ಮಲಗಿದ ತಕ್ಷಣ ನಿದ್ದೆ ಬರಲು ಈ ಸರಳ ಟಿಪ್ಸ್ ಫಾಲೋ ಮಾಡಿ. ಖಂಡಿತವಾಗಿ ಮಲಗಿದ ತಕ್ಷಣ ನಿದ್ದೆ ಬರುತ್ತದೆ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಮನುಷ್ಯ ಆರೋಗ್ಯವಾಗಿ ಇರಲು ಆತನು ಪ್ರತಿನಿತ್ಯ ಕನಿಷ್ಠ 7-8 ತಾಸು ನಿದ್ದೆ ಮಾಡುವುದು ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಳಲುತ್ತಿರುವ ಸಮಸ್ಯೆ ಅಂದರೆ ಅದು ನಿದ್ರಾಹೀನತೆ. ಕೆಲಸದ ಒತ್ತಡ ಮಾನಸಿಕ ಒತ್ತಡ ಖಿನ್ನತೆಯಿಂದ ರಾತ್ರಿವೇಳೆಗೆ ನಿದ್ರೆ ಸರಿಯಾಗಿ ಬರುವುದಿಲ್ಲ. ನಿದ್ರೆ ಸರಿಯಾಗಿ ಮಾಡದೇ ಇದ್ದರೇ ನಮಗೆ ಇನ್ನಷ್ಟು ದಣಿವು ಆಗಿ ಅನಾರೋಗ್ಯದ ಸಮಸ್ಯೆ ಶುರು ಆಗುತ್ತವೆ. ಹೀಗಾಗಿ ನಾವು ನಿತ್ಯವೂ ಸುಖಕರವಾದ ನಿದ್ರೆಯನ್ನು ಮಾಡುವುದು ಬಹಳ ಮುಖ್ಯ. ಅದಕ್ಕಾಗಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕೆಲವು ಟಿಪ್ಸ್ ಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ.

 

ನಮ್ಮ ಹಿರಿಯರು ವೈದ್ಯರು ಹೇಳುವೊಂದೆ ಬೇಗನೆ ಮಲಗಿ ಬೇಗನೆ ಏಳುವುದು ಎಂದು. ಹೌದು ಅವರ ಈ ಮಾತು ಬಹಳ ಸತ್ಯ ಹಾಗೂ ಹಿತಕರ. ನಾವು ದಿನನಿತ್ಯ ಒಂದೇ ಸಮಯಕ್ಕೆ ನಿದ್ರೆಯನ್ನು ಮಾಡುವುದನ್ನು ರೂಢಿಸಿ ಕೊಳ್ಳಬೇಕು. ಕೆಲವರು ಏನು ಮಾಡುತ್ತಾರೆ ಅಂದರೆ ರಜೆ ಇದ್ದಾಗ ಲೇಟಾಗಿ ಮಲಗಿ ಲೇಟಾಗಿ ಏಳುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ಹಾಗೂ ಇನ್ನೂ ಕೆಲವರು ಮಧ್ಯಾಹ್ನ ಮಲಗುತ್ತಾರೆ. ಮಧ್ಯಾಹ್ನ ಮಲಗುವುದು ದಟ್ಟ ದಾರಿದ್ರ್ಯ ಹಾಗೂ ಅದು ಆರೋಗ್ಯಕ್ಕೆ ಕೂಡ ಒಳ್ಳೆಯದಲ್ಲ. ಮತ್ತು ಮುಖ್ಯವಾಗಿ ರಾತ್ರಿ ನಿದ್ರೆ ಬರುವುದಿಲ್ಲ. ಇದರಿಂದ ದೇಹದಲ್ಲಿ ಶಕ್ತಿ ಕಡಿಮೆ ಆಗಿ ಆಲಸ್ಯತನ ಹೆಚ್ಚುತ್ತದೆ. ಹೀಗಾಗಿ ಮಧ್ಯಾಹ್ನ ಮಲಗುವುದು ಅವಾಯ್ಡ್ ಮಾಡಿ. ಹೌದು ಇನ್ನೂ ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆಯಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂಥವರು ರಾತ್ರಿ ಮಲಗುವಾಗ ಕೊಬ್ಬು ಕಡಿಮೆ ಮಸಾಲೆ ಕಡಿಮೆ ಇರುವ ಆಹಾರವನ್ನು ಸೇವನೆ ಮಾಡಬೇಕು. ಮಲಗುವ ಆರು ತಾಸು ಮುನ್ನ ಕೆಟ್ಟ ಚಟಗಳನ್ನು ಮಾಡಬಾರದು. ಅಷ್ಟೇ ಅಲ್ಲದೇ ಮುಖ್ಯವಾಗಿ ಹೇಳುವುದೆಂದರೆ ಸಾಧ್ಯವಾದಷ್ಟು ಒತ್ತಡದ ಕೆಲಸವನ್ನು ದಿನದ ಶುರುವಾತಿನಲ್ಲಿ ಮಾಡಬೇಕು. ಹಾಗೂ ಹಗುರವಾದ ಕೆಲಸವನ್ನು ರಾತ್ರಿ ವೇಳೆಗೆ ಮಾಡಬೇಕು.

