ನಿಶ್ಯಕ್ತಿ ಬಲಹೀನತೆ ವೀಕ್ನೆಸ್ ನರದೌರ್ಬಲ್ಯ ಹೋಗಿ ಲವವಿಕೆಯಿಂದ ಇರಲು ದಾಸವಾಳ ಹೂವಿನ ಟೀ ಬೆಸ್ಟ್

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ನಾವು ತಿಳಿಸುವ ಈ ಹೂವು ಎಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಅಂದರೆ ಕಲ್ಪನೆ ಮಾಡಲು ಆಗುವುದಿಲ್ಲ. ಅಷ್ಟೊಂದು ವಿಭಿನ್ನವಾದ ಔಷಧೀಯ ಆರೋಗ್ಯಕರ ಗುಣಗಳನ್ನು ಹೊಂದಿದೆ ಈ ಹೂವು ಅದನ್ನು ನಾವು ಊಹಿಸಲೂ ಕೂಡ ಸಾಧ್ಯವಿಲ್ಲ. ನಿಶ್ಯಕ್ತಿ ಬಲಹೀನತೆ ವೀಕ್ನೆಸ್ ನರದೌರ್ಬಲ್ಯ ಇರುವವರು ಇದನ್ನು ಸೇವನೆ ಮಾಡಿದ್ರೆ ನಿಮ್ಮ ದೇಹವು ಚೈತನ್ಯದಿಂದ ತುಂಬಿ ತುಳುಕುತ್ತದೆ. ನೀವು ತುಂಬಾನೇ ಲವಲವಿಕೆ ಇಂದ ಇರುತ್ತೀರಿ. ನಿಮಗೆ ಯಾವುದೇ ಕೆಲಸವನ್ನು ಕೊಟ್ಟರು ನೀವು ಮಾಡುವಷ್ಟು ಸಾಮರ್ಥ್ಯವನ್ನು ಹೊಂದುತ್ತೀರೀ. ಇದು ದೇಹದಲ್ಲಿ ಇಮ್ಯುಣಿಟಿ ಸಿಸ್ಟಂ ಅನ್ನು ಭೂಸ್ಟ್ ಮಾಡುತ್ತದೆ. ಕ್ಯಾನ್ಸರ್ ಜೀವಕೋಶಗಳನ್ನೂ ಕುಂಠಿತ ಮಾಡುತ್ತದೆ. ಹೃದ್ರೋಗವನ್ನು ತಡೆಯುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕಣಗಳನ್ನು ಹೆಚ್ಚಿಸುತ್ತದೆ. ಹಾಗಾದ್ರೆ ಆ ಹೂವು ಯಾವುದು ಅದೇ ದಾಸವಾಳ ಹೂವು. ಹೌದು ಸ್ನೇಹಿತರೇ ಇಂದಿನ ಲೇಖನದಲ್ಲಿ ದಾಸವಾಳ ಹೂವಿನ ಆರೋಗ್ಯಕರ ಲಾಭಗಳನ್ನು ಸವಿಸ್ತಾರವಾಗಿ ತಿಳಿದುಕೊಳ್ಳೋಣ ಬನ್ನಿ.

