ರಾತ್ರಿ ಮಲುಗುವಾಗ ಹುರಿದ ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ನಿಮ್ಮಲ್ಲಿ ಯಾವುದೇ ರೀತಿಯ ದೋಷಗಳು ಬರುವುದಿಲ್ಲ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಾವು ಅಡುಗೆಯನ್ನು ಮಾಡಿದರೆ ಅದರಲ್ಲಿ ಯಾವುದು ಕಡಿಮೆಯಾದರೂ ಸರಿ ಇದ್ದರೂ ಇಲ್ಲದಿದ್ದರೂ ಕೂಡ ಮೂಗು ಮುರಿಯುತ್ತೇವೆ. ಆಹಾರದಲ್ಲಿ ಹುಳಿ ಉಪ್ಪು ಖಾರ ಇದ್ದರೆ ಮಾತ್ರ ತಿನ್ನಲು ಬಲು ಇಷ್ಟವಾಗುತ್ತದೆ. ಇಲ್ಲವಾದರೆ ಅದನ್ನು ಬಾಯಲ್ಲಿ ಇಡಲು ಕೂಡ ಆಗುವುದಿಲ್ಲ. ಮಸಾಲೆ ಪದಾರ್ಥಗಳು ಅಂದರೆ ನಮಗೆ ಮೊದಲಿಗೆ ನೆನಪಿಗೆ ಬರುವುದು ಬೆಳ್ಳುಳ್ಳಿ. ಮೊದಲಿನ ಕಾಲದ ಜನರ ಆರೋಗ್ಯಕರ ಗುಟ್ಟನ್ನು ಅಥವಾ ರಹಸ್ಯವನ್ನು ತಿಳಿದುಕೊಳ್ಳಬಹುದು. ಹಾಗೆಯೇ ಅವರು ಅನುಸರಿಸುವ ಆಹಾರ ಕ್ರಮಗಳ ಪದ್ಧತಿಯನ್ನು ಕೂಡ ರೂಢಿ ಮಾಡಿಕೊಳ್ಳಬಹುದು. ಇದರಿಂದ ನಮ್ಮ ಅರೋಗ್ಯದ ಮೇಲೆ ಯಾವುದೇ ಕೆಟ್ಟ ಪ್ರಭಾವ ಬೀರುವುದಿಲ್ಲ. ಪ್ರತಿನಿತ್ಯ ನಾವು ಅಡುಗೆಯಲ್ಲಿ ಬಳಕೆ ಮಾಡುವ ಸಾಂಬಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಕೂಡಾ ಒಂದಾಗಿದೆ. ಹೌದು ಇದು ಬಹು ವರ್ಷಗಳ ಹಿಂದಿನಿಂದಲೂ ಬಳಕೆಯಲ್ಲಿದೆ. ಮತ್ತು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮತ್ತು ಆರೋಗ್ಯದ ರಕ್ಷಣೆಯನ್ನು ಮಾಡುವಲ್ಲಿ ಬಹಳ ಸಹಕಾರಿಯಾಗಿದೆ. ಅದರಲ್ಲೂ ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಹಲವಾರು ಬಗೆಯ ಪೋಷಕಾಂಶಗಳನ್ನು ಪಡೆಯಬಹುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅಡಗಿವೆ.

