ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಸಾಮಾನ್ಯವಾಗಿ ನಾವೆಲ್ಲರೂ ಬಿಸಿ ಹಾಲನ್ನು ಕುಡಿಯುತ್ತೇವೆ. ಹಾಗೂ ಬಿಸಿ ಹಾಲನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಲಾಭಗಳು ಆಗುತ್ತವೆ. ಆದರೆ ನಿಮಗೆ ಗೊತ್ತೇ ಕೇವಲ ತಂಪಾದ ಹಾಲನ್ನು ಕುಡಿಯುವುದರಿಂದ ಕೆಲವೊಂದು ಅನಾರೋಗ್ಯವನ್ನು ದೂರವಿರಿಸಿಕೊಳ್ಳಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ತಂಪಾದ ಹಾಲನ್ನು ಕುಡಿಯುವುದರಿಂದ ಏನೆಲ್ಲ ಲಾಭಗಳು ಉಂಟಾಗುತ್ತವೆ ಅಂತ ತಿಳಿಯೋಣ ಬನ್ನಿ. ಮೊದಲಿಗೆ ನಮ್ಮ ಜೀರ್ಣ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಒಂದು ಲೋಟ ತಂಪಾದ ಹಾಲನ್ನು ಕುಡಿಯುವುದರಿಂದ ಜೀರ್ಣ ಶಕ್ತಿ ನಿಜಕ್ಕೂ ವೃದ್ಧಿ ಆಗುತ್ತದೆ. ಇದರ ಜೊತೆಗೆ ನಿಮಗೆ ಮತ್ತಷ್ಟು ಲಾಭಗಳು ದೊರೆಯಬೇಕೆಂದರೆ, ತಂಪಾದ ಹಾಲಿನಲ್ಲಿ ಸ್ವಲ್ಪ ಶುಂಠಿ ಮೆಣಸು ಕಾಳಿನ ಪುಡಿಯನ್ನು ಹಾಕಿ ನೀವು ಸವಿಯಬಹುದು.
ಕಾಳು ಮೆಣಸಿನ ಪುಡಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಗೆಳೆಯರೇ. ಇನ್ನೂ ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಉಷ್ಣತೆಗೆ ಏನಾದ್ರೂ ಮಸಾಲೆ ಆಹಾರಗಳನ್ನು ಹಾಗೂ ಕರಿದ ತಿಂಡಿಗಳನ್ನು ತಿನ್ನುವುದರಿಂದ ಎಣ್ಣೆಯುಕ್ತ ಪದಾರ್ಥಗಳನ್ನು ತಿನ್ನುವುದರಿಂದ ಎದೆಯಲ್ಲಿ ಉರಿ ಹೆಚ್ಚುತ್ತದೆ ಹಾಗೂ ಹುಳಿತೇಗು ಬರುತ್ತದೆ. ಅಸಿಡಿಟಿ ಆದ ಹಾಗೆ ಅನ್ನಿಸುತ್ತದೆ. ಇಂತಹ ಸಮಸ್ಯೆಗಳು ಬರಬಾರದು ಅಂದರೆ ಖಂಡಿತವಾಗಿ ನೀವು ಒಂದು ಲೋಟ ತಂಪಾದ ಹಾಲನ್ನು ಕುಡಿಯಿರಿ. ತಂಪಾದ ಹಾಲಿನಲ್ಲಿ ಇರುವ ಲ್ಯಾಕ್ಟಿನ್ ಎಂಬ ಅಂಶವು ಎದೆಯಲ್ಲಿ ಆಗುವ ಉರಿಯನ್ನು ಕಡಿಮೆ ಮಾಡುತ್ತದೆ. ಇನ್ನೂ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಕೆಲವು ಜನರಿಗೆ ಬೆವರು ಕಡಿಮೆ ಹೋಗುತ್ತದೆ ಇನ್ನೂ ಕೆಲವರಿಗೆ ಅಧಿಕ ಪ್ರಮಾಣದಲ್ಲಿ ಬೆವರು ಹೋಗುತ್ತದೆ. ಹೆಚ್ಚಾಗಿ ದೇಹದಿಂದ ಬೆವರು ಹೋದರೆ, ದೇಹವೂ ಹೆಚ್ಚು ನಿಶ್ಯಕ್ತಿ ಆಗುತ್ತದೆ ಸುಸ್ತು ಆಯಾಸ ಆಗುತ್ತದೆ ಹಾಗೂ ಮುಖ್ಯವಾಗಿ ದೇಹವು ನಿರ್ಜಲೀಕರಣ ಆಗುತ್ತದೆ. ಇದನ್ನು ತಪ್ಪಿಸಲು ನೀವು ಒಂದು ಲೋಟ ತಂಪಾದ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬಹುದು.
