ಕೊಕ್ಕಡದಲ್ಲಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೂ ಮಹಾಭಾರತಕ್ಕೂ ಇರೋ ನಂಟೇನು ಗೊತ್ತಾ?

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಮನುಷ್ಯನ ಬಳಿ ಬೇಕಾದಷ್ಟು ಐಶ್ವರ್ಯ ಇದ್ದರೂ ಆರೋಗ್ಯ ಅನ್ನೋದು ಇಲ್ಲದೆ ಹೋದ್ರೆ ಆತನ ಬಳಿ ಯಾವ ಸಂಪತ್ತು ಇದ್ದರೂ ಅದು ನಷ್ವರವೇ, ಭೂಮಿಯ ಮೇಲೆ ಹೊಟ್ಟಿದ ಪ್ರತಿಯೊಬ್ಬರೂ ದೇವರ ಹತ್ತಿರ ಯಾವಾಗಲೋ ಬೇಡಿಕೊಳ್ಳುವುದು ಎಂದರೆ ಅದು ಆರೋಗ್ಯವನ್ನು ನೀಡು ಎಂದು. ಈ ದೇವನ ಸನ್ನಿಧಾನಕ್ಕೆ ಬಂದರೆ ಆ ಕರುಣಾಮಯಿ ಆದ ಪರಮಾತ್ಮ ನಮಗೆ ಆರೋಗ್ಯ ಭಾಗ್ಯವನ್ನು ಕರುಣಿಸುತ್ತಾನೆ. ಇವತ್ತಿನ ಲೇಖನದಲ್ಲಿ ಕೊಕ್ಕಡದ ವೈದ್ಯನಾಥೇಶ್ವರ ದೇವರನ್ನು ದರ್ಶನ ಮಾಡಿ ಪುನೀತ ರಾಗೋಣ. ಕುಕ್ಕುಟ ಪುರ ಎಂದು ಕರೆಯುತ್ತಿದ್ದ ಈ ಊರಿನಲ್ಲಿ ವೈದ್ಯನಾಥೇಶ್ವರ ನೆಲೆ ನಿಂತಿದ್ದು, ಈ ದೇವಾಲಯಕ್ಕೆ ಸಾವಿರಾರು ವರ್ಷಗಳಷ್ಟು ಪುರಾತನವಾದ ಇತಿಹಾಸ ಇದೆ. ಇಲ್ಲಿನ ನಾಗ ಬನದಲ್ಲಿ ನಾಗ ದೇವನ ಮೂರ್ತಿಗಳು ಇದ್ದು, ಈ ದೇವನನ್ನು ಆರಾಧಿಸುವುದರಿಂದ ಸರ್ಪ ದೋಷ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ದ್ವಾಪರ ಯುಗದಲ್ಲಿ ಇಲ್ಲಿನ ಉದ್ಭವ ಲಿಂಗವನ್ನು ಪಾಂಡವರು ದರ್ಶನ ಮಾಡಿದ್ದು, ಇಲ್ಲಿನ ಕಲ್ಯಾಣಿಯನ್ನು ಭೀಮ ಸೇನಾ ನಿರ್ಮಿಸಿದನು ಎಂಬ ಐತಿಹ್ಯ ಇದೆ. ಇಲ್ಲಿನ ಕಲ್ಯಾಣಿಯಲ್ಲಿ ಮಿಂದೆದ್ದರೇ ಕುಷ್ಟ ರೋಗ ನಿವಾರಣೆ ಆಗುತ್ತೆ ಅಂತೆ. ಅಲ್ಲದೆ ಚರ್ಮ ರೋಗ, ಮನೋರೋಗ ಹಾಗೂ ಅನೇಕ ಬಗೆಯ ರೋಗಗಳಿಂದ ಬಳಲುವವರು ಇಲ್ಲಿನ ಕಲ್ಯಾಣಿಯ ನೀರನ್ನು ಮೈ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳು ಎಲ್ಲವೂ ಆ ವೈದ್ಯನಾಥೇಶ್ವರ ನ ಕೃಪೆಯಿಂದ ದೂರವಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆ ಆಗಿದೆ.

 

ಉಬ್ಬಸ ರೋಗ, ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಇರುವವರು ಈ ದೇವರ ಸನ್ನಿಧಿಗೆ ಬಂದು ಪರಮಾತ್ಮನಿಗೆ ಹಗ್ಗವನ್ನು ಸಮರ್ಪಿಸು ತ್ತೇವೆ ಎಂದು ಹರಕೆ ಹೊತ್ತುಕೊಂಡರೆ ಆ ರೋಗಗಳು ಎಲ್ಲವೂ ದೂರವಾಗುವುದು ಅಲ್ಲದೆ ಬದುಕಿನ ಕೊನೆ ತನಕವೂ ಈ ರೋಗಗಳು ಮತ್ತೆ ಹರಕೆ ಸಲ್ಲಿಸಿದ ವ್ಯಕ್ತಿಗೆ ಕಾಣಿಸಿಕೊಳ್ಳುವುದಿಲ್ಲ ವಂತೆ. ಹೀಗಾಗಿ ಸಾವಿರಾರು ಮಂದಿ ಈ ದೇವನಲ್ಲಿ ಪ್ರಾರ್ಥನೆ ಮಾಡಿ ತಮ್ಮ ರೋಗಗಳಿಂದ ಬಿಡುಗಡೆ ಪಡೆದಿದ್ದಾರೆ. ಮನುಷ್ಯರು ಮಾತ್ರವಲ್ಲ, ಜಾನುವಾರುಗಳಿಗೆ ತಗುಲಿರುವ ರೋಗಗಳನ್ನು ಈ ದೇವರು ಗುಣ ಮಾಡುತ್ತಾನೆ. ಇಲ್ಲಿನ ದೇವರು ಅನಾರೋಗ್ಯವನ್ನು ದೂರ ಮಾಡಿ ಆರೋಗ್ಯವನ್ನು ಕರುಣಿಸುವುದರಿಂದ ಈತನನ್ನು ವೈದ್ಯನಾಥೇಶ್ವರ ಎಂದೇ ಕರೆಯಲಾಗುತ್ತದೆ. ಇನ್ನೂ ಇಲ್ಲಿನ ಕಲ್ಯಾಣಿಯ ಮಧ್ಯದಲ್ಲಿ ನೀಲಕಂಠ ಸ್ವಾಮಿಯ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ನರಸಿಂಹ ದೇವರಾಯ ಎಂಬ ರಾಜ ಯುದ್ಧ ಗೆದ್ದಾಗ ಈ ಕ್ಷೇತ್ರದಲ್ಲಿ ಲಿಂಗವನ್ನು ಸ್ಥಾಪನೆ ಮಾಡಿದ ಎಂದು ಇಲ್ಲಿನ ಶಾಸನಗಳ ಮೇಲೆ ಕೆತ್ತಲಾಗಿದೆ. ದೇಗುಲದಲ್ಲಿ ವೈದ್ಯನಾಥೇಶ್ವರ ನ ಜೊತೆಗೆ ಗಣಪತಿ, ಉಳ್ಳಾಲ್ತಿ ಮತ್ತು ವಿಷ್ಣು ದೇವನ ಮೂರ್ತಿಗಳ ಗುಡಿಗಳನ್ನು ನಿರ್ಮಾಣ ಮಾಡಲಾಗಿದೆ.