ನಿತ್ಯವೂ ಇದನ್ನು ಸೇವನೆ ಮಾಡುತ್ತಾ ಬಂದರೆ ಆರೋಗ್ಯಕ್ಕೆ ನೂರೆಂಟು ಲಾಭಗಳು. ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಲಿದ್ದು, ಆರೋಗ್ಯಕ್ಕೆ ಹಲವಾರು ರೀತಿಯ ಲಾಭವನ್ನು ನೀಡುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಖನಿಜಾಂಶಗಳು, ವಿಟಮಿನ್ ಗಳು, ಮ್ಯಾಗ್ನಿಷಿಯಂ ಕ್ಯಾಲ್ಸಿಷಿಯಮ ಮತ್ತು ಜಿಂಕ್ ಐರನ್ ಕಾಫರ್ ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಣಗಳಿವೆ. ಇದು ಪೌಷ್ಟಿಕಾಂಶಗಳ ಮಹಾಪೂರವೇ ಇದರಲ್ಲಿ ಹುದುಗಿ ಹೋಗಿದೆ. ಇಷ್ಟೆಲ್ಲಾ ಪೋಷಕಾಂಶಗಳನ್ನು ಮತ್ತು ಆರೋಗ್ಯಕರ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಹುರಿದು ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಉಂಟಾಗುತ್ತವೆ ಅಂತ ಇಂದಿನ ಲೇಖನದಲ್ಲಿ ತಿಳಿಯೋಣ. ಮೊದಲಿಗೆ ರಾತ್ರಿ ಮಲಗುವಾಗ ನೀವು ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಮರುದಿನ ಬೆಳಿಗ್ಗೆ ನಿಮಗೆ ಸರಿಯಾಗಿ ಮಲ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ ಇದರಿಂದ ದೇಹದಲ್ಲಿ ಅಡಗಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಈ ಹುರಿದ ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಉತ್ತಮ ಪ್ರಮಾಣದ ಸಿಲಿನಿಯಂ ಕೂಡ ಇದ್ದು, ವೈರಸ್ ಗಳಿಂದ ಎದುರಾಗುವ ಸೋಂಕುಗಳಿಂದ ರಕ್ಷಣೆ ನೀಡಲಿದೆ.

ಮತ್ತು ರಾತ್ರಿ ಮಲಗುವಾಗ ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಇದರಿಂದ ಹೃದಯವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನಮ್ಮ ಹೃದಯಕ್ಕೆ ಯಾವಾಗಲೂ ಹಾನಿಕರಕವೇ. ಬೆಳ್ಳುಳ್ಳಿ ಸೇವನೆ ಇಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಇನ್ನೂ ಯಾರಿಗೆ ಹಸಿವು ಆಗುವುದಿಲ್ಲ ತಿಂದ ಆಹಾರವು ಜೀರ್ಣ ಆಗುವುದಿಲ್ಲ. ಅಂಥವರು ಈ ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡಿ ಇದರಿಂದ ನಿಮ್ಮ ಹಸಿವು ಹೆಚ್ಚುತ್ತದೆ ಮತ್ತು ಜೀರ್ಣಕ್ರಿಯೆ ಸರಿಯಾಗಿ ಕೆಲಸ ಮಾಡುತ್ತದೆ. ಮತ್ತು ಇದರ ಮುಖ್ಯ ವಿಶೇಷತೆ ಅಂದರೆ ಇದು ಸೋಮಾರಿತನವನ್ನು ದೂರ ಮಾಡುತ್ತದೆ ಮತ್ತು ಶರೀರಕ್ಕೆ ಒಂದು ವಿಶೇಷವಾದ ಶಕ್ತಿಯನ್ನು ನೀಡುತ್ತದೆ ಮತ್ತು ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಸಾಯುತ್ತವೆ. ಇನ್ನೂ ಹುರಿದ ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆಯು ಸರಾಗವಾಗಿ ನಡೆಯುತ್ತದೆ. ಮತ್ತು ದೇಹದಲ್ಲಿ ಶೇಖರಣೆ ಆದ ಬೊಜ್ಜು ಕೂಡ ಕರಗುತ್ತದೆ. ಮುಖ್ಯವಾಗಿ ಈ ಹುರಿದ ಬೆಳ್ಳುಳ್ಳಿ ಎಸಳು ತಿನ್ನುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ಮತ್ತು ವೀರ್ಯಾಣುಗಳ ಕೊರತೆ ಅವರಲ್ಲಿ ಕಾಣುವುದಿಲ್ಲ. ಅವರು ಬೇಗನೆ ಸಂತಾನ ಭಾಗ್ಯ ಪಡೆಯಬಹುದು. ಅಷ್ಟೇ ಅಲ್ಲದೇ ಶೀತ ನೆಗಡಿ ಕೆಮ್ಮು ಸಮಸ್ಯೆಗಳಿಗೆ ರಾಮಬಾಣವಾಗಿದೆ ಈ ಹುರಿದ ಬೆಳ್ಳುಳ್ಳಿ.

Leave a Reply

Your email address will not be published. Required fields are marked *