ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ನಾವು ಏನೆಲ್ಲಾ ಪ್ರಯತ್ನವನ್ನು ಮಾಡುತ್ತೇವೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳನ್ನೂ ರಾಸಾಯನಿಕ ಸೋಪುಗಳನ್ನು ಫೆಸ್ ವಾಷ್ ಗಳನ್ನೂ ಬಳಕೆ ಮಾಡುತ್ತೇವೆ. ಆದರೆ ನಿಮಗೆ ಗೊತ್ತೇ ಯಾವುದೇ ಹಣದ ಖರ್ಚು ಮಾಡದೇ ಮನೆಯಲ್ಲಿ ಸಿಗುವ ಐಸ್ ಕ್ಯೂಬ್ ಅನ್ನು ನೀವು ನಿಮ್ಮ ಮುಖದ ತ್ವಚೆ ಹಾಗೂ ಸೌಂದರ್ಯವನ್ನು ಹೆಚ್ಚಿಸಿ ಕೊಳ್ಳಲು ಉಪಯೋಗಿಸಿದರೆ ಸಾಕು ಖಂಡಿತವಾಗಿ ನಿಮಗೆ ಯಾವುದೇ ಕ್ರೀಮ್ ಹಾಗೂ ಸೋಪು ಶಾಂಪೂ ಫೆಸ್ ವಾಷ್ ಗಳ ಅವಶ್ಯಕತೆ ಇರುವುದಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ, ಐಸ್ ಕ್ಯೂಬ್ ಅನ್ನು ನಿಮ್ಮ ಮುಖದ ಮೇಲೆ ಇಟ್ಟುಕೊಂಡರೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ಐಸ್ ಕ್ಯೂಬ್ ಅನ್ನು ಬಳಸುವುದರಿಂದ ನಿಮ್ಮ ಮುಖ್ಯವೂ ಕಾಂತಿಯುಕ್ತ ಆಗುತ್ತದೆ. ಅಷ್ಟೇ ಅಲ್ಲದೇ ತ್ವಚೆ ನಯವಾಗಿ ಆಗುತ್ತದೆ ಹಾಗೂ ತಂಪು ಕೂಡ ಇರುತ್ತದೆ. ಐಸ್ ಕ್ಯೂಬ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿದರೆ ನಿಮ್ಮ ಮುಖದಲ್ಲಿ ಕಾಣಿಸಿ ಕೊಂಡಿರುವ ಮೊಡವೆಗಳು ನಿಧಾನವಾಗಿ ಕಡಿಮೆ ಆಗುತ್ತವೆ.
ತುಂಬಾನೇ ಸರಳವಾದ ಹಾಗೂ ಮನೆಯಲ್ಲಿ ಯಾವುದೇ ಹರಸಾಹಸ ಮಾಡದೇ ಸಿಗುವ ಐಸ್ ಕ್ಯೂಬ್ ಅನ್ನು ಬಳಸಿಕೊಂಡು ಹಲವಾರು ಬಗೆಯ ಪ್ರಯೋಜನಗಳನ್ನು ಪಡೆದುಕೊಳ್ಳಿ. ಮೊಡವೆಗಳನ್ನು ಕುಗ್ಗಿಸುತ್ತದೆ ಐಸ್ ಕ್ಯೂಬ್ ಅನ್ನು ಹಚ್ಚುವುದರಿಂದ. ಇನ್ನೂ ಐಸ್ ಕ್ಯೂಬ್ ಅನ್ನು ತೆಗೆದುಕೊಂಡು ಮೊಡವೆ ಇರುವ ಜಾಗಕ್ಕೆ ಹಚ್ಚಿ ಉಜ್ಜಿದರೆ ಮೊಡವೆಗಳು ಕ್ರಮೇಣ ಕಡಿಮೆ ಆಗುತ್ತಾ ಬರುತ್ತವೆ. ಇನ್ನೂ ಐಸ್ ಕ್ಯೂಬ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ರಕ್ತ ಸಂಚಾರ ವೂ ಸರಾಗವಾಗಿ ನಡೆಯುತ್ತದೆ. ಹಾಗೂ ಮುಖವನ್ನು ಬಿಗಿಯಾಗಿಸುತ್ತದೆ. ಕಣ್ಣುಗಳ ಸಮಸ್ಯೆಗಳನ್ನು ದೂರ ಮಾಡುತ್ತದೆ. ಅದಕ್ಕಾಗಿ ನೀವು ನಿಮ್ಮ ಕಣ್ಣುಗಳ ಮೇಲೆ ಐಸ್ ಕ್ಯೂಬ್ ಇಟ್ಟು ಸ್ವಲ್ಪ ಹೊತ್ತು ಹಾಗೆ ಬಿಡಿ ಇದರಿಂದ ಕಣ್ಣು ಉರಿ ಕಡಿಮೆ ಆಗುತ್ತದೆ ಕಣ್ಣು ತಂಪು ಆಗುತ್ತದೆ. ಸ್ನಾನವಾದ ಮೇಲೆ ನಿಮ್ಮ ಮುಖವನ್ನು ತೊಳೆಯಬೇಕು. ಇದು ನಿಮ್ಮ ಮುಖದ ರಂಧ್ರಗಳನ್ನು ಮುಚ್ಚುವಂತೆ ಮಾಡಿ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇನ್ನೂ ಕೆಲವು ಜನರಿಗೆ ಐ ಬ್ರೋಸ್ ಮಾಡಿಕೊಂಡರೆ ತುಂಬಾನೇ ಉರಿಯುತ್ತದೆ. ತುಂಬಾ ನೋವು ಆಗುತ್ತದೆ.
ಅಂಥಹ ಸಮಯದಲ್ಲಿ ನೀವು ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿಕೊಳ್ಳಿ. ಇದರಿಂದ ನೋವು ಕಡಿಮೆ ಆಗುತ್ತದೆ. ಇನ್ನೂ ಮೇಕಪ್ ಹಾಕಿಕೊಳ್ಳುವ ಮುನ್ನವೇ ನೀವು ಐಸ್ ಕ್ಯೂಬ್ ಹಚ್ಚಿಕೊಳ್ಳಿ. ಇದರಿಂದ ರಂಧ್ರಗಳು ಮುಚ್ಚಿ ತ್ವಚೆಯು ಗಟ್ಟಿಯಾಗುತ್ತದೆ. ಹಾಗೂ ರಂಧ್ರಗಳು ಮುಚ್ಚುತ್ತದೆ. ಮತ್ತು ಚರ್ಮವು ಮೃದು ಆಗುತ್ತದೆ. ಇನ್ನೂ ಉಗುರುಗಳಿಗೆ ಹಚ್ಚಿದ ನೈಲ್ ಪಾಲಿಷ್ ಅನ್ನು ಬೇಗನೆ ತೆಗೆದು ಹಾಕಲು ನೀವು ಐಸ್ ಕ್ಯೂಬ್ ಅನ್ನು ಉಪಯೋಗಿಸಬಹುದು. ಇನ್ನೂ ಒಂದು ಪಾತ್ರೆಯಲ್ಲಿ ಸೌತೆಕಾಯಿ ಮತ್ತು ಜೇನುತುಪ್ಪ ಹಾಗೂ ನಿಂಬೆ ರಸ ಹಾಕಿ. ಫ್ರಿಡ್ಜ್ ನಲ್ಲಿ ಇಡೀ. ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇದು ನಿಮ್ಮ ಮುಖವನ್ನು ಕಾಂತಿಯುಕ್ತವಾಗಿಸುತ್ತದೆ. ಬೆನ್ನು ನೋವಿಗೆ ಐಸ್ ಕ್ಯೂಬ್ ನಿಂದ ನಿಮ್ಮ ಬೆನ್ನಿಗೆ ವೃತ್ತಾಕಾರದಲ್ಲಿ ಉಜ್ಜಿದರೆ, ಬೆನ್ನು ನೋವು ಕಡಿಮೆ ಆಗುತ್ತದೆ. ಬೆನ್ನಿಗೆ ವಿಶ್ರಾಂತಿ ಸಿಗುತ್ತದೆ. ಇಷ್ಟೆಲ್ಲ ಲಾಭಗಳನ್ನು ಐಸ್ ಕ್ಯೂಬ್ ನಿಂದ ಪಡೆಯಬಹುದಾದರೆ ಖಂಡಿತವಾಗಿ ಉಪಯೋಗಿಸಿ ನೋಡಿ. ಶುಭದಿನ.