ನಮಸ್ತೇ ಪ್ರಿಯ ಓದುಗರೇ, ನಮ್ಮ ಪ್ರಕೃತಿ ಎಷ್ಟೊಂದು ರೋಗಗಳನ್ನು ಹಾಗೂ ಕಾಯಿಲೆಗಳನ್ನು ಗುಣಪಡಿಸುವ ಅದ್ಭುತವಾದ ಔಷಧೀಯ ಹಣ್ಣುಗಳನ್ನು ತರಕಾರಿ ಸೊಪ್ಪುಗಳನ್ನು ನೀಡಿದೆ. ಅದರಲ್ಲಿ ಕೆಂಪು ಹವಳದ ಹಾಗೆ ಮುತ್ತುಗಳ ಹಾಗೆ ತನ್ನ ಒಳಗೆ ತುಂಬಿಕೊಂಡು ಕೆಂಪು ಬಣ್ಣದ ಬೀಜಗಳಿಂದ ಕೂಡಿರುವ ಹಣ್ಣು ಇದ್ದಾಗಿದೆ ಅದುವೇ ದಾಳಿಂಬೆ ಹಣ್ಣು. ಈ ದಾಳಿಂಬೆ ಹಣ್ಣು ಪ್ರಕೃತಿ ನೀಡಿರುವ ಅದ್ಭುತವಾದ ಕೊಡುಗೆ ಅಂತ ಹೇಳಬಹುದು. ದಾಳಿಂಬೆ ಹಣ್ಣು ಕೇವಲ ಹಣ್ಣಲ್ಲ. ಆರೋಗ್ಯದ ವಿಚಾರದಲ್ಲಿ ಚಮತ್ಕಾರಿ ಫಲ ಎಂಬ ಹೆಸರು ಪಡೆದುಕೊಂಡಿದೆ. ಮಕ್ಕಳ ಹಲ್ಲುಗಳು ದಾಳಿಂಬೆ ಬೀಜಗಳಂತೆ ಇರುತ್ತವೆ ಎಂದು ಜನರು ಹೇಳುತ್ತಾರೆ. ದಾಳಿಂಬೆ ಹಣ್ಣು ಹಣ್ಣಿನ ರೂಪದಲ್ಲಿ ದೊಡ್ಡ ಖಜಾನೆಯನ್ನು ಹೊಂದಿದೆ ಅಂತ ಹೇಳಿದರೆ ತಪ್ಪಾಗಲಾರದು. ಏಕೆಂದ್ರೆ ಇದರಲ್ಲಿ ಹಲವಾರು ವಿಟಮಿನ್ಸ್ ಗಳು ಪೋಷ್ಕಾಂಶಗಳು ಖನಿಜಗಳು ಜೀವಸತ್ವಗಳು ಹುದುಗಿವೆ. ಇದನ್ನು ಸೇವನೆ ಮಾಡುವುದರಿಂದ ಹಲವಾರು ಬಗೆಯ ರೋಗಗಳನ್ನು ಬರದಂತೆ ತಡೆಯಬಹುದು. ಹೌದು ನಿಮಗೆ, ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಆಹಾರಗಳನ್ನು ತಿನ್ನಬೇಕು ಎಂದುಕೊಂಡರೆ ಅದಕ್ಕೆ ದಾಳಿಂಬೆ ಹಣ್ಣು ಅತ್ಯುತ್ತಮವಾದ ಫಲಾಹಾರ ಎನಿಸಿಕೊಂಡಿದೆ. ಹೌದು ವಿಟಮಿನ್ ಅಂಶದ ಕೊರತೆ ಇದ್ದವರು ಈ ದಾಳಿಂಬೆ ಹಣ್ಣು ಸೇವನೆ ಮಾಡಬೇಕು. ಇನ್ನೂ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹಿಂಸೆ ಖಿನ್ನತೆ ಇಂದಾಗಿ ಜನರಿಗೆ ಏನೂ ಕೇಳಿದರು ಕೂಡ ಯಾವುದು ನೆನಪಿಗೆ ಇಲ್ಲ ಅಂತ ಹೇಳುತ್ತಾರೆ. ಅವರಲ್ಲಿ ಜ್ಞಾಪಕ ಶಕ್ತಿಯ ಕೊರತೆ ಕಾಡುತ್ತಿರುತ್ತದೆ. ನಿಮಗೂ ಕೂಡ ನೆನಪಿನ ಶಕ್ತಿ ಕಡಿಮೆ ಆಗುತ್ತಿದ್ದರೆ ದಾಳಿಂಬೆ ಹಣ್ಣು ಸೇವನೆ ಮಾಡುತ್ತಾ ಬನ್ನಿ. ಇದರಿಂದ ನಿಮ್ಮ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚುತ್ತದೆ ಹಾಗೂ ಜ್ಞಾಪಕ ಶಕ್ತಿ ಬೆಳವಣಿಗೆ ಆಗುತ್ತದೆ.
