ನಮಸ್ತೇ ಪ್ರಿಯ ಓದುಗರೇ, ಆಧುನಿಕ ಭಗೀರಥ ಎಂದು ಕರೆಸಿಕೊಂಡಿರುವ ಎಂ. ಟೆಕ್ ಪದವಿದರು ಮೂಲತಃ ಬೀದರ್ ನವರೂ. ಸತತವಾಗಿ ಕೃಷಿಗಾಗಿ ಐದು ತಿಂಗಳುಗಳ ಕಾಲ ತಾವೇ ಕೃಷಿಗಾಗಿ ಬಾವಿ ತೋಡಿದ್ದಾರೆ. ಇವರ ಸಾಧನೆಗೆ ಶಬ್ದಗಳೇ ಇಲ್ಲ ಗೆಳೆಯರೇ. ಬೀದರ್ ಜಿಲ್ಲೆಯ ಔರಾದ್ತಾ ಲೂಕಿನವರಾಗಿದ್ದು ಇವರ ಹೆಸರು ಸೂರ್ಯಕಾಂತ್ ಪ್ರಭು ಎಂದು ಇವರು ಎಂಟೆಕ್ ಓದಿದ್ದಾರೆ. ಇವರು ತಮ್ಮ ವೃತ್ತಿಗೆ ಅನುಗುಣವಾಗಿ ಎಂಟೆಕ್ ಮಾಡಿ ಮುಗಿಸಿದ ಮೇಲೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಕಾರಣದಿಂದ ಎಲ್ಲ ಕಂಪನಿಗಳು ಮುಚ್ಚಿ ಹೋದವು. ಹೀಗಾಗಿ ಇವರು ಸೂರ್ಯಕಾಂತ್ ಲಾಕ್‍ಡೌನ್ ವೇಳೆ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ 25/30 ವಿಸ್ತೀರ್ಣದ 14 ಅಡಿ ಬಾವಿಯನ್ನು ಬಬ್ಬರೇ ತೋಡಿ ನೀರು ತೆಗೆದು ಸಾಧನೆ ಮಾಡಬೇಕು ಎಂಬ ಛಲದಿಂದ ಈ ಸಾಧನೆ ಮಾಡಿದ್ದಾರೆ.
ನಾವು ಜೀವನದಲ್ಲಿ ಏನೇ ಸಾಹಸವನ್ನು ಅಥವಾ ಸಾಧನೆಯನ್ನು ಮಾಡಲು ಹೊರಟರೆ ಅದರಿಂದ ನಮ್ಮನ್ನು ಹುರಿದುಂಬಿಸುವ ಬದಲು ಕಾಲು ಎಳೆಯುವ ಜನರೇ ಈ ಜಗತ್ತಿನಲ್ಲಿ ಹೆಚ್ಚಾಗಿದ್ದಾರೆ. ಹೌದು, ಬೇರೆಯವರ ಸಾಧನೆಯನ್ನು ಕಂಡು ಇನ್ನೊಬ್ಬರು ಖುಷಿ ಪಡುವ ಬದಲು ಅವರಿಗೆ ನಿರಾಸೆಯನ್ನು ಹುಟ್ಟಿಸುತ್ತಾರೆ. ಅವರನ್ನು ತುಂಬಾನೇ ಆಡಿಕೊಳ್ಳುತ್ತಾರೆ. ಹೀಗಾಗಿ ಅವರು ಮಾನಸಿಕ ನೊಂದು ಆ ಕೆಲಸವನ್ನು ಎಂದಿಗೂ ಮಾಡಬಾರದು ಹಾಗೆ ಮಾತುಗಳನ್ನು ಆಡುತ್ತಾರೆ. ಅಂತಹ ಉದಾಹರಣೆಗೆ ಈ ವ್ಯಕ್ತಿಯ ಹೆಸರು ಕೂಡ ಸೇರಿದೆ. ಮೊಟ್ಟ ಮೊದಲ ಈ ಪದವೀಧರರ ಸಾಧನೆಗೆ ಅಥವಾ ಸಾಹಸಕ್ಕೆ ಊರಿನ ಜನರೆಲ್ಲರೂ ಈತನನ್ನು ನೋಡಿ ಇವರನ್ನು ಹುಚ್ಚರು ಎಂದು ಆಡಿ ಕೊಳ್ಳುತ್ತಿದ್ದರಂತೆ. ಇಷ್ಟೊಂದು ಓದಿ ಇಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಇವರಿಗೆ ಚುಚ್ಚಿ ಮಾತನಾಡುತ್ತಿದ್ದರಂತೆ ಊರಿನ ಎಲ್ಲಾ ಗ್ರಾಮಸ್ಥರು. ಆದರೆ ಈ ವ್ಯಕ್ತಿ ಯಾರ ಮಾತಿಗೂ ಕಿವಿ ಕೊಡದೇ ಹಾಗೂ ಗ್ರಾಮಸ್ಥರ ಯಾವುದೇ ಮಾತುಗಳನ್ನು ಮನಸ್ಸಿನ ಮೇಲೆ ತೆಗೆದುಕೊಳ್ಳದೇ, ಸತತವಾಗಿ ಐದು ತಿಂಗಳವರೆಗೆ ಬಾವಿಯನ್ನು ತೋಡಿದ್ದಾರೇ. ಇದರ ಫಲವಾಗಿ ಬಾವಿಯಿಂದ ನೀರು ಚಿಮ್ಮಿದೆ.
ಇವರನ್ನು ತೆಗಳಿದ ಊರಿನ ಎಲ್ಲಾ ಗಣ್ಯ ವ್ಯಕ್ತಿಗಳು ಹಾಗೂ ಪ್ರತಿ ಮನೆಯವರು ಈಗ ಈ ಬಾವಿಯಿಂದಲೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಬಾವಿ ನೀರಿನಿಂದ 400 ಗಡಿಗಳನ್ನು ಬೆಳಸಿರುವ ಸೂರ್ಯಕಾಂತ್ ಛಲಕ್ಕೆ ಜಿಲ್ಲೆಯ ಜನರು ಜೈಕಾರ ಹಾಕುತ್ತಿದ್ದಾರೆ. ಈ ಸೂರ್ಯಕಾಂತ್ ಎಂಬ ವ್ಯಕ್ತಿಯು ತಮ್ಮ ಸಂತೋಷವನ್ನು ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಮೊದ ಮೊದಲು ನನಗೆ ಎಲ್ಲರೂ ಹುಚ್ಚರು ಅನ್ನುತ್ತಿದ್ದ ಊರಿನ ಎಲ್ಲ ಗ್ರಾಮಸ್ಥರು ಈಗ ಅದೇ ಬಾವಿಯಿಂದ ನೀರನ್ನು ತೆಗೆದುಕೊಂಡು ಹೋಗುತ್ತಿರುವುದು ಸಂತೋಷದ ವಿಷಯವಾಗಿದೆ ಅಂತ ತಮ್ಮ ಅಭಿಪ್ರಾಯವನ್ನು ಹಾಗೂ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಹೌದು ಇದರಿಂದ ತಿಳಿದು ಬರುವ ವಿಷಯ ಅಂದರೆ ಜೀವನದಲ್ಲಿ ನಾವು ಜನರ ಮಾತಿಗೆ ಬೆಲೆ ಕೊಡಬಾರದು ನಾವು ಜೀವನದಲ್ಲಿ ಅಂದು ಕೊಂಡಿರುವುದನ್ನು ನಾವು ಒಳ್ಳೆಯ ದಾರಿಯಲ್ಲಿ ಸಾಧನೆ ಮಾಡಿ ತೋರಿಸಬೇಕು.