ಮುಖದ ಸೌಂದರ್ಯವನ್ನು ಹೆಚ್ಚಿಸುವ ಹಾಗೂ ಕೆಲವೇ ನಿಮಿಷದಲ್ಲಿ ಫಲಿತಾಂಶವನ್ನು ಒದಗಿಸುವ ಬ್ಯೂಟಿ ಟಿಪ್ಸ್ ಗಳು ಇಲ್ಲಿವೆ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭವಾದ ಟಿಪ್ಸ್ ಗಳು. ಮುಖದ ಸೌಂದರ್ಯವನ್ನು ಹೆಚ್ಚು ಮಾಡಲು ಅದನ್ನು ಆರೈಕೆ ಮಾಡಲು ನಾವು ನೂರೆಂಟು ದಾರಿಗಳನ್ನು ಹುಡುಕುತ್ತೇವೆ. ಸುಂದರ ತ್ವಚೆ ಯಾರಿಗೆ ಬೇಡ ಹೇಳಿ? ಹೊಳೆಯುವ ಮೈಕಾಂತಿ, ಆಕರ್ಷಕ ಬಣ್ಣ ಹಾಗೂ ಸುಂದರ ನೋಟವನ್ನು ಹೊಂದಲು ಎಲ್ಲರು ಬಯಸುತ್ತಾರೆ. ಅದಕ್ಕಾಗಿ ಬ್ಯೂಟಿ ಸಲೂನ್ ಗೆ ಹೋಗುತ್ತೇವೆ. ಸಾಕಷ್ಟು ದುಡ್ಡು ಖರ್ಚು ಮಾಡುತ್ತೇವೆ. ಅದರ ಮಧ್ಯದಲ್ಲಿ ಈ ಟ್ರಿಕ್ಸ್ ಗಳನ್ನು ನೀವು ಫಾಲೋ ಮಾಡಿದರೆ ಖಂಡಿತವಾಗಿ ನಿಮ್ಮ ಸೌಂದರ್ಯ ದ್ವಿಗುಣಗೊಳ್ಳುತ್ತದೆ. ಈ ಟ್ರಿಕ್ಸ್ ಗಳನ್ನು ಉಪಯೋಗಿಸಲು ನೀವು ಬಹಳ ಕಷ್ಟ ಪಡಬೇಕಾಗಿಲ್ಲ ಬದಲಾಗಿ ಇವುಗಳು ತುಂಬಾನೇ ಸರಳವಾದ ಟಿಪ್ಸ್ ಗಳಾಗಿವೆ.

 

ಇವುಗಳು ಎಷ್ಟು ಬೇಗನೆ ಫಲಿತಾಂಶ ನೀಡುತ್ತವೆ ಎಂದು ನೀವು ಒಮ್ಮೆ ಟ್ರೈ ಮಾಡಬಹುದು. ಮೊದಲನೆಯ ಟ್ರಿಕ್ಸ್ ಏನು ಅಂದರೆ ಅರಿಶಿನ ಹಸಿಹಾಲು ಹಾಗೂ ಚಂದನವನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಮುಖಕ್ಕೆ ಹೊಳಪು ಹಾಗೂ ಫ್ರೆಶ್ ನೆಸ್ ಕೂಡ ಬರುತ್ತದೆ. ಇನ್ನೂ ಎರಡನೇ ಟಿಪ್ಸ್ ಯಾವುದು ಅಂತ ಹೇಳುವುದಾದರೆ ಮೊಸರಿನಲ್ಲಿ ಸ್ವಲ್ಪ ನಿಂಬೆ ರಸವನ್ನು ಹಾಕಿ ಅದರಲ್ಲಿ ಗ್ರೀನ್ ಟೀ ನೀರು ಕುದಿಸಿ ಆ ನೀರನ್ನು ಅದರಲ್ಲಿ ಹಾಕಿ ಮಿಕ್ಸ್ ಮಾಡಿ ನಯವಾಗಿ ನಿಮ್ಮ ಮುಖದ ಮೇಲೆ ಹಚ್ಚಿ ಮಸಾಜ್ ಮಾಡಿಕೊಂಡು ಬಳಿಕ ತೊಳೆದುಕೊಳ್ಳಿ. ಇದರಿಂದ ಸುಂದರವಾದ ನಯವಾದ ಮೃದುವಾದ ಮುಖವೂ ನಿಮ್ಮದಾಗುತ್ತದೆ. ಇನ್ನೂ ನಿಮ್ಮ ಮುಖದಲ್ಲಿ ಕಪ್ಪು ಕಲೆಗಳು ಹೆಚ್ಚಾಗಿದ್ದರೆ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಅದರಲ್ಲಿ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮೊಡವೆಗಳು ಹಾಗೂ ಕಪ್ಪು ಕಲೆಗಳು ಇರುವ ಜಾಗದಲ್ಲಿ ಹಚ್ಚಿ 15 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖದಲ್ಲಿ ಆಗಿರುವ ಎಲ್ಲ ಕಪ್ಪು ಕಲೆಗಳು ಮಾಯವಾಗುತ್ತದೆ. ನಿಮ್ಮ ಮುಖವೂ ಹೊಳೆಯುತ್ತದೆ.

