ಕರಿ ಮೆಣಸು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲ ಲಾಭಗಳು ಆಗುತ್ತವೆ ಗೊತ್ತೇ?????

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಕರಿ ಮೆಣಸು ಅಥವಾ ಕಾಳ್ ಮೆಣಸು ಅಂತ ಕರೆಯುವ ಈ ಚಿಕ್ಕ ದುಂಡಾಕಾರದ ಮಸಾಲೆ ಪದಾರ್ಥ ಅಡುಗೆಯ ರುಚಿಯನ್ನು ಮತ್ತು ಸ್ವಾದವನ್ನು ಹೆಚ್ಚಿಸುವುದಲ್ಲದೆ ನಮ್ಮ ಆರೋಗ್ಯಕ್ಕೂ ಕೂಡ ಅಷ್ಟೇ ಸಹಾಯಕವಾದದ್ದು. ನಮ್ಮ ಭಾರತೀಯರು ಅಡುಗೆಯನ್ನು ತಯಾರಿಸುವಾಗ ಹೆಚ್ಚಾಗಿ ಮಸಾಲೆ ಪದಾರ್ಥಗಳನ್ನೂ ಬಳಕೆ ಮಾಡುತ್ತಾರೆ. ಅಷ್ಟಕ್ಕೂ ಮೀರಿ ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಮಸಾಲೆ ಪದಾರ್ಥಗಳಿಗೆ ಬಹಳ ವಿಶಿಷ್ಟವಾದ ಸ್ಥಾನವಿದೆ. ರುಚಿಯಲ್ಲಿ ಖಾರವಾಗಿ ಹೊಂದಿರುವ ಈ ಕಾಳು ಮೆಣಸನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕಾಳು ಮೆಣಸು ಔಷಧೀಯ ರೂಪದಲ್ಲಿ ಮೊದಲಿನ ಕಾಲದಿಂದಲೂ ಕೂಡ ಬಳಕೆ ಮಾಡಲಾಗುತ್ತದೆ. ಆಯುರ್ವೇದ ಪದ್ಧತಿಯಲ್ಲಿ ಕರಿ ಮೆಣಸನ್ನು ಅತಿಸಾರ ಮಲಬದ್ಧತೆ ಕಿವಿನೋವು ಅಜೀರ್ಣತೆ ಕೀಟ ಭಾದೆ ಕೀಟ ವಿಷಬಾಧೆ ನಿದ್ರಾಹೀನತೆ ಶ್ವಾಸಕೋಶದ ಕಾಯಿಲೆಗಳು ಹುಳುಕು ಹಲ್ಲುಗಳು ಚರ್ಮದ ಸಮಸ್ಯೆಗಳು ಹಲ್ಲು ನೋವು ಸಮಸ್ಯೆ ಸೇರಿದಂತೆ ಅನೇಕ ಬಗೆಯ ಕಾಯಿಲೆಗಳಿಗೆ ದಿವ್ಯ ಔಷಧವಾಗಿದೆ ಈ ಕರಿ ಮೆಣಸು.

 

ಇನ್ನೂ ಈ ಕರಿ ಮೆಣಸು ನಲ್ಲಿ ವಿಟಮಿನ್ ಸಿ,ಕೆ, ಕ್ಯಾಲ್ಷಿಯಂ ಸೋಡಿಯಂ ಹಾಗೂ ಇನ್ನಿತರ ಖನಿಜಗಳನ್ನು ಹೊಂದಿದ್ದು ಜೊತೆಗೆ ಉತ್ತಮವಾದ ಫ್ಯಾಟ್ ಅನ್ನು ಹೊಂದಿದೆ. ನೀವು ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ ನಿಮ್ಮ ಡಯೆಟ್ ನಲ್ಲಿ ಇದನ್ನು ಸೇರಿಸಿಕೊಳ್ಳಿ. ಇದರಲ್ಲಿ ಫೋಟೋ ನ್ಯೂಟ್ರಿಷನ್ ಇರುವುದರಿಂದ ಇದು ದೇಹದಲ್ಲಿ ಶೇಖರಣೆ ಆದ ಕಲ್ಮಶವನ್ನು ಹೊರಗೆ ಹಾಕುತ್ತದೆ. ಹಾಗೇಯೇ ಅಧಿಕವಾದ ನೀರನ್ನು ಕೂಡ ಹೊರಗೆ ಬಿಡುಗಡೆ ಮಾಡಲು ದೇಹವನ್ನು ಪ್ರೇರೆಪಿಸುತ್ತದೆ. ಮೂತ್ರ ವಿಸರ್ಜನೆ ಹಾಗೂ ಬೆವರು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ದೇಹದ ತೂಕವು ಕಡಿಮೆ ಆಗುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಆಹಾರದ ಮೇಲೆ ಕಾಳು ಮೆಣಸಿನ ಪುಡಿಯನ್ನು ಹಾಕಿಕೊಂಡು ಸೇವನೆ ಮಾಡಬಹುದು. ಇನ್ನೂ ಶೀತ ನೆಗಡಿ ಕೆಮ್ಮು ಗಂಟಲು ಕೆರೆತ ಹೀಗೆ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ, ನೀವು ಕಾಳು ಮೆಣಸಿನ ಟೀ ಮಾಡಿಕೊಂಡು ಕುಡಿಯಬಹುದು.

