ಉದುರಿದ ಕೂದಲು ಮತ್ತೆ ದಟ್ಟವಾಗಿ ಬೆಳೆಯುತ್ತೆ, ಕೂದಲಿನ ಎಂತಹ ಸಮಸ್ಯೆ ಇದ್ದರು ಇದನ್ನು ತಯಾರಿಸಿ ಬಳಸಿ ಚಮತ್ಕಾರ ನೋಡಿ!!!

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಸ್ನೇಹಿತರೆ, ದಟ್ಟವಾದ ಉದ್ದವಾದ ಕೂದಲು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೇಶರಾಶಿ ಇದ್ದರೆ ಮಾತ್ರವೇ ಹೆಣ್ಣು ಸುಂದರವಾಗಿ ಕಾಣುವಳು. ಅದೇ ಕೂದಲು ಇಲ್ಲದೇ ಇದ್ದರೆ ಹೆಣ್ಣಿಗೆ ಎಷ್ಟೇ ಚಿನ್ನದ ಒಡವೆಗಳನ್ನು ಹಾಕಿ ಅಲಂಕಾರ ಮಾಡಿದರು ಕೂಡ ಆ ಅಲಂಕಾರಕ್ಕೆ ಯಾವುದೇ ರೀತಿಯ ಮೆಚ್ಚುಗೆ ಇರುವುದಿಲ್ಲ ಹಾಗೂ ಅದು ಸುಂದರವಾಗಿ ಕಾಣುವುದಿಲ್ಲ. ಹೆಣ್ಣು ಮಕ್ಕಳ ಸೌಂದರ್ಯದ ಗುಟ್ಟು ಅವರ ಕೂದಲಿನಲ್ಲಿ ಇದೆ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಮೇಲೆ ಹೇಳಿದ ಹಾಗೆ ನಾವು ಎಷ್ಟು ಅಲಂಕಾರವನ್ನು ಮಾಡಿಕೊಂಡರು ಕೂಡ ನಮ್ಮ ತಲೆಕೂದಲು ಚೆನ್ನಾಗಿಲ್ಲ ಅಂದರೆ ಅದು ನಮ್ಮ ಅಲಂಕಾರಕ್ಕೆ ಸರಿ ಹೊಂದುವುದಿಲ್ಲ. ಅವರು ಕುರೂಪಿ ಆಗಿ ಕಾಣುತ್ತಾರೆ. ಹೀಗಾಗಿ ಕೂದಲು ದಟ್ಟವಾಗಿ ಸುಂದರವಾಗಿ ಉದ್ದವಾಗಿ ಬೆಳೆಸಿಕೊಳ್ಳಲು ಏನೇನೋ ಹರಸಾಹಸ ಮಾಡುತ್ತಾರೆ. ಎಲ್ಲ ಬಗೆಯ ಪ್ರಯತ್ನಗಳನ್ನು ಎಡಬಿಡದೆ ಮಾಡುತ್ತಾರೆ. ಎಷ್ಟು ಬೇಕಾದರೂ ಹಣವನ್ನು ಸುರಿಯುತ್ತಾರೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಕೂದಲು ತನ್ನ ನೈಜ ಸ್ಥಿತಿಗೆ ತಲುಪುವುದು ಬಹಳ ಕಷ್ಟ ಗೆಳೆಯರೇ. ನಿಮಗೆ ಗೊತ್ತೇ ಮೊದಲಿನ ಕಾಲದ ಜನರು ಶುದ್ಧವಾದ ಕೊಬ್ಬರಿ ಎಣ್ಣೆ ಹರಳೆಣ್ಣೆ ಅನ್ನು ತಲೆಗೆ ಹಚ್ಚಿಕೊಂಡು ಶೀಗಕಾಯಿ ಪುಡಿ ಬಳಕೆ ಮಾಡಿಕೊಂಡು ತಲೆಸ್ನಾನ ಮಾಡುತ್ತಿದ್ದರು.

 

