ಕೆಂಪು ಅಕ್ಕಿ ಅಥವಾ ಬಿಳಿ ಅಕ್ಕಿ ಇದರಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಉತ್ತಮ ಗೊತ್ತಾ???

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವೆಲ್ಲರೂ ಕೂಡ ಬಿಳಿ ಅಕ್ಕಿಯನ್ನು ಸೇವನೆ ಮಾಡಿಯೇ ಇರುತ್ತೇವೆ. ಆದ್ರೆ ನಿಮಗೆ ಗೊತ್ತಾ ಈಗ ಮಾರ್ಕೆಟ್ ಅಲ್ಲಿ ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ಸಿಗುತ್ತೆ. ಈ ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಉಂಟಾಗುತ್ತವೆ ಹಾಗೂ ಇದು ಬಿಳಿ ಅಕ್ಕಿಗಿಂತ ಶ್ರೇಷ್ಟವಾ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಸ್ನೇಹಿತರೆ ಈಗ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಅಕ್ಕಿಗಳು ಸಿಗುತ್ತವೆ ಅದ್ರಲ್ಲೂ ಬಿಳಿ ಅಕ್ಕಿ ಕೆಂಪು ಅಕ್ಕಿ ಅಷ್ಟೇ ಅಲ್ಲದೆ ಕಲ್ಲು ಅಕ್ಕಿ ಕೂಡ ಸಿಗುತ್ತೆ. ಬಿಳಿ ಅಕ್ಕಿಗೆ ಹೋಲಿಕೆ ಮಾಡಿದ್ರೆ ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಏಕೆಂದರೆ ಇದರಲ್ಲಿ ಹೆಚ್ಚಾಗಿ ಪ್ರೋಟಿನ್, ಪೊಟಾಸಿಯಂ, ಮೆಗ್ನೀಸಿಯಮ್, ಫೈಬರ್, ಐರನ್ ವಿಟಮಿನ್ ಎಲ್ಲಾ ರೀತಿಯ ಪೌಷ್ಟಕಾಂಶ ಒಳಗೊಂಡಿರುತ್ತದೆ. ಹಾಗಾಗಿ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಹಾಗಾಗಿ ಬಿಳಿ ಅಕ್ಕಿಗೆ ಹೋಲಿಕೆ ಮಾಡಿದ್ರೆ ಕೆಂಪು ಅಕ್ಕಿಯ ಅನ್ನ ತುಂಬಾ ರುಚಿ ಆಗಿರುತ್ತೆ. ಕೆಂಪು ಅಕ್ಕಿಯಲ್ಲಿ ಬಿಳಿ ಅಕ್ಕಿಯ ಹಾಗೆ ಯಾವುದೇ ರೀತಿಯ ನ್ಯೂಟ್ರಿಷನ್ ಹಾಳಾಗುವುದಿಲ್ಲ. ಬದಲಾಗಿ ಎಲ್ಲಾ ರೀತಿಯ ನ್ಯೂಟ್ರಿಷನ್ ಕೆಂಪು ಅಕ್ಕಿಯಲ್ಲಿ ಸಿಗುತ್ತೆ. ಬಿಳಿ ಅಕ್ಕಿಯನ್ನು ಸೇವನೆ ಮಾಡುವುದರಿಂದ ಅಷ್ಟೊಂದು ಪ್ರಯೋಜನ ಇಲ್ಲ.

 

ಯಾಕಂದ್ರೆ ಬಿಳಿ ಅಕ್ಕಿಯನ್ನು ತಯಾರಿಸುವ ಸಂದರ್ಭದಲ್ಲಿ ಎಲ್ಲಾ ರೀತಿಯ ಪೌಷ್ಟಿಕಾಂಶಗಳು ಹೋಗುತ್ತವೆ. ಈ ಬಿಳಿ ಅಕ್ಕಿಯನ್ನು ಪಾಲಿಶ್ ಮಾಡುವ ಮೂಲಕ ತಯಾರು ಮಾಡುತ್ತಾರೆ. ಪಾಲಿಶ್ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾಗಿರುವ ಎಲ್ಲಾ ಪೌಷ್ಟಿಕಾಂಶಗಳು ಸಹ ನಷ್ಟ ಆಗುತ್ತಾ ಹೋಗುತ್ತೆ. ಪಾಲಿಶ್ ಮಾಡದೆ ಇರುವ ಅಕ್ಕಿಯಲ್ಲಿ ಹೆಚ್ಚು ಇರುತ್ತೆ. ಇನ್ನೂ ಬಿಳಿ ಅಕ್ಕಿ ಹಾಗೂ ಕೆಂಪು ಅಕ್ಕಿಗೆ ಹೋಲಿಕೆ ಮಾಡುವುದಾದರೆ ಕೆಂಪು ಅಕ್ಕಿಯಲ್ಲಿ ಫೈಬರ್ ಹಾಗೂ ಐರನ್ ನಮಗೆ ಹೇರಳವಾಗಿ ಸಿಗುತ್ತೆ. ಆದ್ರೆ ಬಿಳಿ ಅಕ್ಕಿಯಲ್ಲಿ ಅಷ್ಟೊಂದು ಪೌಷ್ಟಿಕಾಂಶ ಸಿಗುವುದಿಲ್ಲ. ಬಿಳಿ ಅಕ್ಕಿ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತೆ. ಶುಗರ್ ಇರುವ ರೋಗಿಗಳಿಗೆ ವೈದ್ಯರು ಅನ್ನವನು ಆದಷ್ಟು ಕಡಿಮೆ ತಿನ್ನಿ ಅಥವಾ ಸೇವನೆ ಮಾಡಲೇ ಬೇಡಿ ಎಂದು ಹೇಳಿರುತ್ತಾರೆ. ಅಷ್ಟೇ ಅಲ್ಲದೆ ಈ ಬಿಳಿ ಅಕ್ಕಿಯನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುವುದು. ಆದ್ರೆ ಈ ಕೆಂಪು ಅಕ್ಕಿಯನ್ನು ಸೇವನೆ ಮಾಡಿದ್ರೆ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಇವೆ. ಹಾಗಿದ್ರೆ ಈ ಕೆಂಪು ಅಕ್ಕಿಯನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಏನೆಲ್ಲಾ ಲಾಭ ಇದೆ ಎಂದು ನೋಡುವುದಾದರೆ.

 

ಇದ್ರಲ್ಲಿ ಸೆಲೆನಿಯಮ್ ಎಂಬ ಅಂಶ ಇದೆ ಇದು ನಮ್ಮ ಹೃದಯಕ್ಕೆ ಸಂಬಂಧ ಪಟ್ಟ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಪೌಷ್ಟಿಕಾಂಶಗಳು ಹೃದಯದ ರೋಗ ತಡೆಯಲು ಸಹಾಯ ಮಾಡುತ್ತೆ. ಅಷ್ಟೇ ಅಲ್ಲದೆ ಈ ಅಕ್ಕಿಯನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಅಂಶ ಸಿಗುತ್ತೆ. ಇದು ನಮ್ಮ ದೇಹದ ಮೂಳೆಗಳನ್ನು ಗಟ್ಟಿಯಾಗಿ ಇಡಲು ಸಹಾಯ ಮಾಡುತ್ತೆ. ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತೆ. ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಕೆಂಪು ಅಕ್ಕಿ ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಿಮಗೆ ಯಾವುದೇ ರೀತಿಯ ಕಾಯಿಲೆಗಳು ಬರದಂತೆ ತಡೆಯುತ್ತದೆ. ಇದು ಆಂಟಿ ಏಜಿಂಗ್ ರೀತಿಯಲ್ಲಿ ಕೆಲಸ ಮಾಡುತ್ತೆ. ಇದು ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯದಂತೆ ನೋಡಿಕೊಳ್ಳುತ್ತದೆ. ಮಧುಮೇಹಿಗಳಿಗೆ ಇದು ಒಳ್ಳೆಯ ಆಹಾರ ಎಂದೇ ಹೇಳಬಹುದು. ಆದ್ದರಿಂದ ಬಿಳಿ ಅನ್ನವನ್ನು ಸೇವನೆ ಮಾಡುವ ಬದಲು ಬ್ರೌನ್ ರೈಸ್ ಸೇವನೆ ಮಾಡಿದರೆ ಒಳ್ಳೆಯದು.

Leave a Reply

Your email address will not be published. Required fields are marked *