ದೊಣ್ಣ ಮೆಣಸಿನಕಾಯಿ ಉಪಯೋಗಗಳು. ಏನು ಅಂತೀರಾ. ಇಲ್ಲಿದೆ ನೋಡಿ!!!!!!!

ಆರೋಗ್ಯ

ನಮಸ್ತೇ ಆತ್ಮೀಯ ಕನ್ನಡ ನಾಡಿನ ನಮಸ್ತ ಮಿತ್ರರೇ, ಕ್ಯಾಪ್ಸಿಕಂ ಅಂತ ಹೆಸರು ಪಡೆದಿರುವ ದಪ್ಪ ಮೆಣಸಿಕಾಯಿ ನೋಡಲು ಆಹಾರದಲ್ಲಿ ದುಂಡಗೆ ಇದ್ದು ರುಚಿಯಲ್ಲಿ ಖಾರವನ್ನು ಹೊಂದಿರುತ್ತದೆ. ಹೆಚ್ಚಾಗಿ ಖಾರವನ್ನು ಇಷ್ಟ ಪಡುವವರು ಈ ದಪ್ಪ ಮೆಣಸಿನಕಾಯಿ ತಿನ್ನಲು ಇಷ್ಟ ಪಡುತ್ತಾರೆ. ಅಷ್ಟೇ ಅಲ್ಲದೇ ಕೆಂಪು ಹಸಿರು ಹಳದಿ ಬಣ್ಣದಲ್ಲಿ ಈ ಕ್ಯಾಪ್ಸಿಕಂ ನಮಗೆ ಸಿಗುತ್ತದೆ. ಇದನ್ನು ನೀವು ಪಲ್ಯ ಮಾಡಿಕೊಂಡು ಅಥವಾ ಫ್ರೈ ಮಾಡಿಕೊಂಡು ರೊಟ್ಟಿ ದೋಸೆ ಚಪಾತಿ ಜೊತೆಗೆ ಸೇವನೆ ಮಾಡಬಹುದು. ತಿನ್ನಲು ಬಹಳ ರುಚಿಯಾಗಿ ಇರುತ್ತದೆ. ಕೆಲವು ಭಾಗಗಳಲ್ಲಿ ಇದನ್ನು ದಪ್ಪ ಮೆಣಸಿನಕಾಯಿ ಅಥವಾ ದೊಣ್ಣೆ ಮೆಣಸಿನಕಾಯಿ ಅಂತ ಕರೆಯುತ್ತಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕ್ಯಾಪ್ಸಿಕಂ ಆರೋಗ್ಯಕರ ಗುಣಗಳು ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ದಪ್ಪ ಮೆಣಸಿಕಾಯಿ ಅಲ್ಲಿ ಕಡಿಮೆ ಪ್ರಮಾಣದ ಕೊಬ್ಬು ಇದೆ. ಇದು ಹಲವಾರು ಬಗೆಯ ರೋಗಗಳನ್ನು ಗುಣಪಡಿಸುವಲ್ಲಿ ಸಹಾಯಕ. ಅಲ್ಲದೆ, ಇದರಲ್ಲಿ ವಿಟಮಿನ್ ಖನಿಜಗಳು ಇದರ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ವಿವಿಧ ಬಣ್ಣದಲ್ಲಿ ನಮಗೆ ದೊರೆಯುವುದರಿಂದ ಇದನ್ನು ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಅಡುಗೆಯ ಮೇಲೆ ಅಲಂಕಾರಕ್ಕಾಗಿ ಉಪಯೋಗಿಸುತ್ತಾರೆ.

 