ಹೀಗಾಗಿ ಅವರು ಇಂತಹ ಕೂದಲಿನ ಸಮಸ್ಯೆಯನ್ನು ವಯಸ್ಸಾದ ಮೇಲೂ ಕೂಡ ಅನುಭವಿಸುತ್ತೀರಲಿಲ್ಲ. ಏಕೆಂದ್ರೆ ಅವುಗಳು ಅಷ್ಟೊಂದು ಪರಿಣಾಮಕಾರಿ ಆಗಿದ್ದವು. ಆದರೆ ಈಗಿನ ಆಧುನಿಕ ಜೀವನ ಶೈಲಿಯಿಂದಾಗಿ ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಪ್ರೊಡಕ್ಟ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ರಾಸಾಯನಿಕ ಯುಕ್ತ ಶಾಂಪೂವನ್ನು ಹಾಗೂ ಎಣ್ಣೆಯನ್ನು ಬಳಕೆ ಮಾಡುವುದರಿಂದ ನಮ್ಮ ನಿಮ್ಮ ತಲೆ ಕೂದಲು ಆರೈಕೆ ಸರಿ ಹೋಗುವುದು ಬಲು ಕಷ್ಟ ಗೊತ್ತೇ? ಹೌದು ಪ್ರತಿಯೊಬ್ಬರಿಗೂ ಉದ್ದವಾದ ಕೂದಲು ಇಷ್ಟವಾಗುತ್ತದೆ ಅಂಥವರು ಏನು ಮಾಡಬೇಕೆಂದರೆ ನಾವು ತಿಳಿಸುವ ಇಂದಿನ ಲೇಖನದಲ್ಲಿ ಮನೆಮದ್ದು ಬಳಕೆ ಮಾಡಿ ನೋಡಿ. ಹೌದು ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ನೀವು ಈ ತಲೆ ಕೂದಲು ಸಮಸ್ಯೆಯಿಂದ ಪಾರಾಗಬಹುದು. ಹೌದು ಈ ಮನೆಮದ್ದು ತುಂಬಾನೇ ಪರಿಣಾಮಕಾರಿ ಆಗಿದೆ ಖಂಡಿತವಾಗಿ ನಿಮಗೆ ಫಲಿತಾಂಶ ದೊರೆಯುತ್ತದೆ. ತಪ್ಪದೇ ನೀವು ಒಂದು ಬಾರಿ ಮಾಡಿ ನೋಡಿ. ಹಾಗಾದ್ರೆ ಬನ್ನಿ ಅದರ ಬಗ್ಗೆ ತಿಳಿಯೋಣ.

 

ಮೊದಲಿಗೆ ಏನು ಮಾಡಬೇಕು ಅಂದರೆ ಐದು ಚಮಚ ಟೀ ಪುಡಿಯನ್ನು ತೆಗೆದುಕೊಳ್ಳಿ. ಅದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ ನಂತರ ಅದರ ಕಾಫಿ ಪುಡಿ ಹಾಕಿಕೊಳ್ಳಿ. ಮನೆಯಲ್ಲಿ ಸಿಗುವ ಯಾವುದಾದರೂ ಕಾಫಿ ಪುಡಿ ಬಳಸಬಹುದು ಬಳಿಕ ಅದರಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಎಷ್ಟು ಪ್ರಮಾಣದಲ್ಲಿ ಟೀ ಮತ್ತು ಕಾಫಿ ಪುಡಿ ತೆಗೆದು ಕೊಳ್ಳುತ್ತೀರಿ ಅಷ್ಟೇ ಪ್ರಮಾಣದ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಿಮ್ಮ ತಲೆಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಿ. ನಿಮ್ಮ ಕೂದಲು ಬುಡಕ್ಕೆ ಹಚ್ಚಿ ಸ್ವಲ್ಪ ನೆತ್ತಿಗೆ ತಾಕುವ ಹಾಗೆ ಹಚ್ಚಿಕೊಂಡು ಮಸಾಜ್ ಮಾಡಿ ಯಾವುದೇ ಕಾರಣಕ್ಕೂ ನಿಮ್ಮ ಬೆರಳಿನ ಉಗುರುಗಳು ನೆತ್ತಿಯ ಭಾಗಕ್ಕೆ ತಾಕದಂತೆ ನೋಡಿಕೊಂಡು ಮಸಾಜ್ ಮಾಡಿಕೊಂಡು ಪೂರ್ತಿಯಾಗಿ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಂಡು ನಂತರ 20 ನಿಮಿಷಗಳ ಹಾಗೆ ಬಿಡಿ ಆಮೇಲೆ ಬೆಚ್ಚಗಿರುವ ನೀರಿನಿಂದ ಯಾವುದೇ ಶಾಂಪು ಬೇಕಾದರೂ ಬಳಸಿ ತಲೆಸ್ನಾನ ಮಾಡಿ ಈ ರೀತಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ 20 ದಿನಗಳಲ್ಲಿ ನಿಮಗೆ ಫಲಿತಾಂಶ ತಿಳಿಯುತ್ತದೆ. ಹೌದು ತುಂಬಾನೇ ಸರಳವಾದ ಸುಲಭವಾದ ಮನೆಮದ್ದು ಕೂಡ ಇದಾಗಿದೆ. ನಿಮಗೆ ನಿಮ್ಮ ಕೂದಲು ಸುಂದರವಾಗಿ ದಟ್ಟವಾಗಿ ಬೇಕೆಂದರೆ ಹೀಗೆ ಮಾಡಿ ಶುಭದಿನ.

Leave a Reply

Your email address will not be published. Required fields are marked *