ನಮಸ್ತೆ ಪ್ರಿಯ ಓದುಗರೇ, ಆಯುರ್ವೇದದಲ್ಲಿ ಶಿಲಾಜಿತ್ ನ್ನೂ ಬಹಳ ಪ್ರಯೋಜನಕಾರಿ ಔಷಧಿ ಎಂದು ಪರಿಗಣಿಸಲಾಗುತ್ತದೆ. ಶೀಲಾಜಿತ್ ಪುರುಷರಲ್ಲಿ ಪುರುಷತ್ವವನ್ನು ಹೆಚ್ಚಿಸಲು ತಿಳಿದಿರುವ ಔಷಧಿಗಳಲ್ಲಿ ಒಂದಾಗಿದೆ. ಕಲ್ಲಿನಂತೆ ಕಾಣುವ ಈ ಔಷಧವೂ ಬಂಡೆಗಳಲ್ಲಿ ಹುಟ್ಟಿರುವುದರಿಂದ ಶೀಲಾಜೀತ್ ಎಂದು ಕರೆಯುತ್ತಾರೆ. ದೇಶ ವಿದೇಶಗಳಲ್ಲಿ ಈ ಔಷಧಿಗೆ ಹೆಚ್ಚಿನ ಬೇಡಿಕೆ ಇದೆ. ಶಿಲಾಜೀತ್ ಸೇವನೆ ಮಾಡುವುದರಿಂದ ಪುರುಷರಿಗೆ ಒಳ್ಳೆಯ ನಿದ್ರೆ ಬರುತ್ತೆ ಜೊತೆಗೆ ಲೈಂಗಿಕ ಆರೋಗ್ಯ ಕೂಡ ಸುಧಾರಿಸುತ್ತದೆ. ಇದಷ್ಟೇ ಅಲ್ಲದೇ ಇದನ್ನು ಸೇವನೆ ಮಾಡುವುದರಿಂದ ಇನ್ನೂ ಹಲವಾರು ರೀತಿಯ ಲಾಭಗಳು ಸಹ ನಾವು ಪಡೆಯಬಹುದು. ಇಂದಿನ ಈ ಲೇಖನದಲ್ಲಿ ಶಿಲಾಜೀತ್ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳು ಇವೆ ಎಂದು ತಿಳಿಯೋಣ. ಈ ಮೊದಲೇ ಹೇಳಿದಂತೆ ಈ ಶೀಲಜಿತ್ ಸೇವನೆ ಮಾಡುವುದರಿಂದ ಪುರುಷತ್ವ ಹೆಚ್ಚುತ್ತೆ ಹೌದು ಶಿಲಾಜೀತ್ ನ್ನೂ ನಿಯಮಿತವಾಗಿ ಸೇವನೆ ಮಾಡುವುದರಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಸಾಮರ್ಥ್ಯ ಹೆಚ್ಚುತ್ತೆ. ಟೆಸ್ಟೋಸ್ಟೆರಾನ್ ಹಾರ್ಮೋನ್ ಇದು ಪುರುಷರ ಪ್ರೈಮರಿ ಸೆಕ್ಸ್ ಹಾರ್ಮೋನ್ ಆಗಿರುತ್ತೆ.
