ನಮಸ್ತೆ ಪ್ರಿಯ ಓದುಗರೇ, ನಮ್ಮ ಭಾರತ ದೇಶ ಅನ್ನೋದು ಹಲವಾರು ಅಚ್ಚರಿಗಳ ಗೂಡು. ಈ ನೆಲದ ಮಣ್ಣಿನಲ್ಲಿ ನಿರ್ಮಿಸಿದ ದೇಗುಲಗಳಿಗೆ ಲೆಕ್ಕವೇ ಇಲ್ಲ. ಪ್ರತಿಯೊಂದು ದೇಗುಲವೂ ಒಂದೊಂದು ಪುರಾಣದ ಕಥೆಯನ್ನು ನಮ್ಮೆದುರು ಬಿಚ್ಚಿಡುತ್ತದೆ. ಅದ್ರಲ್ಲೂ ಸಾಕ್ಷಾತ್ ತಿಮ್ಮಪ್ಪ ಸ್ವಾಮಿ ನೆಲೆಸಿರುವ ತಿರುಪತಿ ಇಂದಿಗೂ ಹಲವಾರು ಕೌತುಕ ಗಳ ತಾಣವಾಗಿದೆ. ಬನ್ನಿ ಇವತ್ತಿನ ಲೇಖನದಲ್ಲಿ ತಿರುಪತಿ ತಿಮ್ಮಪ್ಪನ ಬಗ್ಗೆ ಒಂದಿಷ್ಟು ರೋಚಕವಾದ ಮಾಹಿತಿಗಳನ್ನು ಪಡೆದುಕೊಂಡು ಬರೋಣ. ಕಲ್ಯಾಣ ಅದ್ಭುತ ಗಾಥ್ರಯ ಕಾಮಿತಾರ್ಥ ಪ್ರದಾಯಿನೆ ಶ್ರೀಮದ್ ವೆಂಕಟ ನಾಥಾಯ ಶ್ರೀನಿವಾಸಯ್ಯ ಥೇ ನಮಃ. ತಿರುಪತಿಯಲ್ಲಿ ನೆಲೆಸಿರುವ ವೆಂಕಟೇಶ್ವರ ಸಮಿಯು ತಿರುಪತಿಯಲ್ಲಿ ಸಪ್ತ ಗಿರಿ ವಾಸನಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಭವ್ಯವಾದ ಗುಡಿಯೊಳಗೆ ಸರ್ವಾಲಂಕೃತಾನಾದ ಈ ಸ್ವಾಮಿಯನ್ನು ನೋಡೋಕೆ ಭಕ್ತರ ದಂಡೇ ತಿರುಪತಿಗೆ ಹರಿದು ಹೋಗುತ್ತೆ. ಮಂದಸ್ಮಿತವಾದ ಮುಖವನ್ನು ಹೊತ್ತು ಭಕರ ಕೋರಿಕೆಗಳನ್ನು ಇಡೇರಿಸುತ್ತಿರುವ ವೆಂಕಟೇಶ್ವರ ಸ್ವಾಮಿಯ ವಿಗ್ರಹಕ್ಕೆ ಶತಮಾನಗಳಷ್ಟು ಇತಿಹಾಸ ಇದೆ. ೯ ಅಡಿ ಇರುವ ಶ್ರೀನಿವಾಸ ದೇವರ ವಿಗ್ರಹವ್ನು ಸುಮಾರು ೩೫-೪೦ ಇಂಚು ವಿಶಾಲವಾದ ಎದೆ, ೨೭ ಇಂಚಿನಷ್ಟು ಅಗಲವಾದ ಸೊಂಟದ ವಿಸ್ಥಾರವನ್ನ ಹೊಂದಿದೆ. ಅಚ್ಚರಿಯ ಸಂಗತಿ ಏನೆಂದರೆ ಸ್ವಾಮಿಯ ಮೂಲ ವಿಗ್ರಹವೂ ಇಂದಿಗೂ ೧೧೦ ಡಿಗ್ರಿ ಫರಾನ್ ಹೀಟ್ ನಿಂದ ಕೂಡಿರುತ್ತಂತೆ. ಪ್ರತಿದಿನ ಮುಂಜಾನೆ ನಾಲ್ಕು ಗಂಟೆಗೆ ಸ್ವಾಮಿಯ ವಿಗ್ರಹಕ್ಕೆ ನೀರು ಹಾಗೂ ಹಾಲಿನಿಂದ ಅಭಿಷೇಕ ಮಾಡಿಸಿ, ಮಡಿ ವಸ್ಥ್ರಗಳಿಂದ ದೇವರ ವಿಗ್ರಹವನ್ನು ಒರೆಸಿದ ಮೇಲೂ ವೆಂಕಟೇಶ್ವರನ ವಿಗ್ರಹವು ಬೇವರುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೆ ದಿನದಲ್ಲಿ ಎಷ್ಟೇ ಬಾರಿ ಶುಚಿಗೊಳಿಸಿದರೂ ತಿಮ್ಮಪ್ಪನ ಬೆನ್ನಿನ ಹಿಂಬಾಗ ಬೇವರುತ್ತಲೇ ಇರುತ್ತಂತೆ. ಈ ಸಂಗತಿಗಳು ಮಾತ್ರವಲ್ಲದೆ ಸಾಮಾನ್ಯವಾಗಿ ಪಚ್ಚ ಕರ್ಪೂರ ವನ್ನಾ ದೇವರ ವಿಗ್ರಹಕೆ ಹಚ್ಚಿದ್ರೇ ಆ ವಿಗ್ರಹವು ಒಡೆದು ಹೋಗುತ್ತದೆ ಆದ್ರೆ ಅದೆಷ್ಟೋ ವರ್ಷಗಳಿಂದ ಸ್ವಾಮಿಯ ವಿಗ್ರಹಕ್ಕೆ ಪಚ್ಚ ಕರ್ಪೂರವನ್ನ ಹಚ್ಚುತ್ತಾ ಬಂದಿದ್ದರೂ ಸ್ವಾಮಿಯ ವಿಗ್ರಹವು ಕಿಂಚಿತ್ತೂ ಹಾನಿ ಆಗಿಲ್ಲ, ಬದಲಾಗಿ ದಿನೇ ದಿನೇ ಶ್ರೀನಿವಾಸನ ವಿಗ್ರಹವು ಹೊಳಪನ್ನು ಪಡೆದುಕೊಳ್ಳುತ್ತಾ ಇದೆ. ಅಲ್ಲದೆ ಸ್ವಾಮಿಯ ವಿಗ್ರಹದ ಎದುರು ಸಾವಿರಾರು ವರ್ಷಗಳಿಂದ ನಂದಾ ದೀಪವು ಒಂದು ಉರಿಯುತ್ತಿದ್ದು, ಈ ದೀಪವು ಅಂದಿನಿಂದ ಇಂದಿನವರೆಗೂ ಅಖಂಡ ಜ್ಯೊತಿಯಾಗಿ ಶ್ರೀನಿವಾಸ ಸ್ವಾಮಿಯ ಎದುರಿಗೆ ಬೇಳಗುತ್ತಲೇ ಇದೆ.
ವೆಂಕಟೇಶ್ವರ ಸ್ವಾಮಿ ಪ್ರತಿ ದಿನವೂ ೭ ರೀತಿಯ ಹೂವಿನ ಮಾಲೆಗಳಿಂದ ಅಲಂಕರಿಸಲಾಗುತ್ತದೆ. ಆ ಹೂವಿನ ಮಾಲೆಗಳನ್ನು ತಯಾರಿಸಲು ೨೭ ವಿಧವಾದ ಹೂವುಗಳು ಹಾಗೂ ೭ ರೀತಿಯ ಎಲೆಗಳನ್ನು ಬಳಸಲಾಗುತ್ತದೆ. ಈ ಮಾಲೆಗಳು ಸುಮಾರು ೫೦೦ ಕೆಜಿ ಭಾರ ಹಾಗೂ ೧೦೦ ಅಡಿಯಷ್ಟು ಎತ್ತರವಾಗಿ ಇರುತ್ತಂಥೆ. ಈ ೭ ಮಾಲೆಗಳನ್ನು ಶಿಖಾಮಣಿ ಹಾರಂ, ಸಾಲಿಗ್ರಾಮ ಮಾಲಾ, ಕಂಠಿ ಸರ, ವಕ್ಷಸ್ಥಲ ಲಕ್ಷ್ಮೀ, ಶಂಖ ಚಕ್ರ, ಕಟಿ ಸರಂ, ತಿರುವಣಿ ಮಾಲಾ ಎಂದು ಕರೆಯಲಾಗುತ್ತದೆ. ಇನ್ನೂ ದೇವರ ಗರ್ಭಗುಡಿಯೊಳಗೆ ದೇವರ ಪೂಜೆಗೆ ಬಳಸಿದ ಹೂವುಗಳನ್ನು ಗರ್ಭಗುಡಿಯಿಂದ ಹೊರ ತರೋದಿಲ್ಲವಂತೆ. ಬದಲಾಗಿ ಗರ್ಭಗುಡಿಯ ಹಿಂದೆ ಇರುವ ಚಿಕ್ಕ ಜಲಪಾತಕ್ಕೆ ದೇವರನ್ನು ಪೂಜಿಸಲು ಬಳಸಿದ ಹೂವುಗಳನ್ನು ವಿಸರ್ಜಿಸ ಲಾಗುತ್ತದೆ. ಈ ರೀತಿ ವಿಸರ್ಜಿಸ ಲಾದ ಹೂಗಳು ತಿರುಪತಿ ಇಂದ ಸುಮಾರು ೨೦ ಕಿಮೀ ದೂರದಲ್ಲಿರುವ ವೆಲ್ಪಡು ಎಂಬ ಗ್ರಾಮದಲ್ಲಿ ಪ್ರತ್ಯಕ್ಷ ಆಗುತ್ತೆ ಎಂದು ಹೇಳಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಬಾಲಾಜಿಗೆ ನೈವದ್ಯಕ್ಕಾಗಿ ಅರ್ಪಿಸಲು ಬಳಸಲಾಗುವ ಹಾಲು, ಬೆಣ್ಣೆ, ತುಪ್ಪ ಮೊದಲಾದವುಗಳನ್ನು ತಿರುಮಲದಿಂದ ೨೩ ಕಿಮೀ ದೂರದಲ್ಲಿರುವ ಗ್ರಾಮದಿಂದ ಶತ ಶತಮಾನದಿಂದ ತರಲಾಗುತ್ತಿದೆ. ಈ ಗ್ರಾಮವನ್ನು ಬಿಟ್ಟು ಬೇರೆ ಎಲ್ಲಿಂದಲೋ ಸ್ವಾಮಿಯ ಪೂಜೆಗೆ ಬೇಕಾದ ಹಾಲು, ಮೊಸರು, ಬೆಣ್ಣೆ ತರಲಾಗುವುದಿಲ್ಲಾ. ಅತ್ಯಂತ ಕಟ್ಟು ಪಾಡನ್ನು ಆಚರಿಸೋ ಈ ಗ್ರಾಮಕ್ಕೆ ಹೊರಗಿನ ವ್ಯಕ್ತಿಗಳಿಗೆ ಯಾರಿಗೋ ಪ್ರವೇಶವನ್ನು ನೀಡುವುದಿಲ್ಲ. ಅಲ್ಲದೆ ಇಂದಿಗೂ ಈ ಗ್ರಾಮದ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ ಎಂದು ಹೇಳಲಾಗುತ್ತದೆ.
ಇನ್ನೂ ವೆಂಕಟೇಶ್ವರ ಸ್ವಾಮಿಯ ಮೂಲ ವಿಗ್ರಹವು ಸಾಧಾರಣವಾಗಿ ಗರ್ಭ ಗುಡಿಯ ಮಧ್ಯದಲ್ಲಿರುವಂತೆ ಭಾಸ ಆಗುತ್ತಂತೆ, ಆದರೆ ನಿಜವಾಗಿಯೂ ಸ್ವಾಮಿಯ ವಿಗ್ರಹವು ಗರ್ಭಗುಡಿಯ ಬಲ ಭಾಗದಲ್ಲಿದ್ದು, ಸೂಕ್ಷ್ಮವಾಗಿ ನೋಡಿದರೆ ವಿಷ್ಯ ತಿಳಿಯುತ್ತೆ ಎನ್ನಲಾಗುತ್ತದೆ. ತಿರುಪತಿ ತಿಮ್ಮಪ್ಪನ ವಿಗ್ರಹದಲ್ಲಿ ಸಿಕ್ಕಿಲ್ಲದ ನಿಜವಾದ ಕೂದಲು ಇದೆ ಎಂದು ಹೇಳಲಾಗುತ್ತದೆ. ಈ ರೀತಿ ದೇವರ ವಿಗ್ರಹದಲ್ಲಿ ಲೋಪವಿರದ ಕೂದಲು ಇರುವುದರ ಹಿಂದೆ ಒಂದು ಕಥೆ ಇದೆ. ಶ್ರೀನಿವಾಸ ದೇವರು ಭೂಮಿಯಲ್ಲಿ ನೆಲೆಸಿದ್ದ ಸಂಧರ್ಬದಲ್ಲಿ ಅನೀರಿಕ್ಷಿತವಾಗಿ ತನ್ನ ಕೂದಲನ್ನು ಕಳೆದುಕೊಳ್ಳುತ್ತಾನೆ, ಆಗ ಗಂಧರ್ವ ದೇವತೆ ಆದ ನೀಲ ದೇವಿ ಎಂಬಾಕೆ ಆಕೆಯ ಕೂದಲನ್ನು ಕತ್ತರಿಸಿ ಅದನ್ನು ಬಾಲಾಜಿಗೆ ನೀಡಿ ತಲೆಯಲ್ಲಿ ಸಿಕ್ಕಿಸಿಕೊಳ್ಳುವಂತೆ ಕೋರಿಕೊಳ್ಳುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿ ಶ್ರೀನಿವಾಸ ಸ್ವಾಮಿಯು ಅವಳ ಕೋರಿಕೆಯನ್ನು ಮನ್ನಿಸುತ್ತಾನೇ. ಆಕೆಗೆ ಇನ್ನೂ ಮುಂದೆ ನೀನು ಕೊಟ್ಟಿರುವ ಕೂದಲು ಯಾವಾಗಲೂ ನನ್ನ ತಲೆಯಲ್ಲಿ ಇರುತ್ತೆ ನನ್ನ ದೇಗುಲಕ್ಕೆ ಬಂದು ಯಾರು ಕೂದಲನ್ನು ಕೊಡ್ತರೋ ಅವರಿಗೆ ಆಶೀರ್ವಾದ ಮಾಡುತ್ತೇನೆ ಎಂದು ಸ್ವಾಮಿಯು ಹೇಳಿದರ ಫಲವಾಗಿ ಇಂದಿಗೂ ವಿಗ್ರಹದಲ್ಲಿ ಕೂದಲು ಇವೆ ಎಂದು ಹೇಳಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಜನರು ಕೋರಿಕೆಗಳನ್ನು ನೆರವೇರಿಸುವಂತೆ ಹರಕೆ ಕಟ್ಟಿ ತಿಮ್ಮಪ್ಪನಿಗೆ ಮುಡಿಯನ್ನು ನೀಡುವ ಪದ್ಧತಿ ನಡೆದುಕೊಂಡು ಬಂದಿದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಪ್ರತೀ ದಿನವೂ ಇಲ್ಲಿ ಒಂದು ವರೆ ಲಕ್ಷದಷ್ಟು ಲಡ್ಡನ್ನು ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ. ದೇಗುಲಕ್ಕೆ ಭೇಟಿ ನೀಡುವವರ ಸರಾಸರಿ ಆಗಿ ಮೂರು ಲಡ್ಡುಗಳನ್ನು ಆದರೂ ಕೊಂಡೊಯ್ಯುತ್ತಾರೆ. ಈ ಮೂರು ಲಡ್ಡುಗಳಲ್ಲಿ ಪೂಜೆಯ ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ನಿತ್ಯ ಆಗಮ ಶಾಸ್ತ್ರದ ರೀತಿ ಶ್ರೀನಿವಾಸನಿಗೆ ಪೂಜೆಯನ್ನು ಮಾಡಲಾಗುತ್ತದೆ. ವರಾಹ ಪುರಾಣದ ಪ್ರಕಾರ ಇಲ್ಲಿ ನಡೆಯುವ ಬ್ರಹ್ಮೋತ್ಸವ ವನ್ನಾ ಸಾಕ್ಷಾತ್ ಬ್ರಹ್ಮ ದೇವನೇ ವೆಂಕಟೇಶ್ವರನೀಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ ಪ್ರಾರಂಭ ಮಾಡಿದ ಎಂದು ಹೇಳಲಾಗುತ್ತದೆ. ಹೀಗಾಗಿ ಇಲ್ಲಿ ನಡೆಯುವ ಬ್ರಹ್ಮೋತ್ಸವ ಕ್ಕೆ ವಿಶೇಷವಾದ ಮಾನ್ಯತೆ ನೀಡಲಾಗಿದೆ. ಜಗತ್ತನ್ನು ಪೊರೆಯೋದಕ್ಕೆ ಸಾಕ್ಷಾತ್ ವೆಂಕಟೇಶ್ವರ ಸ್ವಾಮಿ ಈ ಕ್ಷೇತ್ರದಲ್ಲಿ ಬಂದು ನೆಲೆಸಿದ್ದಾನೆ ಎನ್ನುವುದು ಭಕ್ತರ ನಂಬಿಕೆ ಆಗಿದ್ದು, ತಿರುಪತಿ ತಿಮ್ಮಪ್ಪನಿಗೆ ಆತನೇ ಸರಿ ಸಾಟಿಯಾಗಿದ್ದನೆ. ಹೀಗೆ ಹೇಳುತ್ತ ಹೋದರೆ ಅವು ಮುಗಿಯುವ ಸಾಧ್ಯತೆ ಅಂತೂ ಇಲ್ಲ. ಸರ್ವಲಂಕೃತನಾದ ತಿರುಪತಿ ತಿಮ್ಮಪ್ಪನ ನೀವು ನಿಮ್ಮ ಜೀವಮಾನದಲ್ಲಿ ಒಮ್ಮೆ ದರ್ಶನ ಮಾಡಿ ಅವನ ಅನುಗ್ರಹ ಪಡೆಯಿರಿ. ಶುಭದಿನ.