ಬಿರಿಯಾನಿ ಎಲೆಯನ್ನು ಮನೆಯಲ್ಲಿ ಸುಟ್ಟರೆ ಖಂಡಿತವಾಗಿ ಹತ್ತಾರು ಲಾಭಗಳು ದೊರೆಯುತ್ತದೆ. ಇದಕ್ಕೆ ವಿಜ್ಞಾನ ಏನು ಹೇಳುತ್ತದೆ ಗೊತ್ತೇ

ಇತರೆ

ನಮಸ್ತೇ ಪ್ರಿಯ ಮಿತ್ರರೇ, ಜೀವನದಲ್ಲಿ ಮನುಷ್ಯ ಎಷ್ಟೇ ಹಣವನ್ನು ಮಾಡಿದರು ಆಸ್ತಿಯನ್ನು ಮಾಡಿದರು ಕೂಡ ಆತನು ಜೀವನದಲ್ಲಿ ನೆಮ್ಮದಿ ಮತ್ತು ಸುಖ ಶಾಂತಿಗಾಗಿ ಹರ ಸಾಹಸವನ್ನೂ ಮಾಡುತ್ತಾನೆ. ಹಾಗೂ ಹಲವಾರು ರೀತಿಯ ಮಾರ್ಗಗಳನ್ನು ಅನುಸರಿಸುತ್ತಾನೆ. ನಿಮಗೆ ಗೊತ್ತಿರದ ವಿಷಯ ಅಂದರೆ ನಮ್ಮ ಸುತ್ತ ಮುತ್ತಲೂ ಅನೇಕ ವಸ್ತುಗಳಿವೆ ಗಿಡಮೂಲಿಕೆಗಳು ಇವೆ. ಇವುಗಳಿಂದ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಗಳು ಆಗುತ್ತಲೇ ಇರುತ್ತವೆ. ಆದರೆ ನಮಗೆ ಅವುಗಳ ಬಗ್ಗೆ ಪರಿಚಯವೇ ಇರುವುದಿಲ್ಲ. ಹೀಗಾಗಿ ಮನಶ್ಶ್ಯಾಂತಿ ಗಾಗೀ ನೀವು ಬಹಳ ಕಷ್ಟ ಪಡುವ ಅಗತ್ಯವಿಲ್ಲ. ಆದರೆ ನಿಮಗೆ ಗೊತ್ತೇ ಕೆಲವೊಂದು ಸುವಾಸನೆ ಸೂಸುವ ಹಾಗೂ ಉಸಿರಾಡಿದಾಗ ಮನಸ್ಸಿಗೆ ಉಲ್ಲಾಸದಾಯಕ ದೊರೆಯುತ್ತದೆ ಅಂಥಹ ವಸ್ತುಗಳು ಇವೆ. ಹೌದು ಮೇಲೆ ಹೇಳಿದ ಹಾಗೆ ಮನುಷ್ಯ ಜೀವನದಲ್ಲಿ ಎಷ್ಟೇ ದುಡ್ಡು ಗಳಿಸಿದರು ಕೂಡ ಮನಾಶ್ಶ್ಯಾಂತಿ ಹಾಗೂ ನೆಮ್ಮದಿ ಸುಖ ಶಾಂತಿ ಕೈಗೆ ಸಿಗದಿರುವ ಜೀವನದ ಅಮೂಲ್ಯ ಮೂಲಗಳು. ಹೀಗಾಗಿ ಬಿರಿಯಾನಿ ಎಲೆಯನ್ನು ಸುಟ್ಟರೆ ಅದರಿಂದ ಬರುವ ವಾಸನೆ ಮನುಷ್ಯನನ್ನು ಆನಂದ ಮಾಯ ಹಾಗೂ ಮನಸ್ಸಿಗೆ ಹಿತಕರ ಉಲ್ಲಾಸದಾಯಕ ಅನ್ನಿಸುತ್ತದೆ.

ಜೊತೆಗೆ ಶಾಂತಿ ಕೂಡ ಸಿಗುತ್ತದೆ. ನೆಮ್ಮದಿ ಕೂಡ ಉಂಟು ಮಾಡುತ್ತದೆ. ಅಂತರದ್ರಲ್ಲಿ ಬಿರಿಯಾನಿ ಅದ್ಭುತವಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಈ ಉಲ್ಲಾಸದಾಯಕ ಸುವಾಸನೆಗೆ ವೈದ್ಯಕೀಯ ಶಾಸ್ತ್ರದಲ್ಲಿ ಅರೋಮತೆರಪಿ ಅಂತ ಕರೆಯುತ್ತಾರೆ. ಆದ್ದರಿಂದ ಮನೆಯಲ್ಲಿ ಬಿರಿಯಾನಿ ಮಾಡುವಾಗ ಘಮಘಮ ಅಂತ ವಾಸನೆ ಬರುತ್ತದೆ. ಒಂದೆರಡು ಬಿರಿಯಾನಿ ಎಲೆಗಳನ್ನು ತೆಗೆದುಕೊಂಡು ಮನೆಯ ಯಾವುದಾದರೂ ಮೂಲೆಯಲ್ಲಿ ಅದನ್ನು ಸುಟ್ಟು ಹಾಕಿ. ಇದರಿಂದಾಗಿ ಮನಸ್ಸಿನಲ್ಲಿರುವ ಎಲ್ಲಾ ಗೊಂದಲ ಹಾಗೂ ಕ್ಲೇಶಗಳು ಕಳೆದು ಮನಸ್ಸು ಪಾರದರ್ಶಕ ವಾಗುತ್ತದೆ. ಮುಖ್ಯವಾಗಿ ನಿಮಗೆ ಹೇಳಬೇಕು ಅಂದರೆ ಮನೆಯಲ್ಲಿ ಬಿರಿಯಾನಿ ಎಲೆಯನ್ನು ಸುತ್ತಿದ ಮೇಲೆ ನೀವು ಹತ್ತು ನಿಮಿಷಗಳ ಕಾಲ ಹೊರಗಡೆ ಇರಬೇಕು. ಬಿರಿಯಾನಿ ಎಲೆ ಚೆನ್ನಾಗಿ ಸುಡಲು ಬಿಡಿ. ಹಾಗೂ ಮನೆಯ ಎಲ್ಲ ಬಾಗಿಲು ಕಿಟಕಿಗಳನ್ನು ಮುಚ್ಚಿ ನೀವು ಪೂರ್ತಿಯಾಗಿ ಹೊರಗೆ ಇರಬೇಕು. ಮನೆಯೊಳಗೆ ಬಂದ ಕೂಡಲೇ ನಿಮಗೆ ಸುವಾಸನೆ ಭರಿತವಾದ ವಾತಾವರಣ ಸೃಷ್ಟಿ ಆಗಿರುವುದನ್ನು ನೀವು ಫೀಲ್ ಮಾಡಬಹುದು. ಅಷ್ಟೊಂದು ಮನೆಯೆಲ್ಲವು ಸುಗಂಧದಿಂದ ವಾಸನೆ ಬರುತ್ತಲೇ ಇರುತ್ತದೆ.

ಇದರಿಂದ ನಿಮಗೆ ನಿಮ್ಮ ಮನಸ್ಸಿಗೆ ಆಹ್ಲಾದಕರವಾಗಿ ಭಾಸವಾಗುತ್ತದೆ. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ಕೊಡುವುದರ ಜೊತೆಗೆ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟವಿದ್ದರೆ ಜಿರಳೆಗಳ ಕಾಟವಿದ್ದರೆ ಈ ಕ್ರಮದಿಂದ ಸುಲಭವಾಗಿ ಓಡಿಸಬಹುದು ಬಿರಿಯಾನಿ ಎಲೆಗಳನ್ನು ಪುಡಿ ಪುಡಿ ಮಾಡಿ ಜಿರಳೆಗಳು ಇರುವ ಜಾಗದಲ್ಲಿ ಎಸೆದಾಗ ಅದರ ಸುವಾಸನೆಯಿಂದ ಜಿರಳೆಗಳು ಮನೆಯನ್ನು ಬಿಟ್ಟು ಓಡಿ ಹೋಗುತ್ತವೆ. ಜಿರಳೆ ಗಳನ್ನು ಸೊಳ್ಳೆಗಳನ್ನು ಹೋಗಲಾಡಿಸಲು ನೀವು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗದೇ ಇದ್ದಾಗ ನೀವು ಈ ಬಿರಿಯಾನಿ ಎಲೆಗಳ ಉಪಯೋಗವನ್ನು ಮಾಡಬಹುದು. ಇದು ಬಹಳ ಪರಿಣಾಮಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ, ಸಕ್ಕರೆ ಕಾಯಿಲೆ ಇರುವವರು ಈ ಬಿರಿಯಾನಿ ಎಲೆಯನ್ನು ನೀರಿನಲ್ಲಿ ಕುದಿಸಿ ನಂತರ, ಆ ನೀರನ್ನು ಕುಡಿದರೆ ನಿಮ್ಮ ಕಾಯಿಲೆ ಹತೋಟಿಗೆ ಬರುತ್ತದೆ. ನಮ್ಮ ಅಡುಗೆ ಮನೆಯಲ್ಲಿ ಇರುವ ಬಿರಿಯಾನಿ ಇಷ್ಟೊಂದು ಲಾಭದಾಯಕ ಅಂದರೆ ಅಡುಗೆಗೆ ಮೀರಿ ಕೂಡ ನಾವು ಇದನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಹೌದು ನಿಸರ್ಗದಲ್ಲಿ ಬಿರಿಯಾನಿಗಿರುವ ಈ ಅದ್ಭುತವಾದ ಸುವಾಸನೆ ಒಂದು ಕೊಡುಗೆ ಹಾಗೂ ವರದಾನ ಅಂತ ಹೇಳಿದರೆ ತಪ್ಪಾಗಲಾರದು. ಶುಭದಿನ.

Leave a Reply

Your email address will not be published. Required fields are marked *