ನಮಸ್ತೇ ಪ್ರಿಯ ಓದುಗರೇ, ಚಹಾ ಕಾಫಿ ಟೀ ಅಂದರೆ ಸಾಕು ಮುಗಿ ಬೀಳುತ್ತಾರೆ. ಪ್ರತಿಯೊಂದು ರಸ್ತೆ ಬೀದಿಯಲ್ಲಿ ನಮಗೆ ಟೀ ಕಾಫೀ ದೊರೆಯುತ್ತದೆ. ಒಂದು ಕಾಲದಲ್ಲಿ ನಮ್ಮ ಅಡುಗೆ ಮನೆಯಲ್ಲಿ ಕೇವಲ ಟೀ ಕಾಫಿ ಪುಡಿಗಳು ಇರುತ್ತಿದ್ದವು. ಆದರೆ ಈಗಿನ ಆಧುನಿಕ ಕಾಲದಲ್ಲಿ ಅನೇಕ ರೀತಿಯ ಟೀ ಪುಡಿಗಳು ರಾರಾಜಿಸುತ್ತವೆ. ಹಾಗೂ ಕೆಲವರು ಇದನ್ನು ವ್ಯಾಪಾರ ಕೂಡ ಮಾಡಿ ಕೊಂಡಿದ್ದಾರೆ. ಹಾಗೂ ದೊಡ್ಡ ದೊಡ್ಡ ಕಂಪನಿಗಳು ಈ ರೀತಿ ಟೀ ಪುಡಿಯ ವ್ಯಾಪಾರ ಮಾಡಿಕೊಂಡು ಅವುಗಳನ್ನು ಮಾರುಕಟ್ಟೆಗೆ ತಂದು ಜನರತ್ತ ಆಕರ್ಷಣೆಯನ್ನು ಮಾಡುತ್ತಿದ್ದಾರೆ. ಅದರಲ್ಲಿ ಗ್ರೀನ್ ಟೀ ಕೂಡ ಬಹಳ ಅದ್ಭುತವಾದ ಟೀ ಆಗಿದೆ. ಹಾಗೂ ಇತ್ತೀಚಿನ ದಿನಗಳಲ್ಲಿ ಇದು ಟ್ರೆಂಡ್ ಆಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಯಾವುದೇ ಹೋಟೆಲ್ ಗೆ ಹೋದರು ಕೂಡ ಕೆಲವೊಂದು ದೊಡ್ಡ ದೊಡ್ಡ ವ್ಯಕ್ತಿಗಳು ಸೆಲೆಬ್ರಿಟಿಗಳು ಈ ಗ್ರೀನ್ ಟೀ ಕುಡಿಯುವುದು ನೋಡಿಯೇ ಇರುತ್ತೀರಿ ಹಾಗೂ ಕೇಳಿಯೇ ಇರುತ್ತೀರಿ. ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ಎಷ್ಟೊಂದು ಉತ್ತಮ ಗೊತ್ತೇ ಗ್ರೀನ್ ಟೀ ಕುಡಿಯುವುದರಿಂದ ನಮ್ಮ ಆರೋಗ್ಯವೂ ವೃದ್ದಿ ಆಗುತ್ತದೆ. ಜೊತೆಗೆ ಇದನ್ನು ಕುಡಿಯುವುದರಿಂದ ನಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಹಾಗಾದರೆ ಬನ್ನಿ ಗ್ರೀನ್ ಟೀ ಏನೋ ಆರೋಗ್ಯಕ್ಕೆ ಒಳ್ಳೆಯದು ಆದರೆ ಸ್ನೇಹಿತರೇ ಇದನ್ನು ಕುಡಿಯುವಾಗ ನಾವು ಮಾಡುವ ಕೆಲವು ತಪ್ಪುಗಳು ಯಾವುವು ಅಂತ ತಿಳಿಯೋಣ ಬನ್ನಿ.
