ಎಲ್ಲಾ ರಾಶಿಗಳಿಗೆ ಇಂದು ಅಂದ್ರೆ ಸೆಪ್ಟೆಂಬರ್ 15 – 2022 ರ ದಿನ ಭವಿಷ್ಯ ಹೇಗಿದೆ ಇಲ್ಲಿದೆ ನೋಡಿ!

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಶ್ರೀ ಶುಭಕೃತ್ ನಮ್ಮ ಸಂವತ್ಸರ ದಕ್ಷಿನಾಯಿನೇ ವರ್ಷ ಋತು ಭಾದ್ರಪದ ಮಾಸೇ ಕೃಷ್ಣ ಪಕ್ಷೇ ಇಂದು ಸೆಪ್ಟೆಂಬರ್ 15 ಗುರುವಾರ ಇಂದು ಭರಣಿ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿದುಕೊಳ್ಳೋಣ. ಮೇಷ ರಾಶಿಗೆ ಚಂದ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ನಿಮಗೆ ಪ್ರಾಪ್ತಿ ಆಗುತ್ತೆ. ಅನೇಕ ವಿಷಯಗಳ ಬಗ್ಗೆ ನೀವು ಯೋಚನೆ ಮಾಡುವ ನಿಮ್ಮ ಸ್ವಭಾವವನ್ನು ಪಕ್ಕಕ್ಕಿತ್ತರೆ ಇವತ್ತು ಬಹಳ ನೆಮ್ಮದಿ ಕಾಣುತ್ತೀರಿ. ಹಿಂದಿನ ಎರಡು ದಿನಗಳಿಂದ ಮನಸ್ಸಿನಲ್ಲಿ ಇದ್ದ ಕ್ಲೇಶ ಇವತ್ತು ಮಾಯವಾಗುತ್ತದೆ. ವೃಷಭ ರಾಶಿಯವರಿಗೆ ಸ್ವಲ್ಪ ಯೋಚನೆ ಮಾಡಿ ನಿರ್ಧಾರ ಮಾಡುವಂಥ ದಿನ ಇದಾಗಿದೆ. ನಿಮ್ಮ ಮನಸ್ಸಿನಲ್ಲಿ ಎಲಾ ರೀತಿಯ ವಿಷಯಗಳಲ್ಲಿ ನಿಮಗೆ ಸರಿಯಾದ ರೀತಿಯಲ್ಲಿ ಎಲ್ಲ ಗೋಚರ ಆಗ್ತಾ ಇರೋದಿಲ್ಲ. ಅನೇಕ ಗೊಂದಲಗಳು ಇರುವ ದಿನ ಆಗಿರುತ್ತೆ. ಮುಖ್ಯ ನಿರ್ಧಾರಗಳನ್ನು ನಿಮ್ಮ ಪಾಡಿಗೆ ನೀವು ಹಿಡಿದು ಇಟ್ಟುಕೊಂಡು ಯಾರ ಹತ್ರ ಏನು ಹೇಳಲು ಹೋಗಬೇಡಿ. ಇನ್ನೆರಡು ದಿನಗಳ ನಂತರ ಪರಿಸ್ಥಿತಿ ಚೆನ್ನಾಗಿ ಆಗುತ್ತೆ ಆಗ ನೀವು ಮಾತನಾಡಬಹುದು.

 

ಮಿಥುನ ರಾಶಿಯವರಿಗೆ ಬಹಳ ಒಳ್ಳೆಯ ದಿನ. ಮಿತ್ರರಿಂದ ಹಾಗೂ ಗುಂಪುಗಳಿಂದ ನಿಮಗೆ ಯಶಸ್ಸು, ಧನಾಗಮ ಆಗುತ್ತೆ ಹಾಗೆಯೇ ಇಷ್ಟಾರ್ಥ ಸಿದ್ಧಿ ಆಗುತ್ತೆ. ಕರ್ಕಾಟಕ ರಾಶಿಗೆ ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚಿನ ಯಶಸ್ಸು ಪಡೆಯುವ ದಿವಸ. ನಿಗದಿತ ಅವಧಿಯೊಳಗೆ ನಿಮ್ಮ ಎಲ್ಲಾ ಕೆಲಸಗಳನ್ನೂ ಮುಗಿಸಿಕೊಳ್ಳಿ. ಸಿಂಹ ರಾಶಿಗೆ ಭಾಗ್ಯೋದಯ ಆಗುತ್ತೆ. ಹಿಂದಿನ ಎರಡು ದಿನಗಳಿಂದ ಮನಸ್ಸಿನಲ್ಲಿ ಇದ್ದ ಕ್ಲೇಶ ಎಲ್ಲವೂ ಪರಿಹಾರ ಆಗುತ್ತೆ. ದೊಡ್ಡವರ ಸೇವೆ ಮಾಡಿ ಆಶೀರ್ವಾದ ಪಡೆಯಿರಿ. ಒಂದಕ್ಕೆ ಹತ್ತರಷ್ಟು ಪುಣ್ಯವನ್ನು ನೀವು ಪಡೆಯಬಹುದು. ಕನ್ಯಾ ರಾಶಿಗೆ ಇವತ್ತು ಸ್ವಲ್ಪ ಮನಸ್ಸಿಗೆ ಚೆನ್ನಾಗಿಲ್ಲ ಅನ್ನೋ ರೀತಿ ಅನ್ಸುತ್ತ ಇರುತ್ತೆ. ನಿಮ್ಮ ಪ್ರೀತಿ ಪಾತ್ರರು ನಿಮಗೆ ಬೇಕಾದ ಪ್ರತಿಕ್ರಿಯೆ ಕೊಡದೆ ಹೋಗಬಹುದು. ಇದರ ಅರ್ಥ ನೀವೇನೋ ದೊಡ್ಡದಾಗಿ ತಿಳಿದುಕೊಳ್ಳಬೇಕು ಅಂತಲ್ಲ ಎರಡು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತೆ. ತುಲಾ ರಾಶಿಗೆ ಇಂದು ಬೇರೆಯವರ ಸಹಕಾರದೊಂದಿಗೆ ನಿಮಗೆ ಯಶಸ್ಸು ಪ್ರಾಪ್ತಿ ಆಗುತ್ತೆ. ಆದ್ದರಿಂದ ಬೇರೆಯವರೊಡನೆ ಅಹಂ ಭಾವ ಹಾಗೂ ಅಭಿಮಾನ ಬಿಟ್ಟು ಕೆಲ್ಸ ವ್ಯವಹಾರ ಮಾಡಬೇಕು.

