ಮೊಡವೆಗಳು ಯಾಕೆ ಮೂಡುತ್ತವೆ ಗೊತ್ತೇ? ಅದಕ್ಕಾಗಿ ನಾವು ಏನು ಮಾಡಬೇಕು? ಎಲ್ಲದರ ಮಾಹಿತಿ ಇಲ್ಲಿದೆ ನೋಡಿ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಮೊಡವೆಗಳು ಮುಖದಲ್ಲಿ ಯಾಕೆ ಮೂಡುತ್ತವೆ ಗೊತ್ತೇ? ಹೌದು ಟೀ-ನೇಜರ್ಸ್ ನಲ್ಲಿ ಈ ಮೊಡವೆಗಳ ಸಮಸ್ಯೆಯನ್ನು ನಾವು ಹೆಚ್ಚಾಗಿ ಕಾಣಬಹುದು. ಅದರಲ್ಲೂ ಇದು ಇಂಥವರಿಗೆ ಸಮಸ್ಯೆ ಬರುತ್ತದೆ ಅಂತ ಹೇಳಲಾಗುವುದಿಲ್ಲ ಬದಲಾಗಿ ಹೆಣ್ಣು ಗಂಡು ಭೇದಭಾವ ಇಲ್ಲದೆ ವಯಸ್ಸಿಗೂ ಕೂಡ ಮೀರಿ ಇಂತಹ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತಲೇ ಇರುತ್ತದೆ. ಒಂದು ವರದಿ ಪ್ರಕಾರ ನಮ್ಮ ಭಾರತದಲ್ಲಿ ಹೆಚ್ಚು ಮೊಡವೆಗಳ ಸಮಸ್ಯೆಯನ್ನು ಎದುರಿಸುತ್ತಿರುವ ಜನಸಂಖ್ಯೆ ಅಧಿಕವಾಗಿದೆ ಅಂತ ತಿಳಿದು ಬಂದಿದೆ.ಮೊಡವೆಗಳು ಆಗುವುದು ಒಂದು ದೊಡ್ಡ ರೋಗವಲ್ಲ ಗೆಳೆಯರೇ, ಆದರೆ ಮುಖದಲ್ಲಿ  ಮೊಡವೆಗಳು ಆದರೆ ಏನೋ ಹಿಂಸೆ ಅನ್ನಿಸುತ್ತದೆ ನಾವು ನೋಡಲು ಸುಂದರವಾಗಿ ಕಾಣುತ್ತಿಲ್ಲ ಅಂತ ಮುಜುಗರ ಆಗಲು ಶುರು ಆಗುತ್ತದೆ. ಹಾಗೂ ಸೌಂದರ್ಯ ಹಾಳಾಗುತ್ತಿದೆ ಅನ್ನುವ ಭಯ ಆತಂಕ ಕಾಡಲು ಶುರು ಆಗುತ್ತದೆ.

 

ಈ ಲೇಖನದ ಮೂಲಕ ತಿಳಿಸುವ ಮಾಹಿತಿ ಅಂದರೆ ಮೊಡವೆಗಳು ಯಾಕೆ ಮೂಡುತ್ತವೆ ಅಂತ ಹೇಳುವುದಾದರೆ ಚರ್ಮದ ಒಳಭಾಗದಲ್ಲಿ ಅಥವಾ ಡೆತ್ ಸ್ಕಿನ್ ನಲ್ಲಿ ಎಣ್ಣೆಯ ಅಂಶವನ್ನು ಹೆಚ್ಚಾಗಿ ಬಿಡುಗಡೆ ಆಗುತ್ತವೆ ಆಗ ನಿಮ್ಮ ಮುಖದಲ್ಲಿ ಮೊಡವೆಗಳು ಪದೇ ಪದೇ ಮೂಡುತ್ತವೆ.ಅಥವಾ ನಿಮ್ಮ ಹಾರ್ಮೋನ್ ಗಳಲ್ಲಿ ಅಸಮತೋಲನವಾದರೇ ಸರಿಯಾಗಿ ನಿದ್ದೆ ಮಾಡದೆ ಇದ್ದಲ್ಲಿ ಇಂತಹ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಹಾಗಾದ್ರೆ ಇದಕ್ಕೆ ನಾವು ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಂತ ತಿಳಿಯೋಣ ಬನ್ನಿ. ಮೊದಲಿಗೆ ನಿಮ್ಮ ಮುಖವನ್ನು ಚೆನ್ನಾಗಿ ಸ್ವಚ್ಛವಾಗಿ ತೊಳೆದುಕೊಳ್ಳಿ. ಅಂದರೆ ಮುಖದಲ್ಲಿ ಧೂಳಿನ ಕಣಗಳು ಕೊಲೆಗಳು ಮುಂತಾದವು ಗಳು ಹೆಚ್ಚಾಗಿ ಸೇರಿಕೊಂಡರೆ ಮೊಡವೆಗಳು ಮೂಡುವುದು ಸಹಜ ಹೀಗಾಗಿ ಮುಖವನ್ನು ಆದಷ್ಟು ಹೆಚ್ಚಾಗಿ ತಣ್ಣೀರಿನಿಂದ ತೊಳೆಯುತ್ತಾ ಇರಬೇಕು. ಇನ್ನೂ ಅತಿಯಾದ ಫೆಸ ವಾಷ್ ಹಾಗೂ ಸೋಪ್ ಬಳಕೆ ಮಾಡಿ ಮುಖವನ್ನು ಡ್ರೈ ಮಾಡುವುದರಿಂದ ಕೂಡ ಇಂತಹ ಸಮಸ್ಯೆ ಬರುತ್ತದೆ. ಕೆಲವರ ದೇಹದಲ್ಲಿ ಆಗುವ ಬದಲಾವಣೆ ಇಂದ ಕೂಡ ಸುಮಾರು ವರ್ಷಗಳ ವರೆಗೆ ಈ ಮೊಡವೆಗಳು ಇರುತ್ತವೆ ಕೆಲವು ಮೊಡವೆಗಳು ತಾವಾಗಿಯೇ ಹುಟ್ಟಿಕೊಂಡು ತಾವಾಗಿಯೇ ಮಾಯವಾಗುತ್ತದೆ ಇನ್ನೂ ಕೆಲವು ಹಾಗೆ ಕಲೆಗಳು ಉಳಿದು ಬಿಡುತ್ತದೆ.

