ಹೊಟ್ಟೆಗೆ ಎಷ್ಟೇ ಆಹಾರವನ್ನು ನೀಡಿದರು ಕೂಡ ಪದೇ ಪದೇ ಹಸಿವು ಆಗುತ್ತಿದೆಯೇ. ಕಾರಣವೇನೆಂದು ತಿಳಿಯಿರಿ???

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ತೂಕವನ್ನು ಇಳಿಸಿಕೊಳ್ಳಲು ಜನರು ಊಟವನ್ನು ಬಿಡುತ್ತಾರೆ. ಇನ್ನೂ ಕೆಲವರು ಎಷ್ಟು ದಪ್ಪವಾದರೂ ಕೂಡ ಡಯೆಟ್ ಮಾಡುವುದಿಲ್ಲ. ಅವರಿಗೆ ಎಷ್ಟು ತಿಂದರೂ ಕೂಡ ಮತ್ತೆ ಹಸಿವು ಆಗುತ್ತಿರುತ್ತದೆ. ಹೀಗೆ ಯಾಕೆ ಆಗುತ್ತದೆ ಇದಕ್ಕೆ ಪರಿಹಾರವಾದರು ಏನು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಒಬ್ಬ ಆರೋಗ್ಯವಂತ ವ್ಯಕ್ತಿ ಊಟವನ್ನು ಮಾಡಿದ ಮೇಲೆ ಸುಮಾರು ಮೂರು ನಾಲ್ಕು ಗಂಟೆಗಳ ನಂತರ ಹಸಿವು ಆದರೆ ಅದು ಸಾಮಾನ್ಯವಾದ ಹಸಿವು ಅಂತ ಹೇಳಬಹುದು. ಆದರೆ ಅದಕ್ಕಿಂತ ಮುಂಚಿತವಾಗಿ ಹಸಿವು ಆದರೆ ಅವರಿಗೆ ಅನಾರೋಗ್ಯದ ಸಮಸ್ಯೆಗಳು ಇವೆ ಎಂದು ಸೂಚನೆ ನೀಡುತ್ತದೆ. ಉದಾಹರಣೆಗೆ ಅವರಿಗೆ ನಿದ್ರಾಹೀನತೆ ಸಮಸ್ಯೆ, ದೇಹದಲ್ಲಿ ಪ್ರೊಟೀನ್ ಕೊರತೆ ಮತ್ತು ನಾರಿನಂಶ ಕೊರತೆ ಇರುವುದರಿಂದ ಹಾಗೂ ಅವರ ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗಿರುವುದು ಕಾರಣ ಆಗಿರುತ್ತದೆ. ಊಟವಾದ ಮೇಲೆ ಹಸಿವು ಆಗಲು ಕಾರಣ ಏನೆಂದರೆ ನಾವು ಬೇಗ ಬೇಗನೆ ಊಟವನ್ನು ಮಾಡಿದರೆ ಅದು ನೇರವಾಗಿ ಜಠರಕ್ಕೆ ಹೋಗುತ್ತದೆ. ಹೀಗಾಗಿ ಬೇಗ ಬೇಗ ಸೇವಿಸಿದ ಆಹಾರವೂ ಬೇಗ ಬೇಗನೆ ಜೀರ್ಣವಾಗಿ ಹಸಿವು ಆಗುತ್ತದೆ.

 

ಅದಕ್ಕಾಗಿ ನಾವು ಸೇವನೆ ಮಾಡಿದ ಆಹಾರವೂ ಚೆನ್ನಾಗಿ ಜಗಿದು ಜಗಿದು ಸೇವನೆ ಮಾಡಬೇಕು. ಹೀಗೆ ಸೇವನೆ ಮಾಡಿದ ಆಹಾರವೂ ಚೆನ್ನಾಗಿ ಜೀರ್ಣವಾಗಿ ಕನಿಷ್ಠ ಮೂರು ಗಂಟೆಗಳ ಕಾಲ ಹಸಿವು ಆಗುವುದಿಲ್ಲ. ಹಾಗೂ ಇದು ಆರೋಗ್ಯಕ್ಕೂ ಕೂಡ ಒಳ್ಳೆಯದು. ಜೀರ್ಣ ಕ್ರಿಯೆಗೆ ಕೂಡ ಉತ್ತಮ. ಇನ್ನೂ ಊಟವಾದ ಮೇಲೆ ಬೇಗನೆ ಹಸಿವು ಆಗಲು ಕಾರಣ ಏನೆಂದರೆ ಕೆಲವು ಜನರು ಊಟದ ಜೊತೆಗೆ ಕೊಲ್ಡ್ರಿಂಕ್ ಅನ್ನು ಕೂಡ ಕುಡಿಯುತ್ತಾರೆ. ಹೀಗಾಗಿ ಅದರಲ್ಲಿ ಇಂಗಾಲದ ಡೈ ಆಕ್ಸೈಡ್ ಇರುವ ಕಾರಣ ಇದರಲ್ಲಿ ನೋರೆ ನೋರೆಯಾಗಿ ಬರುತ್ತದೆ. ಇಂಗಾಲದ ಡೈ ಆಕ್ಸೈಡ್ ದೇಹಕ್ಕೆ ಸೇರಬಾರದು ಎಂದು ಉಸಿರಿನ ಮೂಲಕ ಹೊರಗೆ ಹಾಕುತ್ತೇವೆ. ಆದರೆ ಇದು ಊಟದಲ್ಲಿ ಕೊಂಚ ಹೊತ್ತಿನ ಬಳಿಕ ಎಲ್ಲ ಗಾಳಿಯು ಹೊರಗೆ ಹೋದ ಮೇಲೆ ಅಲ್ಲಲ್ಲಿ ಜಾಗ ಖಾಲಿ ಆಗಿ ಆಹಾರವೂ ನೀಡಿ ಎಂದು ಸೂಚನೆಯನ್ನು ನೀಡುತ್ತದೆ. ಅದಕ್ಕಾಗಿ ನೀವು ಪ್ರತಿಷ್ಠಿತೆಗೆ ಕೊಲ್ಡ್ರಿಂಕ್ಸ್ ಕುಡಿಯುವುತ್ತಿದ್ದರೆ ಅದನ್ನು ಬಿಟ್ಟು ಬಿಡುವುದು ಒಳ್ಳೆಯದು. ಇನ್ನೂ ಕೆಲವು ಜನರಿಗೆ ಹೊರಗಡೆ ಹೆಚ್ಚಾಗಿ ಊಟವನ್ನು ಮಾಡುವ ಅಭ್ಯಾಸ ಇರುತ್ತದೆ.