ಹಾಗೂ ನಿಮ್ಮ ಆರೋಗ್ಯವೂ ವೃದ್ಧಿ ಆಗುತ್ತದೆ. ಬೇಸಿಗೆ ಸಮಯ ಆಗಿರುವುದರಿಂದ ಆಗಾಗ ದಾಳಿಂಬೆ ಹಣ್ಣಿನ ಜೂಸ್ ತಯಾರು ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ರುಚಿಕರವೂ ಹೌದು ಆರೋಗ್ಯಕರವೂ ಹೌದು. ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚಾಗಿ ರಾಸಾಯನಿಕ ಪ್ರಾಡಕ್ಟ್ ಗಳನ್ನ ಹೆಚ್ಚಾಗಿ ಬಳಕೆ ಮಾಡುತ್ತಿದ್ದೇವೆ. ಅವುಗಳಲ್ಲಿ ಸೋಪು ಶಾಂಪೂ ಫೆಸ್ ವಾಷ್ ಇನ್ನಿತರ ಪ್ರಾಡಕ್ಟ್ ಆಗಿರಬಹುದು. ಇವುಗಳು ಮೊದಲಿಗೆ ಫಲಿತಾಂಶ ನೀಡಿದರು ಕೂಡ ಶಾಶ್ವತವಾಗಿ ಪರಿಹಾರ ಸಿಗುವುದಿಲ್ಲ ಹೀಗಾಗಿ ಮತ್ತೆ ಬೇಜಾರು ಆಗುತ್ತದೆ. ಮತ್ತೆ ಚರ್ಮದ ಸಮಸ್ಯೆಗಳು ಕಾಡುತ್ತದೆ. ಅದಕ್ಕಾಗಿ ನೀವು ನೈಸರ್ಗಿಕವಾಗಿ ದಾಳಿಂಬೆಯನ್ನು ಸೇವನೆ ಮಾಡಿದರೆ ನೀವು ಯವ್ವನದಂತೆ ಹಾಗೂ ತಾರುಣ್ಯ ರಂತೆ ಕಾಣುವಿರಿ.ದಾಳಿಂಬೆ ಹಣ್ಣಿನಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಅವುಗಳ ಪಾತ್ರವನ್ನು ನಾವು ಮರೆಯುವಂತಿಲ್ಲ. ದೇಹದಲ್ಲಿ ಕಂಡು ಬರುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಇವುಗಳು ಕೆಲಸ ಮಾಡುವುದರಿಂದ ಅಲ್ಜಿಮರ್ ಸಮಸ್ಯೆ ಬಗೆಹರಿಯುತ್ತದೆ ಮತ್ತು ನಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ
ಇನ್ನೂ ಪುರುಷರಲ್ಲಿ ಬಿಡುಗಡೆ ಆಗುವ ಪ್ರೈಮರಿ ಗುಪ್ತಚರ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುವ ಹಾರ್ಮೋನ್ ಗಳು ಈ ದಾಳಿಂಬೆ ಬೀಜದಲ್ಲಿ ಅಡಗಿವೆ. ಪುರುಷರಲ್ಲಿ ಆಂತರಿಕ ಶಕ್ತಿಯನ್ನು ಹೆಚ್ಚಿಸಿ ಹಾಗೂ ಮಿಲನ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದ ಜೊತೆಗೆ ಹಾಗೂ ಹೃದಯ ಜೊತೆಗೆ ಹೋರಾಡುವ ಶಕ್ತಿ ಸಾಮರ್ಥ್ಯವನ್ನು ಈ ದಾಳಿಂಬೆ ಹಣ್ಣು ಹೊಂದಿದೆ. ಇನ್ನೂ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಸಮಸ್ಯೆಯಿಂದ ಹೆಚ್ಚಾಗಿ ಜನರು ಇತ್ತೀಚಿಗೆ ಬಳಲುತ್ತಿದ್ದಾರೆ. ಅದಕ್ಕಾಗಿ ನೀವು ದಾಳಿಂಬೆ ಜ್ಯೂಸ್ ಕುಡಿದರೆ ರಕ್ತದೊತ್ತಡ ಸಮಸ್ಯೆಯಿಂದ ಪಾರಾಗಬಹುದು. ದಾಳಿಂಬೆ ಜ್ಯೂಸ್ ನಿಯಮಿತವಾಗಿ ಕುಡಿಯುವುದರಿಂದ ನಮ್ಮ ಆರೋಗ್ಯವೂ ಚೆನ್ನಾಗಿ ಇರುತ್ತದೆ. ದಾಳಿಂಬೆಯಲ್ಲೀ ಆಂಟಿ ಆಕ್ಸಿಡೆಂಟ್ ಗಳು ಇರುವ ಕಾರಣ ದೇಹವು ಕ್ಯಾನ್ಸರ್ ವಿರುದ್ದ ಹೋರಾಡುವ ಶಕ್ತಿಯನ್ನು ಹೊಂದಿದೆ. ಮೂತ್ರವನ್ನು ಸ್ವಚ್ಚ ಮಾಡುವ ಶಕ್ತಿಯನ್ನು ಹೊಂದಿದೆ ನರಗಳನ್ನು ಬಲಪಡಿಸುತ್ತದೆ. ಕೂದಲಿನ ಆರೈಕೆ ಹಾಗೂ ಬೆಳವಣಿಗೆಗೆ ನೆರವಾಗುತ್ತದೆ. ಮಹಿಳೆಯರು ಈ ದಾಳಿಂಬೆ ಜ್ಯೂಸ್ ಕುಡಿದರೆ ಮುಟ್ಟಿನ ಸಮಸ್ಯೆಗಳು ನಿವಾರಣೆ ಆಗುತ್ತದೆ. ನಿಷ್ಯಕ್ತಿಯನ್ನು ಕಡಿಮೆ ಮಾಡಿ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ. ಬೇರೆ ಯಾವುದೇ ಹಣ್ಣುಗಳಿಗೆ ಹೋಲಿಸಿದರೆ ದಾಳಿಂಬೆ ಹಣ್ಣುಗಳಲ್ಲಿ ಇವುಗಳ ಪ್ರಮಾಣ ಹೆಚ್ಚಿರುತ್ತದೆ. ದೇಹದಲ್ಲಿ ಉಂಟಾಗುವ ಉರಿಯೂತದ ಸಮಸ್ಯೆಯನ್ನು ತಪ್ಪಿಸಲು ಇವು ನೆರವಾಗುತ್ತವೆ. ಶುಭದಿನ.