ಕಿಡ್ನಿ ಅನ್ನು ಆರೋಗ್ಯವಾಗಿರಿಕೊಳ್ಳಲು ಉತ್ತಮವಾದ ಸಲಹೆಗಳು.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಅನಾರೋಗ್ಯ ಬರುವುದಕ್ಕಿಂತ ಮುಂಚಿತವಾಗಿ ಯಾರು ಕೂಡ ಕಾಳಜಿ ವಹಿಸುವುದಿಲ್ಲ. ನಮ್ಮ ದೇಹವನ್ನು ಕಾಯಿಲೆಗಳು ಬಂದು ಸೇರಿದಾಗ ಈ ರೋಗವು ಹೇಗೆ ಬಂತು ಇದಕ್ಕೆ ಏನೆಲ್ಲ ಮಾಡಬೇಕು ಅಂತ ನಾವು ಇನ್ನೊಬ್ಬರ ಹತ್ತಿರ ಸಲಹೆಯನ್ನು ಕೇಳುತ್ತೇವೆ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಅವುಗಳಿಗೆ ಪರಿಹಾರವನ್ನು ಹುಡುಕುತ್ತಾ ಕುಳಿತುಕೊಳ್ಳುತ್ತೇವೆ ವಿನಃ ಕಾಯಿಲೆಗಳು ಬಂದು ಸೇರದಂತೆ ಮುಂಚಿತವಾಗಿ ಜಾಗೃತಿಯನ್ನು ವಹಿಸುವುದಿಲ್ಲ. ಹಾಗಾಗಿ ನಾವು ಆರೋಗ್ಯದ ಮೇಲೆ ತೀಕ್ಷ್ಣವಾದ ಗಮನವನ್ನು ಹರಿಸುವುದಿಲ್ಲ ಇದೇ ನಿರ್ಲಕ್ಷ್ಯಕ್ಕೆ ನಾವು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ನಮ್ಮ ವೈದ್ಯರು ಹೇಳುತ್ತಾರೆ ಪ್ರಿಕೋಷನ್ ಇಸ್ ಬೆಟರ್ ದೆನ್ ಕ್ಯೂರ್ ಎಂದು. ಹೌದು ಈ ಮಾತು ನಿಜಕ್ಕೂ ಸತ್ಯವಿದೆ. ಆದರೆ ಈ ಮಾತನ್ನು ಯಾರೂ ಪಾಲನೆ ಮಾಡುವುದಿಲ್ಲ. ಇದರ ಅರ್ಥವೇನೆಂದರೆ ರೋಗಗಳು ಬಾರದಂತೆ ತಡೆಯಲು ಹಾಗೂ ಚಿಕಿತ್ಸೆಯನ್ನು ತಪ್ಪಿಸಲು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳೇ ಸೂಕ್ತ ಅಂತ ಹೇಳುತ್ತಾರೆ ವೈದ್ಯರು. ನಮ್ಮ ಆರೋಗ್ಯವೂ ದೇಹದ ಪ್ರತಿಯೊಂದು ಅಂಗಗಳ ಮೇಲೆ ನಿರ್ಭರ ಆಗಿರುತ್ತವೆ. ದೇಹದ ಅಂಗಗಳು ಸರಿಯಾಗಿ ಆರೋಗ್ಯವಾಗಿ ಇದ್ದರೆ ವ್ಯಕ್ತಿಯು ಸದಾ ಕಾಲ ಕಾಯಿಲೆಗಳಿಗೆ ತುತ್ತಾಗದಂತೆ ಇರುತ್ತಾನೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕಿಡ್ನಿ ಅನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಅನುಸರಣೆ ಮಾಡಬೇಕಾದ ಕೆಲವೊಂದು ಮಾರ್ಗದರ್ಶನವನ್ನು ತಿಳಿಸಿ ಕೊಡುತ್ತೇವೆ ಬನ್ನಿ.

 

ಮೊದಲಿಗೆ ಹೇಳುವುದಾದರೆ ಇತ್ತೀಚಿನ ದಿನಗಳಲ್ಲಿ ತಲೆ ನೋವು ಬಂದರೆ ಮೈ ಕೈ ನೋವು ಬಂದರೆ ಜ್ವರ ಶೀತ ನೆಗಡಿ ಕೆಮ್ಮು ಬಂದರೆ ನಾವು ಮೆಡಿಕಲ್ ಶಾಪ್ ನಲ್ಲಿ ಸಿಗುವ ಪೈನ್ ಕ್ಯೂಲರ್ ಮಾತ್ರೆಗಳನ್ನು ತೆಗೆದುಕೊಂಡು ಸೇವನೆ ಮಾಡುತ್ತೇವೆ. ಆದರೆ ಗೆಳೆಯರೇ ನಿಮಗೆ ಗೊತ್ತೇ ಪೈನ್ ಕ್ಯುಲರ್ ಮಾತ್ರೆಗಳು ಅಷ್ಟೇ ಅಲ್ಲದೆ ಇನ್ನಿತರ ಯಾವುದೇ ಬಗೆಯ ಮಾತ್ರೆಗಳನ್ನು ನಿತ್ಯವೂ ಸತತವಾಗಿ ಸೇವನೆ ಮಾಡುತ್ತಾ ಬಂದ್ರೆ ಮುಂದೆ ಭವಿಷ್ಯದಲ್ಲಿ ಕಿಡ್ನಿ ಮೇಲೆ ಬಹಳ ಭೀಕರವಾದ ಪ್ರಭಾವ ಬೀರುತ್ತದೆ. ಅದರಲ್ಲೂ ನೀವು ಚಿಕ್ಕ ವಯಸ್ಸಿನವರು ಆಗಿದ್ದಾರೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ಇದಕ್ಕೆ ಪರಿಹಾರ ಅಂದರೆ ನೀವು ನಿತ್ಯವೂ ಯೋಗವನ್ನು ಧ್ಯಾನವನ್ನು ಮಾಡಿ ನಿಮಗೆ ತಲೆನೋವು ಸೊಂಟ ನೋವು ಮತ್ತಿತರ ಸಮಸ್ಯೆಗಳು ಬರುವುದಿಲ್ಲ. ಮುಖ್ಯವಾಗಿ ನೀವು ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳ ಮೊರೆ ಹೋಗುವುದು ಸೂಕ್ತವಲ್ಲ ಗೆಳೆಯರೇ. ಇನ್ನೂ ಡಯಾಬಿಟೀಸ್ ರೋಗಿಗಳು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಆದಷ್ಟು ಕಡಿಮೆ ಮಾಡಿಕೊಳ್ಳುತ್ತಾ ಬರಬೇಕು. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಅನ್ನುವುದು ಪ್ರತಿಯೊಬ್ಬರ ಮನೆಯಲ್ಲಿ ಇದ್ದೇ ಇರುತ್ತದೆ. ಹೀಗಾಗಿ ಅವರು ಮಾತ್ರೆಗಳನ್ನು ಇನ್ಸುಲಿನ್ ಗಳನ್ನು ತೆಗೆದು ಕೊಳ್ಳುತ್ತಾ ಇರುತ್ತಾರೆ.

