ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ನೆನೆಸಿದ ನೀರನ್ನು ಕುಡಿಯಿರಿ ನಂತ್ರ ಅದರ ಪ್ರಯೋಜನ ನೋಡಿ!

ಆರೋಗ್ಯ

ನಮಸ್ತೇ ನಮಸ್ತ ನಾಡಿನ ಬಂಧು ಮಿತ್ರರಿಗೆ, ಒಣಹಣ್ಣುಗಳಲ್ಲಿರುವ ಪ್ರಯೋಜನಗಳ ಬಗ್ಗೆ ವಿಷಯ ಬಂದಾಗ, ನಾವೆಲ್ಲಾ ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ, ಒಣದ್ರಾಕ್ಷಿಯನ್ನು ಮಾತ್ರ ಮರೆತೇ ಬಿಡುತ್ತೇವೆ! ನಮಸ್ತೇ ಪ್ರಿಯ ಆತ್ಮೀಯ ಗೆಳೆಯರೇ, ಒಣ ದ್ರಾಕ್ಷಿಯುವು ಭಾರತದ ಪ್ರತಿಯೊಂದು ಮನೆಯಲ್ಲಿಯೂ ಬಳಸಲಾಗುತ್ತದೆ. ಇದರಲ್ಲಿ ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ನಿಶ್ಯಕ್ತಿ ಸುಸ್ತು ಆಯಾಸ ದಣಿವು ಅನ್ನುವ ನೂರೆಂಟು ಸಮಸ್ಯೆಗಳನ್ನು ವಯಸ್ಸಿಗೂ ಮುನ್ನವೇ ಅನುಭವಿಸುತ್ತಿದ್ದೇವೆ. ಇಂತಹ ಅನೇಕ ಸಮಸ್ಯೆಗಳಿಂದ ಯಾವುದೇ ಸರಳವಾದ ಕೆಲಸವನ್ನು ಕೂಡ ಮಾಡಲು ಮನಸ್ಸಾಗುವುದಿಲ್ಲ. ಒಣ ದ್ರಾಕ್ಷಿ ಬೆಲೆಯಲ್ಲಿ ಕಡಿಮೆ ಸಿಗುತ್ತದೆ ಎಂದು ಹೆಚ್ಚಿನವರು ಇದಕ್ಕೆ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಆದರೆ ಇಂದಿನ ಲೇಖನದಲ್ಲಿ ಇದರ ಬಗ್ಗೆ ಆರೋಗ್ಯಕರ ಮಾಹಿತಿಯನ್ನು ನಿಮಗೆ ತಿಳಿಸಿ ಕೊಟ್ಟರೆ ನೀವು ಇಂದಿನಿಂದ ಒಣದ್ರಾಕ್ಷಿ ತಿನ್ನಲು ಶುರು ಮಾಡುತ್ತೀರಿ. ಹೌದು ಗೆಳೆಯರೇ, ಪ್ರತಿನಿತ್ಯವೂ ಬೆಳಗ್ಗೆ ಒಣದ್ರಾಕ್ಷಿ ನೀರು ಕುಡಿದರೆ ಅದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳಾಗುತ್ತವೆ.

 

ನಮ್ಮ ಆರೋಗ್ಯವೂ ಹದಗೆಡಲು ಎರಡು ಮುಖ್ಯವಾದ ಕಾರಣಗಳಿವೆ ಗೆಳೆಯರೇ, ಒಂದು ನಾವು ಸೇವಿಸಿದ ಆಹಾರವೂ ಚೆನ್ನಾಗಿ ಜೀರ್ಣವಾಗದೇ ಇದ್ದ ಕಾರಣ ಹಾಗೂ ಸರಿಯಾಗಿ ಮಲಬದ್ಧತೆ ಆಗದೇ ಇರುವ ಕಾರಣ ಅಂಥವರು ರಾತ್ರಿ ಒಣದ್ರಾಕ್ಷಿ ನೀರಿನಲ್ಲಿ ಹಾಕಿ ಸೇವನೆ ಮಾಡಬೇಕು. ಏಕೆಂದರೆ ಈ ಒಣದ್ರಾಕ್ಷಿ ಸೇವನೆಯಿಂದ ಇದರಲ್ಲಿ ಅಧಿಕ ಪ್ರಮಾಣದ ನಾರಿನ ಅಂಶ ಇರುವ ಕಾರಣ ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಾಗೂ ಇದರಲ್ಲಿ ಹಲವಾರು ಪೋಷಕಾಂಶಗಳು ಇರುವ ಕಾರಣ ಒಣದ್ರಾಕ್ಷಿ ನೀರಿನ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಒಣದ್ರಾಕ್ಷಿ ನೀರು ಕುಡಿದರೆ ಅದರಿಂದ ಆರೋಗ್ಯ ಹಾಗೂ ಯಕೃತ್ ನ ಸಮಸ್ಯೆಗಳನ್ನು ನಿವಾರಿಸಬಹುದು. ಮನೆಯಲ್ಲೇ ಒಣದ್ರಾಕ್ಷಿ ನೀರು ಮಾಡಿಕೊಂಡು ಪ್ರತಿನಿತ್ಯವೂ ಸೇವನೆ ಮಾಡಬಹುದು. ರಾತ್ರಿ ಒಂದು ಲೋಟದಲ್ಲಿ ನೀರು ಹಾಕಿ ಅದರಲ್ಲಿ 6-8 ಒಣದ್ರಾಕ್ಷಿ ಹಾಕಿ ಮರುದಿನ ಅದರ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಹಾಗೂ ಮೇಲೆ ಹೇಳಿದ ಹಾಗೆ, ಯಕೃತ್ ಸಮಸ್ಯೆಯನ್ನು ಕೂಡ ತಡೆಹಿಡಿಯಬಹುದು.
ಇನ್ನೂ ಯಾರಿಗೆ ದೇಹದಲ್ಲಿ ಶಕ್ತಿ ಸಾಮರ್ಥ್ಯದ ಪ್ರಮಾಣ ಕಡಿಮೆ ಇರುತ್ತದೆಯೋ ಅಂಥವರಿಗೆ ಈ ಒಣದ್ರಾಕ್ಷಿ ನೀರು ದಿವ್ಯ ಔಷಧ ಅಂತ ಹೇಳಬಹುದು.