ಮೊದಲಿಗೆ ಹಲವಾರು ಜನರು ಈ ಗ್ರೀನ್ ಟೀ ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ಹೌದು ಆದರೆ ಇದು ತಪ್ಪು. ಗ್ರೀನ್ ಟೀ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಹೊಟ್ಟೆಯಲ್ಲಿ ಆಮ್ಲವನ್ನು ಸೃಷ್ಟಿ ಮಾಡುತ್ತದೆ. ಇದು ಹೊಟ್ಟೆ ನೋವಿಗೆ ಕಾರಣ ಆಗುತ್ತದೆ. ಮತ್ತು ಹೊಟ್ಟೆಯಲ್ಲಿ ಆಮ್ಲವು ಅಧಿಕವಾಗಿ ತುಂಬಿಕೊಂಡರೆ ವಾಕರಿಕೆ ಬರುವ ಸಾಧ್ಯತೆಗಳು ಕೂಡ ಇರುತ್ತವೆ. ಇನ್ನೂ ಯಾರಿಗೆ ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆ ಇರುತ್ತದೆಯೋ ಅಂಥವರು ಈ ಗ್ರೀನ್ ಟೀ ಅನ್ನು ಖಾಲಿ ಹೊಟ್ಟೆಯಲ್ಲಿ ಎಂದಿಗೂ ಕುಡಿಯಬೇಡಿ. ಗ್ರೀನ್ ಟೀ ಕುಡಿಯುವ ಮುನ್ನ ಹೊಟ್ಟೆಗೆ ಸ್ವಲ್ಪ ಏನಾದರೂ ತಿಂದು ಕುಡಿಯಬೇಕು. ಇನ್ನೂ ಯಾರು ಸಂತಾನ ಭಾಗ್ಯ ಬಯಸುವ ಮಹಿಳೆಯರು ಮತ್ತು ಅದಕ್ಕಾಗಿ ಪ್ಲಾನಿಂಗ್ ಮಾಡುವವರು ಮತ್ತು ಎದೆ ಹಾಲುಣಿಸುವ ತಾಯಂದಿರು ಈ ಗ್ರೀನ್ ಟೀ ಅನ್ನು ಕುಡಿಯಬಾರದು. ತದ ನಂತರ ಈ ಗ್ರೀನ್ ಟೀ ಬ್ಯಾಗ್ ಅನ್ನು ಬಳಸಿದ್ದು ಮತ್ತೇ ಮತ್ತೆ ಬಳಕೆ ಮಾಡಬಾರದು. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಒಂದು ಬಾರಿ ಬಳಕೆ ಮಾಡಿದ ಗ್ರೀನ್ ಟೀ ಬ್ಯಾಗ್ ಅನ್ನು ಎಂದಿಗೂ ಬಳಸಬೇಡಿ.
ಇನ್ನೂ ಗ್ರೀನ್ ಟೀ ದಿನಕ್ಕೆ ಕೇವಲ ಎರಡು ಬಾರಿ ಮಾತ್ರ ಕುಡಿಯಬೇಕು. ಎರಡು ಬಾರಿಕ್ಕಿಂತ ಅಧಿಕವಾಗಿ ಕುಡಿಯಬೇಡಿ. ಇಂಥಹ ಹವ್ಯಾಸಗಳು ಇದ್ದರೆ ಈಗಲೇ ಬಿಟ್ಟು ಬಿಡಿ. ಇದರಿಂದ ದೇಹದ ಉಷ್ಣತೆ ಹೆಚ್ಚಾಗಿ ಬೇರೆ ರೀತಿಯ ಸಮಸ್ಯೆಗಳು ಬರಬಹುದು. ಇನ್ನೂ ಯಾರಿಗೆ ಕಬ್ಬಿಣ ಅಂಶ ಕಡಿಮೆ ಇರುತ್ತದೆಯೋ ಅವರು ಈ ಗ್ರೀನ್ ಟೀ ಇಂದ ದೂರವಿರುವುದು ಒಳ್ಳೆಯದು. ಹೆಚ್ಚಿನ ಹೆಣ್ಣು ಮಕ್ಕಳು ಈ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂಥವರು ಈ ಗ್ರೀನ್ ಕುಡಿಯಬಾರದು. ಇಲ್ಲವಾದರೆ ಮಿತಿಯಾಗಿ ಕುಡಿಯಬೇಕು. ಇನ್ನೂ ಕೆಲವರು ಏನು ಮಾಡುತ್ತಾರೆ ಅಂದರೆ ಗ್ರೀನ್ ಟೀ ನಲ್ಲಿ ಜೇನುತುಪ್ಪ ಅಥವಾ ಸಕ್ಕರೆ ಬೆರೆಸಿಕೊಂಡು ಕುಡಿಯುವ ಅಭ್ಯಾಸ ಇರುತ್ತದೆ. ಅಂಥವರು ಈ ತಪ್ಪು ಮಾಡಬಾರದು. ಗ್ರೀನ್ ಟೀ ಅನ್ನು ಹಾಗೆಯೇ ಕುಡಿಯಬೇಕು. ಇನ್ನೂ ಗ್ರೀನ್ ಟೀ ಬಿಸಿ ಇರುವಾಗಲೇ ಕುಡಿಯಬೇಕು. ಅದನ್ನು ತಣ್ಣಗಾದ ಮೇಲೆ ಕುಡಿಯಬಾರದು. ಗ್ರೀನ್ ಟೀ ನಿಮ್ಮ ದೇಹಕ್ಕೆ ಆದರೆ ಮಾತ್ರ ಕುಡಿಯಿರಿ. ಆರೋಗ್ಯವಾಗಿರಿ. ಶುಭದಿನ.