ಇದರಿಂದ ನಿಮ್ಮ ದೇಹವು ನಿರ್ಜಲೀಕರಣ ಆಗುವುದಿಲ್ಲ. ಜೊತೆಗೆ ಆರೋಗ್ಯವಾಗಿ ಕೂಡ ಇರುತ್ತದೆ. ಇನ್ನೂ ತಂಪಾದ ಹಾಲು ನಮ್ಮ ಚರ್ಮಕ್ಕೆ ಬಹಳ ಒಳ್ಳೆಯದು. ಇದೊಂದು ಬೆಸ್ಟ್ ಮೆಡಿಸಿನ್ ಅಂತ ಹೇಳಬಹುದು. ನೀವು ತಂಪಾದ ಹಾಲನ್ನು ಕುಡಿಯಬಹುದು ಅಥವಾ ಮುಖಕ್ಕೆ ಹಚ್ಚಿಕೊಳ್ಳಬಹುದು. ಅಥವಾ ಹಸಿ ಹಾಲಿನಲ್ಲಿ ಸ್ವಲ್ಪ ಅರಿಷಿಣ ಅಥವಾ ಬಾಳೆಹಣ್ಣು ಹಾಕಿ ಮಿಕ್ಸ್ ಮಾಡಿ ಪೇಸ್ಟ್ ರೀತಿಯಲ್ಲಿ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಬಳಿಕ ತೊಳೆದುಕೊಳ್ಳಿ. ಇದರಿಂದ ಮುಖದಲ್ಲಿ ಆಗಿರುವ ಎಲ್ಲ ಮೊಡವೆಗಳು ಕಪ್ಪು ಕಲೆಗಳು ಡಾರ್ಕ್ ಸರ್ಕಲ್ ನಿವಾರಣೆ ಆಗುತ್ತವೆ. ಹಾಗೂ ಮುಖದ ಹೊಳಪು ಕೂಡ ಹೆಚ್ಚುತ್ತದೆ. ಪ್ರತಿನಿತ್ಯವೂ ನೀವು ತಂಪಾದ ಹಾಲನ್ನು ಕುಡಿಯುವುದನ್ನು ರೂಢಿಸಿ ಕೊಂಡರೆ ಖಂಡಿತವಾಗಿ ನಿಮ್ಮ ಚರ್ಮವೂ ಕಾಂತಿಯುಕ್ತ ಆಗುತ್ತದೆ. ತೇಜಸ್ಸು ಹೊಳಪು ಎಲ್ಲವೂ ದೊರೆಯುತ್ತದೆ. ಹಾಲಿನಲ್ಲಿ ಉತ್ತಮವಾದ ಕೊಬ್ಬು ಅಡಗಿದೆ. ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಒಳ್ಳೆಯ ಕೊಬ್ಬು ಬೇಕಾಗುತ್ತದೆ. ಅದು ನಮಗೆ ತಂಪಾದ ಹಾಲಿನಲ್ಲಿ ಸಿಗುತ್ತದೆ. ಆದರೆ ಮಿತ್ರರೇ ಇಲ್ಲಿ ನೆನಪಿಸಿ ತಂಪಾದ ಅಥವಾ ತಣ್ಣನೆಯ ಹಾಲು ಅಂದರೆ ಬಿಸಿ ಮಾಡಿದ ಹಾಲು ತಂಪಾದ ಮೇಲೆ ಕುಡಿಯಿರಿ ಅಥವಾ ರೂಮ್ ಟೆಂಪರೇಚರ್ ನಲ್ಲಿ ಆರಿಸಿ ಕುಡಿಯುವುದು ಬಹಳ ಸೂಕ್ತ. ಹಾಗೆಯೇ ಫ್ರಿಜ್ ನಲ್ಲಿ ಇರುವ ಹಾಲನ್ನು ಎಂದಿಗೂ ಕುಡಿಯಬೇಡಿ. ಇದು ಹಾನಿಕಾರಕ. ಹಾಗೂ ಅನಾರೋಗ್ಯಕ್ಕೆ ಕುತ್ತು ತರುತ್ತದೆ. ಆದ್ದರಿಂದ ಎಚ್ಚರ ಗೆಳೆಯರೇ. ಶುಭದಿನ.