ಟೊಮೆಟೊ ಬೊಜ್ಜು ನಿರೋಧಕ ಶಕ್ತಿ ಹೊಂದಿದೆ. ಪ್ರತಿ ಮುಂಜಾನೆ ತಿಂಡಿಗೂ ಮುನ್ನ ಒಂದೆರಡು ಟೊಮೆಟೊ ತಿಂದು ಬೊಜ್ಜನ್ನು ಕರಗಿಸಿಕೊಳ್ಳಬಹುದು. ಟೊಮೆಟೊ ಪ್ರತಿನಿತ್ಯ ಸೇವಿಸಿದರೆ ಹೃದಯವನ್ನು, ಲಿವರನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಸೂರ್ಯ ಕಿರಣಗಳಿಂದಾಗುವ ಚರ್ಮದ ತೊಂದರೆಗಳನ್ನು ಕೂಡ ಟೊಮೆಟೊ ದೂರವಿಡುತ್ತದೆ. ಅಲ್ಲದೆ ಗರ್ಭಿಣಿಯರು ಟೊಮೆಟೊವನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದರೆ ಶಿಶುವನ್ನು ನರ ಸಂಬಂಧ ಕಾಯಿಲೆಯಿಂದ ದೂರವಿಡಲು ನೆರವಾಗುತ್ತದೆ. ಟೊಮೆಟೊದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೇಸಿಯಂ ಮುಂತಾದ ಲವಣಗಳಿವೆ. ವಿಟಮಿನ್ ಸಿ ಮತ್ತು ಎ ಅಂಶವಿದೆ.
ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆದು: ಟೊಮೆಟೊ ರಸ ಹೊಟ್ಟೆಯನ್ನು ಸ್ವಚ್ಛ ಮಾಡುತ್ತದೆ. ಅಜೀರ್ಣ, ವಾಯು, ಮಲಬದ್ಧತೆ ಟೊಮೆಟೊ ನಿವಾರಿಸುತ್ತದೆ. ಟೊಮೆಟೊದಲ್ಲಿ ಕಬ್ಬಿಣ ಅಂಶವಿರುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಇದು ಒಳ್ಳೆಯ ಮದ್ದಾಗಿದೆ. ಟೊಮೆಟೊವನ್ನು ಹಸಿಯಾಗಿ ತಿನ್ನುವುದು ಯೋಗ್ಯ. ಊಟದ ಹೊತ್ತಿಗೆ ಸವತೆ, ಗಜ್ಜರಿ, ಈರುಳ್ಳಿ ಜೊತೆಗೆ ಟೊಮೆಟೊ ತಿನ್ನುವುದು ಉತ್ತಮ.
ಕ್ಯಾನ್ಸರ್ ಗೆ ಮದ್ದು: ಟೊಮೆಟೊ ಮತ್ತು ಟೊಮೆಟೊ ರಸ ಉತ್ಪಾದಿಸುವ ಜೀವಕೋಶಗಳು, ಕ್ಲೋನಿಂಗ್ ಅನ್ನು ತಡೆಯುತ್ತವೆ. ಅದರಿಂದಾಗಿ ಹೊಟ್ಟೆ ಕ್ಯಾನ್ಸರ್ ಬರುವುದಿಲ್ಲ. ಟೊಮೆಟೊ, ಕ್ಯಾನ್ಸರ್ ಜೀವಕೋಶಗಳನ್ನು ಸಾಯಿಸಲು ನೆರವಾಗುತ್ತದೆ. ಅಲ್ಲದೆ ಇದರಲ್ಲಿ ಲೈಕೊಪೇನ್ ಹಾಗೂ ಬೇಟಾ ಕ್ಯಾರೊಟೊನ್ ಅಂಶ ಹೆಚ್ಚಿದ್ದು, ಇದು ಕ್ಯಾನ್ಸರ್ ತಡೆಗಟ್ಟುತ್ತದೆ.
