ಅಸ್ತಮಾ ಹಾಗು ಸಕ್ಕರೆ ಕಾಯಿಲೆಗೆ ಉತ್ತಮ ಮನೆಮದ್ದು ಬೆಂಡೆಕಾಯಿ

ಆರೋಗ್ಯ

ತರಕಾರಿಗಳು ಮತ್ತು ಹಣ್ಣುಗಳು ನಮಗೆ ಆರೋಗ್ಯದ ದೃಷ್ಟಿಯಿಂದ ಬಹಳ ಅವಶ್ಯಕ. ಯಾಕೆಂದರೆ ಇವು ಅನೇಕ ಪೋಷಕಾಂಶಗಳನ್ನು ಹೊಂದಿದೆ. ತರಕಾರಿಗಳಲ್ಲಿ ರೋಗನಿರೋಧಕ ಜೀವಸತ್ವಗಳು ಮತ್ತು ಖನಿಜ ಅಂಶಗಳು ಹೇರಳವಾಗಿದ್ದು ಇವು ಆರೋಗ್ಯ ಕಾಪಾಡಲು ಸಹಾಯಕಾರಿಯಾಗಿದೆ. ಪ್ರಾಚೀನ ಕಾಲದಲ್ಲಿ, ಜನರು ವಿವಿಧ ಕಾಯಿಲೆಗಳನ್ನು ಗುಣಪಡಿಸಲು ತರಕಾರಿಯಿಂದ ತಯಾರಿಸಲಾದ ಹಲವು ಬಗೆಯ ಮದ್ದುಗಳನ್ನು ಬಳಸುತ್ತಿದ್ದರು, ಇಂದಿಗೂ ಕೂಡ ಆಯುರ್ವೇದ ಔಷಧಿಗಳಲ್ಲಿ ವಿವಿಧ ತರಕಾರಿಗಳ ಸಾರಗಳನ್ನು ಉಪಯೋಗಿಸಿ ಕೆಲವು ಕಾಯಿಲೆಗಳನ್ನು ದೂರಗೊಳಿಸುವಲ್ಲಿ ಉಪಯೋಗಿಸಲ್ಪಡುತ್ತದೆ. ಇತ್ತೀಚೆಗೆ ಬೆಂಡೆಕಾಯಿ, ಅಂದರೆ ಲೇಡೀಸ್ ಫಿಂಗರ್ ಅನೇಕ ಆರೋಗ್ಯಕಾರಿ ಅಂಶವಿರುವಂತಹ ತರಕಾರಿ ಎಂದು ಪರಿಗಣಿಸಲಾಗಿದೆ. ಈ ತರಕಾರಿಯಲ್ಲಿ ಅನೇಕ ಬಗೆಯ ಉಪಯೋಗಗಳಿವೆ. ಬೆಂಡೆ ಕಾಯಿಯ ಬಗ್ಗೆ ನಮಗೆ ಗೊತ್ತಿಲ್ಲದೇ ಇರುವ ಆರೋಗ್ಯಕಾರಿ ಉಪಯುಕ್ತತೆಯ ಬಗ್ಗೆ ನಾವೀಗ ತಿಳಿಯೋಣ.

ಮಧುಮೇಹವನ್ನು ತಡೆಯಬಲ್ಲುದು: ಬೆಂಡೆಕಾಯಿಗೆ ರಕ್ತದಲ್ಲಿರುವ ಸಕ್ಕರೆಯ ಅಂಶದ ಮಟ್ಟವನ್ನು ಸಮತೋಲನದಲ್ಲಿರುವಂತೆ ಮಾಡಬಲ್ಲ ಗುಣಗಳಿವೆ. ಇನ್ಸುಲಿನ್ ನ ಉತ್ಪಾದನೆಯನ್ನು ದೇಹದಲ್ಲಿ ಹೆಚ್ಚಿಸುವುದರಿಂದ ಮಧುಮೇಹಿಗಳಲ್ಲಿ ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ.

