ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಪ್ರತಿನಿತ್ಯ ನಮ್ಮ ದಿನಬಳಕೆಯ ಆಹಾರ ಪದಾರ್ಥಗಳಲ್ಲು ಜೊತೆಗೆ ನಮ್ಮ ಲೈಫ್ ಸ್ಟೈಲ್ ವಿಚಾರಗಳಲ್ಲಿ ಆಗಿರಬಹುದು ಏನೆಲ್ಲಾ ಚೆಂಜಸ್ ಮಾಡಿಕೊಂಡರೆ ಒಳ್ಳೆಯದು ಮತ್ತೆ ಯಾಕೆ ಆ ಚೆಂಜಾಸ್ ಮಾಡಿಕೊಳ್ಳಬೇಕು ಎಂದು ಇಂದಿನ ಲೇಖನದಲ್ಲಿ ಕೆಲವೊಂದು ಟಿಪ್ಸ್ ಮೂಲಕ ತಿಳಿದುಕೊಳ್ಳೋಣ. ಇಂದು ಬಹು ಮುಖ್ಯವಾದ ವಿಚಾರದ ಬಗ್ಗೆ ತಿಳುವಳಿಕೆ ಕೊಡೋಣ ಎನ್ನುವುದು ನಮ್ಮ ಈ ಲೇಖನ. ಸಾಮಾನ್ಯವಾಗಿ ಪ್ರತಿದಿನ ಟೀ ನೋ ಕಾಫಿನೋ ಕುಡಿತ ಇದ್ರೆ ಅದರ ಜೊತೆಗೆ ಬಿಸ್ಕೆಟ್ ಅಥವಾ ಬ್ರೆಡ್ ತಿನ್ನುವ ಅಭ್ಯಾಸ ತುಂಬಾ ಜನಕ್ಕೆ ಇರುತ್ತೆ. ಅದ್ರಲ್ಲೂ ಆಫೀಸ್ ಗಳಲ್ಲಿ ಕೆಲ್ಸ ಮಾಡುವವರು ಕಾಲೇಜ್ ಗೆ ಹೋಗುವವರು ಚಹಾ ಬ್ರೆಡ್ ತಿಂಡಿ ತಿಂದು ಅರ್ಜೆಂಟ್ ಅರ್ಜೆಂಟ್ ಅಕ್ಕಿ ಹೊರಟು ಹೋಗುತ್ತಾರೆ. ಆದ್ರೆ ಈ ಉಪಹಾರ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತೆ ಎನ್ನುವುದು ನಿಮಗೆ ಗೊತ್ತೇ? ಚಹಾ ಅಂದ್ರೆ ಟೀ ಜೊತೆಗೆ ಬ್ರೆಡ್ ತಿನ್ನುವುದರಿಂದ ಆಗುವ ಅನಾನುಕೂಲಗಳನ್ನು ಏನು ಎನ್ನುವುದನ್ನು ತಿಳಿಯೋಣ. ಪ್ರಮುಖವಾಗಿ ಜೀರ್ಣ ಕ್ರಿಯೆಗೆ ಸಂಬಂಧ ಪಟ್ಟ ಹಾಗೆ ಇದು ಹಾನಿಯನ್ನು ಮಾಡುತ್ತೆ. ಯಾಕಂದ್ರೆ ಪ್ಯಾಕ್ ಮಾಡಿರುವ ಬ್ರೆಡ್ ಅಲ್ಲಿ ಸಂರಕ್ಷಕಗಳು ಹಾಗೆ ಅನೇಕ ಹಾನಿಕಾರಕ ರಾಸಾಯನಿಕ ವಸ್ತುಗಳು ಇರುತ್ತೆ. ಇದು ಆರೋಗ್ಯಕ್ಕೆ ತುಂಬಾ ಹಾನಿ ಮಾಡುತ್ತೆ. ಬ್ರೆಡ್ ನ ಮೈದಾ ಹಿಟ್ಟಿನಿಂದ ತಯಾರಿಸುತ್ತಾರೆ.
