ಆಧಾರ ಕಾರ್ಡ್ ನಲ್ಲಿ ನಿಮ್ಮ ಫೋಟೋ ಬದಲಾವಣೆ ಮಾಡಲು ಈ ರೀತಿ ಮಾಡಿರಿ.

ಉಪಯುಕ್ತ ಮಾಹಿತಿ

ಭಾರತದಲ್ಲಿ ಆಧಾರ್ ಕಾರ್ಡ್ ಇಂದಿನ ದಿನಗಳಲ್ಲಿ ನಿರ್ಣಾಯಕ ದಾಖಲೆಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಹಲವಾರು ಸೇವೆಗಳನ್ನು ಪಡೆಯಲು ಡಾಕ್ಯುಮೆಂಟ್ ಅಗತ್ಯವಿದೆ. ಅದರಲ್ಲಿ ಆಧಾರ ಕಾರ್ಡ್ ಕೂಡ ಒಂದಾಗಿದೆ. ಹಾಗೆಯೇ ಆಧಾರ ಕಾರ್ಡ್ ಅನ್ನು ನಾವು ಗುರುತಿನ ಪುರಾವೆ ಆಗಿ ಬಳಕೆ ಮಾಡಬಹುದು. ಸಾಮಾನ್ಯವಾಗಿ ನೀವು ನೋಡಿರಬಹುದು ಆಧಾರ ಕಾರ್ಡ್ ಹೇಗೆ ಇರುತ್ತದೆ ಎಂದು, ಅದರಲ್ಲಿ ನಿಮ್ಮ ಹೆಸರಿನೊಂದಿಗೆ ನಿಮ್ಮ ವಿಳಾಸ ಫೋನ್ ನಂಬರ್ ಹಾಗೂ ಮುಖ್ಯವಾಗಿ ನಿಮ್ಮ ಫೋಟೋ ಮತ್ತು 12 ಅಂಕಿಯ ಸಂಖ್ಯೆಯು ಇರುತ್ತದೆ. ಈ ಆಧಾರ ಕಾರ್ಡ್ ಸೌಲಭ್ಯ ಅನ್ನುವುದು ಬಂದು ಸುಮಾರು ವರ್ಷಗಳ ಆಯಿತು ಮಿತ್ರರೇ, ಹೆಚ್ಚಿನವರು ಅಥವಾ ಕೆಲವು ಜನರು ವರ್ಷಗಳ ಹಿಂದೆಯೇ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದರಿಂದ ಅವರ ಫೋಟೋ ಈಗಿನ ಫೋಟೋದಂತೆ ಕಾಣದಿರಬಹುದು ಅಥವಾ ಹಳೆಯ ಫೋಟೋ ನೋಡಲು ಚೆನ್ನಾಗಿ ಕಾಣದಿರಬಹುದು. ಆಧಾರ ಕಾರ್ಡ್ ಅನ್ನುವುದು ಭಾರತದ ಪ್ರತಿಯೊಬ್ಬ ನಾಗರಿಕರಿಗೆ ನೀಡಲಾದ ಒಂದು ಯುನೀಕ್ ಸಂಖ್ಯೆ ಆಗಿದೆ. ಆಧಾರ ಕಾರ್ಡ್ ಅನ್ನುವುದು ಬಯೋಮೆಟ್ರಿಕ್ ದಾಖಲೆ ಆಗಿದೆ ಇದನ್ನು ಯೂನಿವರ್ಸಲ್ ಆಗಿ ನಾವು ಎಲ್ಲಿ ಬೇಕಾದರೂ ದಾಖಲೆಯಾಗಿ ಬಳಕೆ ಮಾಡಿಕೊಳ್ಳಬಹುದು.

 

ಆಧಾರ ಕಾರ್ಡ್ ಅನ್ನುವುದು ಸಾರ್ವಜನಿಕ ಕಲ್ಯಾಣ ಮತ್ತು ನಾಗರಿಕ ಸೇವೆಗಳಿಗೆ ಸರ್ಕಾರದ ಮೂಲವಾಗಿದೆ. ಜೊತೆಗೆ ಇದರಲ್ಲಿ ವ್ಯಕ್ತಿಯ ವೈಯಕ್ತಿಕ ವಿವರಣೆಯನ್ನು ಕೂಡ ಡೇಟಾಬೇಸ್ ನಲ್ಲಿ ಸಂಗ್ರಹಣೆ ಮಾಡಲಾಗಿರುತ್ತದೆ. ಸಾಮಾನ್ಯವಾಗಿ ನೀವು ಗಮನಿಸಿರಬಹುದು, ಆಧಾರ ಕಾರ್ಡ್ ನಲ್ಲಿ ಸ್ವಲ್ಪ ಬದಲಾವಣೆ ಆದರೂ ಕೂಡ ಅದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟದಾಯಕ ಆಗುತ್ತದೆ. ಒಬ್ಬ ವ್ಯಕ್ತಿಯ ಆಧಾರ ಕಾರ್ಡ್ ಅನ್ನು ಎರಡು ವಿಧಾನದಲ್ಲಿ ಅಪಡೆಟ್ ಮಾಡಬಹುದು. ಒಂದು ಸೆಲ್ಫ್ ಸರ್ವೀಸ್ ಅಪಡೆಟ್ ಪೋರ್ಟಲ್ ಮೂಲಕ ಮತ್ತು ಇನ್ನೊಂದು ಆಧಾರ್ ಎನರೊಲಮೆಂಟ್ ಸೆಂಟರ್‌ ಗೆ ಭೇಟಿ ನೀಡುವ ಮೂಲಕ ಅಪ್‌ಡೆಟ್ ಮಾಡಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ನವೀಕರಿಸಲು ನೀವು ಅನುಸರಿಸಬೇಕಾದ ಹಂತಗಳನ್ನು ಅನುಸರಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂಬುದರ ಮಾಹಿತಿಯನ್ನು ಕೂಡ ತಿಳಿಸಿಕೊಡುತ್ತೇವೆ ಬನ್ನಿ. ಯುನಿಕ್ ಐಡೆಂಟಿಫಿಕೇಶನ್ ಅಥೋರಿಟಿ ಆಫ್ ಇಂಡಿಯಾ ಇದೀಗ ನಿಮ್ಮ ಫೋಟೋವನ್ನು ಕೆಲವೇ ಹಂತಗಳಲ್ಲಿ ಅಪಡೆಟ್ ಮಾಡಲು ಅನುಮತಿಸುತ್ತದೆ. ಅವುಗಳಲ್ಲಿ ಮೊದಲನೆಯ ಹಂತ 1.UIDAI ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

 

ಪೋರ್ಟಲ್‌ನಿಂದ ಆಧಾರ್ ನೋಂದಣಿ ಫಾರ್ಮ್ ಅಂದರೆ ಆಧಾರ ಕಾರ್ಡ್ ಎಂರೋಲ್ಮೇoಟ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ. ಹಂತ 2. ಆಧಾರ ಕಾರ್ಡ್ ಎಂರೋಲ್ಮೇoಟ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ. ಹಂತ 3. ನಂತರ ನೀವು ಹತ್ತಿರದ ಯಾವುದೇ ಆಧಾರ್ ನೋಂದಣಿ ಕೇಂದ್ರದಲ್ಲಿ ಅಥವಾ ಸೇವಾ ಕೇಂದ್ರದಲ್ಲಿ ಆ ಫಾರ್ಮ್ ಅನ್ನು ಸಲ್ಲಿಸಬಹುದು. ಹಂತ 4.ನಿಮ್ಮ ಅರ್ಜಿಯನ್ನು ಆಧಾರ್ ಎನರೊಲಮಂಟ್ ಎಕ್ಸಿಕ್ಯುಟಿವ್ ಗೆ ಸಬಮಿಟ್ ಮಾಡಿ. ಹಂತ 5.ಎಕ್ಸಿಕ್ಯುಟಿವರಿಂದ ಬಯೋಮೆಟ್ರಿಕ್ ಬಳಸಿ ನಿಮ್ಮ ವಿವರಗಳನ್ನು ದೃಢೀಕರಿಸಲಾಗುತ್ತದೆ. ಹಂತ 6.ಕಾರ್ಯನಿರ್ವಾಹಕರು ನಿಮ್ಮ ಹೊಸ ಫೋಟೋವನ್ನು ಆಧಾರ್ ನೋಂದಣಿ ಕೇಂದ್ರ/ಆಧಾರ್ ಸೇವಾ ಕೇಂದ್ರದಲ್ಲಿ ತೆಗೆದುಕೊಳ್ಳುತ್ತಾರೆ. ಹಂತ 7. ತದ ನಂತರ ನೀವು ಫೋಟೋ ಸೇವೆ ಪಡೆಯಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಅದುವೇ 25 ರೂಪಾಯಿ ಜೊತೆಗೆ GST ಹಂತ 8.ಅಪ್‌ಡೇಟ್ ವಿನಂತಿಯೊಂದಿಗೆ ನೀವು ಸ್ವೀಕೃತಿ ಸ್ಲಿಪ್ ಅನ್ನು ಸಹ ಪಡೆಯುತ್ತೀರಿ. ಹಂತ 9.ಫೋಟೋವನ್ನು ಯಶಸ್ವಿಯಾಗಿ ಅಪಡೆಟ್ ಮಾಡಿದ ನಂತರ ನೀವು ನ್ಯು ಕಾಪಿಯನ್ನು ಡೌನ್‌ಲೋಡ್ ಮಾಡಬಹುದು ಅಥವಾ UIDAI ನ ಪೋರ್ಟಲ್‌ನಿಂದ ಪಿಸಿಕಲ್ ಕಾರ್ಡ್ ಅನ್ನು ಆರ್ಡರ್ ಮಾಡಬಹುದು.

Leave a Reply

Your email address will not be published. Required fields are marked *