 

ವೃಶ್ಚಿಕ ರಾಶಿಗೆ ಇವತ್ತು ಒಳ್ಳೆಯ ದಿನ. ಆರೋಗ್ಯದಲ್ಲಿ ನೀವು ಸುಧಾರಣೆ ಕಾಣುತ್ತೀರಿ. ಜಿಮ್ ಅಡ್ವೆಂಚರ್ ಸ್ಪೋರ್ಟ್ಸ್ ಇತ್ಯಾದಿ ಉದ್ಯಮಗಳಲ್ಲಿ ಇರುವವರಿಗೆ ಇಂದು ಬಹಳ ಹುರುಪು ಇರುವ ದಿನ ಆಗಿರುತ್ತೆ. ಧನಸ್ಸು ರಾಶಿಗೆ ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಯಶಸ್ಸು,ದಾಂಪತ್ಯದಲ್ಲಿ ನೆಮ್ಮದಿ ಮಕ್ಕಳಿಂದ ನೆಮ್ಮದಿ ಮತ್ತು ಕ್ರಿಯಾಶೀಲತೆ ಸೌಜನ್ಯಾ ಶೀಲತೆ ಇಡೀ ದಿನ ಹೆಚ್ಚಾಗಿರುವುದರಿಂದ ನಿಮ್ಮ ತೀಕ್ಷ್ಣ ಬುದ್ಧಿ ಶಕ್ತಿಯಿಂದ ಜಯವನ್ನು ಸಾಧಿಸುತ್ತೀರಿ. ಮಕರ ರಾಶಿಗೆ ಇವತ್ತು ಸ್ವಲ್ಪ ಗಂಭೀರವಾದ ದಿನ. ಕೋರ್ಟ್ ಕಚೇರಿ ವ್ಯವಹಾರ ರಿಯಲ್ ಎಸ್ಟೇಟ್ ಅಲ್ಲಿ ಇರುವವರು ದೊಡ್ಡ ದೊಡ್ಡ ಉದ್ಯಮಗಳಲ್ಲಿ ಇರುವವರು ಹೆಚ್ಚಾಗಿ ಯೋಚನೆ ಮಾಡಿ ನಿರ್ಧಾರಗಳನ್ನು ಮಾಡುವಂತಹ ದಿನ ಇದಾಗಿದೆ. ಕುಂಭ ರಾಶಿಗೆ ಬಹಳ ಪರಾಕ್ರಮ ಹೆಚ್ಚಾಗಿದೆ. ಇಡೀ ತಿಂಗಳಲ್ಲಿ ಹೆಚ್ಚು ಪರಾಕ್ರಮ ಇಡುವ ದಿನ. ಆದ್ದರಿಂದ ಅನೇಕ ಕೆಲಸಗಳನ್ನು ಸಾಧಿಸುತ್ತೀರಿ. ಅಣ್ಣ ತಮ್ಮಂದಿರಿಗೆ ಮಿತ್ರರಿಂದ ನೆಮ್ಮದಿ ಕಾಣುತ್ತೀರಿ. ಮೀನಾ ರಾಶಿಗೆ ಕುಟುಂಬ ನೆಮ್ಮದಿ ಇವತ್ತು ನಿಮಗೆ ಮುಖ್ಯವಾಗಿ ಆಗುತ್ತೆ. ಕುಟುಂಬದವರ ಒಂದು ಆರ್ಥಿಕ ಸುಬಧ್ರತೆಗೆ ಅನೇಕ ಯೋಜನೆಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿರಿ. ಸ್ನೇಹಿತರೆ ಪುನಃ ನಾಳೆ ನಿಮ್ಮ ದಿನ ಭವಿಷ್ಯದೊಂದಿಗೆ ಭೇಟಿ ಆಗೋಣ. ಶುಭದಿನ.

Leave a Reply

Your email address will not be published. Required fields are marked *