ಈ ಹೂವು ನೋಡಲು ತುಂಬಾನೇ ಸುಂದರವಾಗಿ ಬಣ್ಣ ಬಣ್ಣದ ರೂಪದಲ್ಲಿ ಕೆಂಪು, ಹಳದಿ ಬಣ್ಣದ ರೂಪದಲ್ಲಿ ಸಿಗುತ್ತದೆ. ಇದು ಕೂದಲಿನ ಆರೋಗ್ಯಕ್ಕೆ ಮಾತ್ರವಲ್ಲದೆ ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ. ಅಮೃತಕ್ಕೆ ಸಮಾನವಾದ ಹೂವು ಅದರಲ್ಲೂ ಮಹಿಳೆಯರಿಗೆ ತುಂಬಾನೇ ಲಾಭವನ್ನು ನೀಡುತ್ತದೆ ಈ ಹೂವು. ಅಂದ್ರೆ ಕಣ್ಣಿಗೆ ಕೂದಲಿಗೆ ಅದರಲ್ಲೂ ಮುಖದ ಸೌಂದರ್ಯವನ್ನು ಹೆಚ್ಚಿಸಲು ಇದು ತುಂಬಾನೇ ಸಹಾಯ ಮಾಡುತ್ತದೆ. ನಮ್ಮ ದೇಹದ ಪ್ರತಿಯೊಂದು ಅಂಗದಲ್ಲಿ ಉಂಟಾಗುವ ನಿಷ್ಯಕ್ತಿಯನ್ನು ದೂರ ಮಾಡುತ್ತದೆ. ಹಾಗಾದ್ರೆ ಇದನ್ನು ಹೇಗೆ ಸೇವನೆ ಮಾಡಬೇಕು. ಇದನ್ನು ಸೇವನೆ ಮಾಡುವುದರಿಂದ ಯಾವೆಲ್ಲ ರೋಗಗಳಿಗೆ ಇದು ಸೂಕ್ತ ಅಂತ ತಿಳಿಯೋಣ. ಪ್ರಾಚೀನ ಕಾಲದಿಂದಲು ಕೂಡ ಋಷಿ ಮುನಿಗಳು ಈ ದಾಸವಾಳ ಹೂವಿನ ಟೀ ಅನ್ನು ಬಳಕೆ ಮಾಡುತ್ತಿದ್ದರು. ಈಗಿನ ಕಾಲದ ಯುವ ಜನರು ಸೇವನೆ ಮಾಡುವ ಆಹಾರ ಪದ್ಧತಿ ಅವರನ್ನು ನಿಶ್ಯಕ್ತಿ ಮಾಡುತ್ತಿದೆ, ಅವರಿಗೆ ಯಾವುದೇ ಕೆಲಸ ಮಾಡಲು ಮನಸ್ಸು ಆಗುವುದಿಲ್ಲ. ಚಿಕ್ಕ ಚಿಕ್ಕ ವಿಷಯಗಳಿಗೆ ಟೆನ್ಷನ್ ಮಾಡಿಕೊಳ್ಳುತ್ತಾರೆ.

ಹೀಗೆ ಖಿನ್ನತೆಗೆ ಒಳಗಾಗುತ್ತಾರೆ. ಹೀಗೆ ಈ ಬಗೆಯ ಸಮಸ್ಯೆಯನ್ನು ಅನುಭವಿಸುವವರು ದಾಸವಾಳ ಹೂವಿನ ಟೀ ಕುಡಿಯಬೇಕು. ಇದು ಡಯಾಬಿಟಿಸ್ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಧಿಕ ರಕ್ತದೊತ್ತಡ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ. ಮತ್ತು ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ತುಂಬಾನೇ ಹೊಟ್ಟೆ ನೋವಿನ ಸಮಸ್ಯೆ ಕಾಣಿಸುತ್ತದೆ. ಅವರು ನಿತ್ಯವೂ ಕುಡಿಯುತ್ತಾ ಬಂದ್ರೆ ಅಥವಾ ಪೀರಿಯಡ್ ಬರುವ ಎರಡು ದಿನ ಮುಂಚಿತವಾಗಿ ಕುಡಿದರೆ ಅವರಿಗೆ ಯಾವುದೇ ರೀತಿಯ ಹೊಟ್ಟೆ ನೀವು ಕಾಣಿಸಿಕೊಳ್ಳುವುದಿಲ್ಲ. ಎಎಪಿಜೊತೆಗೆ ಅಧಿಕ ರಕ್ತಸ್ರಾವ ವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಈ ಹೂವಿನಲ್ಲಿ ಇರುವ ಆಂಟಿ ಬ್ಯಾಕ್ಟೀರಿಯಾ ಅಂಶವು ಉರಿ ಮೂತ್ರ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಈ ಹೂವಿನ ಜ್ಯೂಸ್ ಅಥವಾ ಟೀ ಸೇವನೆ ಇಂದ ಅಲ್ಸರ್ ಸಮಸ್ಯೆ ಕೂಡ ಉಪಶಮನ ಆಗುತ್ತದೆ. ಹಾಗಾದ್ರೆ ಬನ್ನಿ ಈ ಹೂವಿನ ಟೀ ತಯಾರಿಸುವುದು ಹೇಗೆ ಅಂತ ನೋಡೋಣ ಬನ್ನಿ. ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದರಲ್ಲಿ ನೀರು ಹಾಕಿ ದಾಸವಾಳ ಹೂವು ಅನ್ನು ಹಾಕಿ ಕುದಿಸಿ ನಂತರ ತಣ್ಣಗಾದ ಮೇಲೆ ಅದರಲ್ಲಿ ಜೇನುತುಪ್ಪ ಅಥವಾ ಶುಂಠಿ ಇಲ್ಲವಾದ್ರೆ ಬೆಲ್ಲವನ್ನು ಹಾಕಿ ಸೇವನೆ ಮಾಡಿ. ಇದರಿಂದ ನಿಮಗೆ ಇರುವ ಸಮಸ್ಯೆಗಳು ಆದಷ್ಟು ಕಡಿಮೆ ಆಗುತ್ತಾ ಬರುತ್ತದೆ ಶುಭದಿನ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *