ಡ್ರೈ ಫ್ರೂಟ್ಸ್ ನಿಂದ ಲಡ್ಡುಗಳನ್ನು ಮಾಡಿ ಚಿಕ್ಕ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಕೊಟ್ಟರೆ, ವಜ್ರದಂತಹ ಶಕ್ತಿ ದೇಹಕ್ಕೆ ಸಿಗುತ್ತದೆ. ಹೇಗೆ ಅನ್ನುತ್ತೀರಾ?

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಸ್ನೇಹಿತರೆ,ಬಾದಾಮಿಯನ್ನು ಉಪಯೋಗಿಸಿ ಗೊಂದಿ ಕಳಿಸಿ ಅದರ ಉಂಡೆಯನ್ನು ನೀವು ಸೇವನೆ ಮಾಡಿದ್ರೆ ನಿಮಗೆ ಊಹಿಸಲಾಗದಷ್ಟು ಆರೋಗ್ಯಕರ ಲಾಭಗಳು ದೊರೆಯುತ್ತವೆ. ನಮ್ಮ ದೇಹದಲ್ಲಿ ಸರಿಯಾದ ಪೌಷ್ಟಿಕಾಂಶ ದೊರೆಯದೇ ಇದ್ದಲ್ಲಿ ಹಾಗೂ ವಿಟಮಿನ್ ಖನಿಜಾಂಶಗಳ ಕೊರತೆಯಿಂದಾಗಿ ನಾವು ಸುಸ್ತು ಆಯಾಸ ನಿಶ್ಯಕ್ತಿ ಕೈ ಕಾಲು ನೋವುಗಳು ಸ್ನಾಯು ಸೆಳೆತಗಳು ಕೀಲು ನೋವು ಮೈ ಕೈ ನೋವು ಸೊಂಟ ನೋವು ಎಲ್ಲ ಬಗೆಯ ಸಮಸ್ಯೆಗಳು ಬಂದು ಸೇರುತ್ತವೆ. ಹೌದು ಇದಕ್ಕೆಲ್ಲ ಮುಖ್ಯ ಕಾರಣ ಅಪೌಷ್ಠಿಕತೆ ಹಾಗೂ ಪೋಷಕಾಂಶಗಳ ಕೊರತೆ ಅಂತ ಹೇಳಿದರೆ ತಪ್ಪಾಗಲಾರದು. ಇವುಗಳಿಂದ ಕೊರತೆ ಇಂದಲೇ ನಾವು ಇಂತಹ ಅನೇಕ ಬಗೆಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ. ಇಂತಹ ನೋವುಗಳನ್ನು ಅನಾರೋಗ್ಯದ ಸಮಸ್ಯೆಗಳನ್ನು ಇಟ್ಟುಕೊಂಡು ಜೀವನ ಮಾಡಲು ಆಗುವುದಿಲ್ಲ ಗೆಳೆಯರೇ. ಅದಕ್ಕಾಗಿ ನಾವು ಉತ್ತಮವಾದ ಆರೋಗ್ಯಕರ ಹಾಗೂ ಪೌಷ್ಟಿಕಾಂಶ ಇರುವ ಆಹಾರವನ್ನು ಸೇವಿಸಬೇಕು ಹಾಗೂ ಇಂತಹ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು.

 

ಇದು ನಮ್ಮ ಕೈಯಲ್ಲಿ ಇರುತ್ತದೆ. ಒಳ್ಳೆಯ ಆಹಾರವನ್ನು ಸೇವಿಸಿದರೆ ಆರೋಗ್ಯವಾಗಿ ದಷ್ಯ ಪುಷ್ಟವಾಗಿ ಇರುತ್ತೇವೆ ಇಲ್ಲವಾದರೆ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿಯುತ್ತೇವೆ ಹಾಗೂ ಆಸ್ಪತ್ರೆಗೆ ಸಾಕಷ್ಟು ಹಣವನ್ನು ಸುರಿಯಬೇಕಾಗುತ್ತದೆ. ಅದಕ್ಕಾಗಿ ನಾವು ಮಾಡಬೇಕಾದದ್ದು ಇಷ್ಟೇ ಗೆಳೆಯರೇ, ಹೌದು ಮನೆಯಲ್ಲಿ ಇರುವ ಡ್ರೈ ಫ್ರೂಟ್ಸ್ ಗಳನ್ನು ಬಳಕೆ ಮಾಡಿಕೊಂಡು ನಿತ್ಯವೂ ವಿಧವಾದ ಮಕ್ಕಳಿಗೆ ಇಷ್ಟವಾಗುವ ಅಡುಗೆಯನ್ನು ಮಾಡಿಕೊಂಡು ತಿನ್ನಿಸಬೇಕು ಹಾಗೂ ದೊಡ್ಡವರು ಕೂಡ ತಿನ್ನಬಹುದು ಈ ಡ್ರೈ ಫ್ರೂಟ್ಸ್ ಕೆಲವು ಮಕ್ಕಳಿಗೆ ಇಷ್ಟ ಆಗುವುದಿಲ್ಲ ಅಂತವರಿಗೆ ಈ ರೀತಿ ರೆಸಿಪಿ ಮಾಡಿ ತಿನ್ನಿಸಬೇಕು. ಇದರಿಂದ ಮನೆ ಸದಸ್ಯರ ಹಾಗೂ ಮಕ್ಕಳ ಆರೋಗ್ಯವೂ ತುಂಬಾನೇ ಚೆನ್ನಾಗಿರುತ್ತದೆ. ಮೊದಲಿಗೆ ಒಂದು ಕಪ್ ಅಷ್ಟು ಬಾದಾಮಿ ಗೊಂದನ್ನೂ ತೆಗೆದುಕೊಳ್ಳಿ ಇದು ಗಟ್ಟಿ ಆಗಿರುತ್ತದೆ ಅದಕ್ಕಾಗಿ ಇದನ್ನು ನೀವು ರಾತ್ರಿ ನೆನೆಸಿಡಿ.
ಮರುದಿನ ಬೆಳಗ್ಗೆ ನೀವು ಒಂದು ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಈ ಬಾದಾಮಿ ಗೊಂದನ್ನು ಚೆನ್ನಾಗಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ.

 

ಆಮೇಲೆ ಆ ಬಾಣಲೆ ಯಲ್ಲಿ ಒಂದು ಕಾಲು ಕಪ್ ನಶ್ಟು ಬಾದಾಮಿ ಕಾಲು ಕಪ್ ವಾಲ್ ನಟ್ಸ್ ಕಾಲು ಕಪ್ ಗೋಡಂಬಿ ತೆಗೆದುಕೊಳ್ಳಿ. ಇಷ್ಟೇ ಅಲ್ಲದೇ ನಿಮಗೆ ಬೇಕಾದರೆ ಕಾಲು ಕಪ್ ಅಷ್ಟು ಪಿಸ್ತಾ ಸೇರಿಸಬಹುದು. ಈ ಎಲ್ಲ ಡ್ರೈ ಫ್ರೂಟ್ಸ್ ಗಳನ್ನೂ ಚೆನ್ನಾಗಿ ತುಪ್ಪದಲ್ಲಿ ಹುರಿದು ಆರಲು ಬಿಡಿ. ಆಮೇಲೆ ಅದರಲ್ಲಿ ಒಣ ಖರ್ಜೂರ ಹಾಗೂ ಅರ್ಧ ಕಪ್ ಕಪ್ಪು ಒಣದ್ರಾಕ್ಷಿ ಹಾಕಿ ಹುರಿದುಕೊಳ್ಳಿ. ಇವೆಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ ಆಮೇಲೆ ಒಂದು ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಕೊಬ್ಬರಿ ತುರಿ ಹುರಿದುಕೊಳ್ಳಿ ಅದಕ್ಕೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಬಳಿಕ ಈ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚಿಕ್ಕ ಚಿಕ್ಕ ಉಂಡೆಯನ್ನು ಮಾಡಿ ಇಟ್ಟುಕೊಳ್ಳಿ. ಇವುಗಳನ್ನು ನಿತ್ಯವೂ ಒಂದೊಂದು ಉಂಡೆಯನ್ನು ಮಕ್ಕಳಿಗೆ ಕೊಡುವುದರಿಂದ ಮಕ್ಕಳಿಗೆ ಶಕ್ತಿ ದುಪ್ಪಟ್ಟು ಆಗುತ್ತದೆ ದೊಡ್ಡವರಲ್ಲಿ ಇಮ್ಯುಣಿಟಿ ಬೂಸ್ಟ್ ಆಗುತ್ತದೆ.
ಹಾಗೂ ನಿಮ್ಮ ಅನಾರೋಗ್ಯದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಹಾಗೂ ದೇಹದ ಯಾವುದೇ ಭಾಗದಲ್ಲಿ ನಿಶ್ಯಕ್ತಿ ನೋವು ಇದ್ದರೆ ಖಂಡಿತವಾಗಿ ಮಾಯವಾಗುತ್ತದೆ.

Leave a Reply

Your email address will not be published. Required fields are marked *