ದೊಡ್ಡ ಮೆನಸಿಕಾಯಿ ಇನ್ನೊಂದು ಉತ್ತಮವಾದ ಗುಣ ಯಾವುದು ಅಂದರೆ ಇದು ಕ್ಯಾನ್ಸರ್ ಕಾರಕ ಜೀವಕೋಶಗಳ ವಿರುದ್ಧ ಹೋರಾಡುತ್ತದೆ. ಇದರಲ್ಲಿರುವ ಉರಿ ಊತ ನಿವಾರಕ ಆಂಟಿ ಆಕ್ಸಿಡೆಂಟ್ ಗಳು ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ತಡೆಯುತ್ತದೆ. ಗರ್ಭಕೋಶ ಮೂತ್ರಕೋಶ ಮೂತ್ರಪಿಂಡ ಮೇದೋಜೀರಕಾಂಗ ಅಂಗಗಳಿಗೆ ಕ್ಯಾನ್ಸರ್ ಆವರಿಸಿದಂತೆ ನೋಡಿಕೊಳ್ಳುತ್ತದೆ ಅಲ್ಲದೇ ಅನ್ನನಾಳ ಕರುಳಿನ ಕ್ಯಾನ್ಸರ್ ಗೆ ರಕ್ಷಣೆಯನ್ನು ಒದಗಿಸುತ್ತದೆ. ಜೊತೆಗೆ ಫ್ರೀ ರಾಡಿಕಲ್ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದೆ ಈ ದಪ್ಪ ಮೆಣಸಿನಕಾಯಿ. ಮತ್ತು ನಮ್ಮ ರಕ್ತನಾಳಗಳನ್ನೂ ಸುರಕ್ಷಿತವಾಗಿ ದೇಹದ ಎಲ್ಲ ಭಾಗಗಳಿಗೆ ರಕ್ತವೂ ಸುಗಮವಾಗಿ ಸಂಚಾರ ಆಗುವಂತೆ ನೋಡಿಕೊಳ್ಳುತ್ತದೆ. ನಿಮಗೆ ಅನಿಮಿಯಾ ರಕ್ತಹೀನತೆ ರಕ್ತ ಕಡಿಮೆ ಆಗಿದ್ದರೆ ಪ್ರತಿನಿತ್ಯವೂ ಕ್ಯಾಪ್ಸಿಕಂ ತಿನ್ನಿ. ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಆದರೆ, ಉಸಿರಾಟದ ಸಮಸ್ಯೆ, ಸುಸ್ತು ಆಯಾಸ ತಲೆನೋವು ತಲೆ ಸುತ್ತು ಬರುವುದು ಹೃದ್ರೋಗದ ಸಮಸ್ಯೆಗಳು ಕಂಡು ಬರುತ್ತದೆ. ಇವೆಲ್ಲವನ್ನು ನಿಯಂತ್ರಣದಲ್ಲಿ ಇಡಬೇಕು ಅಂತ ನಿಮಗೆ ಆಸೆ ಇದ್ದರೆ ನಿಯಮಿತವಾಗಿ ಮಿತವಾಗಿ ದಪ್ಪ ಮೆಣಸಿನಕಾಯಿ ಪಲ್ಯ ಸೇವನೆ ಮಾಡಿ. ಇದರಲ್ಲಿರುವ ಪೋಷಕಾಂಶಗಳೂ ಇಂತಹ ಸಮಸ್ಯೆಗಳು ಬರದಂತೆ ತಡೆಯುತ್ತದೆ.

 

ಮುಖ್ಯವಾಗಿ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡಿ. ಕಬ್ಬಿಣಾಂಶ ಅನ್ನು ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕವು ಕಡಿಮೆ ಆಗುತ್ತದೆ ಇದರಲ್ಲಿ ಇರುವ ನಾರಿನ ಅಂಶ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಜೊತೆಗೆ ಪಚನ ಕ್ರಿಯೆ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿ ಇರುವ ಕೆಟ್ಟ ಕಲ್ಮಶಗಳನ್ನೂ ಹೊರಗೆ ಹಾಕುತ್ತದೆ. ಇನ್ನೂ ಯಾರಿಗೆ ಸಕ್ಕರೆ ಕಾಯಿಲೆ ಇರುತ್ತದೆ ಅವರು ಈ ದಪ್ಪ ಮೆಣಸಿನಕಾಯಿ ಸೇವನೆ ಮಾಡಿದರೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಇನ್ನೂ ಇದರ ಇನ್ನೊಂದು ಅದ್ಭುತವಾದ ಉಪಯೋಗ ಏನೆಂದರೆ, ಇದು ಕಣ್ಣಿನ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು ಇದರಲ್ಲಿ ಇರುವ ಲುಟಿನ್ ಎಂಬ ಅಂಶವು ಕಣ್ಣಿನ ಆರೋಗ್ಯಕ್ಕೆ ಹಿತಕರ. ಒಟ್ಟಾರೆ ಆಗಿ ಈ ಕ್ಯಾಪ್ಸಿಕಂ ಬಗ್ಗೆ ಹೇಳಬೇಕೆಂದರೆ, ಇದು ನಮ್ಮ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೂ ಔಷಧೀಯ ಗುಣಗಳನ್ನು ನಮ್ಮ ದೇಹಕ್ಕೆ ನೀಡುತ್ತದೆ. ಶುಭದಿನ.

Leave a Reply

Your email address will not be published. Required fields are marked *