ಗರ್ಭಧಾರಣೆಗೆ ಉಪಯುಕ್ತ: ಬೆಂಡೆಕಾಯಿಯಲ್ಲಿ ಫೋಲೆಟ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಅಂಶ ಹೇರಳವಾಗಿದೆ. ಈ ಪೋಷಕಾಂಶಗಳು ಗರ್ಭಾವಸ್ಠೆಯಲ್ಲಿರುವ ತಾಯಿಯ ಆರೋಗ್ಯಕ್ಕೆ ಉತ್ತಮವಾದುದು. ಅಷ್ಟೇ ಅಲ್ಲದೆ ಭ್ರೂಣದ ಬೆಳವಣಿಗೆಗೆ ಕೂಡ ಇದು ಉತ್ತಮವಾದುದು.

ಅಸ್ತಮಾವನ್ನು ತಡೆಗಟ್ಟುತ್ತದೆ: ಬೆಂಡೆ ಕಾಯಿಯಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿರುತ್ತದೆ. ಇದು ಉರಿಯೂತದ ಲಕ್ಷಣ, ಆಸ್ತಮಾ ಮತ್ತು ಇತರ ಕೆಲವು ಉಸಿರಾಟದ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ರಕ್ತಹೀನತೆಗೆ ಒಳ್ಳೆಯದು: ಬೆಂಡೆಕಾಯಿಯಲ್ಲಿ ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್ ಸಿ ಮತ್ತು ಕೆ ಸಮೃದ್ಧವಾಗಿದೆ, ಈ ಸತ್ವಗಳು ರಕ್ತ ಕಣಗಳ ಉತ್ಪತ್ತಿಗೆ ಪ್ರಮುಖ ಕಾರಣವಾಗಿರುತ್ತದೆ ಇದರಿಂದ ಹಿಮೋಗ್ಲೊಬಿನ್ ಹೆಚ್ಚಿಸಲು ಸಹಾಯಕಾರಿ. ಆದುದರಿಂದ ಬೆಂಡೆಕಾಯಿ ರಕ್ತಹೀನತೆ ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ.

ಚರ್ಮವನ್ನು ಉತ್ತಮಗೊಳಿಸುತ್ತದೆ: ಬೆಂಡೆಕಾಯಿಯಲ್ಲಿ ಉತ್ಕರ್ಷಣ (ಆಂಟೀ ಆಕ್ಸಿಡೆಂಟ್) ಮತ್ತು ವಿಟಮಿನ್ ಸಿ ಇರುವುದರಿಂದ ಈ ಎರಡು ಅಂಶಗಳು ಚರ್ಮದ ಕಾಂತಿಗೆ ಉತ್ತಮವಾದ ಪೋಷಕಾಂಶ ನೀಡುತ್ತದೆ. ಈ ತರಕಾರಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಚರ್ಮವು ಕಾಂತಿಯುತವಾಗಿ ಹೊಳೆಯಲು ಸಹಾಯಕಾರಿಯಾಗುತ್ತದೆ.

ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ: ಬೆಂಡೆಕಾಯಿಯಲ್ಲಿ ಕೊಬ್ಬಿನ ಅಂಶವಿರುವುದಿಲ್ಲವಾದುದರಿಂದ ಇದರ ಸೇವನೆಯಿಂದ ದೇಹಕ್ಕೆ ಕೊಬ್ಬಿನ ಅಂಶ ಸೇರುವುದಿಲ್ಲ. ಅಲ್ಲದೆ ಈ ತರಕಾರಿಯು ಕೊಬ್ಬಿನ ಅಂಶವನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ ಮತ್ತು ಕೊಬ್ಬಿನಾಂಶ ಉತ್ಪತ್ತಿಗೆ ಕಾರಣವಾಗುವ ಕಣಗಳನ್ನು ತಡೆಯುವಲ್ಲಿ ಸಹಾಯಕಾರಿಯಾಗಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *