ಮೂಲಂಗಿಯನ್ನು ದಿವ್ಯಾಷದಿ ಗುಣಗಳ ತರಕಾರಿ ಎಂದೇ ಪರಿಗಣಿಸಲಾಗಿದೆ ಮೂಲಂಗಿ ಮತ್ತು ಮೂಲಂಗಿ ಎಲೆಯಲ್ಲಿ ಅನೇಕ ಔಷಧಿ ಗುಣಗಳಿವೆ. ಈ ಮಧ್ಯಕಾಲದಲ್ಲಿ ಸಾಮಾನ್ಯವಾಗಿ ಮೂಲಂಗಿಯನ್ನು ಪ್ರತಿಯೊಬ್ಬರು ಆಹಾರ ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ ಮತ್ತು ಔಷದೀಯ ಬಳಕೆಗಾಗಿ ಕೂಡ ಉಪಯೋಗ ಮಾಡುತ್ತಾರೆ. ಮೂಲಂಗಿ ಹೊಟ್ಟೆನೋವು ಮತ್ತು ಕರುಳು ಸಂಬಂಧಿತ, ಪಿತ್ತ, ಅಸಿವಾಗದೆ ಇರುವುದು, ಬಾಯಿ ಮತ್ತು ಗಂಟಲು ನೋವಿನ ಸಮಸ್ಯೆ, ಭಾವು, ಅಂಟು ರೋಗಗಳು, ಉಸಿರಾಟ, ಅಧಿಕ ಶ್ಲೇಷ್ಮ, ಜ್ವರ, ಕೆಮ್ಮು, ನೆಗಡಿ ನಿವಾರಣೆಗೆ ಉಪಯೋಗಿಸುತ್ತಾರೆ. ಮೂಲಂಗಿಯಲ್ಲಿ ಪೊಟಾಶಿಯಂ ಹೆಚ್ಚಾಗಿರುತ್ತದೆ ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ರಕ್ತ ನಾಳಗಳನ್ನು ಆರೋಗ್ಯವಾಗಿ ಇಡುವುದಕ್ಕೆ ಸಹಾಯ ಮಾಡುವ ಕೊಲ್ಲಜೈನ್ ಉತ್ಪತಿಗು ಕೂಡ ಇವು ಸಹಾಯ ಮಾಡುತ್ತವೆ ಮೂಲಂಗಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಕಣಗಳಿಗೆ ಆಕ್ಸಿಜನ್ ಹೆಚ್ಚಿಸುತ್ತದೆ.
ಮೂಲಂಗಿ ಜೀರ್ಣಕ್ರಿಯೆ ಸಮಸ್ಯೆಯನ್ನು ಮತ್ತು ಪಿತ್ತ ಪ್ರವಾಹವನ್ನು ಪ್ರೇರೇಪಿಸುತ್ತದೆ ಮತ್ತು ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮಜೀವಿಗಳ ಜೊತೆ ಹೋರಾಡುತ್ತದೆ. ಅಷ್ಟೇ ಅಲ್ಲದೆ ಅಸಿವಾಗದೆ ಇರುವುದು, ಬಾಯಿ ಇತರೆ ಆರೋಗ್ಯ ಪರಿಸ್ಥಿತಿಗೆ ಈ ಮೂಲಂಗಿ ಚಿಕಿತ್ಸೆಯಾಗಿ ಉಪಯೋಗವಾಗುತ್ತದೆ. ಮೂಲಂಗಿ ಜೊತೆಗೆ ಇದರ ಏಲೆ ಕೂಡ ಅನೇಕ ರೀತಿಯ ಸಲಾಡ್ಸ್ ಗಳಲ್ಲಿ ಈ ಏಲೆಯನ್ನು ಉಪಯೋಗಿಸುತ್ತಾರೆ ಹಾಗೆಯೇ ಮೂಲಂಗಿ ಏಲೆ ಕೂಡ ಅನೇಕ ರೀತಿಯ ಆರೋಗ್ಯ ಪ್ರಯೋಜನೆಗಳನ್ನು ಒಳಗೊಂಡಿದೆ. ಆದರೆ ಮೂಲಂಗಿ ತಿಂದ ತಕ್ಷಣ ಬೇರೆ ಯಾವ ಪದಾರ್ಥಗಳನ್ನು ತಿನ್ನಬಾರದು ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೂಲಂಗಿ ತಿಂದ ತಕ್ಷಣ ಯಾವುದೇ ಕಾರಣಕ್ಕೂ ಹಾಲು ಕುಡಿಯಬಾರದು ಹಾಗೆ ತೆಗೆದುಕೊಳ್ಳುವುದರಿಂದ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ಏರ್ಪಡುತ್ತವೆ. ಹಾಗೆಯೇ ಸೌತೆಕಾಯಿ ಮತ್ತು ಮೂಲಂಗಿಯನ್ನು ಕೆಲವರು ಸಲಾಡ್ ರೀತಿಯಲ್ಲಿ ಕೆಲವೊಬ್ಬರು ತಿನ್ನುತ್ತಾರೆ ಈ ರೀತಿಯಾಗಿ ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು. ಯಾರಾದರೂ ತಿಳಿಯದೆ ಈಗೆ ತಿನ್ನುವುದರಿಂದ ವಾಕರಿಕೆ, ವಾಂತಿ ಸಮಸ್ಯೆಗಳು ಎದುರಾಗುತ್ತವೆ ಅಷ್ಟೇ ಅಲ್ಲದೆ ನಿಂಬೆ ಹಣ್ಣಿನ ಜಾತಿಗೆ ಸಂಬಂದಿಸಿದ ಅಂದರೆ ಹುಳಿ ಹೆಚ್ಚಾಗಿ ಇರುವಂಥ ಹಣ್ಣುಗಳನ್ನು ಕೂಡ ತೆಗೆದುಕೊಳ್ಳಬಾರದು ಮೂಲಂಗಿ ಜೊತೆಗೆ ಅರೇಂಜ್ ನಂತಹ ಹಣ್ಣುಗಳನ್ನು ತೆಗೆದುಕೊಳ್ಳಬಾರದು.
ಇದರಿಂದ ಆರೋಗ್ಯದಲ್ಲಿ ತೀವ್ರವಾಗಿ ಪೆಟ್ಟು ತಿನ್ನುತ್ತದೆ ಮುಕ್ಯವಾಗಿ ಮೂಲಂಗಿ ಹಾಗಲಕಾಯಿ ಇಂತಹ ಆಹಾರವನ್ನು ಒಂದೇ ಸಮಯದಲ್ಲಿ ತೆಗೆದುಕೊಳ್ಳುವುದರಿಂದ ಹೊಟ್ಟೆ ಉಬ್ಬರ, ಎದೆಯಲ್ಲಿ ಉರಿ, ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರುತ್ತವೆ. ಹಾಗೆಯೇ ಈ ರೀತಿಯ ಆಹಾರ ಪದಾರ್ಥಗಳನ್ನು ಒಟ್ಟಿಗೆ ತೆಗೆದುಕೊಳ್ಳುವುದರಿಂದ ಚರ್ಮದ ಸಮಸ್ಯೆ, ಚರ್ಮ ಬಿಳಿ ಬಣ್ಣಕ್ಕೆ ಬರುವುದು, ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೂಲಂಗಿ ಇಂದ ನರಳುವ ರೋಗಿಗಳು ಹಸಿ ಮೂಲಂಗಿಯನ್ನು ಯತೇಚ್ಛವಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಹಾಗೆ ಮೂಲವ್ಯಾಧಿ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಹಸಿ ಮೂಲಂಗಿಯ ಕೊಸಂಬರಿಯನ್ನು ಆಗಾಗ ಸೇವಿಸುತ್ತಿದ್ದರೆ ಅಜೀರ್ಣ, ಮಲಬದ್ಧತೆ, ದೃಷ್ಟಿದೋಷ, ಮೂಲವ್ಯಾಧಿ, ಕಾಮಾಲೆ, ಇತ್ಯಾದಿ ಕಾಯಿಲೆ ಇರುವವರು ಹಸಿ ಮೂಲಂಗಿ ಹೊಳುಗಳಿಗೆ ಕಾಳು ಮೆಣಸಿನ ಪುಡಿ, ಉಪ್ಪು, ನಿಂಬೆರಸ, ಸೇರಿಸಿ ಸೇವಿಸುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ ಹಾಗೆಯೇ ಮೂಲಂಗಿಯನ್ನು ಕಾಲಿ ಒಟ್ಟೆಯಲ್ಲಿ ತಿನ್ನಬಾರದು. ಮೂಲಂಗಿ ಅನೇಕ ರೀತಿಯಲ್ಲಿ ಅಡುಗೆ ಪದಾರ್ಥಗಳಲ್ಲಿ ಬಳಕೆ ಮಾಡುತ್ತಾರೆ ಮೂಲಂಗಿ ಚಟ್ನಿ, ಮೂಲಂಗಿ ಸಾಂಬಾರ್ ಊಟದ ಜೊತೆ ಸಲಾಡ್ ಹಾಗೆ ಕೂಡ ಬಳಕೆ ಮಾಡುತ್ತಾರೆ.