ಸೆಪ್ಟೆಂಬರ್ 22, ಗುರುವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ನಿಮ್ಮ ಬುದ್ಧಿ ಶಕ್ತಿಯ ಅಸ್ತ್ರವನ್ನು ಬಳಸಿ ನೀವು ದುರಾಸೆಯ ರಕ್ಕಾಸದ ರೀತಿಯಲ್ಲಿ ಇರುವ ಕಾಮ ಎನ್ನುವುದನ್ನು ಮೊದಲನೆಯದಾಗಿ ಅಂದ್ರೆ ಆಸೆ ಸಣ್ಣದಾಗಿ ಇದ್ದಾಗಲೇ ಅದನ್ನು ಸಂಪೂರ್ಣವಾಗಿ ನಾಶ ಮಾಡಿಬಿಡಿ. ಅದನ್ನು ಕೊಂದು ಹಾಕಿ. ಇಂದು ಶ್ರೀ ಶುಭಕ್ರುತ್ಥ್ ನಾಮ ಸಂವತ್ಸರ. ದಕ್ಷಿಣಾಯನ ವರ್ಷ ಋತು,ಭಾದ್ರಪದ ಮಾಸ ಕೃಷ್ಣ ಪಕ್ಷ. ಇಂದು ಸೆಪ್ಟೆಂಬರ್ 22 ನೇ ತಾರೀಕು, ಗುರುವಾರ. ಇಂಡ್ಲು ಆಶ್ಲೇಷ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಮೇಷ ರಾಶಿಗೆ ನಿಮ್ಮ ಆಸ್ತಿ ಪಾಸ್ಥಿಗಳ ವಿಚಾರದಲ್ಲಿ ಮನೆಯ ವಿಚಾರದಲ್ಲಿ ರಿಜಿಸ್ಟ್ರೇಷನ್ ಕೋರ್ಟ್ ಕಚೇರಿ ಇತ್ಯಾದಿ ವಿಷಯಗಳಲ್ಲಿ ಸ್ವಲ್ಪ ಗಮನ ಹೆಚ್ಚು ಕೊಡಿ. ಯಾವುದಾದರೂ ಮುಖ್ಯವಾದ ಪತ್ರಗಳು ಕಾರ್ಯಗಳು ಸರಿಯಾದ ರೀತಿಯಲ್ಲಿ ನಿವು ಹಿಂದೆ ಮಾಡದೆ ಹೋಗಿದ್ರೆ. ಇಂದು ಆ ತೊಂದರೆಗಳು ಕಾಣುವ ಸಾಧ್ಯತೆ ಇರುತ್ತದೆ. ಮಾತಿನ ಚಾಕಚಕ್ಯತೆಇಂದ ನೀವು ಎಲ್ಲ ಕಾರ್ಯಗಳನ್ನು ಮುಗಿಸಿಕೊಳ್ಳಬಹುದು. ವೃಷಭ ರಾಶಿಯವರಿಗೆ ಇವತ್ತು ಬಹಳ ಒಳ್ಳೆಯ ದಿನ. ಪರಾಕ್ರಮ ತುಂಬಾ ಜಾಸ್ತಿ ಇರುತ್ತೆ. ಅನೇಕ ವಿಷಯಗಳಲ್ಲಿ ನೀವು ಯಶಸ್ಸನ್ನು ಬಹಳ ಲೀಲಾಜಾಲವಾಗಿ ಸಾಧಿಸಬಹುದು. ಮಾತಿನಿಂದ ನಿಮ್ಮ ಯಶಸ್ಸು ಇನ್ನೂ ಹೆಚ್ಚಾಗುತ್ತೆ. ಮಿಥುನ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿಗೆ ನೆಮ್ಮದಿ ಮನೆಯಲ್ಲಿ ನೆಮ್ಮದಿ. ಮನೆಯಲ್ಲಿ ಬಹಳ ಒಳ್ಳೆಯ ವಾರ್ಥಾಲಾಪಗಳು ಮತ್ತು ಜೋಕ್ ಹ್ಯೂಮರ್ ಇತ್ಯಾದಿಗಳಿಂದ ನಿಮ್ಮ ಮನೆಯಲ್ಲಿ ಇಂದು ಕಿಲಕಿಲ ನಗುವ ವಾತಾವರಣ ಇರುತ್ತೆ

