ಬೇಸಿಗೆ ಕಾಲದಲ್ಲಿ ಪ್ರಿಡ್ಜ್ ನಲ್ಲಿ ಇರುವ ನೀರನ್ನು ಯಾಕೆ ಕುಡಿಯಬಾರದು ಗೊತ್ತೇ?? ಇದಕ್ಕೆ ಪರಿಹಾರವಾದರೂ ಏನು ಅಂತ ಗೊತ್ತೇ? ಇಲ್ಲಿದೆ ಮಾಹಿತಿ.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಉರಿ ಉರಿ ಬಿಸಿಲಿನಲ್ಲಿ ನೆನಪಿಗೆ ಬರುವುದು ಪ್ರಿಡ್ಜ್ ನಲ್ಲಿ ಇರುವ ತಂಪಾದ ನೀರು. ಹೌದು ಕೆಲವರಿಗೆ ಈ ಅಭ್ಯಾಸ ಇರುತ್ತದೆ, ಅದುವೇ ಬೇಸಿಗೆ ಕಾಲದಲ್ಲಿ ಹೊರಗಡೆ ಕೆಲಸ ಕಾರ್ಯಗಳಿಗೆ ಹೋಗುವಾಗ ಮರಳಿ ಮನೆಗೆ ಬರುವವರೆಗೆ ಪ್ರಿಡ್ಜ್ ನಲ್ಲಿ ನೀರು ತಂಪಾಗಲು ಇಡುವುದು. ಆಗ ಅವರು ಬಿಸಿಲಿನಲ್ಲಿ ದಣಿದು ಮನೆಗೆ ಬಂದಾಗ ತಕ್ಷಣವೇ ಆ ತಂಪಾದ ನೀರನ್ನು ಕುಡಿಯುತ್ತಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬೇಸಿಗೆ ಕಾಲದಲ್ಲಿ ತಂಪು ನೀರನ್ನು ತಕ್ಷಣವೇ ಕುಡಿಯುವುದು ಎಷ್ಟು ಸರಿ ಹಾಗೂ ಏನೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ.
ಬೇಸಿಗೆ ಕಾಲ ಜನರು ಹೆಚ್ಚಾಗಿ ತಂಪು ಪಾನೀಯಗಳನ್ನು ಕುಡಿಯಲು ಬಯಸುತ್ತಾರೆ. ಅದಕ್ಕಾಗಿ ಅವರು ಮನೆಯಲ್ಲಿ ಇರುವ ನೀರನ್ನು ಪ್ರೀಝ್ ನಲ್ಲಿ ಇರುವ ನೀರು ಕುಡಿಯಲು ಶುರು ಮಾಡುತ್ತಾರೆ. ಆದರೆ ನಿಮಗೆ ಗೊತ್ತೇ? ಪ್ರಿಝ ನಲ್ಲಿ ಇರುವ ನೀರನ್ನು ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅಂಥವರು ಈ ತಂಪು ನೀರನ್ನು ಕುಡಿಯಬಾರದು.

 

