ಬೆಳಿಗ್ಗೆ ಉಪಹಾರಕ್ಕೆ ಅವಲಕ್ಕಿ ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತೇ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಬೆಳಿಗ್ಗೆ ಶಾಲೆಗೆ ಹೋಗುವ ಮಕ್ಕಳು ತಮ್ಮ ತಾಯಿಗೆ ಅವಲಕ್ಕಿ ಮಾಡಿ ಕೊಡು ಅಂತ ಕೇಳುತ್ತವೆ. ಇದು ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಕೇಳುವ ಸಾಮಾನ್ಯ ಮಾತು ಆಗಿದೆ. ಚಿಕ್ಕ ಮಕ್ಕಳು ಅಷ್ಟೇ ಅಲ್ಲ, ದೊಡ್ಡವರು ಕೂಡ ಆರೋಗ್ಯಕರ ಡಯೆಟ್ ಪಾಲನೆ ಮಾಡಲು ಇಷ್ಟ ಪಡುವವರು ನಿತ್ಯವೂ ಬೆಳಗಿನ ಉಪಹಾರಕ್ಕೆ ಅವಲಕ್ಕಿ ಅನ್ನು ಸೇರಿಸಿಕೊಳ್ಳಿ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಉಪಹಾರಕ್ಕೆ ಅವಲಕ್ಕಿ ಸೇವನೆ ಮಾಡುವುದರಿಂದ ಏನೆಲ್ಲ ಪ್ರಯೋಜನಗಳಿವೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ ಈ ಲೇಖನ ನಿಮಗೆ ಸ್ವಲ್ಪ ತಿಳಿದಿರುವ ಮಾಹಿತಿಯಾದರು ಕೂಡ ನೀವು ಮನಸ್ಸಿನಲ್ಲಿ ಈ ರೀತಿ ಅಂದುಕೊಳ್ಳಬಹುದು, ನಾವು ವಾರದಲ್ಲಿ ಎರಡು ಮೂರು ಅವಲಕ್ಕಿ ಸೇವನೆ ಮಾಡುತ್ತೇವೆ ಇದರಲ್ಲಿ ಅಂತದೇನು ವಿಶೇಷತೆ ಅಂತ ನೀವು ಕೇಳಬಹುದು. ಆದರೆ ಬೇರೆ ಉಪಹಾರಗಳಿಗೆ ಇದನ್ನು ಹೋಲಿಕೆ ಮಾಡಿದರೆ ಅವಲಕ್ಕಿ ಸೂಪರ್ ಉಪಹಾರ ಅಂತ ಹೇಳಬಹುದು. ಅದಕ್ಕಾಗಿ ಅವಲಕ್ಕಿ ತಿನ್ನುವುದನ್ನು ರೂಡಿ ಮಾಡಿಕೊಳ್ಳಿ. ಯಾಕೆಂದರೆ ಇದು ಕಾರ್ಬೋಹೈಡ್ರೇಟ್‌ಗಳ ಆಗರ. ಇದರಲ್ಲಿ ಕಬ್ಬಿಣದ ಅಂಶ, ಫೈಬರ್‌, ಆಯಂಟಿ ಆಕ್ಸಿಡೆಂಟ್‌ ಹಾಗೂ ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್‌ಗಳು ಹೇರಳವಾಗಿವೆ ಎಂದು ವೈಜ್ಞಾನಿಕ ವರದಿಗಳು ಹೇಳಿವೆ.