 

ಸಂತೋಷ ತುಂಬಿ ಹರಿಯುತ್ತೆ. ಕುಟುಂಬದಲ್ಲಿ ನೆಮ್ಮದಿ. ಕರ್ಕಾಟಕ ರಾಶಿಗೆ ಇವತ್ತು ಮನಸ್ಸಿನಲ್ಲಿ ನೆಮ್ಮದಿ ಇರುತ್ತೆ ಆದ್ರೆ ಅನೇಕ ವಿಚಾರಗಳಲ್ಲಿ ನಾನು ಬಹಳ ಒಳ್ಳೆಯದನ್ನು ಸಾಧಿಸುತ್ತೇವೆ ಎನ್ನುವ ಆತ್ಮವಿಶ್ವಾಸ ಮತ್ತು ನಿಮ್ಮ ಬುದ್ಧಿ ಬಹಳ ತೀಕ್ಷ್ಣವಾಗಿ ಓಡುತ್ತಾ ಇರುತ್ತೆ. ನಿಮ್ಮ ಈ ಒಂದು ಭಾವನೆಗಳು ಮತ್ತು ಬುದ್ಧಿ ಎರಡನ್ನೂ ಸರಿಯಾಗಿ ಇಟ್ಟುಕೊಂಡರೆ ಇವತ್ತೂ ದಿನ ಚೆನ್ನಾಗಿ ಇರುತ್ತೆ. ಸಿಂಹ ರಾಶಿಯವರಿಗೆ ಇಂದು ಒಂದೆರಡು ಹೆಜ್ಜೆ ಹಿಂದೆ ಇಟ್ಟು ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡುವ ದಿನ. ಯೋಚನೆ ಮಾಡಿ ನಿಮ್ಮ ನಿರ್ಧಾರಗಳನ್ನು ಸುಮ್ಮನೆ ಕಾದಿರಿಸಿಕೊಂಡಿರಿ. ಏನು ಹೇಳಲು ಹೋಗಬೇಡಿ. ಎರಡು ದಿನಗಳ ನಂತರ ನಿಮ್ಮ ನಿರ್ಧಾರಗಳನ್ನು ತಿಳಿಸುವುದು ಅಥವಾ ಬೇಡವೋ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಕನ್ಯಾ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಶುಭವಾದ ದಿನ. ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ಉಲ್ಲಾಸ ಪ್ರಾಪ್ತಿ. ಮಿತ್ರರಿಂದ ಬಹಳ ಒಳ್ಳೆಯ ಇಷ್ಟಾರ್ಥ ಸಿದ್ಧಿ ಆಗುವ ದಿನ. ಸಾಧನಗಳು ಪ್ರಾಪ್ತಿ ಆಗುತ್ತೆ. ಹಣಕಾಸಿನ ವಿಚಾರದಲ್ಲಿ ನೆಮ್ಮದಿ ಧನಾಗಮ ಆಗುತ್ತೆ. ತುಲಾ ರಾಶಿಗೆ ಇವತ್ತು ಬಹಳ ಒಳ್ಳೆಯ ದಿನ. ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಮತ್ತು ಪಾದರಸದಂತೆ ಅನೇಕ ಕೆಲಸಗಳನ್ನು ಒಟ್ಟಿಗೆ ಒಮ್ಮೆಲೇ ಮುಗಿಸುವ ಚಾಕಚಕ್ಯತೆ ತೋರಿಸಿ ಎಲ್ಲರ. ಹೊಗಳಿಕೆಗೆ ಪಾಥ್ರಾಗುತ್ತಿರಿ.

 