ಮತ್ತು ಈ ಬೇಸಿಗೆ ಕಾಲದಲ್ಲಿ ಸ್ವಲ್ಪ ಬಿಸಿ ನೀರನ್ನು ತಂಪು ನೀರಾಗಿ ಮಾಡಲು ಪ್ಲಾಸ್ಟಿಕ್ ಬಾಟಲ್ ನಲ್ಲಿ ಶೇಖರಣೆ ಮಾಡಿ ಅವುಗಳನ್ನು ಪ್ರಿಡ್ಜ್ ನಲ್ಲಿ ಇಟ್ಟುಕೊಂಡು ತಂಪು ಮಾಡಿ ಕುಡಿಯುತ್ತಾರೆ. ಆದರೆ ಕೆಲವು ಪ್ಲಾಸ್ಟಿಕ್ ಬಾಟಲ್ ಗಳು ಉಪಯೋಗಿಸಿ ಬಿಸಾಡುವ ಬಾಟಲ್ ಗಳು ಆಗಿರುತ್ತವೆ. ಅಂಥಹ ವಸ್ತುಗಳನ್ನು ನೀವು ಬಳಕೆ ಮಾಡಿದರೆ ನಿಮ್ಮ ಆರೋಗ್ಯವೂ ಹದಗೆಡುತ್ತದೆ. ಮೇಲೆ ಹೇಳಿದ ಹಾಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ನೀರು ಕುಡಿಯಬಾರದು. ಹೀಗೆ ಮಾಡಿದರೆ ನಿಮಗೆ ಗಂಟಲು ನೋವು ಕೆಮ್ಮು ಗಂಟಲಿನಲ್ಲಿ ಕಿರಿಕಿರಿ, ಗಂಟಲಿನ ಸೋಂಕು ಕೆಮ್ಮು ಜ್ವರ ಶೀತ ನೆಗಡಿ ತಲೆನೋವು ಬರಬಹುದು. ಅಷ್ಟೇ ಅಲ್ಲದೇ ಹೊಟ್ಟೆ ಕೂಡ ಗಟ್ಟಿಯಾಗಿ ಮಲಬದ್ಧತೆ ಸಮಸ್ಯೆ ಕೂಡ ಬರುವ ಸಾಧ್ಯತೆ ಹೆಚ್ಚು ಈ ಪ್ರೀಡ್ಜ್ ತಂಪು ನೀರು ಕುಡಿಯುವುದರಿಂದ. ಹಾಗೂ ಮತ್ತಷ್ಟು ನಿಮ್ಮ ದೇಹವೂ ರೋಗ ನಿರೋಧಕ ಶಕ್ತಿ ಯ ಕುಂಠಿತ ತನಕ್ಕೆ ಒಳಗಾಗುತ್ತದೆ.

 

ಅದಕ್ಕಾಗಿ ಯಾರ ದೇಹವು ತುಂಬಾನೇ ವೀಕ್ ಆಗಿರುತ್ತದೆ. ಅವರಲ್ಲಿ ಸ್ವಲ್ಪ ಕೆಲಸವನ್ನು ಮಾಡಿದರು ಕೂಡ ಸುಸ್ತು ಆಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಅಂಥವರು ಇದರಿಂದ ದೂರವಿರುವುದು ಸೂಕ್ತ. ಇನ್ನೂ ಈ ಪ್ರಿಡ್ಜ ನಲ್ಲಿ ಇರುವ ತಂಪು ನೀರನ್ನು ಯಾರು ಕುಡಿಯಬಹುದು ಹೇಗೆ ಕುಡಿಯಬಹುದು ಅಂದರೆ, ಬಿಸಿಲಿನಲ್ಲಿ ಯಾರು ಬಿಸಿ ನೀರು ಕುಡಿಯಲು ಇಷ್ಟ ಪಡುವುದಿಲ್ಲ ಹಾಗೆಯೇ ಇಷ್ಟ ಕೂಡ ಆಗುವುದಿಲ್ಲ. ಅದಕ್ಕಾಗಿ ನೀವು ನಾರ್ಮಲ್ ತಣ್ಣೀರು ಕುಡಿದರೆ ಸಾಕು. ಅಥವಾ ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಅದರ ಸುತ್ತಲೂ ತಂಪು ಬಟ್ಟೆಯನ್ನು ಕಟ್ಟಿ ಆ ನೀರನ್ನು ನೀವು ಉಪಯೋಗಿಸಬಹುದು. ಹಾಗೂ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಜೊತೆಗೆ ಇದರಲ್ಲಿ ಇರುವ ನೀರು ನೈಸರ್ಗಿಕವಾಗಿ ತಂಪಾಗಿರುತ್ತದೆ.
ಶುಭದಿನ.

Leave a Reply

Your email address will not be published. Required fields are marked *