ಈ ದೇವಸ್ಥಾನವು ತಮಿಳುನಾಡಿನ ತಂಜಾವೂರ್ ನಿಂದ ಸುಮಾರು 26 ಕಿಲೋಮೀಟರ್ ದೂರದಲ್ಲಿರುವ ತಂಜಾವೂರು ಮತ್ತು ತಿರುವರೂರಿನ ಮಾರ್ಗವಾಗಿ ಚಲಿಸಿದಾಗ ಕೊಯಿಲ್ ವೆನ್ನಿ ಎಂಬ ಹಳ್ಳಿಯು ಸಿಗುತ್ತದೆ. ಈ ಗ್ರಾಮದಲ್ಲಿ ಒಂದು ಶಿವನ ದೇವಸ್ಥಾನ ಇದೆ. ಇದು ಮಧುಮೇಹ ಖಾಯಿಲೆಯನ್ನು ಕಡಿಮೆ ಮಾಡುವುದು ಅಥವಾ ಗುಣಪಡಿಸುವುದು ಎಂದು ಹೇಳಲಾಗುತ್ತದೆ.
ಸಾವಿರ ವರ್ಷಗಳಿಗೂ ಪುರಾತನ ದೇವಾಲಯ ಇದಾಗಿದೆ. ಇಲ್ಲಿ ದೇವಿಯನ್ನು ಸರ್ವಾಂಗ ಸುಂದರಿ ಎಂಬ ಹೆಸರಿನಿಂದ ಆರಾಧಿಸಲಾಗುತ್ತದೆ. ಹಾಗು ಶಿವನನ್ನು ವೆನ್ನಿ ಕರುಂಬೇಶ್ವರರ್ ಎಂದು ಕರೆಯಲಾಗುತ್ತದೆ. ತಮಿಳಿನಲ್ಲಿ ಕರುಂಬು ಎಂದರೆ ಕಬ್ಬು ಎಂದರ್ಥ. ಇಲ್ಲಿನ ಶಿವನಿಗೆ ಕಬ್ಬಿನ ಹಾಲಿನ ಅಭಿಷೇಕ ಮತ್ತು ಅಲಂಕಾರಕ್ಕೆ ಕಬ್ಬಿನ ಜಲ್ಲೆಯನ್ನು ಭಕ್ತರು ಸಮರ್ಪಿಸುತ್ತಾರೆ.
ಇಲ್ಲಿ ಭಕ್ತರು ಮಧುಮೇಹದ ಪರಿಣಾಮವನ್ನು ಕಡಿಮೆಗೊಳಿಸಲು ರವೆ ಮತ್ತು ಸಕ್ಕರೆ ಮಿಶ್ರಣದ ಕೇಸರಿಬಾತ್ ಅನ್ನು ಶಿವನಿಗೆ ಅರ್ಪಿಸಿ ಪ್ರಾರ್ಥಿಸಲಾಗುತ್ತದೆ. ನಂತರ ಈ ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿ ದೇವಸ್ಥಾನದ ಸುತ್ತಲೂ ಇರುವ ಇರುವೆಗಳಿಗೆ ನೀಡಲಾಗುತ್ತದೆ. ಹೀಗೆ ಪರಿಹಾರ ಕಂಡ ಭಕ್ತರ ದಂಡೇ ಇದೆ. ಈ ದೇವಸ್ಥಾನವು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ. ಮತ್ತು ಸಂಜೆ 5:30 ರಿಂದ 7:30 ವರೆಗೆ ತೆರೆದಿರುತ್ತದೆ.
ದಾಸವಾಳದ ಎಲೆಗಳನ್ನು ಅಕ್ಕಿಯೊಂದಿಗೆ ಅರೆದು ದೋಸೆ ಮಾಡಿ ತಿಂದರೆ ಕುರದ ನೋವು ಕಡಿಮೆಯಾಗುತ್ತದೆ. ಆಗತಾನೇ ಏಳುತ್ತಿರುವ ಕುರಕ್ಕೆ ಶುದ್ಧ ಜೇನುತುಪ್ಪವನ್ನು ಹತ್ತಿಯಲ್ಲಿ ಅದ್ದಿ ಕುರದ ಮೇಲಿರಿಸುವುದು. ಇದು ಎಲ್ಲಾ ಬಾವುಗಳ ಮೇಲೂ ಉಪಯೋಗವಾಗುತ್ತದೆ. ಉದ್ದಿನ ಬೆಳೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನುಣ್ಣಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ. ಮರುದಿನ ನಿಮ್ಮ ಕುರ ಬೆಳೆದು ಒಡೆದುಬಿಡುತ್ತದೆ. ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಮಾಯವಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.