ಜೀವನದಲ್ಲಿ ಛಲವಿದ್ದರೆ ಹದ್ದಿನಂತೆ ಇರಬೇಕು ಗೊತ್ತೇ!!!!!

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಜೀವನದಲ್ಲಿ ಪ್ರತಿಯೊಬ್ಬರಿಗೂ ಹಾಗೂ ಪ್ರತಿ ಜೀವಿಗೂ ಕಷ್ಟ ಅನ್ನುವುದು ಹುಟ್ಟಿನಿಂದಲೇ ಬರುತ್ತದೆ. ಯಾರು ಕೂಡ ಹುಟ್ಟುತ್ತಲೇ ಶ್ರೀಮಂತರು ಆಗಿ ಹುಟ್ಟುವುದಿಲ್ಲ ಹಾಗೂ ಸಾಯುವಾಗ ಬಡವರಾಗೀ ಸಾಯುವುದಿಲ್ಲ. ದೊಡ್ಡವರು ಹಿರಿಯರು ಎಲ್ಲರೂ ಒಂದೇ ಮಾತನ್ನು ಹೇಳುತ್ತಾರೆ. ಕಷ್ಟ ಪಡಬೇಕು ಕಷ್ಟ ಪಟ್ಟರೆ ಮಾತ್ರವೇ ಜೀವನದಲ್ಲಿ ಸುಖವನ್ನು ಅನುಭವಿಸುತ್ತೇವೆ ಅಂತ ಹೇಳುತ್ತಾರೆ. ಒಂದು ಉದಾಹರಣೆ ಹೇಳುವುದಾದರೆ, ಹದ್ದು ಪಕ್ಷಿಗಳ ರಾಜ ಅಂತ ಹೇಳುತ್ತಾರೆ. ಅದು ಶಕ್ತಿವಂತ ಪಕ್ಷಿ ಆದರೂ ಕೂಡ ಅತಿ ಎತ್ತರವಾಗಿ ಹಾರಲು ಬಹಳ ಕಷ್ಟ ಪಡಬೇಕಾಗುತ್ತದೆ. ಹಾಗೆಯೇ ಜೀವನದಲ್ಲಿ ಕಷ್ಟಗಳು ಅಂತ ಬಂದಾಗ ನಾವು ಹೇಗೆ ಅದನ್ನು ಎದುರಿಸಬೇಕು ಅಂತ ಇಂದಿನ ಲೇಖನದಲ್ಲಿ ನಾವು ನಿಮಗೆ ಪರಿಚಯ ಮಾಡಿ ಕೊಡುತ್ತೇವೆ ಬನ್ನಿ. ಮೇಲೆ ಹೇಳಿದ ಹಾಗೆ ಕಷ್ಟ ಅನ್ನುವುದು ಹೇಗೆ ಇರುತ್ತದೆ ಅಂಥಹ ಸಮಯದಲ್ಲಿ ನಾವು ಹೇಗೆ ಮತ್ತು ಏನು ಮಾಡಬೇಕು ಅಂತ ಒಂದು ಪಕ್ಷಿಯಾದ ಹದ್ದಿನ ಮುಖಾಂತರ ನಾವು ತಿಳಿದು ಕೊಳ್ಳೋಣ ಬನ್ನಿ.

 