 

ಅಂದರೆ ಟೀ ಮಾಡುವಾಗ ಕಾಳು ಮೆಣಸು ಮತ್ತು ತುಳಸಿ ದಳಗಳನ್ನು ಹಾಕಿ ಕುದಿಸಿ ಕುಡಿಯಿರಿ. ಇದರಿಂದ ಶೀತ ನೆಗಡಿ ನಿವಾರಣೆ ಆಗುತ್ತದೆ. ಇನ್ನೂ ಯಾರಿಗೆ ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತಿರುವುದಿಲ್ಲ ಅಂಥವರು ನಿಯಮಿತವಾಗಿ ಕರಿ ಅಡುಗೆಯಲ್ಲಿ ಮೆಣಸಿನ ಪುಡಿಯ ಬದಲು ಕಾಳುಮೆಣಸನ್ನು ಬಳಸುವುದರಿಂದ ಹೊಟ್ಟೆ ಉಬ್ಬರ ಅಥವಾ ವಾಯು ತುಂಬುವುದನ್ನು ತಡೆಯಬಹುದು. ಮತ್ತು ಕಾಳು ಮೆಣಸು ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಹಸಿವು ಆಗದೇ ಇದ್ದರೂ ಹಸಿವು ಹೆಚ್ಚಿಸುತ್ತದೆ. ಇನ್ನೂ ಅಡುಗೆಯಲ್ಲಿ ಅಥವಾ ಅಡುಗೆ ಮಾಡುವಾಗ ಕಾಳು ಮೆಣಸು ಬಳಕೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇನ್ನೂ ನಿಮಗೆ ಅಜೀರ್ಣತೆ ತೀವ್ರವಾಗೀ ಕಾಡುತ್ತಿದ್ದರೆ ನೀವು ಮಜ್ಜಿಗೆ ಜೊತೆಗೆ ಕರಿ ಮೆಣಸು ಬೆರೆಸಿ ಕುಡಿಯಿರಿ. ಇದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತದೆ ಅಜೀರ್ಣತೆ ಹೋಗುತ್ತದೆ. ಜೀರ್ಣ ಕ್ರಿಯೆ ವೃದ್ಧಿಸುತ್ತದೆ. ಅಜೀರ್ಣತೆ ಉಂಟಾಗುವ ಎಲ್ಲ ಸಮಸ್ಯೆಗಳನ್ನೂ ಉಪಶಮನ ಮಾಡುತ್ತದೆ. ಇನ್ನೂ ನಿಮಗೆ ಕಫ ಆಗಿ ಎದೆ ತುಂಬಿದ್ದಾರೆ ಕುಡಿಯುವ ನೀರಿಗೆ ಕಾಳು ಮೆಣಸು ಹಾಕಿ ಆರಿದ ಮೇಲೆ ಸ್ವಲ್ಪ ಜೇನುತುಪ್ಪವನ್ನು ಹಾಕಿ ಕುಡಿದರೆ ಕಫವು
ನಿವಾರಣೆ ಆಗುತ್ತದೆ.

Leave a Reply

Your email address will not be published. Required fields are marked *