 

ಹೌದು ದೇಹಕ್ಕೆ ಶಕ್ತಿ ಸಿಗಲೆಂದು ಅನೇಕ ಜನರು ಅನೇಕ ಬಗೆಯ ಜ್ಯೂಸ್ ಅನ್ನು ಕುಡಿಯುತ್ತಾರೆ ಅದರ ಬದಲಾಗಿ ನೀವು ಈ ಒಣದ್ರಾಕ್ಷಿ ನೀರು ಹಾಗೂ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ನಿಮಗೆ ಬೇಕಾದಷ್ಟು ಶಕ್ತಿ ಸಿಗುತ್ತದೆ. ಹಾಗೂ ಮುಖ್ಯವಾಗಿ ಇದರಲ್ಲಿ ಯಾವುದೇ ಕೃತಕವಾದ ಸಕ್ಕರೆಯ ಅಂಶ ಇರುವುದಿಲ್ಲ. ಇದನ್ನು ನೀವು ನಿರಾತಂಕ ಇಲ್ಲದೆ ಆರಾಮವಾಗಿ ಸೇವನೆ ಮಾಡಬಹುದು. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಇನ್ನೂ ಉತ್ತಮ. ಹಾಗೂ ಇದು ನಮ್ಮ ಮುಖದ ಚರ್ಮಕ್ಕೆ ಬಹಳ ಉತ್ತಮ. ಒಣದ್ರಾಕ್ಷಿ ಸೇವನೆಯಿಂದ ಹಾಗೂ ಅದರಲ್ಲಿ ರಕ್ತವನ್ನು ಶುದ್ಧೀಕರಿಸುವ ತಾಕತ್ತನ್ನು ಹೊಂದಿದೆ ಈ ಒಣದ್ರಾಕ್ಷಿ.
ಇದರಲ್ಲಿ ಇರುವ ಅಂಶಗಳು ಚರ್ಮ ಸುಕ್ಕು ಗಟ್ಟುವಿಕೇ ತಡೆಯುತ್ತದೆ. ಮತ್ತು ನೆನೆಸಿದ ಒಣದ್ರಾಕ್ಷಿ ಹಾಗೂ ಅದರ ನೀರನ್ನು ಕುಡಿಯುವುದರಿಂದ ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಹಾಗೂ ಇದರಿಂದ ನಮ್ಮ ದೇಹದಲ್ಲಿ ಅಡಗಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಒಣದ್ರಾಕ್ಷಿಯಲ್ಲಿ ಬೋರೋಲಿನ್ ಎಂಬ ಅಂಶವಿರುವ ಕಾರಣ ಇದು ಮೂಳೆಗಳಿಗೆ ಉತ್ತಮ. ಬಹಳ ಉಪಯುಕ್ತವಾಗುತ್ತದೆ ಹೀಗೆ ಮಾಡಿದರೆ, ಖಂಡಿತವಾಗಿ ನೀವು ಹೀಗೇ ಮಾಡಿ. ತುಂಬಾನೇ ಸರಳವಾಗಿದೆ ಕೇವಲ ನೀರು ಒಣದ್ರಾಕ್ಷಿ. ನೂರೆಂಟು ಲಾಭಗಳನ್ನು ಪಡೆದುಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *