ನಮಸ್ತೇ ಪ್ರಿಯ ಓದುಗರೇ, ಪ್ರಕೃತಿ ನಮಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಿದೆ. ಅದರಲ್ಲೂ ಹಣ್ಣುಗಳು ಬೀಜಗಳ ಕೊಡುಗೆ ಅಂತೂ ಹೇಳತೀರದು. ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಈ ಹಣ್ಣುಗಳು ಮತ್ತು ಗಿಡಮೂಲಿಕೆಗಳು ನಮ್ಮ ದೇಹವನ್ನು ರೋಗ ಮುಕ್ತವಾಗಿ ಮಾಡಲು ಸಹಾಯ ಮಾಡುತ್ತದೆ. ನಮ್ಮ ದೇಹಕ್ಕೆ ಪೌಷ್ಟಿಕಾಂಶವನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಶೇಷವಾದ ಹಣ್ಣಿನ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ. ಆ ಹಣ್ಣು ಯಾವುದು ಅಂತ ತಿಳಿದುಕೊಳ್ಳಲು ನಿಮಗೆ ಕುತೂಹಲವೇ ಹೌದು ಆ ಹಣ್ಣು ನೇರಳೆ ಹಣ್ಣು. ನೇರಳೆ ಹಣ್ಣು ರುಚಿಯಲ್ಲಿ ಎಷ್ಟು ಸಿಹಿಯಾಗಿ ಇರುತ್ತದೆಯೋ ಅಷ್ಟೇ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು.ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಈ ಹಣ್ಣನ್ನು ತುಂಬಾನೇ ಇಷ್ಟ ಪಟ್ಟು ತಿನ್ನುತ್ತಾರೆ. ಈ ಹಣ್ಣು ಕೇವಲ ಕಾಲಗಳಿಗೆ ತಕ್ಕಂತೆ ಮಾತ್ರ ಸಿಗುತ್ತದೆ. ಅದರಲ್ಲೂ ವಯಸ್ಸಾದವರು ಈ ಹಣ್ಣು ಮಾರುಕಟ್ಟೆಗೆ ಬಂದರೆ ಅಂತೂ ಬಿಡದೇ ತೆಗೆದುಕೊಳ್ಳಲು ಮುಂದಾಗುತ್ತಾರೆ ವಯಸ್ಸಾದವರಲ್ಲಿ ರೋಗಗಳು ಅಧಿಕವಾಗಿ ಕಾಡುತ್ತವೆ. ಇನ್ನು ಸಕ್ಕರೆ ಕಾಯಿಲೆಗೆ ಈ ಹಣ್ಣು ಹೇಳಿ ಮಾಡಿಸಿರುವ ಮದ್ದು ಆಗಿದೆ.
ಸಕ್ಕರೆ ಕಾಯಿಲೆ ಇದ್ದವರು ನೇರಳೆ ಹಣ್ಣು ಮಾತ್ರ ತಿನ್ನುವುದಲ್ಲದೆ ಅದರ ಜೊತೆಗೆ ನೇರಳೆ ಹಣ್ಣಿನ ಬೀಜ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ನೇರಳೆ ಹಣ್ಣಿನಲ್ಲಿ ಜಂಬೊಸಿನ್ ಜಂಬೊಲಿನ್ ಎಂಬ ಅಂಶಗಳು ಆಹಾರದಲ್ಲಿ ಗಂಜಿಯ ಅಂಶವನ್ನು ಸಕ್ಕರೆಯ ಅಂಶವನ್ನಾಗಿ ಮಾಡುವ ವಿಧಾನವನ್ನು ನಿಧಾನ ಮಾಡುತ್ತದೆ. ಅಧಿಕ ಸಕ್ಕರೆ ಕಾಯಿಲೆ ಇದ್ದವರಿಗೆ ಈ ನೇರಳೆ ಹಣ್ಣು ಯಾವ ರೀತಿ ಸಹಾಯ ಮಾಡುತ್ತದೆ ಅಂದರೆ ಸಕ್ಕರೆಯನ್ನು ಬಳಸುವಷ್ಟು ಇನ್ಸುಲಿನ್ ಇರುವುದಿಲ್ಲ. ಇದಕ್ಕೆ ಕಾರಣ ದೇಹದಲ್ಲಿ ಪ್ಯಾಂಕ್ರಿಯಸ್ ಸಕ್ಕರೆಯನ್ನು ಉತ್ಪಾದನೆ ಮಾಡುವುದಿಲ್ಲ. ಆದರೆ ನೇರಳೆ ಹಣ್ಣು ಇನ್ಸುಲಿನ್ ಮಟ್ಟವನ್ನು ಉತ್ಪಾದಿಸುವ ಮೂಲಕ ಇಲ್ಲವೇ ಅದರ ಪ್ರಮಾಣ ಬೇಗನೆ ಇಳಿದು ಹೋಗದಂತೆ ತಡೆಯುತ್ತದೆ. ಇನ್ನು ನೇರಳೆ ಹಣ್ಣು ಯಾವ ರೀತಿಯಾಗಿ ಸೇವನೆ ಮಾಡಬೇಕು ಅಂತ ಹೇಳುವುದಾದರೆ, ನೇರಳೆ ಹಣ್ಣು ನಿಯಮಿತವಾಗಿ ಸೇವಿಸಿ. ಇದರಿಂದ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಬರುತ್ತದೆ. ನೇರಳೆ ಹಣ್ಣು ಸೇವನೆ ಮಾಡಿದ ನಂತರ ಅವುಗಳಲ್ಲಿ ಇರುವ ಬೀಜವನ್ನು ಎಸೆಯಬೇಡಿ. ಆವುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ನೇರಳೆ ಹಣ್ಣಿನ ಬೀಜದ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ನಿಯಮಿತವಾಗಿ ಮಾಡುವುದರಿಂದ ಸಕ್ಕರೆ ಕಾಯಿಲೆ ಹತೋಟಿಗೆ ಬರುತ್ತದೆ. ನೇರಳೆ ಹಣ್ಣುಕೇವಲ ಸಕ್ಕರೆ ಕಾಯಿಲೆಯನ್ನು ದೂರ ಮಾಡುವುದಲ್ಲದೆ ಇನ್ನಿತರ ಹಲವಾರು ಕಾಯಿಲೆಯನ್ನು ಹೊಡೆದೋಡಿಸುತ್ತದೆ. ಅದುವೇ ನಿಮಗೆನಾದರು ಹೊಟ್ಟೆಯಲ್ಲಿರುವ ಕಲ್ಮಶಗಳು ಹೊರಗೆ ಹೋಗದೇ ಹೊಟ್ಟೆ ನೋವು ಕಾಣಿಸಿ ಕೊಂಡರೆ ನೀವು ನೇರಳೆ ಹಣ್ಣು ತಿನ್ನಿರಿ. ಇದು ಹೊಟ್ಟೆಯಲ್ಲಿರುವ ಬೇಡವಾದ ಕಲ್ಮಶವನ್ನು ದೂರ ಮಾಡುತ್ತದೆ.ಹೊಟ್ಟೆಯ ಎಲ್ಲಾ ಕಾರ್ಯಗಳು ಸುಗಮವಾಗಿ ಆಗಲು ಈ ನೇರಳೆ ಹಣ್ಣಿನ ಬೀಜದ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿಯಿರಿ. ಮತ್ತು ಹೊಟ್ಟೆಯಲ್ಲಿ ಹುಣ್ಣುಗಳು ಆಗಿದ್ದರೆ ಹೊಟ್ಟೆಯಲ್ಲಿ ನೋವು ಉರಿಯೂತ ಎಲ್ಲವನ್ನು ಕಡಿಮೆ ಮಾಡುತ್ತದೆ.
ಈ ನೇರಳೆ ಹಣ್ಣು ತಿನ್ನುವುದರಿಂದ ರಕ್ತ ಶುದ್ದವಾಗುತ್ತದೆ ಮತ್ತು ರಕ್ತ ಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಅಷ್ಟೇ ಅಲ್ಲದೇ ಋತು ಚಕ್ರದಲ್ಲಿ ಹಾನಿಯಾದ ರಕ್ತವನ್ನು ಮರು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ.ನೇರಳೆ ಹಣ್ಣು ರಕ್ತದ ಪ್ರಮಾಣವನ್ನು ಅಧಿಕಗೊಳಿಸುತ್ತದೆ. ಇನ್ನು ಬೆನ್ನು ನೋವು ಮೊಣಕಾಲು ನೋವು ಮತ್ತು ಮೂತ್ರದ ಸಮಸ್ಯೆಯನ್ನು ಕೂಡ ಬಗೆ ಹರಿಸಲು ಈ ನೇರಳೆ ಹಣ್ಣು ಸಹಾಯ ಮಾಡುತ್ತದೆ. ನೇರಳೆ ಹಣ್ಣಿನ ರಸವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಉಬ್ಬಸವನ್ನು ಹಾಗೂ ಉಸಿರಾಟದ ತೊಂದರೆಯನ್ನು ಜೊತೆಗೆ ಕೆಮ್ಮು ಸಮಸ್ಯೆಯನ್ನು ನಿಯಂತ್ರದಲ್ಲಿ ಇಡುತ್ತದೆ. ನೇರಳೆ ಜ್ಯುಸ್ ಕುಡಿಯುವುದರಿಂದ ಕ್ಯಾನ್ಸರ್ ನಿಂದ ಮುಕ್ತಿಯನ್ನು ಪಡೆಯಬಹುದು. ಆದರೆ ನೆನಪಿಡಿ ನೇರಳೆ ಹಣ್ಣು ಸೇವನೆ ಮಾಡಿದ ನಂತರ ನೀವು ಯಾವುದೇ ಕಾರಣಕ್ಕೂ ಹಾಲು ಟೀ ಕಾಫಿ ಒಂದು ತಾಸುವರೆಗೆ ಕುಡಿಯಬಾರ್ದು. ಇನ್ನೂ ನೀವು ಸಕ್ಕರೆ ಕಾಯಿಲೆ ಮಾತ್ರೆಯನ್ನು ಸೇವನೆ ಮಾಡುತ್ತಿದ್ದರೆ ಈ ನೇರಳೆ ಹಣ್ಣಿನ ಪುಡಿ ಸೇವನೆ ಮಾಡುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಶುಭದಿನ