ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ನಮ್ಮ ಹಿಂದಿನ ಕಾಲದ ಹಿರಿಯರಿಗೆ ರೋಗ ರುಜಿನಗಳು ವಯಸ್ಸಾದ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗಿನ ಆಧುನಿಕ ಕಾಲದಲ್ಲಿ ಹಾಗೂ ಯುವಜನತೆಯಲ್ಲಿ ವಯಸ್ಸು ಮೂವತ್ತು ದಾಟಿರುವುದಿಲ್ಲ ಆಗಲೇ ರೋಗ ರುಜಿನಗಳು ನೋವುಗಳು ಶುರು ಆಗಿರುತ್ತವೆ. ಅದರಲ್ಲಿ ಈ ಮಂಡಿನೋವು ಕೈ ಕಾಲು ನೋವು ಹಿಮ್ಮಡಿ ನೋವು ಬೆನ್ನು ನೋವು ಹೀಗೆ ಒಂದೊಂದೇ ಸಾಲಾಗಿ ಬೆನ್ನತ್ತುತ್ತವೆ. ಇದರಲ್ಲಿ ಮಂಡಿ ನೋವು ಕೂಡ ಒಂದಾಗಿದೆ. ಹೌದು ಮಂಡಿ ನೋವು ಬಂದರೆ ಸಾಕು ನಮಗೆ ನಡೆದಾಡಲು ಹಾಗೂ ಕುಳಿತುಕೊಳ್ಳಲು ಆಗುವುದಿಲ್ಲ. ಯಾಕಾದರೂ ಈ ಮಂಡಿ ನೋವು ಬಂತು ಅಂತ ಅನ್ನಿಸಿ ಬಿಡುತ್ತದೆ. ಈ ಮಂಡಿ ನೋವು ಯಾಕೆ ಯಾವಾಗ ಯಾವ ಸಮಯದಲ್ಲಿ ಯಾರಿಗೆ ಬರುತ್ತದೆ ಅನ್ನುವುದು ತಿಳಿಯುವುದಿಲ್ಲ. ಒಮ್ಮೆ ಮಂಡಿ ನೋವು ಶುರುವಾದರೆ ಇದು ದೀರ್ಘಕಾಲದವರೆಗೆ ಮುಂದುವರೆಯುವ ಸಾಧ್ಯತೆ ಇರುತ್ತದೆ.
ಆದರೆ ಇದು ಬರಲು ಕಾರಣವೇನು ಅಂತ ಪತ್ತೆ ಮಾಡಲು ಆಗುವುದಿಲ್ಲ. ಕ್ಯಾಲ್ಶಿಯ ಮೂಳೆಗಳ ಸಾಂದ್ರತೆ ಹಾಗೂ ಕಬ್ಬಿಣದ ಕೊರತೆ ಇಂದ ಈ ಸಮಸ್ಯೆಗಳು ಶುರು ಆಗುತ್ತವೆ. ಇದಕ್ಕೆ ಯಾವುದೇ ವಯಸ್ಸಿನ ಭೇದಭಾವ ಇರುವುದಿಲ್ಲ. ವಿಟಮಿನ್ ಡಿ ಹಾಗೂ ಕಬ್ಬಿನ ಕ್ಯಾಲ್ಷಿಯಂ ಕೊರತೆ ಇಂದ ಈ ಮಂಡಿ ನೋವು ಕಾಣಿಸಿ ಕೊಳ್ಳುತ್ತದೆ. ವಿಟಮಿನ್ ಡಿ ಮೂಳೆಗಳ ರಕ್ಷಣೇಯನ್ನು ಮಾಡುತ್ತದೆ. ವಿಟಮಿನ್ ಡಿ ಕೊರತೆ ಆದರೆ ದೇಹದ ಇನ್ನಿತರ ಭಾಗದಲ್ಲಿಯೂ ಕೂಡ ನೋವು ಬರಲು ಶುರು ಆಗುತ್ತದೆ. ಅದಕ್ಕಾಗಿ ನೀವು ಒಳ್ಳೆಯ ಕ್ಯಾಲ್ಷಿಯಂ ಪೋಷಕಾಂಶ ಇರುವ ಆಹಾರಗಳನ್ನು ಸೇವನೆ ಮಾಡಬೇಕು. ಸೊಪ್ಪು ತರಕಾರಿ ಹಾಲು ಮೊಟ್ಟೆ ಮೀನು ಮಾಂಸ ಮೊಸರು ಬೆಣ್ಣೆ ಹಣ್ಣುಗಳು ಡ್ರೈ ಫ್ರೂಟ್ಸ್ ತಿನ್ನಬೇಕು. ಇದರಿಂದ ಮೂಳೆಗಳಿಗೆ ಶಕ್ತಿ ಬರುತ್ತದೆ. ಇನ್ನೂ ರಾತ್ರಿ ಮಲಗುವ ಮುನ್ನ ಬಾದಾಮಿ ನೆನೆಸಿ ಮರುದಿನ ಬೆಳಿಗ್ಗೆ ಸೇವನೆ ಮಾಡುವುದರಿಂದ ಮೂಳೆಗಳಿಗೆ ಶಕ್ತಿ ಬರುತ್ತದೆ ಅವುಗಳು ಬಲಗೊಳ್ಳುತ್ತವೆ. ನೋವು ಬರುವುದು ಕಡಿಮೆ ಆಗುತ್ತದೆ.
ಒಟ್ಟಾರೆ ನೋವು ನಿವಾರಣೆ ಆಗುತ್ತದೆ. ಇನ್ನೂ ನೋವು ಇರುವ ಜಾಗಕ್ಕೆ ಲವಂಗದ ಎಣ್ಣೆಯನ್ನು ಹಚ್ಚಬೇಕು. ಸ್ವಲ್ಪ ಸಮಯದವರೆಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಕಡಿಮೆ ಆಗುತ್ತದೆ. ಇನ್ನೂ ಅಡುಗೆ ಮನೆಯಲ್ಲಿ ಸಿಗುವ ಅರಿಶಿನವೂ ನೋವು ಕಡಿಮೆ ಮಾಡುತ್ತದೆ. ಅದಕ್ಕಾಗಿ ನೀವು ಅರಿಶಿನವನ್ನು ಸ್ವಲ್ಪ ತೆಗೆದುಕೊಂಡು ಒಂದು ಲೋಟ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿಯಬೇಕು. ಹೀಗೆ ಮಾಡುವುದರಿಂದ ಮಂಡಿ ನೋವು ಕೀಲು ನೋವು ಬೆನ್ನು ನೋವು ಎಲ್ಲವೂ ಉಪಶಮನ ಆಗುತ್ತದೆ. ಇದಲ್ಲದೆ ಒಂದು ಕಪ್ ನೀರಿನಲ್ಲಿ ಅರಿಶಿನವನ್ನು ಹಾಕಿ ಕಲಿಸಿ ಗಟ್ಟಿ ಪೇಸ್ಟ್ ಮಾಡಿಕೊಂಡು ನೋವು ಇರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಬಿಸಿ ನೀರಿನಲ್ಲಿ ತೊಳೆಯಿರಿ. ಇದರಿಂದ ನಿಮ್ಮ ಮಂಡಿ ನೋವು ನಿವಾರಣೆ ಆಗುತ್ತದೆ. ಇನ್ನೂ ಮೆಂತ್ಯೆ ಕಾಳು. ಇದು ಕೂಡ ಮಂಡಿ ನೋವಿಗೆ ದಿವ್ಯ ಔಷಧ. ಹೌದು ಅದಕ್ಕಾಗಿ ನೀವು ಈ ಮೆಂತ್ಯೆ ಕಾಳು ಪೇಸ್ಟ್ ಮಾಡಿಕೊಂಡು ನೋವು ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಅಥವಾ ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿ ಮರುದಿನ ನೆನೆಸಿದ ಮೆಂತ್ಯೆ ಕಾಳು ಸೇವನೆ ಮಾಡುತ್ತಾ ಬಂದರೆ ಖಂಡಿತವಾಗಿ ನೋವು ನಿವಾರಣೆ ಆಗುತ್ತದೆ. ಶುಭದಿನ.