 

ಇದರಿಂದ ಕಿಡ್ನಿ ಮೇಲೆ ಬಹಳ ಕೆಟ್ಟದಾದ ಪ್ರಭಾವ ಬೀರುತ್ತದೆ. ಆದ್ದರಿಂದ ಮಧುಮೇಹಿಗಳು ತುಂಬಾ ಜಾಗ್ರತೆ ವಹಿಸುವುದು ಉತ್ತಮ. ಇನ್ನೂ ಮಧ್ಯಪಾನ ಮತ್ತು ಧೂಮಪಾನ ಅತಿಯಾಗಿ ಮಾಡುತ್ತಾರೆ ಅವರಿಗೂ ಕೂಡ ಕಿಡ್ನಿ ಸಮಸ್ಯೆ ಅನ್ನುವುದು ಬಿಡುವುದಿಲ್ಲ. ಇಂದಲ್ಲ ನಾಳೆ ಅವರ ದೇಹವನ್ನು ಸೇರಿಕೊಳ್ಳುತ್ತದೆ ಆದ್ದರಿಂದ ಇಂತಹ ಕೆಟ್ಟ ಚಟಗಳಿಂದ ನೀವು ದೂರವಿದ್ದಷ್ಟೂ ನಿಮಗೆ ಒಳಿತು ಮಿತ್ರರೇ. ಇನ್ನೂ ಜಂಕ್ ಫುಡ್ ಕರಿದ ತಿಂಡಿಗಳನ್ನು ಹಾಗೂ ಮಸಾಲೆ ಆಹಾರಗಳು ಮತ್ತು ಉಪ್ಪಿನಕಾಯಿ ಅನ್ನು ಅತಿಯಾಗಿ ಸೇವನೆ ಮಾಡಿದರು ಕೂಡ ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ನೀವು ಇವುಗಳಿಂದ ದೂರವಿರಿ. ಜೊತೆಗೆ ನಿಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಬೇಡಿ. ಇದು ಕೂಡ ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ. ಇನ್ನೂ ಕೊನೆಯದಾಗಿ ನೀರು. ಹೌದು ನೀರು ದೇಹಕ್ಕೆ ಅಮೃತ ಇದ್ದ ಹಾಗೆ. ಯಾರು ನೀರು ಕಡಿಮೆ ಕುಡಿಯುತ್ತಾರೆ ಅವರಿಗೆ ಕಿಡ್ನಿ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ ಇದ್ದ ಹಾಗೆ ಆದ್ದರಿಂದ ನೀವು ನಿತ್ಯವೂ ಕನಿಷ್ಠ 7-8 ಲೋಟ ನೀರು ಕುಡಿಯಿರಿ. ಇದರಿಂದ ನಿಮಗೆ ಕಿಡ್ನಿ ಸಮಸ್ಯೆಗಳು ಅನ್ನುವುದು ಎಂದಿಗೂ ಕಾಣಿಸಿಕೊಳ್ಳುವುದಿಲ್ಲ. ನೀರು ಅಗತ್ಯಕ್ಕಿಂತ ಕಡಿಮೆ ಕುಡಿಯಬೇಡಿ. ನಿಮಗೆ ನೆನಪು ಆಗಲಿಲ್ಲವೆಂದರೆ ಮೊಬೈಲ್ ನಲ್ಲಿ ಸೆಟ್ ಮಾಡಿಕೊಳ್ಳಿ. ನೀರು ಮೂತ್ರ ಪಿಂಡಕ್ಕೆ ಬಹಳ ಅಗತ್ಯ. ಏಕೆಂದರೆ ಅದು ದೇಹದಲ್ಲಿ ಬೇಡವಾದ ವಸ್ತುಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ನೀರು ನಿತ್ಯವೂ ಕುಡಿಯುತ್ತಾ ಬನ್ನಿ. ಶುಭದಿನ.

Leave a Reply

Your email address will not be published. Required fields are marked *