 

ಹೌದು ಇನ್ನೂ ನಿಮಗೆ ಮಲಗಿದ ತಕ್ಷಣವೇ ನಿದ್ರೆ ಬರಬೇಕು ಅಂದರೆ ಸಂಜೆ ವೇಳೆಗೆ ವ್ಯಾಯಾಮ ಜಿಮ್ ವಾಕಿಂಗ್ ಮಾಡಿ. ಹೀಗೆ ಮಾಡುವುದರಿಂದ ದೇಹವು ದಣಿದು ಸುಸ್ತು ಆಗಿ ರಾತ್ರಿ ಮಲಗಿದಾಗ ತಕ್ಷಣವೇ ನಿದ್ರೆ ಬರುತ್ತದೆ ಇನ್ನೂ ಕೆಲವರು ಗಡಿಯಾರವನ್ನು ಪಕ್ಕದಲ್ಲಿ ಇಟ್ಟು ಕೊಂಡು ಮಲಗುತ್ತಾರೆ. ಹೀಗಾಗಿ ಅದರ ಶಬ್ದದಿಂದ ನಿದ್ರೆ ಹಾಳಾಗುತ್ತದೆ ಅದಕ್ಕಾಗಿ ನೀವು ಅದನ್ನು ಪಕ್ಕದಲ್ಲಿ ಸ್ವಲ್ಪ ದೂರ ನೇತು ಹಾಕುವುದು ಒಳ್ಳೆಯದು. ಇನ್ನೂ ರಾತ್ರಿ ಮಲಗುವಾಗ ಒಂದು ಲೋಟ ಹಾಲು ಕುಡಿದು ಮಲಗಿ. ಇದರಿಂದ ಹಾಲಿನಲ್ಲಿ ಇರುವ ಮೆಲ್ಟೋನಿಯನ್ ಅಂಶ ನಿದ್ರೆಯ ಹಾರ್ಮೋನ್ ಬಿಡುಗಡೆ ಮಾಡುತ್ತದೆ ಹಾಗೂ ಊಟವಾದ ನಂತರ ಒಂದು ತಾಸು ಬಿಟ್ಟು ಒಂದು ಬಾಳೆಹಣ್ಣು ತಿನ್ನಿ ಇದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಇನ್ನೂ ನಿಮ್ಮ ಹಾಸಿಗೆ ಕೇವಲ ನಿಮ್ಮ ನಿದ್ರೆಗೆ ಮತ್ತು ಗುಪ್ತಚರ ಕೆಲಸಕ್ಕೆ ಮಾತ್ರ ಸೀಮಿತ ಇರುವಂತೆ ನೋಡಿಕೊಳ್ಳಬೇಕು. ಹಾಗೂ ನಿಮ್ಮ ಹಾಸಿಗೆ ಸ್ವಚ್ಛ ಶುಭ್ರವಾಗಿ ಇರಬೇಕು. ಎಲ್ಲ ಕೆಲಸವನ್ನು ಹಾಸಿಗೆ ಮೇಲೆ ಮಾಡಿದರೆ ನಿದ್ರೆಗೆ ಹೋಗುವಾಗ ಹಾಸಿಗೆ ಬೇಜಾರು ತಂದು ಬಿಡುತ್ತದೆ ಅದಕ್ಕಾಗಿ ಮಂಚದ ಮೇಲೆ ಇನ್ನಿತರ ಕೆಲಸಗಳನ್ನು ಮಾಡಬಾರದು. ಶುಭದಿನ.

Leave a Reply

Your email address will not be published. Required fields are marked *