ಪ್ರಕೃತಿ ಅನ್ನುವುದು ಎಷ್ಟೊಂದು ವಿಚಿತ್ರ ವಿಸ್ಮಯ ಅಲ್ವಾ ಗೆಳೆಯರೇ, ನಿಸರ್ಗ ನಮಗೆ ಏನೇನೋ ಕಲಿಸುತ್ತದೆ ಆದರೆ ನಾವು ಅದನ್ನ ಚೆನ್ನಾಗಿ ಅರಿತು ಕೊಳ್ಳುವುದಿಲ್ಲ. ಹದ್ದು ಬಹಳ ಚೆನ್ನಾಗಿ ಬೇಟೆ ಆಡುತ್ತದೆ. ಗುರಿಯಿಟ್ಟರೆ ತಪ್ಪುವುದಿಲ್ಲ. ಅಷ್ಟೊಂದು ಖಡಕ್ ಆಗಿ ಬೇಟೆ ಆಡುತ್ತದೆ. ಗುರಿ ಇಟ್ಟ ಮೇಲೆ ಆ ಬೇಟೆ ತನ್ನದಾಗಿಸಿಕೊಳ್ಳುದರಲ್ಲಿ ಬೇರೆ ಮಾತಿಲ್ಲ ಗೆಳೆಯರೇ. ಹದ್ದು 70 ವರ್ಷಗಳ ಕಾಲ ಬದುಕುತ್ತದೆ. ಹೌದು ಹದ್ದು ಪಕ್ಷಿಗಳಿಗೆ 30-40 ವಯಸ್ಸಾದಾಗ ಅದಕ್ಕೆ ಅದರ ರೆಕ್ಕೆಗಳು ಭಾರವಾಗಲು ಶುರು ಆಗುತ್ತದೆ. ಹಾಗೂ ಅದರ ಮೂಗು ಡೊಂಕು ಅಥವಾ ಸೊಟ್ಟವಾಗುತ್ತದೆ. ಹೀಗಾಗಿ ಅದಕ್ಕೆ ಅಷ್ಟೊಂದು ನಿಖರವಾಗಿ ಬೇಟೆ ಆಡಲು ಆಗುವುದಿಲ್ಲ. ಅದು ಬೇಟೆಯಾಡದೆ ಇದ್ದರೆ ಅದಕ್ಕೆ ಆಹಾರ ಸಿಗುವುದಿಲ್ಲ ಹೀಗಾಗಿ ಅದು ತನ್ನ 40 ವಯಸ್ಸಿನಲ್ಲಿ ಸತ್ತು ಹೋಗಬೇಕಾಗುತ್ತದೆ.ಆದರೆ ಅದು ತನ್ನ ಛಲವನ್ನು ಬಿಡದೆ ಬೇಟೆಯಾಡಲು ಪ್ರಯತ್ನ ಪಟ್ಟರೆ 60 ವರ್ಷಗಳಲ್ಲೇ 70 ವರ್ಷ ಖಂಡಿತವಾಗಿ ಬದುಕುತ್ತದೆ. ನಿಮಗೆ ಗೊತ್ತೇ ಈ ಹದ್ದು ತನ್ನ ರೆಕ್ಕೆಗಳು ಭಾರವಾದಾಗ ಏನು ಮಾಡುತ್ತದೆ ಎಂದು. ಯಾರು ಇಲ್ಲದ ಬೆಟ್ಟ ಅಥವಾ ಶಿಖರಕ್ಕೆ ಹೋಗಿ ಅಲ್ಲಿ ಗುಹೆ ಒಳಗೆ ಸೇರಿಕೊಂಡು ಅಲ್ಲಿ ತನ್ನ ಮೂಗನ್ನು ಒಂದು ಕಲ್ಲಿಗೆ ಜೋರಾಗಿ ಹೊಡೆದುಕೊಳ್ಳುತ್ತದೆ. ಇದು ವಿಚಿತ್ರವೆನ್ನಿಸಿದರೂ ಕೂಡ ಇದು ನಿಜ ಹೀಗೆ ಮಾಡಿ ತನ್ನ ಹೊಸ ಮೂಗು ಬರುವವರೆಗೂ ಕಾಯುತ್ತದೆ. ಅದರ ಕಾಲಿನ ಉಗುರುಗಳನ್ನು ಕೂಡ ಕಲ್ಲಿಗೆ ಉಜ್ಜಿ ಹೊಡೆದು ಹಳೆಯ ಉಗುರುಗಳನ್ನು ಉದುರಿಸಿ ಕೊಂಡು ಮತ್ತೆ ಹೊಸದಾದ ಉಗುರುಗಳನ್ನು ತನ್ನದಾಗಿಸಿಕೊಳ್ಳುತ್ತದೆ.

 

ಜೊತೆಗೆ ಹೊಸ ಉಗುರುಗಳು ಬರುವವರೆಗೂ ಕಾಯುತ್ತದೆ. ಇನ್ನೂ ತನ್ನ ಭಾರವಾದ ರೆಕ್ಕೆಗಳನ್ನು ತನ್ನ ಚೂಪಾದ ಉಗುರುಗಳಿಂದ ಒಂದೊಂದು ಕಿತ್ತು ಬಿಸಾಕುತ್ತದೆ. ನಂತರ ಹೊಸ ರೆಕ್ಕೆಗಳು ಬರುತ್ತವೆ. ಈ ಎಲ್ಲ ಪ್ರಕ್ರಿಯೆ ನಡೆಯಲು 150 ದಿನಗಳು ಬೇಕಾಗುತ್ತವೆ. ಹೀಗೆ ಹದ್ದು ಪರಿಶ್ರಮ ಪಟ್ಟು ಮತ್ತೆ ಬೇಟೆಯಾಡಲು ಶುರು ಮಾಡುತ್ತದೆ. ಅದು ಒಂದು ವೇಳೆ 150 ದಿನಗಳ ಕಾಲ ಪರಿಶ್ರಮ ಪಡದೆ ಇದ್ದಲ್ಲಿ ಅದು ಮತ್ತೆ ಮೂವತ್ತು ವರ್ಷಗಳ ಕಾಲ ಬದುಕುಳಿಯುತ್ತಿರಲಿಲ್ಲ. ಈಗ ಅದು ತನ್ನ 40 ವರ್ಷದಲ್ಲಿ 150 ದಿನಗಳ ಕಾಲ ಪರಿಶ್ರಮ ಪಟ್ಟರೆ ಮಾತ್ರ ಅದು ಮುಂದಿನ ಮೂವತ್ತು ವರ್ಷಗಳ ಕಾಲ ಸುಖವಾಗಿ ಆರಾಮವಾಗಿ ಜೀವಿಸುತ್ತದೆ.
ಹಾಗೆಯೇ ಮನುಷ್ಯನ ಜೀವನದಲ್ಲಿ ಕೂಡ ಕಷ್ಟಗಳು ಬರುತ್ತಲೇ ಇರುತ್ತವೆ. ಜನರ ಮಾತಿಗೆ ನಾವು ಬೆಲೆ ಹಾಗೂ ಕಿವಿ ಕೊಡಬಾರದು. ಯಾವಾಗ್ಲೂ ನಮ್ಮ ನಿರ್ಧಾರಗಳನ್ನು ನಾವೇ ಮಾಡಿಕೊಳ್ಳಬೇಕು.
ಮತ್ತು ನಿಮ್ಮ ಮನಸ್ಸಿನ ಮಾತು ಕೇಳಬೇಕು ಸರಿ ತಪ್ಪು ಯಾವುದು ಎಂದು ನೀವು ನಿರ್ಧಾರ ಮಾಡಿಕೊಳ್ಳಬೇಕು. ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಅದನ್ನು ಮನಸ್ಸಿಟ್ಟು ತಲುಪುವ ಕಾರ್ಯವನ್ನು ಮಾಡಬೇಕು.ಕಷ್ಟ ಪಟ್ಟಾಗಲೇ ಜೀವನದಲ್ಲಿ ಸುಖವನ್ನು ಪಡೆಯುತ್ತೇವೆ. ಕಷ್ಟದ ಸಮಯದಲ್ಲಿ ಎದೆಗುಂದದೆ, ಮುನ್ನುಗ್ಗಿದ್ದರೆ ಜೀವನವೂ ಸುಖಮಯ ಆಗುತ್ತದೆ. ಏನೇ ಕಷ್ಟ ಬಂದರು ನಗುತ್ತಾ ಇರಬೇಕು.

Leave a Reply

Your email address will not be published. Required fields are marked *