ಮರಸೇಬು ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿಯಬೇಕು!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಮರಸೇಬು ಅಥವಾ ಪಿಯರ್ಸ್ ಅಂತ ಕರೆಸಿಕೊಳ್ಳುವ ಈ ಹಣ್ಣಿನ ಬಗ್ಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ. ಈ ಹಣ್ಣು ನೋಡಲು ಅಚ್ಚುಕಟ್ಟಾಗಿ ಪೇರಳೆ ಹಣ್ಣು ಹಾಗೂ ಸೇಬು ಹಣ್ಣಿನ ಆಕಾರದಲ್ಲಿ ಕಾಣುತ್ತದೆ. ಆದರೆ ಇದು ರುಚಿಯಲ್ಲಿ ಮತ್ತು ಗುಣದಲ್ಲಿ ಬೇರೆಯೇ ಆಗಿರುತ್ತದೆ. ಪ್ರಾಚೀನ ಕಾಲದಿಂದಲೂ ಉಪಯೋಗಿಸುತ್ತಿದ್ದಾರೆ. ಇದರ ತವರು ಮನೆ ಯುರೋಪ್ ಎಂದು ತಿಳಿದು ಬಂದಿದೆ. ಉಷ್ಣ ವಲಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಈ ಹಣ್ಣು. ಈ ಹಣ್ಣಿನಲ್ಲಿ ಇರುವ ಪೋಷಕಾಂಶಗಳನ್ನು ತಿಳಿಯುವುದಾದರೆ, ನಾರಿನಾಂಶ ಕಾರ್ಬೋಹೈಡ್ರೇಟ್ ಪ್ರೊಟೀನ್ ಕ್ಯಾಲೋರಿ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಸತು ರಂಜಕ ವಿಟಮಿನ್ ಸಿ ಕೆ ಕೂಡ ಇದೆ. ಇದು ಗಟ್ಟಿಯಾಗಿ ಇರುತ್ತದೆ. ಇದರಲ್ಲಿ ಸಕ್ಕರೆಯ ಅಂಶ ಕಡಿಮೆ ಇರುತ್ತದೆ. ಇದು ಯಾವಾಗ್ಲೂ ಮೃದು ಆಗುವುದಿಲ್ಲ. ತಿನ್ನುವುದಕ್ಕೆ ಒಗರು ಒಗರಾಗಿ ಇರುತ್ತದೆ.

 

ಆದರೆ ಇದು ಹೃದಯದ ಆರೋಗ್ಯವನ್ನು ಸದೃಢವಾಗಿರಿಸಲು ಸಹಾಯಕವಾಗಿದೆ. ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ಈ ಹಣ್ಣಿನ ಸೇವನೆ ಉತ್ತಮವಾಗಿದೆ. ಜೊತೆಗೆ ಇದರಲ್ಲಿ ನಾರಿನಾಂಶ ಹೇರಳವಾಗಿ ಇರುವುದರಿಂದ ಯಾರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ ಅಂಥವರಿಗೆ ಇದು ದಿವ್ಯ ಔಷಧವಾಗಿದೆ. ಮಲಬದ್ಧತೆ ಇಂದ ಪೀಡಿತ ಆಗಿರುವ ಜನರು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಖಂಡಿತವಾಗಿ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಮೇಲೆ ಹೇಳಿದಂತೆ ಮರಸೇಬು ಹಣ್ಣಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಎ, ಬಿ ಮತ್ತು ಸಿ ಜೀವಸತ್ವಗಳು ಕಂಡು ಬರುತ್ತವೆ. ಇವು ನಿಮ್ಮ ಆರೋಗ್ಯ ಸುಧಾರಣೆಗೆ ಅವಶ್ಯಕವಾಗಿದೆ. ಇನ್ನೂ ಮೂಲವ್ಯಾಧಿ ಸಮಸ್ಯೆಯನ್ನು ಹೊಂದಿರುವವರು ಇದನ್ನು ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆ ಆಗುತ್ತದೆ. ಏಕೆಂದರೆ ಈ ಹಣ್ಣಿನಲ್ಲಿ ಇರುವ ನಾರಿನಾಂಶ ವೇ ಕಾರಣ. ಅದಕ್ಕಾಗಿ ಮಲಬದ್ಧತೆ ಹಾಗೂ ಮೂಲವ್ಯಾಧಿ ಗೆ ಉಪಶಮನ ಈ ಮರಸೇಬು ಅಂತ ಹೇಳಿದರೆ ತಪ್ಪಾಗಲಾರದು.

 

ಮರಸೇಬು ಜೀರ್ಣಕ್ರಿಯೆಗೆ ಸಹಾಯಕ. ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅಧಿಕ ನೀರಿನ ಅಂಶ ಮತ್ತು ನಾರಿನಾಂಶವಿರುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಗೆ ಸಹಾಯಕವಾಗಿದೆ. ಜತೆಗೆ ದೇಹದ ತೂಕ ನಿಯಂತ್ರಣಕ್ಕೆ ಸಹಾಯಕ. ಇನ್ನೂ ನೀವು ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ ಈ ಮರಸೇಬು ಧಾರಾಳವಾಗಿ ಸೇವನೆ ಮಾಡಬಹುದು. ಇದು ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಮರಸೇಬು ಹಣ್ಣು ಫೈಬರ್​ನಿಂದ ಸಮೃದ್ಧವಾಗಿದೆ. ಆಹಾರ ಮತ್ತು ಪೌಷ್ಟಿಕಾಂಶ ಮಂಡಳಿಯ ಪ್ರಕಾರ, ಒಂದು ಮರಸೇಬು 6 ಗ್ರಾಂ ನಷ್ಟು ಫೈಬರ್ ಅಂಶವನ್ನು ದೇಹಕ್ಕೆ ನೀಡುತ್ತದೆ. ಜೀರ್ಣಕ್ರಿಯೆ ನಿಧಾನವಾಗುವುದರಿಂದ ಹೊಟ್ಟೆ ಬಹುಬೇಗ ತುಂಬುತ್ತದೆ. ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಈ ಹಣ್ಣು ಹೃದಯದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿಸುತ್ತದೆ. ಮತ್ತು ಹೃದ್ರೋಗದ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.ವಿವಿಧ ರೋಗಗಳಿಂದ ಬಚಾವ್ ಮಾಡುತ್ತದೆ. ಮತ್ತು ರೋಗಗಳು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ. ಹಾಗೆಯೇ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

Leave a Reply

Your email address will not be published. Required fields are marked *