ಹೇಮಗಿರಿಯಲ್ಲಿದೆ ದಿನೇ ದಿನೇ ಬೆಳೆಯುತ್ತಿರುವ ಶಿವನ ಉದ್ಭವ ಲಿಂಗ!!!

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಸ್ಮಶಾನವಾಸಿ ಅಂತ ಕತೆಯೋ ಮಹೇಶ್ವರ ಈ ಭೂಮಿ ಮೇಲೆ ನೆಲೆ ನಿಂತ ಸ್ಥಳಗಳಿಗೆ ಲೆಕ್ಕವೇ ಇಲ್ಲ. ಅದ್ರಲ್ಲೂ ಪ್ರಕೃತಿಯ ರಮ್ಯ ರಮಣೀಯತೆಯ ನಡುವೆ ನೆಲೆ ನಿಂತ ಪರಮೇಶ್ವರನು ದಿನೇ ದಿನೇ ಬೆಳೆಯುತ್ತಿದ್ದಾರೆ ಅನ್ನುವುದೇ ಈ ಕ್ಷೇತ್ರದಲ್ಲಿ ನಡೆಯುವ ಮಹಾನ್ ವಿಸ್ಮಯ. ಬನ್ನಿ ಹಾಗಾದರೆ ಇಂದಿನ ಲೇಖನದಲ್ಲಿ ಆ ದೇವಾಲಯ ಯಾವುದು ಅಲ್ಲಿನ ವೈಶಿಷ್ಟ್ಯಗಳು ಏನು ಎನ್ನುವುದನ್ನು ತಿಳಿದುಕೊಂಡು ಬರೋಣ. ಹೇಮಗಿರಿಯ ಬೆಟ್ಟದ ತಪ್ಪಲಿನಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಗುಹಾಂತರ ದೇವಾಲಯ ಇದ್ದು, ಈ ಕ್ಷೇತ್ರದಲ್ಲಿ ಭಗವಂತನು ಉದ್ಭವ ಲಿಂಗ ರೂಪಿಯಾಗಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾನೆ. ಇಲ್ಲಿಗೆ ಬಂದು ಮಲ್ಲಿಕಾರ್ಜುನ ಸ್ವಾಮಿಯ ಬಳಿ ಏನನ್ನೇ ಭಕ್ತಿಯಿಂದ ಬೇಡಿಕೊಂಡರೆ ಅದು ನೆರವೇರುತ್ತದೆ ಎಂಬುದು ಇಲ್ಲಿಗೆ ಬರುವ ಭಕ್ತರ ಅಚಲವಾದ ನಂಬಿಕೆ ಆಗಿದೆ.

 

ಎರಡು ಬಂಡೆ ಕಲ್ಲುಗಳ ನಡುವೆ ಬಾಗಿಕೊಂಡು ಹೋದ್ರೆ ಈ ಸ್ವಾಮಿಯನ್ನು ದರ್ಶನ ಮಾಡಬಹುದು. ಚೋಳರು ಈ ದೇವಸ್ಥಾನವನ್ನು ಕಟ್ಟಿಸಿದರು ಎಂಬ ಐತಿಹ್ಯ ಇದೆ. ಇಲ್ಲಿನ ದೇವರನ್ನು ದರ್ಶನ ಮಾಡಬೇಕು ಅಂದ್ರೆ ಬರೋಬ್ಬರಿ 400- 500 ಮೆಟ್ಟಿಲುಗಳನ್ನು ಹತ್ತಿ ಬರಬೇಕು. ಇನ್ನೂ ಮೆಟ್ಟಿಲುಗಳನ್ನು ಹತ್ತಿ ಬರುವಾಗ ದೇವರ ಪಾದ ಇರುವ ಗುಡಿ ಕೂಡ ಕಾಣುತ್ತೆ. ದೇವರ ಸಾನಿಧ್ಯದಲ್ಲಿ ಸಮೀಪದಲ್ಲಿ ಚೌಡೇಶ್ವರಿ, ಗಣಪತಿ ಹಾಗೂ ಪಾರ್ವತಿ ಅಮ್ಮನವರು,ನಾಗ ದೇವತೆಗಳ ವಿಗ್ರಹಗಳನ್ನು ದರ್ಶನ ಮಾಡಬಹುದು. ಸಂತಾನ ಇಲ್ಲದೆ ಕೊರಗುತ್ತಿರುವ ದಂಪತಿಗಳು ಇಲ್ಲಿನ ಶ್ರೀ ಪೀತಾಲಮ್ಮ ದೇವಿಗೆ ಹರಕೆ ಹೊತ್ತರೆ ಅವರಿಗೆ ಸಂತಾನ ಪ್ರಾಪ್ತಿ ಆಗುತ್ತೆ ಎಂದು ಹೇಳಲಾಗುತ್ತದೆ. ಇಲ್ಲಿ ನೆಲೆಸಿರುವ ಮಲ್ಲಿಕಾರ್ಜುನ ಸ್ವಾಮಿಯ ಲಿಂಗವು ಸ್ವಲ್ಪ ಸ್ವಲ್ಪವೇ ಬೆಳೆಯುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬೆಟ್ಟದ ಕೆಳಗಡೆ ಪುರಾಣ ಪ್ರಸಿದ್ಧ ವಿಷ್ಣು ಸಮುದ್ರ ಎಂಬ ದೊಡ್ಡದಾದ ಕೆರೆ ಇದೆ. ಶಿವರಾತ್ರಿಯನ್ನೂ ವಿಧಿವತ್ತಾಗಿ ಆಚರಿಸುವ ಈ ಕ್ಷೇತ್ರದಲ್ಲಿ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ದೇವರ ಜಾತ್ರಾ ಮಹೋತ್ಸವ ನಡೆಸುತ್ತಾರೆ.

 

ಯುಗಾದಿ ಕಾರ್ತಿಕ ದೀಪೋತ್ಸವ ಮಕರ ಸಂಕ್ರಾಂತಿ ದೀಪಾವಳಿ ಹೀಗೆ ಇನ್ನೂ ಹಲವು ಹಬ್ಬಗಳಂದು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ. ಈ ದೇವರನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದು. ಮಹೇಶ್ವರನು ಮಲ್ಲಿಕಾರ್ಜುನ ಸ್ವಾಮಿಯಾಗಿ ನೆಲೆ ನಿಂತ ಈ ಕ್ಷೇತ್ರವು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹೇಮಗಿರಿ ಎಂಬ ಬೆಟ್ಟದಲ್ಲಿ ಇದೆ. ಈ ಆಲಯವು ಬೆಂಗಳೂರಿನಿಂದ 218 ಕಿಮೀ, ಶಿವಮೊಗ್ಗದಿಂದ 110 ಕಿಮೀ ಚಿಕ್ಕಮಗಳೂರಿನಿಂದ 58 ಕಿಮೀ ಕಡೂರಿನಿಂದ 19 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಶಿವನ ಈ ಪುಣ್ಯ ಆಲಯವನ್ನು ನೀವು ಒಮ್ಮೆ ದರ್ಶನ ಮಾಡಿ ಅಂತ ಇಂದಿನ ಲೇಖನಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇವೆ. ಶುಭದಿನ.

Leave a Reply

Your email address will not be published. Required fields are marked *