 

ಅದರಲ್ಲಿ ಊಟದ ರುಚಿಯನ್ನು ಹೆಚ್ಚಿಸಲು ದಾಲ್ದಾ ರುಚಿಗೆ ಪೌಡರ್ ಗಳನ್ನು ಬಳಸಿರುತ್ತಾರೆ.ಹೀಗಾಗಿ ಊಟವನ್ನು ಮಾಡಿದ ತಕ್ಷಣ ನಮಗೆ ಹೊಟ್ಟೆ ತುಂಬಿದ ಹಾಗೆ ಆಗುತ್ತದೆ ಆದರೆ ತಕ್ಷಣವೇ ಹಸಿವು ಆಗುತ್ತಾ ಹೋಗುತ್ತದೆ. ಅಷ್ಟೇ ಈ ಹೋಟೆಲ್ ಅಡುಗೆಯ ಸಾಮರ್ಥ್ಯ ಕೇವಲ ಒಂದು ಗಂಟೆ ಮಾತ್ರ ಇರುತ್ತದೆ ನಂತ್ರ ಮತ್ತೆ ಹಸಿವು ಆಗುತ್ತದೆ. ಅದಕ್ಕಾಗಿ ಹೋಟೆಲ್ ನಲ್ಲಿ ಹೆಚ್ಚಾಗಿ ತಿನ್ನಬೇಡಿ. ಹಾಗೂ ಇದು ನಮ್ಮ ಒಟ್ಟಾರೆ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಆದಷ್ಟು ನೀವು ಮನೆಯಲ್ಲಿ ಊಟವನ್ನು ಮಾಡಿ. ಇನ್ನೂ ನೀವೇನಾದರೂ ಮಧ್ಯಪಾನ ಧೂಮಪಾನ ಹೆಚ್ಚಾಗಿ ಸೇವನೆ ಮಾಡುವವರಿಗೂ ಕೂಡ ಪದೇ ಪದೇ ಹಸಿವು ಆಗುತ್ತದೆ. ಮಧ್ಯಪಾನ ಮಾಡಿದ ನಂತರ ನಮ್ಮ ಮೆದುಳಿಗೆ ಮಂಪರು ಬರುತ್ತದೆ. ಹೀಗಾಗಿ ಇದು ಹಸಿವು ಹೆಚ್ಚಿಸುತ್ತದೆ. ಹಾಗೆಯೇ ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಾಂಶ ಇದ್ದರೆ ನಿಮ್ಮ ಹಸಿವು ಹೆಚ್ಚುತ್ತದೆ.ನಿಮ್ಮ ಆಹಾರದಲ್ಲಿ ನಾರು ಅಂಶ ಇಲ್ಲದೆ ಇದ್ದಲ್ಲಿ ನಿಮಗೆ ಸತತವಾಗಿ ಹಸಿವು ಆಗಬಹುದು. ನಾರಿನ ಅಂಶ ಹೆಚ್ಚು ಇರುವ ಆಹಾರವೂ ನಮ್ಮ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.ಹೊಟ್ಟೆಯ ಹಸಿವನ್ನು ನೀಗಿಸುವ ರಸದೂತವನ್ನು ಉತ್ಪತ್ತಿ ಮಾಡುತ್ತದೆ. ಶುಭದಿನ.

Leave a Reply

Your email address will not be published. Required fields are marked *