 

ಎಣ್ಣೆ ಚರ್ಮದಿಂದ ಮುಕ್ತಿಯನ್ನೂ ಕೂಡ ಕಾಣಬಹುದು. ಇನ್ನೂ ಮನೆಯ ಮುಂದೆ ಅಥವಾ ಹಿತ್ತಲಿನಲ್ಲಿ ಬೆಳೆದಿರುವ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದರಲ್ಲಿ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿದರೆ ನಿಮ್ಮ ಮುಖ ಮತ್ತೆ ಮತ್ತೆ ಮುಟ್ಟುವಂತೆ ಮೃದು ಆಗುತ್ತದೆ. ಇನ್ನೂ ನೀವು ಯಾವುದಾದರೂ ಸಮಾರಂಭಕ್ಕೆ ಹೋಗುತ್ತೀರಿ ಅಂತ ಅಂದುಕೊಳ್ಳಿ ಅದರ ಹಿಂದಿನ ದಿನ ನಿಮ್ಮ ಮುಖದ ಮೇಲೆ ಮೊಡವೆಗಳು ಮೂಡುತ್ತವೆ. ಇದರಿಂದ ನಿಮ್ಮ ಮುಖ ಸುಂದರವಾಗಿ ಕಾಣದೇ ಹೋದಲ್ಲಿ ನಿಮಗೆ ಸಮಾರಂಭಕ್ಕೆ ಹೋಗಲು ಮುಜುಗರ ಆಗುತ್ತದೆ. ಅಂಥಹ ಸಮಯದಲ್ಲಿ ನೀವು ಮೊಡವೆ ಆದ ಜಾಗದಲ್ಲಿ ಕೋಲ್ಗೇಟ್ ಅನ್ನು ಹಚ್ಚಿ. ಇದರಿಂದ ಮೊಡವೆಗಳು ಬೇಗನೆ ನಿವಾರಣೆ ಆಗುತ್ತದೆ. ಹಾಗೂ ನೀವು ಸುಂದರವಾಗಿ ಕಾಣುವಿರಿ. ಇನ್ನೂ ಮುಖದಲ್ಲಿ ಆಗಿರುವ ನೆರಿಗೆ ನಿವಾರಣೆ ಮಾಡಲು ಒಂದು ಮೊಟ್ಟೆಯ ಬಿಳಿ ಲೋಳೆ, ಒಂದು ಚಮಚ ಆಲಿವ್ ತೈಲ ಮತ್ತು ಕೆಲವು ಹನಿ ರೋಸ್ ವಾಟರ್ ಹಾಕಿಕೊಳ್ಳಿ. ಇದನ್ನು ಕಣ್ಣಿನ ಕೆಳಗಡೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮೊದಲು ಇದನ್ನು ಪ್ರತಿನಿತ್ಯ 15 ದಿನಗಳ ಕಾಲ ಹಚ್ಚಿದರೆ ಫಲಿತಾಂಶ ಖಚಿತ. ನೋಡಿದ್ರಲಾ ತುಂಬಾನೇ ಸರಳವಾದ ಟ್ರಿಕ್ಸ್ ಗಳು ಇವಾಗಿವೆ. ಒಮ್ಮೆ ಮಾಡಿ ನೋಡಿ. ಖಂಡಿತವಾಗಿ ಉತ್ತಮವಾದ ಫಲಿತಾಂಶ ನಿಮ್ಮದಾಗುತ್ತದೆ.
ಶುಭದಿನ.

Leave a Reply

Your email address will not be published. Required fields are marked *