ವೃಶ್ಚಿಕ ರಾಶಿಗೆ ಬಹಳ ಒಳ್ಳೆಯ ದಿನ. ಮನಸ್ಸಿಗೆ ನೆಮ್ಮದಿ ಭಾಗ್ಯೋದಯ ಆಗುತ್ತೆ. ದೊಡ್ಡವರ ಆಶೀರ್ವಾದ ಪ್ರಾಪ್ತಿ. ದೇವರಿಂದ ಆಶೀರ್ವಾದ ಪ್ರಾಪ್ತಿ. ಹೆಚ್ಚಿನ ಪ್ರಾರ್ಥನೆ ಮಾಡುವುದು ಒಳ್ಳೆಯದು. ಧನಸ್ಸು ರಾಶಿಗೆ ಇಂದು ಸ್ವಲ್ಪ ಮನಸ್ಸಿಗೆ ನೆಮ್ಮದಿ ಕಡಿಮೆ ಆದಂತೆ ಭಾಸವಾಗುತ್ತೆ. ಭಾವನೆಗಳು ಅನೇಕ ರೀತಿಯಲ್ಲಿ ಅನೇಕ ಕಡೆ ಹರಿದಾಡದಂತೆ ನೋಡಿಕೊಳ್ಳಿ. ಯಾಕಂದ್ರೆ ಮನಸ್ಸಿಗೆ ಸಲ್ಲದ ಯೋಚನೆಗಳು ಬರುವಂಥ ಸಾಧ್ಯತೆ ಇದೆ. ಮೆಡಿಟೇಶನ್ ಇತ್ಯಾದಿಗಳನ್ನು ಮಾಡಿ ನಿಮ್ಮ ಮನಸನ್ನು ಹತೋಟಿಗೆ ತಂದುಕೊಳ್ಳಿ. ಮಕರ ರಾಶಿಗೆ ಬಹಳ ಒಳ್ಳೆಯ ದಿನ. ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ನಿಮ್ಮ ಮನಸ್ಸಿನಲ್ಲಿ ತಲೆಯಲ್ಲಿ ಇಂದು ಅನೇಕ ಯೋಚನೆಗಳು ಬರುತ್ತ ಇರುತ್ತೆ. ಆದ್ರೆ ನಿಮ್ಮ ಪ್ರೀತಿ ಪಾತ್ರರ ಜೊತೆ ಎಲ್ಲಾ ಹಂಚಿಕೊಳ್ಳಲು ಆಗುವುದಿಲ್ಲ. ಮನಸ್ಸಿನಲ್ಲಿ ಹೇಳಬೇಕು ಅನ್ನಿಸುತ್ತಾ ಇರುತ್ತೆ ಆದ್ರೆ ಒಂದೊಂದನ್ನು ಮುಖ್ಯವಾಗಿದನ್ನ ಮಾತ್ರ ಹೇಳಿ. ಮನಸ್ಸಿಗೆ ನೆಮ್ಮದಿ ತಂದುಕೊಳ್ಳಿ. ಕುಂಭ ರಾಶಿಗೆ ಇವತ್ತು ಬಹಳ ಒಳ್ಳೆಯ ಪ್ರಶಸ್ತವಾದ ದಿನ. ಸಾಮಾಜಿಕ ವ್ಯವಹಾರಗಳಲ್ಲಿ ಗೆಲುವನ್ನು ಕಾಣುತ್ತೀರಿ. ಮಿತ್ರರಿಂದ ನೆಮ್ಮದಿ ಮನಂಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ಎಲ್ಲಾ ವ್ಯವಹಾರಗಳನ್ನು ಕಾಣುತ್ತೀರಿ. ನಿಮ್ಮ ಆತ್ಮವಿಶ್ವಾಸ ಇಡೀ ತಿಂಗಳಲ್ಲಿ ಹೆಚ್ಚಾಗಿರುತ್ತದೆ. ಮೀನಾ ರಾಶಿಗೆ ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಯಶಸ್ಸು. ಪಾದರಸದಂತೆ ಬುದ್ಧಿ ಓದುತ್ತ ಇರುತ್ತೆ. ಎಲ್ಲರೂ ನಿಮಗೆ ಆಕರ್ಷಿತರಾಗುತ್ತರೆ. ಇಂದು ಕ್ರಿಯಾಶೀಲತೆ ಹೆಚ್ಚಾಗಿರುವುದರಿಂದ ಕಲಾವಿದರಿಗೆ ಮತ್ತು ಕ್ರಿಯಾತ್ಮಕ ಉದ್ಯಮಗಳಲ್ಲಿ ಇರುವವರಿಗೆ ಪ್ರಶಸ್ತವಾದ ದಿನ. ಮಿತ್ರರೇ ನಾಳೆ ಪುನಃ ನಿಮ್ಮ ಭವಿಷ್ಯದ ಜೊತೆ ಭೇಟಿಯಾಗೋಣ. ಶುಭದಿನ.

Leave a Reply

Your email address will not be published. Required fields are marked *