ನಮಸ್ತೆ ಪ್ರಿಯ ಓದುಗರೇ, ಮಾಡಬಾರದಾ ಕೆಲಸಗಳನ್ನು ನಾವು ಏಕೆ ಮಾಡಿಬಿಡುತ್ತವೆ ಎಂದು ಅರ್ಜುನ ಕೃಷ್ಣನನ್ನು ಕೇಳಿದಾಗ, ಕೃಷ್ಣ ಹೇಳ್ತಾನೆ ಕಾಮ ಕ್ರೋಧ ಇವುಗಳಿಂದ ನಮಗೆ ಗೊತ್ತಿದ್ರೂ ಮಾಡಬಾರದಾ ಅದೇ ಕೆಲಸವನ್ನು ಹೋಗಿ ಹೋಗಿ ಮಾಡಿಬಿಡುತ್ತವೆ. ಕಾಮ ಮತ್ತು ಕ್ರೋಧದಿಂದ ಆಕರ್ಷಿತ ಆಗಿಬಿಟ್ಟಿರುತ್ತೆವೆ. ಅವುಗಳ ವರ್ಷದಿಂದ ಆಚೆ ಬಂದಾಗ ನಮಗೆ ನೆಮ್ಮದಿ ಪ್ರಾಪ್ತಿ ಆಗುತ್ತೆ. ಇಂದು ಶುಭಾಕೃತ್ ನಾಮ ಸಂವತ್ಸರ ದಕ್ಷಿನಾನಿಯೆ ಬಾದ್ರಪದಾ ಮಾದ ಕೃಷ್ಣ ಪಕ್ಷೆ. ಇಂದು ಸೆಪ್ಟಂಬರ್ 16, 2022, ಇಂದು ಕೃತಿಕಾ ನಕ್ಷತ್ರ. ಇಂದು ಶುಕ್ರವಾರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿದುಕೊಳ್ಳೋಣ. ಇಂದು ಕೃತಿಕಾ ನಕ್ಷತ್ರ. ಎಲ್ಲರಿಗೂ ಸ್ವಲ್ಪ ಇಂದು ನನ್ನ ಹಠ ನಡೀಬೇಕು ಎಂಬ ಧೋರಣೆ ಇರುತ್ತೆ. ಮೇಷ ರಾಶಿಗೆ ಇಂದು ನಿಮ್ಮ ಸಂಸಾರದಲ್ಲಿ ಸುಖ ಸಂತೋಷ ಎಲ್ಲವೂ ಸಮೃದ್ಧಿಯಾಗಿ ನೆಲೆಸಿರುತ್ತೆ. ಆದ್ರೂ ಕೂಡ ನನ್ನ ಮಾತನ್ನು ಎಲ್ಲರೂ ಕೇಳಲಿ ಎನ್ನುವ ಅಭಿಪ್ರಾಯವನ್ನು ನೀವು ವ್ಯಕ್ತ ಪಡಿಸುತ್ತಿರಿ. ಇದನ್ನು ತುಂಬಾ ದೊಡ್ಡದಾಗಿ ಹೇಳಲು ಹೋಗಬೇಡಿ. ಸಣ್ಣದಾಗಿ ವ್ಯಕ್ತಪಡಿಸಿ. ಬೇರೆಯವರು ಅದನ್ನು ಸಂತೋಷದಿಂದ ಮಾತು ಕೇಳುತ್ತಾರೆ. ಇಲ್ಲದೆ ಹೋದರೆ ಮನೆಯಲ್ಲಿ ಸ್ವಲ್ಪ ಕಿರಿಕಿರಿ ಆಗಬಹುದು. ವೃಷಭ ರಾಶಿಯವರಿಗೆ ಬಹಳ ಒಳ್ಳೆಯ ದಿನ. ಇಂದು ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ನಿಮ್ಮಲ್ಲೇ ನೀವು ಕಂದುಕೊಳ್ಳಿತ್ತಿರಿ. ನಾನು ಮಾಡಿದ್ದು ಸರಿಯಾಗಿದೆ ಎನ್ನುವಂತಹ ಎನ್ನುವ ಅರಿವು ನಿಮಗೆ ಮೂಡುತ್ತೆ.
ಮಿಥುನ ರಾಶಿಯವರಿಗೆ ಸ್ವಲ್ಪ ಜಾಗರೂಕತೆಯಿಂದ ವ್ಯವಾಹರ ಮಾಡಬೇಕಾದ ದಿನ. ಅನೇಕ ವಿಷಯಗಳಲ್ಲಿ ನಿಮಗೆ ಇಂದು ಏನು ಮಾಡಬೇಕು ಎಂದು ತಿಳಿದೇ ಹೋಗಬಹುದು. ದೊಡ್ಡವರ ಸಲಹೆ ತೆಗೆದುಕೊಳ್ಳಿ. ಕರ್ಕಾಟಕ ರಾಶಿಗೆ ಇಂದು ಬಹಳ ಒಳ್ಳೆಯ ದಿನ, ಮನಸ್ಸಿಗೆ ನೆಮ್ಮದಿ, ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚಿನ ಯಶಸ್ಸು ಪ್ರಾಪ್ತಿ ಆಗುತ್ತೆ. ಅನೇಕ ಒಳ್ಳೆಯ ರೀತಿಯಲ್ಲಿ ನೆಮ್ಮದಿನ ಕಾಣುತ್ತೀರಿ. ಸಿಂಹ ರಾಶಿಯವರಿಗೆ ಇಂದು ನಿಮ್ಮ ಘನತೆ ಗೌರವ ಹೆಚ್ಚಾಗುವ ದಿವಸ. ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಎಲ್ಲಾ ರೀತಿಯಲ್ಲಿ ನಿಮ್ಮ ಇಷ್ಟಾರ್ಥ ಸಿದ್ಧಿ ಆಗುತ್ತೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಇಂದು ನಿಗದಿತ ಸಮಯಕ್ಕೆ ಮುಂಚೆ ಜವಾಬ್ದಾರಿಗಳನ್ನು ಮುಗಿಸ್ಕೊಂದುಬಿಡಿ. ಕನ್ಯಾ ರಾಶಿಗೆ ಮನಸ್ಸಿಗೆ ನೆಮ್ಮದಿ, ದೊಡ್ಡವರ ಆಶೀರ್ವಾದ ದೇವರ ಆಶ್ರೀವಾದ ಪ್ರಾಪ್ತಿ ಆಗುತ್ತೆ. ವಿಶೇಷ ಪೂಜಾದಿಗಳು ಮಾಡಿ. ತುಲಾ ರಾಶಿಗೆ ಇಂದು ಮನಸ್ಸಿಗೆ ನೆಮ್ಮದಿ ಸ್ವಲ್ಪ ಕಡಿಮೆ ಆದಂತೆ ಭಾಸವಾಗುತ್ತದೆ. ಬೇರೆಯವರು ನಿಮಗೆ ಸರಿಯಾಗಿ ಗಮನ ಕೊಡುತ್ತಿಲ್ಲ ಎನ್ನುವ ರೀತಿಯಲ್ಲಿ ನಿಮಗೆ ಅನ್ನಿಸುತ್ತಾ ಇರುತ್ತೆ. ಅದು ನಿಜವಲ್ಲ ಸ್ವಲ್ಪ ನಿಮ್ಮ ಭ್ರಮೆ ಅಷ್ಟೆ. ಆದ್ದರಿಂದ ಸಮಾಧಾನವಾಗಿ ವ್ಯವಹಾರಗಳನ್ನು ಮಾಡಿಕೊಳ್ಳಿ.
ವೃಶ್ಚಿಕ ರಾಶಿಗೆ ಬಹಳ ಒಳ್ಳೆಯ ದಿನ ಬೇರೆಯವರಿಂದ ನಿಮಗೆ ಬಹಳ ಒಳ್ಳೆಯ ರೀತಿಯಲ್ಲಿ ತೊಂದರೆಗಳು ಬಗೆಹರಿಯುವ ರೀತಿ ಸ ಮಾಧನಗಳು ಪ್ರಾಪ್ತಿ ಆಗುತ್ತೆ. ಆದ್ರೆ ಬೇರೆಯವರು ಮುಖ್ಯ ಆಗ್ತಾರೆ ಹಾಗಾಗಿ ಅವರ ಗೌರವಕ್ಕೆ ಧಕ್ಕೆ ಬಾರದಂತೆ ನೀವು ನಡೆದುಕೊಳ್ಳಬೇಕು. ಧನಸ್ಸು ರಾಶಿಗೆ ಇಂದು ಸಾಮಾಜಿಕ ವಿಷಯಗಳಲ್ಲಿ ಮನಸ್ಸಿಗೆ ನೆಮ್ಮದಿ ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕೆಲ್ಸವನ್ನ ಸರಿಯಾದ ರೀತಿಯಲ್ಲಿ ನಿಭಾಯಿಸಲು ಸಾಧ್ಯ ಆಗುತ್ತೆ. ಶತ್ರುಗಳು ಮಿತ್ರಾಗಬಹುದು ಮಿತ್ರರು ಶತ್ರುಗಳು ಆಗದಂತೆ ನೋಡಿಕೊಳ್ಳಿ. ಮಕರ ರಾಶಿಗೆ ಬಹಳ ಒಳ್ಳೆಯ ದಿನ ಮನಸ್ಸಿಗೆ ನೆಮ್ಮದಿ ನಿಮ್ಮ ಕ್ರಿಯಾಶೀಲತೆಗೆ ತಿಂಗಳಲ್ಲಿ ಹೆಚ್ಚಾಗಿ ಇರುವುದರಿಂದ ಬುದ್ಧಿ ತುಂಬಾ ತೀಕ್ಷ್ಣವಾಗಿ ಇರುತ್ತೆ. ಮಕ್ಕಳಿಂದ ನೆಮ್ಮದಿ ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ದಾಂಪತ್ಯದಲ್ಲಿ ನೆಮ್ಮದಿ. ಕುಂಭ ರಾಶಿಗೆ ಇವತ್ತು ಸ್ವಲ್ಪ ಜಾಗರೂಕತೆಯಿಂದ ಕೆಲಸ ಮಾಡಬೇಕು. ಬಹಳ ಅನೇಕ ರೀತಿಯ ವಿಚಾರಗಳಿಂದ ಮನಸ್ಸಿಗೆ ಒತ್ತಡ ಇರುತ್ತೆ ಹಾಗಾಗಿ ಯಾವ ನಿರ್ಧಾರಗಳನ್ನು ಮಾಡಬೇಡಿ. ಕೂಲಂಕುಷವಾಗಿ ಯೋಚನೆ ಮಾಡಿ ನಂತರ ಮುಂದಿನ ಹೆಜ್ಜೆ ಇಡಿ. ಮೀನಾ ರಾಶಿಗೆ ಒಳ್ಳೆಯ ದಿನ. ನಿಮ್ಮ ತ್ರಿತಿಯ ಭಾಗದಲ್ಲಿ ಚಂದ್ರ ಇರುವುದರಿಂದ ಏನೇ ಮಾಡಿದರೂ ಏನೇ ಮಾತನಾಡಿದರೂ ಇವತ್ತು ಯಶಸ್ಸು ಕಾಣುತ್ತೀರಿ ಬೇರೆಯವರು ನಿಮ್ಮ ಮಾತನ್ನು ಕೇಳಲು ಕಾಯ್ತಾ ಇರ್ತಾರೆ. ಮತ್ತು ಸಹೋದರ ಸಹೋದರಿಯರಿಂದ ನೆಮ್ಮದಿ ಸಿಗುತ್ತೆ. ನಿಮ್ಮ ಪರಾಕ್ರಮ ಇಂದು ಜಾಸ್ತಿ ಇರುತ್ತೆ. ಪುನಃ ನಾಳೆ ನಿಮ್ಮ ದಿನ ಭವಿಷ್ಯದೊಂದಿಗೆ ಸಿಗೋಣ. ಶುಭದಿನ.