ಕರುಳಿನ ಕ್ಯಾನ್ಸರ್ ಗೆ ಇದೊಂದು ಉತ್ತಮ ಮನೆ ಮದ್ದಾಗಿದೆ. ಜೊತೆಗೆ ಕ್ಯಾನ್ಸರ್ ಸೆಲ್ಸ್ ಟ್ರಾನ್ಸ್‌ಫರ್ ಪ್ರಕ್ರಿಯೆ ಮೇಲೂ ಇದು ಪರಿಣಾಮ ಬೀರುವುದರಿಂದ, ಅವು ತಾನಾಗಿಯೇ ಸಾಯುತ್ತವೆ. ಆದರಿಂದ ವಿಜ್ಞಾನಿಗಳು ಈ ಬಗ್ಗೆ ಇನ್ನಷ್ಟು ಸಂಶೋಧನೆ ಮಾಡಬೇಕು ಎಂದಿದ್ದಾರೆ. ಸ್ತನ ಕ್ಯಾನ್ಸರನ್ನು ತಡೆಯಬಲ್ಲ ಶಕ್ತಿ ಇದೆ. ಕ್ಯಾನ್ಸರ ನಿರೋಧಕವಾದ ಎಂಟಿ ಒಕ್ಸಿಡೆಂಟ್ ಲೈಕೋಪಿನ ಅಂಶ ಟೊಮೆಟೊದಲ್ಲಿ ಹೆಚ್ಚಿದೆ.
ಹೃದಯ ಆರೋಗ್ಯಕ್ಕೆ ಉತ್ತಮ: ಟೊಮೆಟೊದಲ್ಲಿ ಸೇವನೆ ಹೃದಯ ಆರೋಗ್ಯಕ್ಕೆ ಉತ್ತಮವಾಗಿದ್ದು, ಇದರಲ್ಲಿ ಇರುವ ವಿಟಮಿನ್ ಸಿ, ಪೊಟಾಷಿಯಂ ಹಾಗೂ ಫೈಬರ್ ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ಟೊಮೆಟೊ ಸೇವಿಸಿದರೆ ಹೃದಯಾಘಾತ ಹಾಗೂ ಇತರೆ ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದು.
ಡಯಾಬಿಟಿಸ್ ಮತ್ತು ಕಣ್ಣಿನ ಆರೋಗ್ಯಕ್ಕೆ ಒಳ್ಳೆದು: ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿರುವವರು ನಿತ್ಯ ಫೈಬರ್ ಅಂಶವುಳ್ಳ ಆಹಾರ ಸೇವನೆ ಮಾಡುವುದು ಅಗತ್ಯ. ಹೀಗಾಗಿ ಟೊಮೆಟೋದಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು, ಇದರ ಸೇವನೆ ದೇಹಕ್ಕೆ ಫೈಬರ್ ಒದಗಿಸುತ್ತದೆ. ಅಲ್ಲದೆ ಇದರಲ್ಲಿ ಲೈಕೊಪೇನ್, ಬೇಟಾ ಕ್ಯಾರೊಟಿನ್ ಹಾಗೂ ಲುಟೇನ್ ಅಂಶ ಹೆಚ್ಚಿದು, ಇದು ಕಣ್ಣಿನ ಆರೋಗ್ಯಕ್ಕೂ ಉತ್ತಮವಾಗಿದೆ.
ತ್ವಚೆಯ ಆರೋಗ್ಯಕ್ಕೆ ಟೊಮೆಟೊ: ತ್ವಚೆ, ಕೂದಲು, ಉಗುರಿನ ಆರೋಗ್ಯಕ್ಕೆ ದೇಹದಲ್ಲಿರುವ ಕೊಲಾಜಿನ್ ಅಂಶ ಪ್ರಮುಖ ಕಾರ್ಯ ನಿರ್ವಹಿಸುತ್ತದೆ. ಈ ಕೊಲಾಜಿನ್ ದೇಹದಲ್ಲಿ ಉತ್ಪತ್ತಿಯಾಗಲೂ ವಿಟಮಿನ್ ಸಿ ಅಗತ್ಯ. ಒಂದು ವೇಳೆ ವಿಟಮಿನ್ ಸಿ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗದಿದ್ದರೆ, ಚರ್ಮದ ಸಮಸ್ಯೆ ಬರುತ್ತದೆ. ಆದ್ದರಿಂದ ಟೊಮೆಟೋದಲ್ಲಿ ವಿಟಮಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಇದನ್ನು ಮಿತವಾಗಿ ಸೇವಿಸಿದರೆ, ಇದು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕಾರಿಯಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.