ಈ ದೇವಾಲಯವು ತನ್ನದೆಯಾದ ವಿಶೇಷತೆ ಹಾಗು ಮಹತ್ವವನ್ನು ಹೊಂದಿದೆ. ಈ ದೇವಾಲಯ ಇರೋದಾದ್ರೂ ಎಲ್ಲಿ, ಈ ದೇವಾಲಯದ ಹೆಸರೇನು, ವಿಶೇಷತೆ ಏನು, ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಐತಿಹಾಸಿಕ ಹಿನ್ನಲೆ ಹೊಂದಿರುವ ಏಕೈಕ ದೇವಾಲಯವಿದು. ಈ ದೇವಾಲಯಕ್ಕೆ ”ಮರೋಳಿ ಶ್ರೀ ಸೂರ್ಯ ನಾರಾಯಣ ದೇವಾಲಯ” ಎಂಬುದಾಗಿ ಕರೆಯಲಾಗುತ್ತದೆ. ಈ ದೇವಾಲಯ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ಮತ್ತು ಬೆಳ್ತಂಗಡಿಯ ನಾರಾವಿಯಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ಥಾನವಿದೆ.
ಈ ದೇವಾಲಯ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ, ಮದುವೆಯಾಗಿ ಬಹುಕಾಲದವರೆಗೆ ಮಕ್ಕಳು ಆಗದೆ ಇದ್ರೆ ಈ ಸೂರ್ಯ ನಾರಾಯಣನ ಸನ್ನಿದಿಗೆ ಬಂದು ಪೂಜೆ ಸಲ್ಲಿಸಿ ಬೇಡಿ ಕೊಂಡರೆ ಮಕ್ಕಳಾಗುತ್ತವೆ ಅನ್ನೋದು ಇಲ್ಲಿಯ ಭಕ್ತರ ನಂಬಿಕೆಯಾಗಿದೆ ಅಷ್ಟೇ ಅಲ್ಲದೆ ಈ ರೀತಿ ಮಕ್ಕಳ್ಳನ್ನು ಪಡೆದ ಅದೆಷ್ಟೋ ಉದಾರಣೆಗಳಿವೆ. ದೈಹಿಕವಾಗಿ ಸಮಸ್ಯೆ ಇದ್ರೆ ನಿವಾರಣೆಯಾಗುತ್ತವೆ ಅನ್ನೋದು ಸ್ಥಳೀಯ ಭಕ್ತರ ಮಾತಾಗಿದೆ.
ತಲೆನೋವು, ದೃಷ್ಟಿ ದೋಷ ಇರುವವರು ಸಹ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಪರಿಹಾರವನ್ನು ಕಾಣಬಹುದಾಗಿದೆ. ಇಲ್ಲಿ ಪ್ರಾರ್ಥಿಸಿ ಕೊಂಡವರಲ್ಲಿ ಯಾವುದಾದರು ವಿಶೇಷ ಅಭಿವ್ಯಕ್ತಿ ಸಾಮಥ್ಯವಿದ್ದಲ್ಲಿ ಅದು ನೂರುಪಟ್ಟು ವೃದ್ಧಿಸುತ್ತದೆ ಎಂಬ ಪ್ರತೀತಿಯಿದೆ.
ದೇವಸ್ಥಾನದ ವಿಳಾಸ: ಶ್ರೀ ಸೂರ್ಯನಾರಾಯಣ ದೇವಸ್ಥಾನ, ಮರೋಳಿ, ಮಂಗಳೂರು 575 005 ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ ಪೂಜಾ ಸಮಯ: ಬೆಳಿಗ್ಗೆ : 6:00 ಗಂಟೆಗೆ, ಮದ್ಯಾಹ್ನ : 12:00 ಗಂಟೆಗೆ, ಸಾಯಂಕಾಲ : 8:00 ಗಂಟೆಗೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.