ನಾವು ಸೇವನೆ ಮಾಡುವ ಉಪಹಾರ ಯಾವಾಗ್ಲೂ ಪೌಷ್ಟಿಕತೆ ಯಿಂದ ಕೂಡಿರಬೇಕು. ಇಂತಹ ಆಹಾರವನ್ನು ಸೇವಿಸಿ ದಿನವನ್ನು ಪ್ರಾರಂಭ ಮಾಡಿದರೆ ನಾವು ಪೂರ್ತಿ ದಿನ ಲವಲವಿಕೆ ಹಾಗೂ ಚೈತನ್ಯದಿಂದ ಇರುತ್ತೇವೆ. ಅಷ್ಟೇ ಅಲ್ಲದೇ ನಮ್ಮ ದಿನವೂ ಉಲ್ಲಸದಾಯಕವಾಗಿ ಸಾಗುತ್ತದೆ. ಇನ್ನೂ ಅವಲಕ್ಕಿ ಬಾಯಿಯ ರುಚಿ ಹೆಚ್ಚಿಸುವುದರ ಜೊತೆಗೆ ಇದರಲ್ಲಿ ಇರುವ ಕಾರ್ಬೋಹೈಡ್ರೇಟ್ ಮತ್ತು ಜೀವಸತ್ವಗಳು ನಮ್ಮ ಆರೋಗ್ಯವನ್ನು ದುಪ್ಪಟ್ಟು ಮಾಡುತ್ತವೆ.ಮತ್ತು ದೇಹಕ್ಕೆ ಹಿಮೋಗ್ಲೋಬಿನ್ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಹಾಗೂ ಯಾರಿಗೆ ರಕ್ತಹೀನತೆ ಸಮಸ್ಯೆ ಇರುತ್ತದೆಯೋ ಅಂಥವರಿಗೆ ಇದು ದಿವ್ಯ ಶಕ್ತಿ ಅಂತ ಹೇಳಬಹುದು. ಅವಲಕ್ಕಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಎಂದಿಗೂ ಬರುವುದಿಲ್ಲ. ಇದು ರಕ್ತ ಕಣಗಳನ್ನೂ ಉತ್ಪತ್ತಿ ಮಾಡುತ್ತದೆ. ಸುಲಭವಾಗಿ ಜೀರ್ಣವಾಗುವ ಅವಲಕ್ಕಿಯು ದೇಹಕ್ಕೂ ಕೂಡ ಆರೋಗ್ಯಕರ. ಅವಲಕ್ಕಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಯಿದೆ. ಮಧುಮೇಹ, ಚರ್ಮ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅವಲಕ್ಕಿ ಸೇವನೆ ಉತ್ತಮ ಎಂದು ತಿಳಿಸಲಾಗಿದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೂ ಶಕ್ತಿ ಸಾಮರ್ಥ್ಯವನ್ನು ದುಪ್ಪಟ್ಟು ಮಾಡುತ್ತದೆ. ಚಿಕ್ಕ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಅವಲಕ್ಕಿ ಸೂಕ್ತವಾದ ಆಹಾರವಾಗಿದೆ. ಬೆಳಿಗ್ಗೆ ತಿಂದ ಆಹಾರವೂ ಮಧ್ಯಾಹ್ನದವರಿಗೆ ಶಕ್ತಿಯನ್ನು ನೀಡುವ ಉಪಹಾರ ಆಗಿರಬೇಕು. ಅದು ಅವಲಕ್ಕಿ ಕೆಲಸವನ್ನು ಮಾಡುತ್ತದೆ. ಮಧುಮೇಹಿಗಳಿಗೆ ಇದು ಸೂಪರ್ ಫುಡ್ ಅಂತ ಹೇಳಬಹುದು ಕಾರಣ ಮಧುಮೇಹಿಗಳಿಗೆ ಪದೇ ಪದೇ ಹಸಿವು ಆಗುತ್ತಿರುತ್ತದೆ. ಅಂಥವರಿಗೆ ಅವಲಕ್ಕಿ ನೀಡುವುದರಿಂದ ಅವರ ಹಸಿವು ನೀಗುತ್ತದೆ. ಒಂದು ಪ್ಲೇಟ್ ಅವಲಕ್ಕಿ ತಿನ್ನುವುದರಿಂದ 240ಕ್ಯಾಲೋರಿ ದೊರೆಯುತ್ತದೆ. ಅಷ್ಟೇ ಅಲ್ಲದೇ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಸೂಪರ್ ಫುಡ್ ಆಗಿದೆ. ಇದರಲ್ಲಿ ಕಡಿಮೆ ಫ್ಯಾಟ್ ಇರುವುದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಅವಲಕ್ಕಿ ಆರೋಗ್ಯಕರ ಜೀವನಕ್ಕೆ ಉತ್ತಮ.

Leave a Reply

Your email address will not be published. Required fields are marked *