನ್ನು ತಂದು ಕೊಡುತ್ತದೆ. ಈ ಮರಗಳಿಂದ ನೀವು ದೊಡ್ಡದಾದ ಮೊತ್ತದಲ್ಲಿ ಲಾಭದ ನಿರೀಕ್ಷೆಯನ್ನು ಮಾಡಬಹುದು. ಇನ್ನೂ 12-15 ವರ್ಷದವರೆಗೆ ಹಾಗೆ ಕುಳಿತುಕೊಳ್ಳಬಹುದು ಅಂತ ನೀವು ಯೋಚನೆ ಮಾಡಬಹುದು ಆದರೆ ಈ ಶ್ರೀ ಗಂಧ ಮರವೂ ಬಿಡುವ ಬೀಜಗಳಿಂದ ನೀವು 3-4 ಲಕ್ಷ ಆದಾಯವನ್ನು ಗಳಿಸಬಹುದು.ಇನ್ನೂ ಈ ಶ್ರೀ ಗಂಧದ ಮರಗಳು ಜೊತೆಗೆ ಬೆಳೆಯುವ ಮರಗಳ ಜೊತೆಗೆ ಶೇಂಗಾ ಮೆಕ್ಕೆಜೋಳ ಬೆಳೆಗಳಿಂದ ಕೂಡ ನೀವು ಆದಾಯವನ್ನು ಗಳಿಸಬಹುದು. ಇನ್ನೂ ಈ ಶ್ರೀ ಗಂಧದ ಮರಗಳನ್ನು ಯಾವ ರೀತಿ ಮಾರಾಟ ಮಾಡಬೇಕು ಅಂದರೆ ನೀವು ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯವರಿಗೆ ಮಾರಾಟ ಮಾಡಬೇಕು.ಇದನ್ನು ಖಾಸಗಿ ಜನರಿಗೆ ಸಂಸ್ಥೆಗಳಿಗೆ ಯಾವುದೇ ಕಾರಣಕ್ಕೂ ವ್ಯಾಪಾರ ಮಾಡುವ ಹಾಗಿಲ್ಲ ಇಲ್ಲವಾದರೆ ಕರ್ನಾಟಕ ಸರ್ಕಾರವೂ ಶಿಕ್ಷೆಯನ್ನು ವಿಧಿಸುತ್ತದೆ. ಆದ್ದರಿಂದ ಈ ಮರಗಳನ್ನು ಬೆಳೆಯಲು ನೀವು ಬಯಸಿದರೆ ಅಧಿಕಾರಿಗಳ ಅರಣ್ಯ ಇಲಾಖೆಯ ವ್ಯಕ್ತಿಗಳ ಜೊತೆಗೆ ಸಂಪೂರ್ಣವಾದ ಮಾಹಿತಿ ಜೊತೆಗೆ ಸಂವಾದದ ಜೊತೆಗೆ ಈ ಮರಗಳನ್ನು ಬೆಳೆದು ಲಾಭವನ್ನು ಪಡೆಯಿರಿ. ಶುಭದಿನ.

Leave a Reply

Your email address will not be published. Required fields are marked *