ಬಾದಾಮಿ: ನರಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ, ರಾತ್ರಿವೇಳೆ ಕಾಲುಗಳ ಸೆಳೆತ ಉಂಟಾಗುತ್ತದೆ. ವಿಟಮಿನ್ -ಇ ಅಧಿಕವಾಗಿರುವ ಬಾದಾಮಿ, ಪಾಲಕ್ ಹಾಗೂ ಬೆಣ್ಣೆ ಹಣ್ಣುಗಳನ್ನು ತಿನ್ನುವುದರಿಂದ , ನರಗಳಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ.
ನೀರು: ನಿತ್ಯ 8 ಲೋಟ ಶುದ್ಧನೀರಿನೊಂದಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯಬೇಕು, ಒಂದು ಲೋಟದಲ್ಲಿ ನಿಂಬೆ ರಸ ಬೆರೆಸಿರುವ ನೀರನ್ನು ನಿಯಮಿತವಾಗಿ ಬಾಯಾರಿಕೆಯಾದಾಗ ಕುಡಿಯುತ್ತಿರಿ ಇದರಿಂದ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತವೆ.
ಉಗಿ ಚಿಕಿತ್ಸೆ: ಕಾಲು ಸೆಳೆತದಿಂದ ನೋವು ಕಡಿಮೆಯಾಗಲು ಉಗಿ ಪ್ಯಾಡ್ ಗಳನ್ನು ಉಪಯೋಗಿಸಿ. ಇದರಿಂದ ರಕ್ತ ಪ್ರಸಾರ ಹೆಚ್ಚಾಗುತ್ತದೆ. 15-20 ನಿಮಿಷಗಳ ಕಾಲ ಉಪಯೋಗಿಸಿದರೆ ಸಾಕು. ಬಿಸಿ ನೀರಿಗೆ ಸ್ವಲ್ಪ ಸೇಂದ್ರಿಯ ಉಪ್ಪು ಬೆರೆಸಿ ಶಾಖ ನೀಡುವುದರಿಂದಲೂ ನೋವು ಕಡಿಮೆಯಾಗುತ್ತದೆ.
ಗಾಂಧಪುರ ಎಣ್ಣೆ: ಗಾಂಧಪುರ ಎಣ್ಣೆಯಲ್ಲಿ ಮೀಥೈಲ್ ಸಿಲಿಕೇಟ್ ಎಂಬ ಅಂಶ ವಿರುತ್ತದೆ ಅದು ರಕ್ತ ಪ್ರಸರಣವನ್ನು ಉತ್ತೇಜಿಸುತ್ತದೆ. ಈ ಎಣ್ಣೆಯೊಂದಿಗೆ ಸ್ವಲ್ಪ ಆಲೀವ್ ಅಯಿಲ್ ಅಥವಾ ಬಾದಾಮಿ ಎಣ್ಣೆ ಬೆರೆಸಿ ಕಾಲುಗಳನ್ನು ಮಸಾಜ್ ಮಾಡುವುದರಿಂದ ಸೆಳೆತ ಕಡಿಮೆಯಾಗುತ್ತದೆ.
ವಿದ್ಯುದ್ವಿಚ್ಛೇದ್ಯ: ದೇಹಕ್ಕೆ ವಿದ್ಯುದ್ವಿಚ್ಛೇದ್ಯ ಅಥವಾ ಎಲೆಕ್ಟ್ರೋಲೈಟ್ ಗಳು ಅತ್ಯವಶ್ಯಕ. ಸೋಡಿಯಮ್, ಪೊಟಾಶಿಯಮ್, ಕ್ಯಾಲ್ಶಿಯಮ್ ಹಾಗೂ ಮೆಗ್ನೀಶಿಯಮ್ ಮುಂತಾದ ಖನಿಜಗಳ ಕೊರತೆಯಿಂದಾಗಿ ಕಾಲುಗಳ ಸೆಳೆತ ಉಂಟಾಗುತ್ತದೆ. ಅದರಿಂದ ಈ ಖನಿಜಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದು ಉತ್ತಮ.
ವ್ಯಾಯಾಮ: ಒಂದು ವೇಳೆ ನಿಮಗೆ ಕಾಲಿನ ಸೆಳೆತವುಂಟಾಗಿ ರಾತ್ರಿಯಲ್ಲಿ ಎಚ್ಚರವಾದರೆ, ಕಾಲುಗಳನ್ನು ಹಿಗ್ಗಿಸುವುದು ಅಥವಾ ಸ್ಟ್ರೆಚ್ ಮಾಡಬೇಕು, ಇದು ಸ್ವಲ್ಪ ನೋವನ್ನು ಉಂಟುಮಾಡುತ್ತದೆ. ಪಾದಗಳನ್ನು ಹಿಂದೆ, ಮುಂದೆ ಆಡಿಸಬೇಕು. ಹೀಗೆ ಮಾಡುವುದರಿಂದ ಕಾಲುಗಳ ಸೆಳೆತ ಕಡಿಮೆಯಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.