ಇದನ್ನು ಸೇವನೆ ಮಾಡುವುದರಿಂದ ಪುರುಷರಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಸಾಮರ್ಥ್ಯ ಹೆಚ್ಚುವುದರಿಂದ ಪುರುಷರ ಲೈಂಗಿಕ ಸಾಮರ್ಥ್ಯ ಕೂಡ ಹೆಚ್ಚುತ್ತೆ. ಇದಷ್ಟೇ ಅಲ್ಲದೇ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕೂಡ ಹೆಚ್ಚಲು ಸಹಾಯ ಆಗುತ್ತೆ. ಅದಕ್ಕಾಗಿ ನಿವು ಷಿಲಾಜಿತ್ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಸೇವನೆ ಮಾಡುವುದರಿಂದ ನಿಮ್ಮ ವೀರ್ಯಾಣುಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚಾಗಲು ಸಹಾಯ ಮಾಡುತ್ತೆ. ಯಾರಿಗೆ ನಿದ್ರಾಹೀನತೆ ಸಮಸ್ಯೆ ಇರುತ್ತೆ ಅಂಥವರಿಗೆ ಕೂಡ ಇದು ತುಂಬಾ ಒಳ್ಳೆಯದು. ರಾತ್ರಿ ಮಲಗುವ ಮುನ್ನ ಇದನ್ನು ಕುಡಿದು ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತೆ. ಇನ್ನೂ ಕೆಲವರು ಸಾಕಷ್ಟು ಯೋಚನೆಮಾಡ್ತ ಇರ್ತಾರೆ ಹಾಗೂ ಅವರಿಗೆ ಯಾವಾಗಲೋ ಒತ್ತಡ ಜಾಗೋ ಚಿಂತೆ ಕಾಡುತ್ತಿದ್ರೆ ಅಂಥವರು ಈ ಶಿಲಾಜೀತ್ ನ ತೆಗೆದುಕೊಳ್ಳುವುದರಿಂದ ಅವರ ಕೆಲಸದ ಒತ್ತಡ ಹಾಗೂ ಮಾನಸಿಕ ಒತ್ತಡ,ಆತಂಕದ ಮಟ್ಟ ಕಡಿಮೆ ಆಗಲು ಸಹಾಯ ಮಾಡುತ್ತೆ. ಯಾಕಂದ್ರೆ ಇದರಲ್ಲಿರುವ ಪೌಷ್ಟಿಕಾಂಶಗಳು ನಮ್ಮ ಮೆದುಳಿನ ಲಿಪೋಮಿನ್ ಸ್ರವಿಕೆಯನ್ನು ಹೆಚ್ಚಿಸುತ್ತದೆ. ಇದು ನಮ್ಮ ಆತಂಕ ಹಾಗೂ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ನಮ್ಮ ದೇಹ ಕೂಡ ಶಾಂತಗೊಳಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ನಿಯಮಿತವಾಗಿ ಇದನ್ನು ಸೇವನೆ ಮಾಡುವುದರಿಂದ ನಮ್ಮ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚುತ್ತೆ ಜೊತೆಗೆ ನಮ್ಮ ಜ್ಞಾಪಕ ಶಕ್ತಿಯನ್ನು ಸಹ ಚುರುಕು ಮಾಡುತ್ತೆ. ಇದರಲ್ಲಿರುವ ಉತ್ತಮ ಪೌಷ್ಟಿಕಾಂಶ ನಮ್ಮ ಮೆದುಳಿನ ದಕ್ಷತೆಯನ್ನು ಹೆಚ್ಚಿಸುತ್ತದೆ. ಇನ್ನೂ ಯಾರಿಗೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯ ಇರುತ್ತೆ ಅಂಥವರು ಕೂಡ ಇದನ್ನು ಸೇವನೆ ಮಾಡಿದರೆ ಕಬ್ಬಿಣದ ಕೊರತೆಯನ್ನು ಹೋಗಲಾಡಿಸಬಹುದು. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ, ಹಾಗೂ ದೇಹಕ್ಕೆ ಚೈತನ್ಯ ಕೊಡುತ್ತೆ. ಯಾರಿಗೆ ಆಯಾಸ ಸುಸ್ತು ಇರುತ್ತೆ ಅಂಥವರು ಕೂಡ ಇದನ್ನು ಸೇವನೆ ಮಾಡಬಹುದು. ಇನ್ನೂ ಇದನ್ನು ಯಾರು ಸೇವನೆ ಮಾಡಬಹುದು ಯಾರು ಮಾಡಬಾರದು ಎಂದು ನೋಡುವುದಾದರೆ, ಯಾವುದೇ ಔಷಧವನ್ನು ಸೇವನೆ ಮಾಡುವ ಮುನ್ನ ವೈದ್ಯರ ಸಲಹೆ ತೆಗೆದುಕೊಂಡು ಮಾತ್ರ ಆ ಔಷಧಿಯನ್ನು ಸೇವನೆ ಮಾಡಬೇಕು. ಹಾಗಾಗಿ ನಿಮ್ಮ ವೈದ್ಯರ ಸಲಹೆ ತೆಗೆದುಕೊಂಡು ನೀವು ಸೇವನೆ ಮಾಡಬೇಕಾ ಮಾಡಬಾರದಾ ಮತ್ತು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎನ್ನುವುದರ ಬಗ್ಗೆ ವೈದ್ಯರನ್ನು ಕೇಳಿ ತೆಗೆದುಕೊಳ್ಳಬಹುದು. ಈ ಮಾಹಿತಿ ನಿಮಗೆ ಪ್ರಯೋಜನ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.