ನಮಸ್ತೆ ಪ್ರಿಯ ಓದುಗರೇ, ನಮ್ಮ ಜೀವನದಲ್ಲಿ ಬರುವ ಕಷ್ಟಗಳಿಗೆ ಯಾವುದೋ ಒಂದು ಕಾರಣ ಇದ್ದೆ ಇರುತ್ತೆ, ಕೆಲವೊಮ್ಮೆ ಮನುಷ್ಯರಿಂದ ತೊಂದರೆಗಳು ಉಂಟಾದರೆ, ಇನ್ನೂ ಕೆಲವೊಮ್ಮೆ ನಾವು ಮಾಡಿದ ಕರ್ಮಗಳಿಂದ ಕಷ್ಟಗಳು ಬರುತ್ತವೆ. ಅದ್ರಲ್ಲೂ ನಾವೇನಾದರೂ ಶನಿ ದೇವನ ಅಪ ಕೃಪೆಗೆ ಪಾತ್ರರಾದ ರೆ ಕಷ್ಟಗಳು ಎದುರಾಗುತ್ತಲೇ ಇರುತ್ತವೆ ಎಂದು ಹೇಳಲಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಸಕಲ ಶನಿ ದೋಷಗಳಿಗೆ ಮುಕ್ತಿ ನೀಡುವ ಶನೈಶ್ಚರ ಸ್ವಾಮಿಯ ಪುಣ್ಯ ಕ್ಷೇತ್ರದ ದರ್ಶನ ಮಾಡಿ ಕೃತಾರ್ಥರಾ ಗೋಣ. ಮಧುರೆ ಎಂಬ ಹೆಸರಿನ ಕೆರೆಯ ಮೇಲೆ ಇತಿಹಾಸ ಪ್ರಸಿದ್ಧ ವಾದ ಶನಿ ದೇವನ ಆಲಯ ಇದ್ದು, ಈ ಕ್ಷೇತ್ರವನ್ನು ಚಿಕ್ಕ ಮಧುರೆ, ಕನಸವಾಡಿ ಕ್ಷೇತ್ರ, ಕರ್ನಾಟಕದ ಶನಿ ಸಿಂಗ್ನಾಪುರ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಸುಂದರವಾದ ಗೋಪುರ, ಪ್ರಾಂಗಣ, ಪ್ರದಕ್ಷಿಣಾ ಪಥ, ಗರ್ಭಗುಡಿ ಒಳಗೊಂಡಿರುವ ಈ ಆಲಯದಲ್ಲಿ ಶನೀಶ್ವರ ಸ್ವಾಮಿಯ ಭೋ ಮೂರ್ತಿಯನ್ನು ಕಾಣಬಹುದು. ಸ್ವಲ್ಪ ವರ್ಷಗಳ ಹಿಂದೆ ಈ ದೇವಾಲಯವನ್ನು ದಕ್ಷಿಣ ಭಾರತೀಯ ವಾಸ್ತು ಶಿಲ್ಪ ಶೈಲಿಯಲ್ಲಿ ನವೀಕರಣ ಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಸಾಕ್ಷಾತ್ ಶನೀಶ್ವರ ಸ್ವಾಮಿ ಸ್ವಯಂಭೂ ಆಗಿ ನೆಲೆಸಿದ್ದಾನೆ. ಈ ಕ್ಷೇತ್ರಕ್ಕೆ ಬಂದರೆ ಸಕಲ ಶನಿ ದೋಷಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
ಅದ್ರಲ್ಲೂ ಶನಿ ದೇವರಿಗೆ ಪ್ರಿಯವಾದ ಎಳ್ಳುದೀಪವನ್ನು ಬೆಳಗಿ ಭಕ್ತಿಯಿಂದ ಬೆದಿಕೊಂದರೆ, ಪಂಚಮ ಶನಿ, ಅಷ್ಟಮ ಶನಿ, ಸಾಡೇಸಾತ ಶನಿ ದೋಷಗಳು ಶಾಶ್ವತ ದೋಷಗಳು ನಿವಾರಣೆ ಆಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ಈ ದೇವನ ಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತಾದಿಗಳ ಮನದ ಮಾತಾಗಿದ್ದೂ, ಪ್ರತಿ ಶನಿವಾರವೂ ಜನ ಜಂಗುಳಿ ಇಂದ ತುಂಬಿ ಹೋಗಿ ರುತ್ತದೆ. ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳು ಇಷ್ಟಾರ್ಥ ಸಿದ್ಧಿಗಾಗಿ ಮುಡಿಯನ್ನು ನೀಡ್ತೀವಿ ಎಂದು ಹರಕೆಯನ್ನು ಹೊ ತ್ತುಕೊಳ್ಳಬಹುದು. ಇನ್ನೂ ಈ ಕ್ಷೇತ್ರಕ್ಕೆ ಬಂದು ವಾಹನ ಪೂಜೆಯನ್ನು ಮಾಡಿಸಿಕೊಂಡರೆ ವಾಹನಕ್ಕೆ ಯಾವುದೇ ರೀತಿಯ ಅಪಘಾತ ಆಗುವುದಿಲ್ಲ ಎಂಬ ನಂಬಿಕೆ ಕೂಡ ಇದೆ. ಈ ದೇಗುಲಕ್ಕೆ ಬಂದು ವಾಹನ ಪೂಜೆಯನ್ನು ಮಾಡಿಸಿಕೊಂಡು ಭಗವಂತನ ದರ್ಶನ ಮಾಡಿ ಪುನೀರಾಗುತ್ತಾರೆ. ಶನಿ ದೇವನ ತೀರ್ಥ ಕ್ಷೇತ್ರವಾದ ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಶ್ರಾವಣ ಶನಿವಾರದಂದು ವಿಶೇಷ ಪೂಜೆ ನಡೆಯುತ್ತದೆ. ಆ ಸಮಯದಲ್ಲಿ ಸರ್ವಾಲಾಂಕೃತ ಭೋಷಿತ ನಾದ ಆ ಸ್ವಾಮಿಯನ್ನು ನೋಡೋದೇ ಕಣ್ಣಿಗೊಂದು ಹಬ್ಬವಾಗಿದೆ. ನಿತ್ಯವೂ ಪೂಜೆ ಗೊಳ್ಳುತ್ತಿರುವ ಶನಿ ದೇವನಿಗೆ ಶನಿವಾರ ವಿಶೇಷ ಪೂಜೆ ಅಲಂಕಾರಗಳನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಬರುವ ಅಮಾವಾಸ್ಯೆ ದಿನ ಇಲ್ಲಿ ಕಾರ್ತಿಕ ದೀಪೋತ್ಸವ ಅದ್ಧೂರಿಯಾಗಿ ನಡೀತಿದೆ.
ಅಲ್ಲದೆ ಮಾರ್ಚ್ ತಿಂಗಳಲ್ಲಿ ಶನಿ ದೇವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿ ನಡೆಯುವ ಬ್ರಹ್ಮ ರಥೋತ್ಸವಕ್ಕೆ ಬೆಂಗಳೂರು, ಕನಕಪುರ, ಮಾಗಡಿ, ರಾಮನಗರ ದಿಂದ ಜನರು ಬರುತ್ತಾರೆ. ನಿತ್ಯ ರಾತ್ರಿ 8 ಗಂಟೆಗೆ ಈ ದೇವನಿಗೆ ಮಹಾ ಪೂಜೆಯನ್ನು ಮಾಡಲಾಗುತ್ತದೆ. ಈ ದೇವಾಲಯವನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಭೇಟಿ ನೀಡುವ ಪ್ರತಿ ಭಕ್ತಾದಿಗಳಿಗೆ ಮಧ್ಯಾನ ಸಮಯದಲ್ಲಿ ಉಚಿತ ಅನ್ನ ದಾಸೋಹ ವ್ಯವಸ್ಥೆ ಕೂಡ ಇರುತ್ತದೆ. ಶನಿ ದೇವನು ಸ್ವಯಂಭೂ ಆಗಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ನೆಲಮಂಗಲ ಹಾಗೂ ದೊಡ್ಡ ಬಳ್ಳಾಪುರ ರಸ್ತೆಯಲ್ಲಿ ಬರುವ ಕನಸವಾಡಿ ಎಂಬ ಕ್ಷೇತ್ರದಲ್ಲಿ ಇದೆ. ಸುಕ್ಷೇತ್ರ ಬೆಂಗಳೂರಿನಿಂದ 43 ಕಿಮೀ, ನೆಲಮಂಗಲ ದಿಂದ 15.5 ಕಿಮೀ, ದೊಡ್ಡ ಬಳ್ಳಾಪುರ ದಿಂದ 17 ಕಿಮೀ, ದೂರದಲ್ಲಿದೆ. ನೆಲಮಂಗಲ ಹಾಗೂ ದೊಡ್ಡ ಬಳ್ಳಪೂರಕ್ಕೆ ಬೆಂಗಳೂರಿನಿಂದ ಸಾಕಷ್ಟು ಬಸ್ ಸೌಲಭ್ಯ ಇದ್ದು, ನಾಗಮಂಗಲ ದಿಂದ ಖಾಸಗಿ ಬಸ್ ಅಥವ ಬಾಡಿಗೆ ವಾಹನ ಮಾಡಿಕೊಂಡು ಈ ದೇಗುಲಕ್ಕೆ ತಲುಪಬಹುದು. ಸಾಧ್ಯವಾದರೆ ಜೀವಮಾನದಲ್ಲಿ ನೀವೂ ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಶನೀಶ್ವರ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.