 

ಈ ಕ್ಷೇತ್ರದಲ್ಲಿ ನಡೆಯುವ ಕೋರಿ ಜಾತ್ರೆ ಹೆಚ್ಚು ಪ್ರಸಿದ್ಧಿ ಆಗಿದ್ದು, ಅನಾರೋಗ್ಯದ ಸಂದರ್ಭದಲ್ಲಿ ಹರಕೆ ಹೊತ್ತವರು ಕೊಂಬಳಕ್ಕೆ ಸೊಪ್ಪು ಹಾಕೋದು ಇಲ್ಲಿನ ವಿಶೇಷತೆ ಆಗಿದೆ. ಇಲ್ಲಿ ಹರಕೆ ತೀರಿಸಲು ಕೋಣ, ಎತ್ತು, ಹಸು ಮತ್ತು ಕರುಗಳನ್ನು ಕಂಬಳ ಸಂತೆಯಲ್ಲಿ ಓಡಿಸಲಾಗುತ್ತದೆ. ಬಹಳ ಹಿಂದೆ ಈ ಕ್ಷೇತ್ರದಲ್ಲಿ ಬರಗಾಲ ಬಂದಾಗ ಮಧ್ವಾಚಾರ್ಯರು ಇಲ್ಲಿಗೆ ಬಂದು ಪರ್ಜನ್ಯ ಜಪ ಮಾಡಿದ್ದರು, ಆಗ ಮಳೆ ಆಗಿ ಈ ಕ್ಷೇತ್ರವು ಆಯಿತು. ಹೀಗಾಗಿ ಇಂದಿಗೂ ಮಳೆ ಬಾರದೆ ಹೋದಲ್ಲಿ ಇಲ್ಲಿ ಪರ್ಜನ್ಯ ಹೋಮವನ್ನು ಮಾಡಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ 7.30 ರಿಂದ ಸಂಜೆ 7 ಗಂಟೆ ವರೆಗೆ ಇಲ್ಲಿನ ದೇವರನ್ನು ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ರಂಗ ಪೂಜೆ, ಏಕಾದಶ ರುದ್ರ ಅಭಿಷೇಕ, ಕಾರ್ತಿಕ ಪೂಜೆ, ಅರಿವಾನ ನೈವೇದ್ಯ, ಹಾಲು ಪಾಯಸ ಸೇವೆ, ಪಂಚಾಮೃತ ಅಭಿಷೇಕ, ರುದ್ರ ತ್ರಿಶೂಲ ಅರ್ಚನೆ, ಶಿವ ಅಷ್ಟೋತ್ತರ ಸೇವೆ, ಮಂಗಳಾರತಿ ಸೇವೆಯನ್ನು ಮಾಡಿಸಬಹುದು. ವೈದ್ಯನಾಥೇಶ್ವರ ದೇವಸ್ಥಾನವು ಧರ್ಮಸ್ಥಳ ಸಮೀಪದ ಕೊಕ್ಕಡ ಎಂಬ ಪುಟ್ಟ ಗ್ರಾಮದಲ್ಲಿದೆ. ಈ ಕ್ಷೇತ್ರ ಬೆಂಗಳೂರಿನಿಂದ 283 ಕಿಮೀ, ಮಂಗಳೂರಿನಿಂದ 73 ಕಿಮೀ, ಹುಬ್ಬಳ್ಳಿ ಯಿಂದ 379 ಕಿಮೀ, ಉಡುಪಿಯಿಂದ 122 ಕಿಮೀ, ಕುಂದಾಪುರದಿಂದ 157 ಕಿಮೀ ದೂರದಲ್ಲಿದೆ. ಮಂಗಳೂರಿಗೆ ಕರ್ನಾಟಕದ ಹಲವು ಬಾಗಗಳಿಂದ ಕರ್ನಾಟಕ ಬಸ್ ಸಾರಿಗೆ ವ್ಯವಸ್ಥೆ ಇದ್ದು, ಮಂಗಳೂರು ಈ ಕ್ಷೇತ್ರಕ್ಕೆ ಸಮೀಪದ ರೈಲ್ವೇ ನಿಲ್ದಾಣ ಆಗಿದೆ. ಸಾಧ್ಯವಾದರೆ ನೀವು ನಿಮ್ಮ ಜೀವನದಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ನಿಮ್ಮ ಆರೋಗ್ಯವನ್ನೂ ಸುಧಾರಿಸಿಕೊಳ್ಳಬಹುದು. ಶುಭದಿನ.

Leave a Reply

Your email address will not be published. Required fields are marked *