ರಾಕ್ಷಸಿ ಯಾದ ಹಿಡಿಂಬೆಯನ್ನು ದೇವತೆಯೆಂದು ಪೂಜಿಸುವ ವಿಶ್ವದ ಏಕೈಕ ದೇವಾಲಯವಿದು!!!

ಧಾರ್ಮಿಕ

ಹಿಡಿಂಬೆ ಹೆಸರನ್ನು ಕೇಳಿದ ತಕ್ಷಣ ಮಹಾಭಾರತ ನೆನಪಾಗುತ್ತೆ. ರಾಕ್ಷಸಿ ಆದ ಹಿಡಿಂಬೆ ಭೀಮನನ್ನು ಮದುವೆ ಆದ ಕಥೆ ನಿಮಗೆಲ್ಲ ಗಿತ್ತೆ ಇದೆ. ಆದ್ರೆ ರಾಕ್ಷಸೀ ಆದ ಹಿಡಿಂಬೆ ಗೋಸ್ಕರ ಒಂದು ದೇವಸ್ಥಾನ ಕಟ್ಟಿದ್ದು ಅಲ್ಲಿ ಅವಳನ್ನು ಪೂಜಿಸುತ್ತಾರೆ ಎನ್ನುವ ವಿಷಯವನ್ನು ಎಂದಾದರೂ ಕೇಳಿದಿರಾ? ದೇವರಿಗೆ ದೇವಾಲಯ ಕಟ್ಟುವುದು ಸಾಮಾನ್ಯ ಆದ್ರೆ ರಾಕ್ಷಸೀ ಗೆ ದೇವಸ್ಥಾನ ಕಟ್ಟಿದ್ದಾರೆ ಅಂದ್ರೆ ಆಶ್ಚರ್ಯ ಆಗುತ್ತೆ ಅಲ್ವಾ. ಬನ್ನಿ ಹಾಗಾದರೆ ಹಿಡಿಂಬೆ ಗೆ ನಿರ್ಮಿತವಾದ ಆ ದೇವಾಲಯ ಯಾವುದು ಅಲ್ಲಿ ಹಿಡಿಂಬೆಗೆ ದೇವತೆಯ ಸ್ಥಾನ ಕೊಟ್ಟಿದ್ದಾರೆ ಎಂದು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಹಚ್ಚ ಹಸುರಿನ ಗಿಡ ಮರಗಳು ಹಾಗೂ ಸುಂದರವಾದ ಪ್ರಕೃತಿ ಸನ್ನಿವೇಶ ಹೊಂದಿರುವ ಮನಾಲಿಯ ಬೆಟ್ಟಗಳ ನಡುವೆ ಭೀಮನ ಪತ್ನಿಯಾದ ಹಿಡಿಂಬೆ ಯನ್ನಾ ಪೂಜಿಸುವ ದೇವಾಲಯ ಇದ್ದು ಈ ದೇವಾಲಯವನ್ನು ಸ್ಥಳೀಯ ಜನರು ಡುಂಗರಿ ದೇವಾಲಯ ಎಂದು ಕರೆಯುತ್ತಾರೆ. 1553 ರಲ್ಲಿ ರಾಜ ಬಹದ್ದೂರ್ ಸಿಂಗ್ ಎನ್ನುವವರು ಈ ಸ್ಥಳದಲ್ಲಿ ಹಿಡಿಂಬೆ ದೇವಾಲಯವನ್ನು ನಿರ್ಮಾಣ ಮಾಡಿದ್ದು ಈ ದೇಗುಲವು ಬೇರೆ ಎಲ್ಲಾ ದೇವಾಲಯಗಳಿಗೆ ಭಿನ್ನವಾಗಿದೆ. ನಾಲ್ಕು ಅಂತಸ್ತಿನ ಸಮತಟ್ಟಾದ ಛಾವಣಿ ಹೊಂದಿದೆ. ಮೇಲ್ಬಾಗದ ಛಾವಣಿ ಶಂಕು ಆಕಾರದಲ್ಲಿ ಇದ್ದು ದೇವಾಲಯದ ಮುಖ್ಯ ಬಾಗಿಲಿನ ಮೇಲೆ ದುರ್ಗಾ ದೇವಿಯನ್ನು ಚಿತ್ರಿಸಲಾಗಿದೆ. ದೇವಾಲಯದ ಒಳ ಗೋಡೆಯ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಹಾಗೂ ಪ್ರತಿಮೆಗಳನ್ನು ಇಡಲಾಗಿದ್ದು. ಈ ಆಲಯದ ಗೋಪುರವು 24 ಮೀಟರ್ ಎತ್ತರವಾಗಿದೆ.

 