ಮೈದಾದಲ್ಲಿ ನಾರಿನ ಅಂಶ ಕೊರತೆ ಇದ್ದು ಇದರಿಂದ ಬ್ರೆಡ್ ಜೀರ್ಣಕ್ರಿಯೆಗೆ ಒಳ್ಳೇದು ಅಲ್ವೇ ಅಲ್ಲ. ಬ್ರೆಡ್ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿ ಮಾಡುತ್ತೆ ಹಾಗೆ ಅನೇಕ ರೋಗಗಳಿಗೆ ಎಡೆ ಮಾಡಿ ಕೊಡುತ್ತೆ. ಅದ್ರಲ್ಲಿ ಮಧುಮೇಹಿಗಳಿಗೆ ಹೆಚ್ಚು ಹಾನು ಆಗುತ್ತೆ. ಯಾಕಂದ್ರೆ ತುಂಬಾ ಮಂದಿ ಟೀ ಜೊತೆಗೆ ಬ್ರೆಡ್ ತಿಂತಾರೆ. ಅದ್ರಲ್ಲೂ ಮಧುಮೇಹಿಗಳಿಗೆ ತುಂಬಾ ತೊಂದ್ರೆ ಉಂಟು ಮಾಡುತ್ತದೆ. ಯಾಕಂದ್ರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ಜಾಸ್ತಿ ಮಾಡುತ್ತೆ. ಬ್ರೆಡ್ ಟೀ ನಲ್ಲಿ ಇರುವ ಅಂಶಗಳು ಇನ್ಸುಲಿನ್ ನ ಪ್ರಚೋದಿಸುತ್ತವೆ. ಅಂತಹ ಟೈಮ್ ಅಲ್ಲಿ ಮಧುಮೇಹಿಗಳಿಗೆ ಬ್ರೆಡ್ ತುಂಬಾ ಹಾನಿಕಾರಕ. ಹೃದಯಕ್ಕೆ ಹಾನಿಕಾರಕ ಕೂಡ ಹೌದು. ಬ್ರೆಡ್ ನಲ್ಲಿನ ಅನೇಕ ಅಂಶಗಳು ಜೊತೆಗೆ ರಾಸಾಯನಿಕಗಳು ಹೃದ್ರೋಗಿಗಳು ತುಂಬಾ ಆಫ್ಯಕ್ಟ್ ಮಾಡುತ್ತೆ. ನೀವು ಉಪಹಾರಕ್ಕೆ ಅಂತ ಟೀ ಜೊತೆ ಬ್ರೆಡ್ ತಿಂದ್ರೆ ನಂತರ ಕೊಲೆಸ್ಟ್ರಾಲ್ ಹಾಗೆ ರಕ್ತದೊತ್ತಡ ಜಾಸ್ತಿ ಆಗಬಹುದು. ಬ್ರೆಡ್ ತಿನ್ನುವುದು ಹೃದಯಾಘಾತ ಹಾಗೆ ಪಾರ್ಶ್ವವಾಯು ಸಾಧ್ಯತೆಯನ್ನು ಜಾಸ್ತಿ ಮಾಡುತ್ತಂತೆ. ಇದ್ರಲ್ಲಿ ಸೋಡಿಯಮ್ ನ ಪ್ರಮಾಣ ತುಂಬಾ ಜಾಸ್ತಿ ಇರುತ್ತೆ.
ಇದು ಹೃದಯಕ್ಕೆ ಹೆಚ್ಚು ಅಫೇಕ್ಟ್ ಉಂಟು ಮಾಡುತ್ತದೆ. ಇನ್ನೂ ಬೆಳಿಗ್ಗೆ ಬ್ರೆಡ್ ಟೀ ತಿನ್ನುವುದರಿಂದ ಹೊಟ್ಟೆಯಲ್ಲಿ ಹುಣ್ಣು ಆಗುವ ಸಾಧ್ಯತೆ ಇರುತ್ತದೆ. ಬ್ರೆಡ್ ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಹಾನಿಕಾರಕ. ಚಹಾ ಮೇಲಿಂದ ಮೇಲೆ ಕುಡಿದುಬಿಟ್ಟರೆ ಆಮ್ಲೀಯತೆ ಜಾಸ್ತಿ ಆಗುತ್ತೆ ಇದು ಕರುಳಲ್ಲಿ ಹುಣ್ಣಿಗೆ ಕಾರಣ ಆಗುತ್ತೆ. ತೂಕ ಕೂಡ ಜಾಸ್ತಿ ಆಗುತ್ತೆ ಹೌದು ಕಾರ್ಬೋಹೈಡ್ರೇಟ್ ಉಪ್ಪು ಮತ್ತು ಸಂಸ್ಕರಿಸಿದ ಸಕ್ಕರೆಯನ್ನು ಇಂದು ಹೊಂಡಿರಿತ್ತೆ ಇದು ತೂಕವನ್ನು ಜಾಸ್ತಿ ಮಾಡುತ್ತೆ. ಪ್ರತಿದಿನ ಬ್ರೆಡ್ ತಿಂತ ಇದ್ರೆ ತೂಕ ನಿಧಾನವಾಗಿ ಜಾಸ್ತಿ ಆಗುತ್ತಾ ಹೋಗುತ್ತೆ. ಬ್ರೆಡ್ ಟೀ ಕೂಡ ಚರ್ಮಕ್ಕೆ ಹಾನಿಕಾರಕ. ನೊಡಿದ್ರಲ್ವ ಎಷ್ಟೊಂದು ಕೆಟ್ಟ ಪರಿಣಾಮ ಬೀರುತ್ತೆ ಬ್ರೆಡ್ ನಮ್ಮ ಅರೋಗ್ಯದ ಮೇಲೆ ಅಂತ. ಈ ಅಭ್ಯಾಸ ನಿಮ್ಮಲ್ಲಿ ಇದ್ರೆ ಇಂದಿನಿಂದಲೇ ಬಿಟ್ಟು ಬಿಡಿ. ಯಾವತ್ತೋ ಒಂದು ದಿನ ತಿಂದ್ರೆ ಏನು ಆಗಲ್ಲ ಆದ್ರೆ ಪ್ರತಿದಿನ ಕೆಲಸಕ್ಕೆ ಹೋಗುವ ಭರದಲ್ಲಿ ಟೀ ಜೊತೆ ಬ್ರೆಡ್ ತಿಂದ್ರೆ ಖಂಡಿತ ಅಡ್ಡ ಪರಿಣಾಮಗಳೂ ಕಂಡು ಬರುತ್ತದೆ. ಶುಭದಿನ