 

ಕೆಲವರು ಮೊಡವೆಗಳು ಕಂಡಾಗ ಅವುಗಳನ್ನು ಕೈಯಿಂದ ಹಿಚುಕುವುದು ಮಾಡುತ್ತಾರೆ ಹೀಗಾಗಿ ಅವುಗಳು ಕಪ್ಪು ಕಲೆಗಳು ಆಗಿ ಅಲ್ಲಿಯೇ ಉಳಿದು ಬಿಡುತ್ತವೆ. ಅಂಥಹ ತಪ್ಪುಗಳನ್ನು ಮಾಡಬಾರದು ಒಂದೆರಡು ಮೊಡವೆಗಳು ಆದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಬಹಳ ಮೊಡವೆಗಳು ಆದರೆ ನೀವು ಈ ರೀತಿ ಮಾಡಿರಿ. ನೀವು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಮೊಡವೆಗಳು ಕಣ್ಮರೆಯಾಗುತ್ತಿಲ್ಲ ಅಂದರೆ ನೀವು ಚರ್ಮ ವೈದ್ಯರನ್ನು ಭೇಟಿ ನೀಡುವುದು ಉತ್ತಮ. ನಿಮ್ಮ ರಕ್ತವೂ ಶುದ್ಧವಾಗಿದೆ ಇಲ್ಲವೋ ಎಂದು ಪರೀಕ್ಷೆ ಮಾಡಿಕೊಳ್ಳಿ ಹಾಗೂ ಕರಿದ ತಿಂಡಿಗಳನ್ನು ಹೆಚ್ಚಾಗಿ ಸೇವನೆ ಮಾಡಬೇಡಿ ಎಣ್ಣೆಯುಕ್ತ ಆಹಾರವನ್ನು ಕೂಡ ಹೆಚ್ಚಾಗಿ ಸೇವನೆ ಮಾಡಬೇಡಿ. ಜಂಕ್ ಫುಡ್ ಬಿಟ್ಟು ಬಿಡಿ. ಆಯುರ್ವೇದ ವೈದ್ಯರ ಸಲಹೆಯನ್ನು ಪಡೆದುಕೊಂಡು ನೀವು ಕೆಲವೊಂದು ಕಷಾಯವನ್ನು ಕುಡಿಯಬಹುದು ಅಥವಾ ಇನ್ನಿತರ ರಕ್ತ ಶುದ್ಧಿ ಮಾಡುವ ಸಪ್ಲಿಮೆಂಟ್ ಇರಬಹುದು ಅವುಗಳನ್ನು ವೈದ್ಯರ ಸಲಹೆ ಮೇರೆಗೆ ಸೇವನೆ ಮಾಡಬಹುದು. ಇದರಿಂದ ನಿಮಗೆ ಮೊಡವೆಗಳು ಬರುವುದಿಲ್ಲ.

Leave a Reply

Your email address will not be published. Required fields are marked *