ಇನ್ನೂ ಈ ಸ್ಥಳದಲ್ಲಿ ಹಿಡಿಂಬೆ ದೇವಾಲಯವನ್ನು ನಿರ್ಮಿಸುವ ಬಗ್ಗೆ ಒಂದು ಕಥೆ ಕೂಡ ಇದೆ. ಮಹಾಭಾರತದ ಸಮಯದಲ್ಲಿ ಹಿಡಿಂಬ ಎಂಬ ರಾಕ್ಷಸನ ತಂಗಿ ಹಿಡಿಂಬೆ ಜೊತೆ ಈ ಪ್ರದೇಶದಲ್ಲಿ ವಾಸವಾಗಿದ್ದ. ಒಂದು ಬಾರಿ ಪಾಂಡವರು ಇಲ್ಲಿಗೆ ಬಂದಾಗ ಹೀಡಿಂಬ ಹಾಗೂ ಭೀಮನ ನಡುವೆ ಯುದ್ಧ ನಡೆದು ಭೀಮನು ಹಿಡಿಂಬ ನನ್ನ ಸೋಲಿಸಿದನು. ನಂತರ ತನ್ನ ಮೇಲೆ ಮೋಹಗೊಂಡ ಹಿಡಿಂಬೆ ನ ಮದುವೆಯಾಗಿ ಕೆಲ ಕಾಲ ಇಲ್ಲಿಯೇ ಇದ್ದು ನಂತರ ವನವಾಸಕ್ಕೆ ಹೊರಟು ಹೋದನು. ಭೀಮ ಹೋದ ನಂತರ ಹಿಡಿಂಬೆ ಈ ಅರಣ್ಯವನ್ನು ಆಡಳಿತ ಮಾಡುತ್ತಾ ತನ್ನ ಮಗನಾದ ಘಟೋಡ್ಗಜ ಜೊತೆ ವಾಸ ಮಾಡ್ತಾ ಇದ್ಲು. ಘಟೋಧಜ ಒಂದು ವಯಸ್ಸಿಗೆ ಬಂದಾಗ ಅವನಿಗೆ ಪಟ್ಟ ಕಟ್ಟಿ ಇಲ್ಲಿನ ಒಂದು ಬಂಡೆ ಮೇಲೆ ಕುಳಿತು ಘೋರ ತಪಸ್ಸು ಮಾಡಿದಳು. ಅವಳ ತಪಸ್ಸಿಗೆ ಮೆಚ್ಚಿ ದೇವತೆಗಳು ಆಶೀರ್ವಾದ ಮಾಡಿದ್ರೂ. ಇದರಿಂದ ರಾಕ್ಷಸ ಗುಣವನ್ನು ಹೊಂದಿದ ಹಿಡಿಂಬೆ ದೈವತ್ವವನ್ನು ಪಡೆದಳು ಎನ್ನುವ ನಂಬಿಕೆ ಇದೆ. ಅಲ್ಲದೆ ಈ ಸುತ್ತ ಮುತ್ತಲಿನ ಪ್ರದೇಶವನ್ನು ರಕ್ಷಿಸುತ್ತ ಇದ್ದಾಳೆ ಎಂಬ ಪ್ರತೀತಿ ಇದೆ. ಹೀಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

 

ಈ ದೇಗುಲದ ವಿಶೇಷತೆ ಏನು ಅಂದ್ರೆ ಇಲ್ಲಿ ಹಿಡಿಂಬೆ ವಿಗ್ರಹ ಇತ್ತು ಪೂಜೆ ಮಾಡುತ್ತಿಲ್ಲ. ಬದಲಾಗಿ ಹಿಡಿಂಬೆ ತಪಸ್ಸು ಮಾಡಿದ ಕಲ್ಲಿನ ಮೇಲೆ ಮೂಡಿರುವ ಪಾದಗಳನ್ನು ಪೂಜಿಸಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ಹಿಡಿಂಬೆ ಗೆ ಮಂಡಕ್ಕಿ ಕೊಸರೆಳ್ಳು ನೀಡುತ್ತಾರೆ. ಮಂಡಕ್ಕಿ ಕುಸುರೆಳ್ಳು ಹಿಡಿಂಬೆ ಗೆ ಪ್ರಿಯವಾದ ತಿನಿಸು ಆಗಿದ್ದು ಇದನ್ನು ಅರ್ಪಿಸಿದರೆ ಸಕಲ ಸಂಕಷ್ಟ ದೂರ ಆಗುತ್ತೆ ಎನ್ನುವ ನಂಬಿಕೆ ಇಲ್ಲಿಗೆ ಭೇಟಿ ನೀಡುವ ಜನರಲ್ಲಿ ಮನೆ ಮಾಡಿದೆ. ನಿತ್ಯ ಸಾವಿರಾರು ಜನ ಈ ದೇಗುಲಕ್ಕೆ ಭೇಟಿ ನೀಡಿ ಹಿಡಿಂಬೆ ಆಶೀರ್ವಾದ ಪಡೆಯುತ್ತಾರೆ. ಪ್ರತಿ ವರ್ಷ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮನಾಲಿಯ ಜನರು ಇಲ್ಲಿಗೆ ಭೇಟಿ ನೀಡಿ ಹಿಡಿಂಬೆ ಗೆ ಪೂಜೆ ಮಾಡುತ್ತಾರೆ. ಪ್ರತಿ ವರ್ಷ ಏಪ್ರಿಲ್ 14 ನ್ನ ಹಿಡಿಂಬೆ ಜನ್ಮ ದಿನ ಎಂದು ಆಚರಿಸಲಾಗುತ್ತದೆ. ನಿತ್ಯ ಬೆಳಿಗ್ಗೆ 8 ಗಂಟೆಯಿಂದ 6 ಗಂಟೆ ವರೆಗೆ ಈ ದೇಗುಲ ತೆರೆದಿರುತ್ತೆ. ಹಿಡಿಂಬೆ ನ ದೇವತೆಯೆಂದು ಪೂಜಿಸುವ ಈ ದೇವಾಲಯವು ಹಿಮಾಚಲ ಪ್ರದೇಶದಲ್ಲಿ ಇರುವ ಮನಾಲಿಯಲ್ಲಿ ಇದೆ. ಸಾಧ್ಯವಾದರೆ ಮನಾಲಿಗೆ ಟ್ರಿಪ್ ಹೋದಾಗ ಇಲ್ಲಿಗೆ ಭೇಟಿ ನೀಡಿ ಹಿಡಿಂಬೆ ಆಶೀರ್ವಾದ ಪಡೆಯಿರಿ. ಶುಭದಿನ.

Leave a Reply

Your email address will not be published. Required fields are marked *