ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಚಿಯಾ ಸಿಡ್ಸ್ ಅಥವಾ ಚಿಯಾ ಬೀಜಗಳು ಅಂತ ಕರೆಯುತ್ತೇವೆ.ನಾವು ಎಲ್ಲ ಬಗೆಯ ಬೀಜಗಳ ಬಗ್ಗೆ ಕೇಳಿದ್ದೇವೆ ಆದರೆ ಈ ಬೀಜಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿಲ್ಲ ಗೆಳೆಯರೇ. ಈ ಬೀಜವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಅದ್ಭುತವಾದ ಎಲ್ಲ ಬೀಜಗಳಲ್ಲಿ ಇದು ಒಂದು ಬೀಜ ಅಂತ ಹೇಳಬಹುದು ಅದುವೇ ಚಿಯಾ ಬೀಜಗಳು. ನೋಡಲು ಸಬ್ಜಾ ಸೀಡ್ಸ್ ಅಥವಾ ಕಾಮ ಕಸ್ತೂರಿ ಬೀಜಗಳ ಹಾಗೆ ಕಾಣಿಸುತ್ತದೆ.ಹಾಗೆಯೇ ಇದರ ಬಣ್ಣವು ಸ್ವಲ್ಪ ಬಿಳಿ ಕಪ್ಪು ಬಣ್ಣದಲ್ಲಿ ಕಾಣ ಸಿಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಚಿಯಾ ಬೀಜಗಳ ಆರೋಗ್ಯಕರ ಗುಣಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಚಿಯಾ ಬೀಜಗಳಲ್ಲೀ ಅನೇಕ ಬಗೆಯ ವಿಟಮಿನ್ಸ್ ಗಳು ಪ್ರೊಟೀನ್ ಗಳು ಖನಿಜಗಳು ಕ್ಯಾಲ್ಷಿಯಂ ಜಿಂಕ್ ಮ್ಯಾಗ್ನಿಷಿಯಂ ಕಬ್ಬಿಣ ಮಿನರಲ್ಸ್ ಹೇರಳವಾಗಿ ನಮ್ಮ ದೇಹಕ್ಕೆ ಸಿಗುತ್ತದೆ. ಅದೇ ರೀತಿ ಕಾಫರ್ ವಿಟಮಿನ್ ಎ ಇದರಲ್ಲಿದೆ.
ಇದು ನಮ್ಮ ದೇಹವನ್ನು ಅನೇಕ ಅನಾರೋಗ್ಯಗಳಿಂದ ನಮ್ಮನ್ನು ಕಾಪಾಡುತ್ತದೆ. ಮೊದಲಿಗೆ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಬ್ಲಡ್ ಶುಗರ್ ಲೆವೆಲ್ ಯಾರಿಗೆ ಅಧಿಕವಾಗಿ ಇರುತ್ತದೆ ಎಷ್ಟೇ ಪ್ರಯತ್ನ ಮಾಡಿದರು ಕೂಡ ನಿಯಂತ್ರಣದಲ್ಲಿ ಬರುವುದಿಲ್ಲ ಅಂಥವರಿಗೆ ಇದು ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಬಹುದು. ಇನ್ನೂ ಎರಡನೆಯದು, ಮೂಳೆಗಳಿಗೆ ಉತ್ತಮ. ಮಕ್ಕಳ ಮೂಳೆಗಳಿಗೆ ಅಂತೂ ತುಂಬಾನೇ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ನಮ್ಮ ಮೂಳೆಗಳು ಸ್ನಾಯುಗಳು ಬಲಗೊಳ್ಳುತ್ತವೆ. ಚಿಯಾ ಬೀಜಗಳಲ್ಲೀ ಪ್ರೊಟೀನ್ ಹಾಗೂ ಕ್ಯಾಲ್ಷಿಯಂ ಇರುವುದರಿಂದ ಇದು ಮೂಳೆಗಳಿಂದ ಆಗುವ ಶಬ್ದವನ್ನು ಹಾಗೂ ನೋವನ್ನು ಕಡಿಮೆ ಮಾಡುತ್ತದೆ. ಹೃದ್ರೋಗದ ಎಲ್ಲ ಸಮಸ್ಯೆಗಳನ್ನೂ ಉಪಶಮನ ಮಾಡುವಲ್ಲಿ ಚಿಯಾ ಬೀಜಗಳು ತುಂಬಾನೇ ಸಹಾಯ ಮಾಡುತ್ತದೆ.
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ ಹಾಗೂ ಉತ್ತಮವಾದ ಹೇಚ್. ಡಿ. ಎಲ್ ಕೊಲೆಸ್ಟ್ರಾಲ್ ಅನ್ನು ಉತ್ಪತ್ತಿ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ಹೃದಯ ಸಂಬಂಧಿ ಎಲ್ಲ ಕಾಯಿಲೆಗಳನ್ನು ದೂರ ಮಾಡುತ್ತದೆ ಇದರ ಇನ್ನೊಂದು ಮುಖ್ಯವಾದ ಲಾಭ ಏನೆಂದರೆ ತೂಕವನ್ನು ಇಳಿಸಿಕೊಳ್ಳಲು ಇದೊಂದು ದಿವ್ಯ ಔಷಧವಾಗಿದೆ ಅಂತ ಹೇಳಬಹುದು. ಫೈಬರ್ ಅಂಶ ಇದರಲ್ಲಿ ಇರುವುದರಿಂದ ಇದು ತೂಕವನ್ನು ಕಡಿಮೆ ಮಾಡಿಕೊಳ್ಳಲು ತುಂಬಾನೇ ಸಹಾಯ ಮಾಡುತ್ತವೆ. ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಎಲ್ಲ ಸಮಸ್ಯೆಗಳನ್ನೂ ಉಪಶಮನ ಮಾಡುತ್ತದೆ ಕಾರಣ ಚಿಯಾ ಬೀಜಗಳಲ್ಲಿ ಇರುವ ನಾರಿನ ಅಂಶವೂ ಕಾರಣವಾಗಿದೆ. ಹೌದು ಜೊತೆಗೆ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಮಲಬದ್ದತೆಯನ್ನು ದೂರ ಮಾಡುತ್ತದೆ. ಇದರಲ್ಲಿ ಇರುವ ಕ್ಯಾಲ್ಷಿಯಂ ಅಂಶವು ಹಲ್ಲುಗಳು ಗಟ್ಟಿಯಾಗಿ ಇರಲು ಚಿಯಾ ಬೀಜಗಳು ಸಹಾಯ ಮಾಡುತ್ತದೆ. ಚಿಯಾ ಬೀಜಗಳನ್ನು ಯಾವ ರೀತಿಯಾಗಿ ಬಳಕೆ ಮಾಡಬಹುದು ಅಂದರೆ ಜ್ಯೂಸ್ ನಲ್ಲಿ ಸೇರಿಸಬಹುದು. ಹಾಗೂ ಐಸ್ ಕ್ರೀಮ್ ಮಾಡಲು ಮೇಲೆ ಚಿಯಾ ಬೀಜಗಳನ್ನು ಬಳಕೆ ಮಾಡಬಹುದು.ಇನ್ನೊಂದು ವಿಧಾನವೆಂದರೆ ಒಂದು ಚಮಚ ಚಿಯಾ ಬೀಜಗಳನ್ನು ನೀವು ಒಂದು ಲೋಟ ಹತ್ತು ನಿಮಿಷಗಳ ಕಾಲ ನೆನೆಸಿ ಕುಡಿಯಬಹುದು.